logo
ಕನ್ನಡ ಸುದ್ದಿ  /  ಕ್ರಿಕೆಟ್  /  Asia Cup 2023: ಆಗಸ್ಟ್ 21, ಮಧ್ಯಾಹ್ನ 1.30ಕ್ಕೆ ಏಷ್ಯಾಕಪ್ ಟೂರ್ನಿಗೆ ಭಾರತ ತಂಡ ಪ್ರಕಟ; ಸಂಭಾವ್ಯ ತಂಡ ಹೀಗಿದೆ ನೋಡಿ

Asia Cup 2023: ಆಗಸ್ಟ್ 21, ಮಧ್ಯಾಹ್ನ 1.30ಕ್ಕೆ ಏಷ್ಯಾಕಪ್ ಟೂರ್ನಿಗೆ ಭಾರತ ತಂಡ ಪ್ರಕಟ; ಸಂಭಾವ್ಯ ತಂಡ ಹೀಗಿದೆ ನೋಡಿ

Prasanna Kumar P N HT Kannada

Aug 20, 2023 03:04 PM IST

google News

ರಾಹುಲ್ ದ್ರಾವಿಡ್, ಅಜಿತ್ ಅಗರ್ಕರ್, ರೋಹಿತ್ ಶರ್ಮಾ.

    • Asia Cup 2023: ಅಜಿತ್ ಅಗರ್ಕರ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿಯು ಆಗಸ್ಟ್ 21ರಂದು ಪ್ರಸಕ್ತ ಸಾಲಿನ ಏಷ್ಯಾಕಪ್‌ ಟೂರ್ನಿಗೆ ರೋಹಿತ್ ಶರ್ಮಾ ನೇತೃತ್ವದ 17 ಸದಸ್ಯರ ಭಾರತೀಯ ತಂಡವನ್ನು ಪ್ರಕಟಿಸಲು ಸಜ್ಜಾಗಿದೆ.
ರಾಹುಲ್ ದ್ರಾವಿಡ್, ಅಜಿತ್ ಅಗರ್ಕರ್, ರೋಹಿತ್ ಶರ್ಮಾ.
ರಾಹುಲ್ ದ್ರಾವಿಡ್, ಅಜಿತ್ ಅಗರ್ಕರ್, ರೋಹಿತ್ ಶರ್ಮಾ.

ಬಹುನಿರೀಕ್ಷಿತ ಏಕದಿನ ಮಾದರಿಯ ಏಷ್ಯಾಕಪ್ ಕ್ರಿಕೆಟ್​​ ಟೂರ್ನಿಗೆ (Asia Cup 2023) ಭಾರತ ತಂಡವನ್ನು (Team India) ಪ್ರಕಟಿಸಲು ಮುಹೂರ್ತ ನಿಗದಿಯಾಗಿದೆ. ಬಿಸಿಸಿಐ ಮುಖ್ಯ ಆಯ್ಕೆಗಾರ​ ಅಜಿತ್ ಅಗರ್ಕರ್ (Ajit Agarkar), ನಾಯಕ ರೋಹಿತ್ ಶರ್ಮಾ (Rohit Sharma) ಅವರು ಸೋಮವಾರ (ಆಗಸ್ಟ್ 21)ರಂದು ಅಧಿಕೃತ ಪತ್ರಿಕಾ ಗೋಷ್ಠಿ ನಡೆಸಿ, 17 ಸದಸ್ಯರ ಬಲಿಷ್ಠ ತಂಡವನ್ನು ಪ್ರಕಟಿಸಲಿದ್ದಾರೆ.

ಸುದ್ದಿಗೋಷ್ಠಿಗೂ ಮುನ್ನ 12 ಗಂಟೆಗೆ ಸಭೆ ನಡೆಯಲಿದೆ. ಸಭೆಯಲ್ಲಿ ಸೆಲೆಕ್ಟರ್ಸ್​, ನಾಯಕ ರೋಹಿತ್ ಮತ್ತು ಹೆಡ್​ಕೋಚ್​ ರಾಹುಲ್ ದ್ರಾವಿಡ್ ಕೂಡ ಭಾಗವಹಿಸಲಿದ್ದಾರೆ. ಮೂವರು ಸುದೀರ್ಘ ಒಂದೂವರೆ ಗಂಟೆ ಚರ್ಚೆ ನಡೆಸಿದ ಬಳಿಕ ಚೀಫ್​ ಸೆಲೆಕ್ಟರ್​ ಅಜಿತ್ ಅಗರ್ಕರ್ ಮಧ್ಯಾಹ್ನ 1.30 ಗಂಟೆಗೆ 17 ಸದಸ್ಯರ ಭಾರತ ತಂಡವನ್ನು ಪ್ರಕಟಿಸಲಿದ್ದಾರೆ ಎಂದು ಇನ್​ಸೈಡ್​ ಸ್ಪೋರ್ಟ್ಸ್​ ವರದಿ ಮಾಡಿದೆ.

ಸೆಲೆಕ್ಟರ್​ ತೀರ್ಮಾನವೇ ಅಂತಿಮ

ಮಹತ್ವದ ಟೂರ್ನಿಗೆ ತಂಡವನ್ನು ಅಜಿತ್ ಅಗರ್ಕರ್ ನೇತೃತ್ವದ ಸಮಿತಿಯು ಆಯ್ಕೆ ಮಾಡುತ್ತದೆ. ಏಷ್ಯಾಕಪ್ ತಂಡವನ್ನು ನಿರ್ಧರಿಸುವ ಸಭೆಯಲ್ಲಿ ರಾಹುಲ್ ದ್ರಾವಿಡ್ ಮತ್ತು ರೋಹಿತ್ ಶರ್ಮಾ ಕೂಡ ಉಪಸ್ಥಿತರಿರುತ್ತಾರೆ. ಆದರೆ, ಅವರು ತಂಡಕ್ಕೆ ಸಂಬಂಧಿಸಿದ ಇನ್​ಪುಟ್​​ಗಳನ್ನಷ್ಟೇ ನೀಡಲು ಸಾಧ್ಯ. ಆದರೆ ಕೊನೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳುವುದು ಮಾತ್ರ ಸೆಲೆಕ್ಷನ್ ಕಮಿಟಿ ಸದಸ್ಯರು.

ಪ್ರಮುಖ ಅಂಶಗಳು ಹೀಗಿರಲಿವೆ!

ತಂಡ ಪ್ರಕಟಣೆಗೂ ಮುನ್ನ ಮಧ್ಯಮ ಕ್ರಮಾಂಕದ ಬ್ಯಾಟರ್ಸ್​​ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಮತ್ತು ಜಸ್ಪ್ರೀತ್ ಬೂಮ್ರಾ ಫಿಟ್​​ನೆಸ್​​ ಮಾಹಿತಿ ಪಡೆಯಲಿದ್ದಾರೆ. ಮ್ಯಾಚ್​ ಫಿಟ್​ ಆಗಿದ್ದಾರಾ ಇಲ್ಲವೇ ಎನ್ನುವುದರ ಆಧಾರದ ಮೇಲೆ ತಂಡಕ್ಕೆ ಆಯ್ಕೆ ಮಾಡಲಾಗುತ್ತದೆ. ಸಂತಸದ ಸಂಗತಿ ಏನೆಂದರೆ, ಮೂವರು ಸಹ ತಂಡಕ್ಕೆ ಮರಳುವುದು ಖಚಿತ. ಮ್ಯಾಚ್​​ ಫಿಟ್​​ನೆಸ್ ವರದಿಯಲ್ಲಿ ಪಾಸಾಗಿರುವ ಕುರಿತು ಮಾಹಿತಿ ಸಿಕ್ಕಿದೆ.

ಈಗಾಗಲೇ ಬೂಮ್ರಾ ಐರ್ಲೆಂಡ್ ಸರಣಿಯಲ್ಲಿ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ಮತ್ತೊಂದೆಡೆ ಕೆಎಲ್ ರಾಹುಲ್ ಮತ್ತು ಅಯ್ಯರ್ ಅಭ್ಯಾಸ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿದ್ದಾರೆ. 50 ಓವರ್​​ಗಳ ಕಾಲ ಬ್ಯಾಟಿಂಗ್​, ಫೀಲ್ಡಿಂಗ್​ ನಡೆಸಿದ್ದಾರೆ. ಕೆಎಲ್ ರಾಹುಲ್ ವಿಕೆಟ್​ ಕೀಪಿಂಗ್​ ಕೂಡ ಮಾಡಿದ್ದಾರೆ. ಹಾಗಾಗಿ ಬಿಸಿಸಿಐ ನಿಟ್ಟುಸಿರು ಬಿಟ್ಟಿದೆ. ಆದರೆ ಎರಡನೇ ವಿಕೆಟ್​​ ಕೀಪರ್​ ಆಯ್ಕೆಯೇ ಗೊಂದಲ ಹೆಚ್ಚಿಸಿದೆ. ಇಶಾನ್ ಕಿಶನ್ - ಸಂಜು ಸ್ಯಾಮ್ಸನ್ ನಡುವೆ ಪೈಪೋಟಿ ಏರ್ಪಟ್ಟಿದೆ.

ಏಷ್ಯಾಕಪ್​ ಟೂರ್ನಿಗೆ ಪ್ರಕಟಿಸುವ ತಂಡವನ್ನೇ ಏಕದಿನ ವಿಶ್ವಕಪ್​ ಟೂರ್ನಿಗೂ ಪ್ರಾಥಮಿಕ ತಂಡವನ್ನಾಗಿ ಪ್ರಕಟಿಸಲು ಬಿಸಿಸಿಐ ಚಿಂತಿಸಿದೆ. ಸೆಪ್ಟೆಂಬರ್​ 5ರಂದು ಏಕದಿನ ವಿಶ್ವಕಪ್​ಗೆ ಅಂತಿಮ ತಂಡ ಘೋಷಿಸಲು ಡೆಡ್​ಲೈನ್ ನೀಡಲಾಗಿದೆ. ಹಾಗಾಗಿ ಅದೇ ತಂಡವನ್ನು ಏಕದಿನ ವಿಶ್ವಕಪ್​ ಟೂರ್ನಿಗೂ ಪ್ರಕಟಿಸುವ ಸಾಧ್ಯತೆ ಇದೆ.

ಏಷ್ಯಾಕಪ್ ಟೂರ್ನಿಗೆ ಭಾರತ ಸಂಭಾವ್ಯ ತಂಡ

ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್*, ಕೆಎಲ್ ರಾಹುಲ್*, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಯುಜ್ವೇಂದ್ರ ಚಹಲ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಶಾರ್ದೂಲ್ ಠಾಕೂರ್ ಮತ್ತು ಮೊಹಮ್ಮದ್ ಸಿರಾಜ್.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ