ಟೀಮ್ ಇಂಡಿಯಾ ವಿರುದ್ಧ 3 ವಿಕೆಟ್ ಕಬಳಿಸಿ ನೂತನ ವಿಶ್ವದಾಖಲೆ ನಿರ್ಮಿಸಿದ ಫಜಲ್ಹಕ್ ಫಾರೂಕಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಟೀಮ್ ಇಂಡಿಯಾ ವಿರುದ್ಧ 3 ವಿಕೆಟ್ ಕಬಳಿಸಿ ನೂತನ ವಿಶ್ವದಾಖಲೆ ನಿರ್ಮಿಸಿದ ಫಜಲ್ಹಕ್ ಫಾರೂಕಿ

ಟೀಮ್ ಇಂಡಿಯಾ ವಿರುದ್ಧ 3 ವಿಕೆಟ್ ಕಬಳಿಸಿ ನೂತನ ವಿಶ್ವದಾಖಲೆ ನಿರ್ಮಿಸಿದ ಫಜಲ್ಹಕ್ ಫಾರೂಕಿ

  • Fazalhaq Farooqi Records: 2024ರ ಟಿ20 ವಿಶ್ವಕಪ್​​ ಸೂಪರ್​-8 ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ 3 ವಿಕೆಟ್ ಪಡೆದು ಟಿ20 ವಿಶ್ವಕಪ್ ಇತಿಹಾಸದಲ್ಲಿ ನೂತನ ದಾಖಲೆ ನಿರ್ಮಿಸಿದ್ದಾರೆ.

ಟಿ20 ವಿಶ್ವಕಪ್​ 2024 ಸೂಪರ್​-8 ಪಂದ್ಯದಲ್ಲಿ ಫಜಲ್ಹಕ್​ ಫಾರೂಕಿ ಭಾರತ ತಂಡದ ವಿರುದ್ಧ 4 ಓವರ್​​ಗಳಲ್ಲಿ 33 ರನ್ ನೀಡಿ 4 ವಿಕೆಟ್ ಪಡೆದರು. ಇದರೊಂದಿಗೆ ವಿಶ್ವದಾಖಲೆ ನಿರ್ಮಿಸಿದರು.
icon

(1 / 5)

3 ವಿಕೆಟ್ ಪಡೆದ ಫಾರೂಕಿ 2 ವಿಶಿಷ್ಟ ದಾಖಲೆ ನಿರ್ಮಿಸಿದರು. ಟಿ20 ವಿಶ್ವಕಪ್​ನ ಒಂದೇ ಇತಿಹಾಸದ ಒಂದೇ ಆವೃತ್ತಿಯಲ್ಲಿ 4 ಬಾರಿ ಮೂರು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ವಿಶ್ವದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
icon

(2 / 5)

ಹಾಲಿ ವಿಶ್ವಕಪ್​​ನ ಒಂದೇ ಆವೃತ್ತಿಯಲ್ಲಿ ಫಾರೂಕಿ ನಾಲ್ಕು ಸಲ 3 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್​​ಗಳನ್ನು ಪಡೆದಿದ್ದಾರೆ. ಇದಕ್ಕೂ ಮುನ್ನ 2007ರಲ್ಲಿ ಉಮರ್ ಗುಲ್, 2010ರಲ್ಲಿ ಡಿರ್ಕ್ ನ್ಯಾನ್ಸ್, 2012ರಲ್ಲಿ ಲಕ್ಷ್ಮೀಪತಿ ಬಾಲಾಜಿ ಹಾಗೂ 2021ರಲ್ಲಿ ವನಿಂದು ಹಸರಂಗ ತಲಾ 3 ಬಾರಿ ಸಾಧನೆ ಮಾಡಿದ್ದರು. ಇದೀಗ ಫಾರೂಕಿ ಎಲ್ಲರನ್ನೂ ಹಿಂದಿಕ್ಕಿ ವಿಶ್ವದಾಖಲೆ ನಿರ್ಮಿಸಿದ್ದಾರೆ. 
icon

(3 / 5)

ಟಿ20 ವಿಶ್ವಕಪ್​​​ನ ಒಂದೇ ಆವೃತ್ತಿಯಲ್ಲಿ ಎಡಗೈ ವೇಗಿ ಅತಿ ಹೆಚ್ಚು ವಿಕೆಟ್ ಪಡೆದ 2ನೇ ಬೌಲರ್​ ಎಂಬ ದಾಖಲೆಗೂ ಪಾತ್ರರಾಗಿದ್ದಾರೆ. ಈ ಆವೃತ್ತಿಯಲ್ಲಿ ಫಾರೂಕಿ 15 ವಿಕೆಟ್​​​​ ಪಡೆದಿದ್ದಾರೆ. ಸೂಪರ್​​-8 ಹಂತದಲ್ಲಿ ಇನ್ನೂ 2 ಪಂದ್ಯಗಳು ಉಳಿದಿದ್ದು, ಇನ್ನಷ್ಟು ವಿಕೆಟ್ ಉರುಳಿಸುವ ನಿರೀಕ್ಷೆ ಇದೆ. ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿರುವ ವನಿಂದು ಹಸರಂಗ ದಾಖಲೆ ಅಳಿಸಿ ಹಾಕಲು ಇನ್ನೆರಡು ವಿಕೆಟ್ ಅಗತ್ಯ ಇದೆ. ಹಸರಂಗ ಆವೃತ್ತಿಯೊಂದರಲ್ಲಿ 16 ವಿಕೆಟ್ ಪಡೆದಿದ್ದೇ ಇದುವರೆಗಿನ ದಾಖಲೆಯಾಗಿದೆ.
icon

(4 / 5)

ಆಸ್ಟ್ರೇಲಿಯಾದ ಎಡಗೈ ವೇಗಿ ಡಿರ್ಕ್ ನ್ಯಾನ್ಸ್ ಅವರ 14 ವರ್ಷಗಳ ಹಳೆಯ ದಾಖಲೆ ಮುರಿದರು. ಡಿರ್ಕ್ ನ್ಯಾನ್ಸ್ 2010ರ ಟಿ20 ವಿಶ್ವಕಪ್​ನಲ್ಲಿ 14 ವಿಕೆಟ್​ ಪಡೆದಿದ್ದರು. ನ್ಯೂಜಿಲೆಂಡ್​​ನ ಟ್ರೆಂಟ್ ಬೌಲ್ಟ್ ಕೂಡ 2021ರಲ್ಲಿ 13 ವಿಕೆಟ್​ ಕಬಳಿಸಿದ್ದರು. ಇಂಗ್ಲೆಂಡ್​​ ಸ್ಯಾಮ್ ಕರನ್ ಕೂಡ 2022ರಲ್ಲಿ 13 ವಿಕೆಟ್​​​ ಉರುಳಿಸಿದ್ದರು. 2024ರಲ್ಲಿ 15 ವಿಕೆಟ್ ಉರುಳಿಸಿ ಇವರ ದಾಖಲೆಯನ್ನು ಫಾರೂಕಿ ಹಿಂದಿಕ್ಕಿದ್ದಾರೆ.
icon

(5 / 5)

ಇತರ ಗ್ಯಾಲರಿಗಳು