logo
ಕನ್ನಡ ಸುದ್ದಿ  /  ಕ್ರಿಕೆಟ್  /  ಪರ್ತ್ ಟೆಸ್ಟ್ ಸೋಲಿನ ಬಳಿಕ ಆಸ್ಟ್ರೇಲಿಯಾ ತಂಡದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಸಾಬೀತು; ಹೇಜಲ್​ ವುಡ್ ಹೇಳಿಕೆಯಿಂದ ಕೋಲಾಹಲ

ಪರ್ತ್ ಟೆಸ್ಟ್ ಸೋಲಿನ ಬಳಿಕ ಆಸ್ಟ್ರೇಲಿಯಾ ತಂಡದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಸಾಬೀತು; ಹೇಜಲ್​ ವುಡ್ ಹೇಳಿಕೆಯಿಂದ ಕೋಲಾಹಲ

Raghavendra M Y HT Kannada

Nov 26, 2024 02:31 PM IST

google News

ಟೀಂ ಇಂಡಿಯಾದ ಬೌಲರ್ ಹರ್ಷಿತ್ ರಾಣಾ ಅವರ ಬೌಲಿಂಗ್ ನಲ್ಲಿ ಕ್ಲೀನ್ ಬೌಲ್ಡ್ ಆಗಿರುವ ಅಲೆಕ್ಸ್ ಕೇರಿ. ಮತ್ತೊಂದು ಚಿತ್ರದಲ್ಲಿ ಬೌಲಿಂಗ್ ವೇಳೆ ಆಸೀಸ್ ಬೌಲರ್ ಜೋಶ್ ಹೇಜಲ್ ವುಡ್ ಕಾಣಿಸಿಕೊಂಡಿದ್ದ ಹೀಗೆ.

    • ಪರ್ತ್ ಟೆಸ್ಟ್ ಸೋಲಿನ ಬೆನ್ನಲ್ಲೇ ಆಸೀಸ್ ವೇಗಿ ಜೋಶ್ ಹೇಜಲ್ ವುಡ್ ತಮ್ಮ ತಂಡದ ಬ್ಯಾಟರ್  ಗಳನ್ನು ದೂರಿದ್ದಾರೆ. ಇದರಿಂದಾಗಿ ಆಸ್ಟ್ರೇಲಿಯಾ ತಂಡದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಪರ್ತ್ ನ ಓಪ್ಟಸ್ ಸ್ಟೇಡಿಯಂನಲ್ಲಿ ನಡೆದ ಬಿಜಿಟಿ ಟೂರ್ನಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ 295 ರನ್ ಗಳಿಂದ ಟೀಂ ಇಂಡಿಯಾ ವಿರುದ್ಧ ಸೋಲು ಕಂಡಿದೆ.
ಟೀಂ ಇಂಡಿಯಾದ ಬೌಲರ್ ಹರ್ಷಿತ್ ರಾಣಾ ಅವರ ಬೌಲಿಂಗ್ ನಲ್ಲಿ ಕ್ಲೀನ್ ಬೌಲ್ಡ್ ಆಗಿರುವ ಅಲೆಕ್ಸ್ ಕೇರಿ. ಮತ್ತೊಂದು ಚಿತ್ರದಲ್ಲಿ ಬೌಲಿಂಗ್ ವೇಳೆ ಆಸೀಸ್ ಬೌಲರ್ ಜೋಶ್ ಹೇಜಲ್ ವುಡ್ ಕಾಣಿಸಿಕೊಂಡಿದ್ದ ಹೀಗೆ.
ಟೀಂ ಇಂಡಿಯಾದ ಬೌಲರ್ ಹರ್ಷಿತ್ ರಾಣಾ ಅವರ ಬೌಲಿಂಗ್ ನಲ್ಲಿ ಕ್ಲೀನ್ ಬೌಲ್ಡ್ ಆಗಿರುವ ಅಲೆಕ್ಸ್ ಕೇರಿ. ಮತ್ತೊಂದು ಚಿತ್ರದಲ್ಲಿ ಬೌಲಿಂಗ್ ವೇಳೆ ಆಸೀಸ್ ಬೌಲರ್ ಜೋಶ್ ಹೇಜಲ್ ವುಡ್ ಕಾಣಿಸಿಕೊಂಡಿದ್ದ ಹೀಗೆ.

ಟೀಂ ಇಂಡಿಯಾದ ಮಾಜಿ ಕೋಚ್ ಮತ್ತು ಪ್ರಸ್ತುತ ವೀಕ್ಷಕ ವಿವರಣೆಗಾರರಾಗಿರುವ ರವಿ ಶಾಸ್ತ್ರಿ ಮತ್ತು ಇಂಗ್ಲೆಂಡ್ ನ ಮಾಜಿ ನಾಯಕ ಮೈಕಲ್ ವಾನ್ ಅವರು ಆಸ್ಟ್ರೇಲಿಯಾ ತಂಡದಲ್ಲಿ ಒಗ್ಗಟ್ಟಿನ ಕೊರತೆಯಿದೆ ಎಂಬ ವಿಷಯವನ್ನು ಎತ್ತಿದ್ದಾರೆ. ಇದಕ್ಕೆ ಕಾರಣವಾಗಿದ್ದು ಆಸ್ಟ್ರೇಲಿಯಾದ ವೇಳೆ ಜೋಶ್ ಹೇಜಲ್ ವುಡ್ ಅವರ ಹೇಳಿಕೆ. ಪರ್ತ್ ನಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಪಂದ್ಯವನ್ನು ಆಸೀಸ್ 295 ರನ್ ಗಳಿಂದ ಟೀಂ ಇಂಡಿಯಾ ವಿರುದ್ಧ ಸೋಲು ಕಂಡಿತ್ತು. ಈ ಬಗ್ಗೆ ಮಾತನಾಡಿರುವ ಹೇಜಲ್ ವುಡ್, ಪರ್ತ್ ಟೆಸ್ಟ್ ಪಂದ್ಯದ ಸೋಲಿಗೆ ಬ್ಯಾಟರ್ ಗಳೇ ಕಾರಣ ಎಂದು ಆರೋಪಿಸಿದ್ದಾರೆ. ಇವರ ಈ ಹೇಳಿಕೆ ಹೊರ ಬೀಳುತ್ತಿದ್ದಂತೆ ಆಸ್ಟ್ರೇಲಿಯಾ ತಂಡದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಆಸೀಸ್ ಡ್ರೆಸಿಂಗ್ ರೂಂನಲ್ಲಿ ಬ್ಯಾಟರ್ ಗಳು ಹಾಗೂ ಬೌಲರ್ ಗಳು ಎರಡು ತಂಡಗಳಾಗಿ ಬೇರ್ಪಟ್ಟಿದ್ದಾರೆ ಎನ್ನುವುದು ಕೆಲವರ ವಾದವಾಗಿದೆ.

ಆಸ್ಟ್ರೇಲಿಯಾ ತಂಡ ಪರ್ತ್ ಟೆಸ್ಟ್ ಸೋಲಿಕೆ ಕಾರಣವೇನು ಎಂಬ ಪ್ರಶ್ನೆಗೆ ಉತ್ತರಿಸಿರುವ ಹೇಜಲ್ ವುಡ್, "ನೀವು ಬಹುಶಃ ಈ ಪ್ರಶ್ನೆಯನ್ನು ಬ್ಯಾಟ್ಸಮನ್ ಗಳಲ್ಲಿ ಒಬ್ಬರಿಗೆ ಕೇಳಬೇಕಾಗುತ್ತದೆ, ನಾನು ವಿಶ್ರಾಂತಿ ಪಡೆಯುತ್ತಿದ್ದೇನೆ. ಸ್ವಲ್ಪ ವಿಶ್ರಾಂತಿ ಪಡೆಯಲು ಪ್ರಯತ್ನಿಸುತ್ತಿದ್ದೇನೆ. ನಾನು ಮುಖ್ಯವಾಗಿ ಮುಂದಿನ ಟೆಸ್ಟ್ ಮೇಲೆ ಗಮನ ಹರಿಸುತ್ತಿದ್ದೇನೆ" ಎಂದು ಹೇಳಿದ್ದಾರೆ. "ಹಿರಿಯ ಆಟಗಾರರಾಗಿ, ನೀವು ತಂಡವನ್ನು ಪ್ರತಿನಿಧಿಸುತ್ತಿರುವಾಗ, ನಿಮ್ಮ ಬಗ್ಗೆ ಬಯಸುವ ಏನನ್ನಾದರೂ ನೀಡುವುದು ಬ್ಯಾಟರ್ ಗಳಾಗಿ ನಿಮ್ಮ ಕರ್ತವ್ಯ ಎಂದು ನಾನು ಭಾವಿಸುತ್ತೇನೆ, ಎಲ್ಲಾ ಬ್ಯಾಟರ್ ಗಳು ಅಲ್ಲಿಗೆ ಹೋಗಿ ಬ್ಯಾಟಿಂಗ್ ಮಾಡುವ ಬಗ್ಗೆ ಯೋಚಿಸುತ್ತಾರೆ" ಎಂದು ವಾರ್ನರ್ ಚಾನೆಲ್ 7 ನಲ್ಲಿ ಹೇಳಿದ್ದಾರೆ. ಆಸ್ಟ್ರೇಲಿಯಾದ ಬ್ಯಾಟ್ಸಮನ್ ಗಳು ಸಾಕಷ್ಟು ರನ್ ಗಳಿಸಿಲ್ಲ, ಆದರೆ ಅವರಿಗೆ ಹಿರಿಯ ಬೌಲರ್ ಗಳಿಂದ ಬೆಂಬಲ ಸಿಗಬೇಕು ಎಂದಿದ್ದಾರೆ.

ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಪಂದ್ಯವನ್ನು ಸೋತ ನಂತರ ಜೋಶ್ ಹೇಜಲ್ ವುಡ್ ಹೇಳಿಕೆಯು ಆಸ್ಟ್ರೇಲಿಯಾ ತಂಡದಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಗಿದೆ . ಇದು ಆಸ್ಟ್ರೇಲಿಯಾ ತಂಡದ ಏಕತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ. ಆಸೀಸ್ ವಿರುದ್ಧದ ಪರ್ತ್ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ 295 ರನ್ ಗಳಿಂದ ಗೆದ್ದುಕೊಂಡಿತು. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ 104 ರನ್ ಗಳಿಗೆ ಆಲೌಟ್ ಆಗಿತ್ತು.

ಆಸ್ಟ್ರೇಲಿಯಾ ತಂಡದ ಡ್ರೆಸ್ಸಿಂಗ್ ರೂಮ್ ವಿಭಜನೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಮೈಕಲ್ ವಾನ್, ಯಾವುದೇ ಆಸ್ಟ್ರೇಲಿಯನ್ನರಿಂದ ಇಂತಹ ವಿಚಾರ ಕೇಳಿಲ್ಲ ಎಂದು ಹೇಳಿದ್ದಾರೆ. "ಸಾರ್ವಜನಿಕವಾಗಿ, ಆಸ್ಟ್ರೇಲಿಯಾದ ಆಟಗಾರರು ತಂಡವನ್ನು ಬ್ಯಾಟ್ಸಮನ್ ಗಳು ಮತ್ತು ಬೌಲರ್ ಗಳಾಗಿ ವಿಂಗಡಿಸುವುದನ್ನು ನಾನು ಎಂದಿಗೂ ಕೇಳಿಲ್ಲ" ಎಂದು ವಾನ್ ಫಾಕ್ಸ್ ಕ್ರಿಕೆಟ್ ಗೆ ತಿಳಿಸಿದ್ದಾರೆ. 11 ಬ್ಯಾಟ್ಸಮನ್ ಗಳು ಎಂದಿಗೂ ಬದಲಾಗುವುದಿಲ್ಲ, ಪ್ರತಿಯೊಬ್ಬ ಆಟಗಾರನು ಬ್ಯಾಟಿಂಗ್ ಮಾಡಬೇಕು. ವಿಶ್ವದ ಯಾವುದೇ ಆಟಗಾರ, ಆದರೆ ವಿಶೇಷವಾಗಿ ಆಸ್ಟ್ರೇಲಿಯಾ ತಂಡದಲ್ಲಿ ನಾನು ಯಾವಾಗಲೂ ಪ್ರತಿ ತಂಡದಲ್ಲಿನ ಸಣ್ಣ ವಿಷಯಗಳನ್ನು ನೋಡುತ್ತೇನೆ ಎಂದಿದ್ದಾರೆ.

ಇದೇ ವಿಷಯದ ಬಗ್ಗೆ ಮಾತನಾಡಿರುವ ರವಿಶಾಸ್ತ್ರಿ, "ಭಾರತೀಯ ಡ್ರೆಸ್ಸಿಂಗ್ ರೂಂನಲ್ಲಿ ಈ ರೀತಿಯದ್ದನ್ನು ಕೇಳಿದಾಗ ಅವರು ಏನು ಯೋಚಿಸುತ್ತಾರೆ, ಪಿಚ್ ನಲ್ಲಿ ಕೆಲವು ಬಿರುಕುಗಳಿವೆ ಎಂದು ಅವರಿಗೆ ತಿಳಿದಿದೆ, ಆದರೆ ಕೆಲವು ಮಾನಸಿಕ ಬಿರುಕುಗಳಿವೆ. ಕಳೆದ 30-40 ವರ್ಷಗಳಲ್ಲಿ, ಆಸ್ಟ್ರೇಲಿಯಾಕ್ಕೆ ಬಂದ ನಂತರ, ಯಾವುದೇ ಭಾರತೀಯ ತಂಡವು ಈ ರೀತಿ ಭಾವಿಸುತ್ತಿರುವುದು ಇದೇ ಮೊದಲು. ಅದು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ