ಮಹಾರಾಷ್ಟ್ರ ಚುನಾವಣೆ 2024: ಅಕ್ಷಯ್ ಕುಮಾರ್, ಕಿಯಾರಾ ಅಡ್ವಾಣಿ ಸೇರಿದಂತೆ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ಸೆಲೆಬ್ರಿಟಿಗಳು
ಇಂದು ಮಹಾರಾಷ್ಟ್ರ ವಿಧಾನಸಭೆಯ ಎಲ್ಲಾ 228 ಸ್ಥಾನಗಳಿಗೆ ಚುನಾವಣೆ ನಡೆದಿದೆ. ನವೆಂಬರ್ 23 ರ ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದೆ. ಜನ ಸಾಮಾನ್ಯರು ಮತಗಟ್ಟೆಗೆ ಬಂದು ಮತ ಚಲಾಯಿಸಿದ್ದಾರೆ. ಸೆಲೆಬ್ರಿಟಿಗಳು ಕೂಡಾ ತಮ್ಮ ಕುಟುಂಬದ ಸದಸ್ಯರೊಂದಿಗೆ ಬೂತ್‌ಗೆ ಬಂದು ಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು. ನಿರ್ದೇಶಕ ರೋಹಿತ್ ಶೆಟ್ಟಿ, ನಟರಾದ ಸುನಿಲ್ ಶೆಟ್ಟಿ, ಸೋನುಸೂದ್, ಅಕ್ಷಯ್ ಕುಮಾರ್, ಆಮೀರ್ ಖಾನ್, ರಾಜ್‌ಕುಮಾರ್ ರಾವ್, ರಿತೇಶ್ ದೇಶ್‌ಮುಖ್ ದಂಪತಿ, ರಣಬೀರ್ ಕಪೂರ್, ಅರ್ಜುನ್ ಕಪೂರ್, ಸೊಹೈಲ್ ಖಾನ್ ನಟಿಯರಾದ ರಕುಲ್ ಪ್ರೀತ್ ಸಿಂಗ್, ಟ್ವಿಂಕಲ್ ಖನ್ನಾ, ಹೇಮಾ ಮಾಲಿನಿ, ಶಿಲ್ಪಾ ಶೆಟ್ಟಿ, ಕರೀನಾ ಕಪೂರ್, ಏಕ್ತಾ ಕಪೂರ್ ಕೂಡಾ ಮತಗಟ್ಟೆಗೆ ತೆರಳಿ ಓಟು ಮಾಡಿ ಬಂದಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಸೆಲೆಬ್ರಿಟಿಗಳು ಮತದಾನ ನಮ್ಮ ಹಕ್ಕು, ಕರ್ತವ್ಯ ಕೂಡಾ ಹೌದು. ಎಲ್ಲರೂ ಮತ ಚಲಾಯಿಸಿ ಎಂದು ಮನವಿ ಮಾಡಿದರು.