logo
ಕನ್ನಡ ಸುದ್ದಿ  /  Astrology  /  6th October 2022 Daily Horoscope

Horoscope Today: ಹೊಸದಾಗಿ ಕೆಲಸಕ್ಕೆ ಸೇರಿದ್ದೀರಾ...ಈ ರಾಶಿಯವರು ಬಹಳ ಎಚ್ಚರಿಕೆಯಿಂದ ಇದ್ದರೆ ಒಳಿತು..!

HT Kannada Desk HT Kannada

Oct 06, 2022 06:06 AM IST

6 ಅಕ್ಟೋಬರ್‌ 2022ರ ರಾಶಿಫಲ

    • ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ನಿಮಗೆ ಫಲಾಫಲಗಳನ್ನು ನೀಡುತ್ತದೆ. ಇಂದು ಯಾವ ರಾಶಿಯವರಿಗೆ ಶುಭ...? ಯಾರಿಗೆ ಅಶುಭ..? ಎಂಬುದನ್ನು ನೋಡೋಣ.
6 ಅಕ್ಟೋಬರ್‌ 2022ರ ರಾಶಿಫಲ
6 ಅಕ್ಟೋಬರ್‌ 2022ರ ರಾಶಿಫಲ

ಸೂರ್ಯೋದಯ: ಬೆಳಗ್ಗೆ 06:17

ತಾಜಾ ಫೋಟೊಗಳು

Saturn Transit: ಶನಿ ಸಂಕ್ರಮಣದಿಂದ ಈ ರಾಶಿಗಳಿಗೆ ಒಂದಿಡೀ ವರ್ಷ ಖುಷಿಯೋ ಖುಷಿ

Apr 29, 2024 03:37 PM

ಮೇಷ ರಾಶಿಯಲ್ಲಿ ಶುಕ್ರ ಸಂಚಾರ; ಈ 4 ರಾಶಿಯವರಿಗೆ ಆರ್ಥಿಕ ಸಮಸ್ಯೆ ನಿವಾರಣೆ, ಕುಟುಂಬದಲ್ಲಿ ಸಂತೋಷ ಹೆಚ್ಚಳ

Apr 29, 2024 02:19 PM

Akshaya Tritiya 2024: ಅಕ್ಷಯ ತೃತೀಯ ಆಚರಣೆಯ ಮಹತ್ವವೇನು, ಈ ದಿನವನ್ನು ಅತ್ಯಂತ ಮಂಗಳಕರ ಎಂದು ಪರಿಗಣಿಸುವುದೇಕೆ? ಇಲ್ಲಿದೆ ಮಾಹಿತಿ

Apr 29, 2024 10:06 AM

ಬುಧ, ಮಂಗಳ, ರಾಹು ಸಂಕ್ರಮಣ; ಮುಂದಿನ 12 ದಿನ ಈ 3 ರಾಶಿಯವರಿಗೆ ಭಾರಿ ಲಾಭ -Mercury Mars Rahu Transit

Apr 28, 2024 02:56 PM

Zodiac Signs: ಮೋಸ, ಪ್ರಾಮಾಣಿಕತೆ, ಆವೇಶ; ಸಂಬಂಧಗಳ ವಿಚಾರದಲ್ಲಿ ಯಾವ ರಾಶಿಯವರು ಯಾವ ರೀತಿ ನಡೆದುಕೊಳ್ಳುತ್ತಾರೆ?

Apr 24, 2024 12:21 PM

Swapna Shasthra: ಯಾವ ಕನಸಿಗೆ ಏನು ಅರ್ಥ? ನೀವು ಕನಸಿನಲ್ಲಿ ಮತ್ತೊಬ್ಬರ ಸಾವನ್ನು ನೋಡಿದರೆ ಏನು ಮುನ್ಸೂಚನೆ?

Apr 21, 2024 07:00 AM

ಸೂರ್ಯಾಸ್ತ: ಸಂಜೆ 06:02

ತಿಥಿ: ಶುಕ್ಲ ಏಕಾದಶಿ (ಬೆಳಗ್ಗೆ 09:40 ವರೆಗೆ) ದ್ವಾದಶಿ

ನಕ್ಷತ್ರ: ಧನಿಷ್ಠ (ರಾತ್ರಿ 07:42 ವರೆಗೆ) ಶತಾಭಿಷ

ಮೇಷ (Aries)

ಇತರರಿಗೆ ನೀಡಿದ ಸಾಲ ವಾಪಸ್‌ ಪಡೆಯಲು ನಿಮಗೆ ಕಷ್ಟವಾಗಬಹುದು. ವೃತ್ತಿಪರ ವಿಚಾರದಲ್ಲಿ ನಿಮಗೆ ಸಂತೋಷದ ಸುದ್ದಿ ಸಿಗಲಿದೆ. ಗೃಹಿಣಿಯರು ತಮ್ಮ ಸೃಜನಾತ್ಮಕ ಕೆಲಸಗಳಿಂದ ಎಲ್ಲರನ್ನೂ ಮೆಚ್ಚಿಸುವ ಸಾಧ್ಯತೆ ಇದೆ. ವಿಶೇಷವಾಗಿ ಪ್ರಯಾಣ ಮಾಡುವಾಗ ವಾದಗಳಿಂದ ದೂರವಿರಿ. ವಿವಾಹಿತರಿಗೆ ಸಂಬಂಧದಲ್ಲಿ ಭಿನ್ನಾಭಿಪ್ರಾಯಗಳು ಬೆಳೆಯುವ ಸಾಧ್ಯತೆಯಿದೆ, ಎಚ್ಚರಿಕೆಯಿಂದ ವ್ಯವಹರಿಸಿ.

ಅದೃಷ್ಟ ಸಂಖ್ಯೆ: 15

ಅದೃಷ್ಟ ಬಣ್ಣ: ಹಸಿರು

ವೃಷಭ ರಾಶಿ (Taurus)

ಫಿಟ್ನೆಸ್‌ನತ್ತ ಹೆಚ್ಚಿನಗಮನ ಅಗತ್ಯ. ಅನಗತ್ಯ ಖರ್ಚುಗಳಿಂದ ಎಚ್ಚರವಾಗಿರಿ. ಕೆಲಸದ ಸ್ಥಳದಲ್ಲಿ ಕೆಲವೊಂದು ತೊಂದರೆಗಳು ಎದುರಾಗಬಹುದು. ಕೆಲವೊಂದು ವಿಚಾರಗಳು ಮಾನಸಿಕ ಅಸ್ವಸ್ಥತೆಯನ್ನು ಉಂಟುಮಾಡಬಹುದು. ಶೈಕ್ಷಣಿಕವಾಗಿ, ನೀವು ಉತ್ತಮವಾಗಿ ಕಾರ್ಯನಿರ್ವಹಿಸಲು ಸಿದ್ಧರಾಗಿರುವಿರಿ. ಕುಟುಂಬ ಮತ್ತು ಸ್ನೇಹಿತರೊಂದಿಗೆ ಪ್ರಯಾಣವು ತುಂಬಾ ಖುಷಿಯಾಗುತ್ತದೆ.

ಅದೃಷ್ಟ ಸಂಖ್ಯೆ: 9 ಮತ್ತು 18

ಅದೃಷ್ಟದ ಬಣ್ಣ: ಗೋಲ್ಡನ್

ಮಿಥುನ (Gemini)

ನಿಮ್ಮ ಗ್ರಹಗತಿಗಳು ಅನುಕೂಲಕರವಾಗಿ ಇಲ್ಲದ ಕಾಣದ ಕಾರಣ ಆರ್ಥಿಕ ವಿಚಾಋದಲ್ಲಿ ಎಚ್ಚರದಿಂದ ಇರಿ. ಕಾಲೋಚಿತ ಬದಲಾವಣೆಗಳು ನಿಮ್ಮನ್ನು ಅನಾರೋಗ್ಯದಿಂದ ಹಾಸಿಗೆ ಹಿಡಿಯುವಂತೆ ಮಾಡಬಹುದು. ಕೆಲಸದಿಂದ ವಿರಾಮವು ಹೆಚ್ಚು ಉಲ್ಲಾಸಕರ ಮತ್ತು ವಿಶ್ರಾಂತಿ ನೀಡುತ್ತದೆ. ನಿಮ್ಮ ಪ್ರೀತಿ ಪಾತ್ರರಿಂದ ಮನೆಯಲ್ಲಿ ಸಂತೋಷ ದೊರೆಯುವ ಸಾಧ್ಯತೆ ಇದೆ. ಸಂಪತ್ತು ಮತ್ತು ಆಸ್ತಿ ಕೈಗೂಡಲಿದೆ.

ಅದೃಷ್ಟ ಸಂಖ್ಯೆ: 5

ಅದೃಷ್ಟ ಬಣ್ಣ: ಕಡು ಹಸಿರು

ಕರ್ಕ (Cancer)

ಬೇಕಾಬಿಟ್ಟಿ ಶಾಪಿಂಗ್‌ ಮಾಡಿ ಜೇಬು ಖಾಲಿ ಮಾಡಿಕೊಳ್ಳಬೇಡಿ. ಅನಾರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ. ಎಚ್ಚರಿಕೆಯಿಂದ ಇಲ್ಲದಿದ್ದರೆ ಕೆಲವೊಂದು ವ್ಯವಹಾರಗಳು ನಿಮ್ಮ ಕೈ ಜಾರಿ ಹೋಗುವ ಸಾಧ್ಯತೆ ಇದೆ. ಮನೆಯವರಿಗೆ ಸಂತೋಷದ ವಾತಾವರಣೆ ನಿರ್ಮಾಣವಾಗಲಿದೆ. ಅಧಿಕೃತ ಪ್ರವಾಸವನ್ನು ತಪ್ಪಿಸಲು ನಿಮಗೆ ಕಷ್ಟವಾಗಬಹುದು. ಶೈಕ್ಷಣಿಕ ರಂಗದಲ್ಲಿ ಯಶಸ್ಸು ದೊರೆಯಲಿದೆ.

ಅದೃಷ್ಟ ಸಂಖ್ಯೆ: 2

ಅದೃಷ್ಟ ಬಣ್ಣ: ಬಿಳಿ

ಸಿಂಹ (Leo)

ನಿಮ್ಮ ಹೊಸ ಕೆಲಸಗಳು ಮತ್ತೆ ನೀವು ಮೊದಲಿನಂತಾಗಲು ಸಹಾಯ ಮಾಡುತ್ತದೆ. ಹಣಕಾಸು ನಿರ್ವಹಣೆಗೆ ನಿಮಗೆ ತಜ್ಞರ ಮಾರ್ಗದರ್ಶನ ಬೇಕಾಗಬಹುದು. ಶೈಕ್ಷಣಿಕ ರಂಗದಲ್ಲಿ ಯಶಸ್ಸು ದೊರೆಯಲಿದೆ. ಕೆಲಸದ ವಿಚಾರದಲ್ಲಿ ಎಲ್ಲವೂ ಸುಗಮವಾಗಿ ಸಾಗಲಿದೆ. ಮನೆಯ ಕೆಲಸಗಳು ನಿಮ್ಮನ್ನು ಆಯಾಸಗೊಳಿಸಬಹುದು. ಮನೆ ಅಥವಾ ಆಸ್ತಿಯು ನಿರೀಕ್ಷಿತ ಆದಾಯಕ್ಕಿಂತ ಕಡಿಮೆ ಆದಾಯವನ್ನು ನೀಡುವ ಸಾಧ್ಯತೆಯಿದೆ.

ಅದೃಷ್ಟ ಸಂಖ್ಯೆ: 18

ಅದೃಷ್ಟದ ಬಣ್ಣ: ಪೀಚ್

ಕನ್ಯಾ (Virgo)

ಜಂಕ್ ಫುಡ್‌ಗೆ ಅಂಟಿಕೊಂಡಿರುವುದು ನಿಮ್ಮ ಆರೋಗ್ಯವನ್ನು ಹಾಳುಮಾಡುತ್ತದೆ. ನಿಮ್ಮ ಕಾರ್ಯಕ್ಷಮತೆಯಿಂದ ವೃತ್ತಿಪರ ಪರಿಸ್ಥಿತಿಯನ್ನು ಅನುಕೂಲಕರವಾಗಿಸುವ ಸಾಧ್ಯತೆಯಿದೆ. ಮನೆಯವರೊಂದಿಗೆ ವಾದಗಳಿಂದ ದೂರವಿರಿ. ನೀವು ಯಾವುದಾದರೂ ಸ್ಪರ್ಧೆಗೆ ಚೆನ್ನಾಗಿ ತಯಾರಿ ಮಾಡಿಕೊಳ್ಳಲಿದ್ದೀರಿ.

ಅದೃಷ್ಟ ಸಂಖ್ಯೆ: 3

ಅದೃಷ್ಟ ಬಣ್ಣ: ಕಡುಗೆಂಪು

ತುಲಾ (Libra)

ಅನಿರೀಕ್ಷಿತ ಮೂಲಗಳಿಂದ ಹಣ ಬರುವ ಸಾಧ್ಯತೆ ಇದೆ. ಹೊಸ ವ್ಯಾಯಾಮದ ದಿನಚರಿಯು ನಿಮ್ಮ ಆರೋಗ್ಯವನ್ನು ಸುಧಾರಿಸುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಉತ್ಸಾಹವನ್ನು ಮುಂದುವರಿಸಲು ನೀವು ಕೆಲಸದಿಂದ ವಿರಾಮ ತೆಗೆದುಕೊಳ್ಳಬಹುದು. ಇಂದು ನೀವು ಕುಟುಂಬಕ್ಕಾಗಿ ಸಮಯವನ್ನು ವಿನಿಯೋಗಿಸಲು ಸಾಧ್ಯವಾಗದಿರಬಹುದು. ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸಲು ಪ್ರಯತ್ನಿಸಿ.

ಅದೃಷ್ಟ ಸಂಖ್ಯೆ: 7

ಅದೃಷ್ಟದ ಬಣ್ಣ: ಕಂದು

ವೃಶ್ಚಿಕ (Scorpio)

ನೀವು ಆರ್ಥಿಕವಾಗಿ ಸದೃಢರಾಗಲು ಹಣವು ಸ್ಥಿರವಾದ ರೂಪದಲ್ಲಿ ನಿಮಗೆ ದೊರೆಯಲಿದೆ. ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಂಡವರ ಸ್ಥಿತಿ ಶೀಘ್ರವಾಗಿ ಸುಧಾರಿಸುತ್ತದೆ. ಕುಟುಂಬದ ಸದಸ್ಯರು ನಿಮ್ಮ ಸಹಾಯ ಮತ್ತು ಮಾರ್ಗದರ್ಶನಕ್ಕಾಗಿ ಎದುರುನೋಡಬಹುದು. ಉದ್ಯೋಗದಲ್ಲಿ ಹೊಸಬರು ಇತರರಿಂದ ಸ್ವಲ್ಪ ವಿರೋಧವನ್ನು ಕಾಣಬಹುದು. ರಜೆಯ ತಾಣಕ್ಕೆ ಪ್ರಯಾಣಿಸುವವರು ಸಂಪೂರ್ಣ ಆನಂದವನ್ನು ನಿರೀಕ್ಷಿಸಬಹುದು.

ಅದೃಷ್ಟ ಸಂಖ್ಯೆ: 17

ಅದೃಷ್ಟದ ಬಣ್ಣ: ನೇರಳೆ

ಧನು (Sagittarius)

ಆರೋಗ್ಯದ ವಿಷಯದಲ್ಲಿ ಎಲ್ಲವೂ ಚೆನ್ನಾಗಿರುತ್ತದೆ. ಹಣಕಾಸಿನ ವಿಚಾರದಲ್ಲಿ ಜಾಗ್ರತೆಯಿಂದ ಇರಿ.ವ್ಯಾಪಾರದಲ್ಲಿ ಮೋಸ ಹೋಗುವ ಸಾಧ್ಯತೆ ಇದೆ ಎಚ್ಚರದಿಂದ ವ್ಯವಹರಿಸಿ. ದೂರ ಪ್ರವಾಸದಿಂದ ಮನರಂಜನೆ ದೊರೆಯಲಿದೆ. ಶೈಕ್ಷಣಿಕ ರಂಗದಲ್ಲಿ ಕೆಲವು ಬದಲಾವಣೆಗಳನ್ನು ನಿರೀಕ್ಷಿಸಬಹುದು.

ಅದೃಷ್ಟ ಸಂಖ್ಯೆ: 6

ಅದೃಷ್ಟ ಬಣ್ಣ: ತಿಳಿ ಹಸಿರು

ಮಕರ ( Capricorn)

ಕೆಲವರಿಗೆ ಹಣಕಾಸಿನ ಸ್ಥಿತಿ ಸುಧಾರಿಸುವ ಸಾಧ್ಯತೆ ಇದೆ. ಧ್ಯಾನದ ಮೂಲಕ ಮಾನಸಿಕ ನೆಮ್ಮದಿಯನ್ನು ನಿರೀಕ್ಷಿಸಬಹುದು. ಕೆಲಸದ ಸ್ಥಳದಲ್ಲಿ ಜಾಗ್ರತೆಯಿಂದ ವ್ಯವಹರಿಸಿ. ಟ್ರೆಕ್ಕಿಂಗ್ ಅಥವಾ ದೂರದ ಸ್ಥಳಕ್ಕೆ ಹೋಗುವುದು ರೋಮಾಂಚನಕಾರಿ ಮತ್ತು ರಿಫ್ರೆಶ್ ನೀಡುತ್ತದೆ. ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೆ ದೂರ ಪ್ರಯಾಣ ಮಾಡುವ ಸಾಧ್ಯತೆ ಇದೆ.

ಅದೃಷ್ಟ ಸಂಖ್ಯೆ: 11

ಅದೃಷ್ಟದ ಬಣ್ಣ: ಪೀಚ್

ಕುಂಭ (Aquarius)

ನಿಮ್ಮ ಬುದ್ಧಿವಂತಿಕೆಯಿಂದ ಕುಟುಂಬದ ಸಮಸ್ಯೆಯನ್ನು ಪರಿಹರಿಸಲಿದ್ದೀರಿ. ಬೇಕಾಬಿಟ್ಟಿ ಹೂಡಿಕೆ ಮಾಡಿ ಹಣ ಕಳೆದುಕೊಳ್ಳಬೇಡಿ. ವೈದ್ಯರು, ಎಂಜಿನಿಯರ್‌ಗಳು ಮತ್ತು ಇತರ ವೃತ್ತಿಪರರು ಕಠಿಣ ದಿನವನ್ನು ಎದುರಿಸಬೇಕಾಗುತ್ತದೆ. ಸ್ನೇಹಿತ ಅಥವಾ ಸಂಬಂಧಿಕರು ನಿಮ್ಮನ್ನು ವಿಹಾರಕ್ಕೆ ಆಹ್ವಾನಿಸಬಹುದು.

ಅದೃಷ್ಟ ಸಂಖ್ಯೆ: 18

ಅದೃಷ್ಟದ ಬಣ್ಣ: ಪೀಚ್

ಮೀನ (Pisces)

ಅಪರಿಚಿತರು ಅತ್ಯುತ್ತಮ ಆರ್ಥಿಕ ಸಲಹೆಯನ್ನು ನೀಡಬಹುದು. ಆರೋಗ್ಯದ ವಿಚಾರದಲ್ಲಿ ಭಯ ಬೇಡ. ಕುಟುಂಬದ ಸದಸ್ಯರ ಸಹಾಯವು ನಿಮಗೆ ಸಹಾಯವಾಗಬಹುದು. ಕುಟುಂಬದೊಂದಿಗೆ ಪ್ರವಾಸವು ಅತ್ಯಂತ ಆನಂದದಾಯಕವಾಗಿರುತ್ತದೆ. ಶೈಕ್ಷಣಿಕ ಕ್ಷೇತ್ರದಲ್ಲಿರುವವರು ಬಹುಕಾಲದಿಂದ ಬಯಸುತ್ತಿದ್ದ ವಿರಾಮವನ್ನು ಪಡೆಯಬಹುದು.

ಅದೃಷ್ಟ ಸಂಖ್ಯೆ: 22

ಅದೃಷ್ಟ ಬಣ್ಣ: ನೀಲಿ

ವಿಭಾಗ

    ಹಂಚಿಕೊಳ್ಳಲು ಲೇಖನಗಳು