logo
ಕನ್ನಡ ಸುದ್ದಿ  /  ಕ್ರಿಕೆಟ್  /  ಪ್ಯಾಟ್ ಕಮಿನ್ಸ್ ಹ್ಯಾಟ್ರಿಕ್, ವಾರ್ನರ್ ಅರ್ಧಶತಕ; ಬಾಂಗ್ಲಾದೇಶ ವಿರುದ್ಧ ಆಸ್ಟ್ರೇಲಿಯಾಗೆ 28 ರನ್ ಗೆಲುವು

ಪ್ಯಾಟ್ ಕಮಿನ್ಸ್ ಹ್ಯಾಟ್ರಿಕ್, ವಾರ್ನರ್ ಅರ್ಧಶತಕ; ಬಾಂಗ್ಲಾದೇಶ ವಿರುದ್ಧ ಆಸ್ಟ್ರೇಲಿಯಾಗೆ 28 ರನ್ ಗೆಲುವು

Jayaraj HT Kannada

Jun 21, 2024 12:12 PM IST

google News

ಬಾಂಗ್ಲಾದೇಶ ವಿರುದ್ಧ ಆಸ್ಟ್ರೇಲಿಯಾಗೆ 28 ರನ್ ಗೆಲುವು

    • ಟಿ20 ವಿಶ್ವಕಪ್‌ನ ಸೂಪರ್‌ 8 ಹಂತದಲ್ಲಿ ಆಸೀಸ್‌ ಶುಭಾರಂಭ ಮಾಡಿದೆ. ಟಿ20 ಕ್ರಿಕೆಟ್‌ನಲ್ಲಿ ಅಜೇಯ ಓಟ ಮುಂದುವರೆಸಿರುವ ಕಾಂಗರೂಗಳು ಸತತ 8ನೇ ಪಂದ್ಯ ಗೆದ್ದುಬೀಗಿದ್ದಾರೆ.
ಬಾಂಗ್ಲಾದೇಶ ವಿರುದ್ಧ ಆಸ್ಟ್ರೇಲಿಯಾಗೆ 28 ರನ್ ಗೆಲುವು
ಬಾಂಗ್ಲಾದೇಶ ವಿರುದ್ಧ ಆಸ್ಟ್ರೇಲಿಯಾಗೆ 28 ರನ್ ಗೆಲುವು (PTI)

ಐಸಿಸಿ ಟಿ20 ವಿಶ್ವಕಪ್‌ನ ಸೂಪರ್‌ 8 ಹಂತದ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಆಸ್ಟ್ರೇಲಿಯಾ ತಂಡ 28 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಆಂಟಿಗುವಾದ ನಾರ್ತ್ ಸೌಂಡ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಡೇವಿಡ್ ವಾರ್ನರ್ ಅಜೇಯ ಅರ್ಧಶತಕ ಮತ್ತು ಪ್ಯಾಟ್ ಕಮಿನ್ಸ್ ಅವರ ಹ್ಯಾಟ್ರಿಕ್ ವಿಕೆಟ್‌ ಸಾಧನೆಯ ನೆರವಿಂದ ಕಾಂಗರೂಗಳು ಡಕ್‌ವರ್ತ್‌ ಲೂಯಿಸ್‌ ನಿಯಮದ ಪ್ರಕಾರ 28 ರನ್‌ಗಳ ಜಯಭೇರಿ ಬಾರಿಸಿದ್ದಾರೆ. ಆಸೀಸ್‌ ಚೇಸಿಂಗ್‌ ವೇಳೆ ನಡುವೆ ಮಳೆ ಸುರಿದ ಕಾರಣ ಪಂದ್ಯವನ್ನು ನಿಲ್ಲಿಸಲಾಯ್ತು. ಪಂದ್ಯ ಮುಂದುವರೆಸಲು ಸಾಧ್ಯವಾಗದ ಕಾರಣ ಡಿಎಲ್‌ಎಸ್‌ ನಿಯಮದ ಪ್ರಕಾರ ರನ್‌ ಗಳಿಕೆಯಲ್ಲಿ ಮುನ್ನಡೆ ಸಾಧಿಸಿದ್ದ ಆಸೀಸ್‌ ತಂಡವನ್ನು ವಿಜೇತ ಎಂದು ಘೋಷಿಸಲಾಯ್ತು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಬಾಂಗ್ಲಾದೇಶವು, ಶಾಂಟೊ (41) ಹಾಗೂ ತೌಹಿದ್‌ ಹ್ರಿದೋಯ್‌ (40) ಬ್ಯಾಟಿಂಗ್‌ ನೆರವಿಂದ 8 ವಿಕೆಟ್‌ ಕಳೆದುಕೊಂಡು 140 ರನ್‌ ಗಳಿಸಿತು. ಕಾಂಗರೂ ನಾಯಕ ಪ್ಯಾಟ್‌ ಕಮಿನ್ಸ್‌ ಹಾಟ್ರಿಕ್‌ ಸಾಧನೆಯ ನೆರವಿಂದ ಬಾಂಗ್ಲಾ ಅಲ್ಪಮೊತ್ತ ಗಳಿಸಲಷ್ಟೇ ಶಕ್ತವಾಯ್ತು. 141 ರನ್‌ಗಳ ಗುರಿ ಬೆನ್ನತ್ತಿದ ಆಸೀಸ್, 11.2 ಓವರ್‌ಗಳ ವೇಳೆಗೆ 2 ವಿಕೆಟ್‌ ಕಳೆದುಕೊಂಡು 100 ರನ್‌ ಗಳಿಸಿದ್ದಾಗ ಪಂದ್ಯಕ್ಕೆ ಮಳೆ ಅಡ್ಡಿಯಾಯ್ತು. ಮಳೆ ನಿಲ್ಲದ ಕಾರಣ ಡಿಎಲ್‌ಸ್‌ ನಿಯಮದ ಪ್ರಕಾರ ಆಸೀಸ್‌ ತಂಡ ಪಂದ್ಯ ಗೆದ್ದಿತು.

ಕಾಂಗರೂ ಬಳಗದ ಪರ ಆರಂಭಿಕ ಆಟಗಾರರಾದ ಡೇವಿಡ್ ವಾರ್ನರ್ ಮತ್ತು ಟ್ರಾವಿಸ್ ಹೆಡ್ ಉತ್ತಮ ಚೇಸಿಂಗ್ ಪ್ರಾರಂಭಿಸಿದರು. ಮೊದಲ ವಿಕೆಟ್‌ಗೆ ಇವರಿಬ್ಬರೂ 65 ರನ್‌ ಪೇರಿಸಿದರು. ಡೇವಿಡ್ ವಾರ್ನರ್ ಕೇವಲ 35 ಎಸೆತಗಳಲ್ಲಿ 53 ರನ್‌ ಗಳಿಸಿದರು. ಪವರ್‌ಪ್ಲೇ ಅಂತ್ಯದ ವೇಳೆ ಮಳೆ ಸುರಿದು ಪಂದ್ಯ ತುಸು ವಿಳಂಬವಾಯ್ತು. ಮತ್ತೆ ಪಂದ್ಯ ಆರಂಭವಾದಾಗ ಹೆಡ್ ಔಟಾದರು. ನಾಯಕ ಮಿಚೆಲ್ ಮಾರ್ಷ್ ಖಾತೆ ತೆರೆಯುತ್ತಿದ್ದಂತೆಯೇ ರಿಷದ್ ಹುಸೇನ್ ಎಸೆತದಲ್ಲಿ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದರು.

ಈ ವೇಳೆ ವಾರ್ನರ್‌ ಜೊತೆಸೇರಿದ ಮ್ಯಾಕ್ಸ್‌ವೆಲ್‌ ಕೂಡಾ ವೇಗದ ಆಟಕ್ಕೆ ಮಣೆ ಹಾಕಿದರು. ಇವರಿಬ್ಬರೂ ತಂಡವನ್ನು 100ರ ಗಡಿ ದಾಟಿಸಿದರು. ಮತ್ತೆ ಸುರಿದ ಮಳೆಯಿಂದಾಗಿ ಪಂದ್ಯ ಮುಂದುವರೆಸಲು ಸಾಧ್ಯವಾಗಲಿಲ್ಲ.

ಮೊದಲು ಬ್ಯಾಟಿಂಗ್‌ ನಡೆಸಿದ ಬಾಂಗ್ಲಾದೇಶವನ್ನು ಕಾಂಗರೂಗಳು ಅಲ್ಪಮೊತ್ತಕ್ಕೆ ಕಟ್ಟಿಹಾಕಿದರು. ಪ್ಯಾಟ್ ಕಮಿನ್ಸ್ 3 ಹಾಗೂ ಆ್ಯಡಂ ಜಂಪಾ 2 ವಿಕೆಟ್ ಪಡೆದು ಮಿಂಚಿದರು. ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯ್ನಿಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ತಲಾ ಒಂದು ವಿಕೆಟ್ ಪಡೆದರು.

ಸ್ಟಾರ್ಕ್‌ ದಾಖಲೆ

ಆಸೀಸ್‌ ವೇಗಿ ಮಿಚೆಲ್ ಸ್ಟಾರ್ಕ್ ಪಂದ್ಯದಲ್ಲಿ ದಾಖಲೆ ನಿರ್ಮಿಸಿದರು. ಇನ್ನಿಂಗ್ಸ್‌ನ ಮೂರನೇ ಎಸೆತದಲ್ಲಿ ತಂಜಿನ್ ಹಸನ್ ಅವರನ್ನು ಔಟ್ ಮಾಡುವ ಮೂಲಕ ಏಕದಿನ ಹಾಗೂ ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ನಿರ್ಮಿಸಿದರು. ಇದೇ ವೇಳೆ ಅವರು ಶ್ರೀಲಂಕಾದ ಲಸಿತ್ ಮಾಲಿಂಗ ಅವರನ್ನು ಹಿಂದಿಕ್ಕಿದರು.

ಆಸ್ಟ್ರೇಲಿಯಾ ಪರ 18ನೇ ಓವರ್ ಎಸೆದ ಕಮಿನ್ಸ್ ಎರಡು ತ್ವರಿತ ವಿಕೆಟ್‌ ಪಡೆದರು. ಆ ಬಳಿಕ ಮತ್ತೆ 20ನೇ ಓವರ್‌ ಬೌಲಿಂಗ್‌ ಮಾಡಿ ತೌಹಿದ್ ಹ್ರಿದೊಯ್ ಅವರನ್ನು ಔಟ್ ಮಾಡಿದರು. ಇದರೊಂದಿಗೆ ಪಂದ್ಯಾವಳಿಯ ಮೊದಲ ಹ್ಯಾಟ್ರಿಕ್ ಪೂರ್ಣಗೊಳಿಸಿದರು. ಅಲ್ಲದೆ ಬ್ರೆಟ್ ಲೀ ನಂತರ ಟಿ20 ವಿಶ್ವಕಪ್ ಪಂದ್ಯದಲ್ಲಿ ಹ್ಯಾಟ್ರಿಕ್ ಪಡೆದ ಎರಡನೇ ಆಸೀಸ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಒಟ್ಟಾರೆ ವಿಶ್ವದ ಏಳನೇ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ