logo
ಕನ್ನಡ ಸುದ್ದಿ  /  ಕ್ರಿಕೆಟ್  /  ವಿರಾಟ್ ಆ ಒಂದು ಬದಲಾವಣೆ ಮಾಡ್ಬೇಕು; ಆರ್‌ಸಿಬಿ ಗೆಲುವಿಗಾಗಿ ಕೊಹ್ಲಿಗೆ ಆಪ್ತಮಿತ್ರ ಎಬಿಡಿ ಸಲಹೆ

ವಿರಾಟ್ ಆ ಒಂದು ಬದಲಾವಣೆ ಮಾಡ್ಬೇಕು; ಆರ್‌ಸಿಬಿ ಗೆಲುವಿಗಾಗಿ ಕೊಹ್ಲಿಗೆ ಆಪ್ತಮಿತ್ರ ಎಬಿಡಿ ಸಲಹೆ

Jayaraj HT Kannada

Apr 05, 2024 09:58 PM IST

google News

ಆರ್‌ಸಿಬಿ ಗೆಲುವಿಗಾಗಿ ಕೊಹ್ಲಿಗೆ ಆಪ್ತಮಿತ್ರ ಎಬಿಡಿ ಸಲಹೆ

    • Virat Kohli: ಆರ್‌ಸಿಬಿ ತಂಡವು ಗೆಲುವಿನ ಹಳಿಗೆ ಮರಳಲು ತಂಡದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್‌ ಅಮೂಲ್ಯ ಸಲಹೆಯೊಂದನ್ನು ನೀಡಿದ್ದಾರೆ. ಅಲ್ಲದೆ ವಿರಾಟ್‌ ಕೊಹ್ಲಿ ಮುಂದಿನ ಪಂದ್ಯಗಳಿಂದ ಒಂದು ಬಲಾವಣೆ ಮಾಡಬೇಕು ಎಂದು ಹೇಳಿದ್ದಾರೆ.
ಆರ್‌ಸಿಬಿ ಗೆಲುವಿಗಾಗಿ ಕೊಹ್ಲಿಗೆ ಆಪ್ತಮಿತ್ರ ಎಬಿಡಿ ಸಲಹೆ
ಆರ್‌ಸಿಬಿ ಗೆಲುವಿಗಾಗಿ ಕೊಹ್ಲಿಗೆ ಆಪ್ತಮಿತ್ರ ಎಬಿಡಿ ಸಲಹೆ

ಐಪಿಎಲ್‌ 2024ರ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡವು ಉತ್ತಮ ಆರಂಭ ಪಡೆದಿಲ್ಲ. ಈವರೆಗೆ ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಸೋಲು ಕಂಡಿದೆ. ಪಂಜಾಬ್‌ ಕಿಂಗ್ಸ್ ವಿರುದ್ಧ ಏಕೈಕ ಗೆಲುವು ಕಂಡ ತಂಡವು, ತವರಿನಲ್ಲೇ ಸತತ ಎರಡು ಸೋಲು ಕಂಡು ಮುಗ್ಗರಿಸಿದೆ. ಈ ನಡುವೆ ಪ್ಲೇಆಫ್ ಲೆಕ್ಕಾಚಾರ ಕೂಡಾ ಆರಂಭವಾಗಿದ್ದು, ಇದೇ ರೀತಿ ಮುಂದುವರೆದರೆ ಮುಂದಿನ ಹಂತಕ್ಕೆ ಪ್ರವೇಶಿಸುವುದು ಕಷ್ಟವಾಗಲಿದೆ. ಸದ್ಯ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿರುವ ತಂಡವು, ಮುಂದಿನ ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.‌

ಗೆಲುವಿಗಾಗಿ ಆರ್‌ಸಿಬಿ ತಂಡದಲ್ಲಿ ಬದಲಾವಣೆ ಮಾಡುವ ಕುರಿತಾಗಿ ಹಲವಾರು ಮಾಜಿ ಕ್ರಿಕೆಟಿಗರು ಸಲಹೆ ನೀಡಿದ್ದಾರೆ. ಈ ನಡುವೆ ಆರ್‌ಸಿಬಿ ತಂಡದ ಮಾಜಿ ಆಟಗಾರ ಹಾಗೂ ವಿರಾಟ್ ಕೊಹ್ಲಿಯ ಅತ್ಯುತ್ತಮ ಸ್ನೇಹಿತ ಎಬಿ ಡಿವಿಲಿಯರ್ಸ್ ಕೂಡಾ ತಂಡ ಹಾಗೂ ವಿರಾಟ್‌ಗೆ ಅಮೂಲ್ಯ ಸಲಹೆಯೊಂದನ್ನು ನೀಡಿದ್ದಾರೆ. ಸದ್ಯ ಆರಂಭಿಕನಾಗಿ ಕಣಕ್ಕಿಳಿಯುವ ವಿರಾಟ್‌, ತಂಡದ ಪರ ಮಧ್ಯಮ ಓವರ್‌ಗಳ ವೇಳೆಯೂ ಬ್ಯಾಟ್‌ ಬೀಸಬೇಕು ಎಂದು ಸಲಹೆ ನೀಡಿದ್ದಾರೆ.

ಪ್ರಸಕ್ತ ಆವೃತ್ತಿಯಲ್ಲಿ, ಆರ್‌ಸಿಬಿ ಪರ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿರು ಆಟಗಾರ ವಿರಾಟ್‌ ಕೊಹ್ಲಿ ಮಾತ್ರ. ನಾಲ್ಕು ಪಂದ್ಯಗಳಲ್ಲಿ 67.66ರ ಸರಾಸರಿಯಲ್ಲಿ ಕಿಂಗ್ 203 ರನ್ ಗಳಿಸಿದ್ದಾರೆ. ಎರಡು ಆಕರ್ಷಕ ಅರ್ಧಶತಕ ಸಹಿತ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ.

ಮಧ್ಯಮ ಓವರ್‌ಗಳ ವೇಳೆ ವಿರಾಟ್‌ ಆಟಬೇಕು

“ವಿರಾಟ್ ತಮ್ಮ ಆರಂಭವನ್ನು ಉತ್ತಮ ವೇಗದೊಂದಿಗೆ ಮುಂದುವರೆಸುತ್ತಾರೆ ಎಂದು ಆಶಿಸುತ್ತೇವೆ. ಏಕೆಂದರೆ ಆರ್‌ಸಿಬಿ ತಂಡಕ್ಕೆ ಮಧ್ಯಮ ಓವರ್‌ಗಳ ವೇಳೆ ಕ್ರೀಸ್‌ಕಚ್ಚಿ ಆಡುವ ಆಟಗಾರ ಬೇಕು. ಮೊದಲ ಆರು ಓವರ್‌ಗಳ ನಂತರವೂ ನಮಗೆ ಕೊಹ್ಲಿ ಆಡಬೇಕು. ಹೀಗಾಗಿ ನಾಯಕ ಫಾಫ್ ಡುಪ್ಲೆಸಿಸ್ ಹೆಚ್ಚಿನ ಅಪಾಯವನ್ನು ತೆಗೆದುಕೊಳ್ಳಲಿ. ಆದರೆ ವಿರಾಟ್ ಮಾತ್ರ 6ರಿಂದ 15 ಓವರ್‌ಗಳ ವೇಳೆ ಪಿಚ್‌ನಲ್ಲಿರಬೇಕೆಂದು ನಾನು ಬಯಸುತ್ತೇನೆ. ಆಗ ಆರ್‌ಸಿಬಿ ತಂಡವು ಸ್ಫೋಟಕ ಆಟವಾಡುತ್ತದೆ,” ಎಂದು ಡಿವಿಲಿಯರ್ಸ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.

ಕೆಟ್ಟ ಆರಂಭ ಅಲ್ಲ, ಅದೃಷ್ಟ ಬದಲಾಗಲಿದೆ

“ಆರ್‌ಸಿಬಿ ಕೆಟ್ಟ ಆರಂಭವೇನೂ ಪಡೆದಿಲ್ಲ. ಹಾಗಂತಾ ಉತ್ತಮ ಆರಂಭ ಕೂಡಾ ಅಲ್ಲ. ತಂಡಕ್ಕೆ ಒಂದೆರಡು ಗೆಲುವುಗಳು ಬೇಕು. ಮತ್ತೆ ಚಿನ್ನಸ್ವಾಮಿ ಮೈದಾನಕ್ಕೆ ಹಿಂತಿರುಗುವ ಮೊದಲು ಅವರು ಅದೃಷ್ಟ ಕಂಡುಕೊಳ್ಳುತ್ತಾರೆ ಎಂದು ಆಶಿಸುತ್ತೇವೆ” ಎಂದು ಆರ್‌ಸಿಬಿ ಮಾಜಿ ಆಪದ್ಬಾಂಧವ ಹೇಳಿದ್ದಾರೆ.

ಇದನ್ನೂ ಓದಿ | ಕ್ಯಾಮರೂನ್ ಗ್ರೀನ್, ರಜತ್ ಪಾಟೀದಾರ್ ಔಟ್; ರಾಜಸ್ಥಾನ್ ರಾಯಲ್ ಪಂದ್ಯಕ್ಕೆ ಆರ್​​ಸಿಬಿ ಪ್ಲೇಯಿಂಗ್​ XIನಲ್ಲಿ 5 ಬದಲಾವಣೆ

ಆರ್‌ಸಿಬಿ ತಂಡವು ಏಪ್ರಿಲ್ 6ರಂದು ಜೈಪುರದ ಸವಾಯಿ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೆಣಸಲಿದೆ.

ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯಕ್ಕೆ ಆರ್​ಸಿಬಿ ಸಂಭಾವ್ಯ ತಂಡ

ಫಾಫ್‌ ಡು ಪ್ಲೆಸಿಸ್‌ (ನಾಯಕ), ವಿರಾಟ್‌ ಕೊಹ್ಲಿ, ಗ್ಲೆನ್‌ ಮ್ಯಾಕ್ಸ್‌ವೆಲ್‌, ಸುಯೇಶ್ ಪ್ರಭುದೇಸಾಯಿ, ದಿನೇಶ್‌ ಕಾರ್ತಿಕ್‌, ಮಹಿಪಾಲ್ ಲೊಮ್ರರ್, ವಿಲ್‌ ಜ್ಯಾಕ್ಸ್​, ವೈಶಾಖ್ ವಿಜಯ್‌ಕುಮಾರ್‌, ಲಾಕಿ ಫರ್ಗ್ಯುಸನ್, ಮೊಹಮ್ಮದ್‌ ಸಿರಾಜ್‌, ಮಯಾಂಕ್ ಡಾಗರ್.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ