ಪರ್ತ್ ಟೆಸ್ಟ್ ಗೆದ್ದಾಯ್ತು; WTC ಫೈನಲ್ ಗೆ ಅರ್ಹತೆ ಪಡೆಯಲು ಟೀಂ ಇಂಡಿಯಾ ಇನ್ನೂ ಎಷ್ಟು ಪಂದ್ಯ ಗೆಲ್ಲಬೇಕು, ಲೆಕ್ಕಾಚಾರಗಳು ಹೀಗಿವೆ
ಟೀಮ್ ಇಂಡಿಯಾ ಈಗ ಡಬ್ಲ್ಯುಟಿಸಿ ಫೈನಲ್ ಗೆ ಅರ್ಹತೆ ಪಡೆಯುವುದು ಹೇಗೆ? ಆಸ್ಟ್ರೇಲಿಯಾ ವಿರುದ್ಧ ಪರ್ತ್ ಟೆಸ್ಟ್ ಪಂದ್ಯ ಗೆದ್ದ ಬಳಿಕ ಟೀಂ ಇಂಡಿಯಾದ ಲೆಕ್ಕಾಚಾರಗಳು ಹೇಗಿವೆ . ಪರ್ತ್ ಟೆಸ್ಟ್ ನಲ್ಲಿ ಭರ್ಜರಿ ಗೆಲುವು ಬಳಿಕ ಸಮೀಕರಣಗಳು ಸ್ವಲ್ಪ ಬದಲಾಗಿವೆ. ಭಾರತ ಇನ್ನೂ ಮೂರು ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ.
ಆಸ್ಟ್ರೇಲಿಯಾ ವಿರುದ್ಧದ ಪರ್ತ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 295 ರನ್ ಗಳ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಭಾರತ ತಂಡ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪಾಯಿಂಟ್ಸ್ ಟೇಬಲ್ ನಲ್ಲಿ ಮೊದಲ ಸ್ಥಾನಕ್ಕೇರಿದೆ. ಇದೇ ಸಮಯದಲ್ಲಿ, ಆಸ್ಟ್ರೇಲಿಯಾ ಹಿನ್ನಡೆ ಅನುಭವಿಸಿದೆ. ಪ್ಯಾಟ್ ಕಮ್ಮಿನ್ಸ್ ನೇತೃತ್ವದ ಕಾಂಗರೂ ಪಡೆ ಎರಡನೇ ಸ್ಥಾನಕ್ಕೆ ಕುಸಿಯಿತು. ಪರ್ತ್ ಟೆಸ್ಟ್ ಪಂದ್ಯದ ನಂತರ ಡಬ್ಲ್ಯುಟಿಸಿ ಫೈನಲ್ ತಲುಪುವ ಸನ್ನಿವೇಶವೂ ಬದಲಾಗಿದೆ. ಡಬ್ಲ್ಯುಟಿಸಿ ಫೈನಲ್ ಪ್ರವೇಶಿಸಲು ಉಭಯ ತಂಡಗಳು ಹೋರಾಡುತ್ತಿವೆ. ಯಾವ ತಂಡವು ಅಂತಿಮವಾಗಿ ಟಿಕೆಟ್ ಪಡೆಯಬಹುದು ಎಂಬುದರ ಬಗ್ಗೆ ತಿಳಿಯಿರಿ.
ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾಗೆ ಆಸ್ಟ್ರೇಲಿಯಾ ವಿರುದ್ಧ ಇನ್ನು 4 ಟೆಸ್ಟ್ ಪಂದ್ಯಗಳು ಮಾತ್ರ ಬಾಕಿ ಉಳಿದಿವೆ. ಇದಲ್ಲದೆ, ಆಸ್ಟ್ರೇಲಿಯಾವು ತವರಿನಲ್ಲಿ ಭಾರತದ ವಿರುದ್ಧ ನಾಲ್ಕು ಟೆಸ್ಟ್ ಮತ್ತು ಶ್ರೀಲಂಕಾದಲ್ಲಿ ಎರಡು ಟೆಸ್ಟ್ ಪಂದ್ಯಗಳನ್ನು ಆಡಬೇಕಾಗಿದೆ. ಟೀಮ್ ಇಂಡಿಯಾದ ಗೆಲುವಿನ ಶೇಕಡಾವಾರು ಪ್ರಸ್ತುತ 61.11 ರಷ್ಟಿದ್ದರೆ, ಆಸ್ಟ್ರೇಲಿಯಾದ ಗೆಲುವಿನ ಶೇಕಡಾವಾರು 57.69 ಕ್ಕೆ ಇಳಿದಿದೆ. ಶ್ರೀಲಂಕಾ, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಂತರದ ಮೂರು ತಂಡಗಳಾಗಿದ್ದು, ಗೆಲುವಿನ ಶೇಕಡಾವಾರು ಶೇಕಡಾ 54 ಕ್ಕಿಂತ ಹೆಚ್ಚಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಮತ್ತೊಂದು ಸೋಲು ಆಸ್ಟ್ರೇಲಿಯಾವನ್ನು ಸದ್ಯಕ್ಕೆ ತೊಂದರೆಗೆ ಸಿಲುಕಿಸಬಹುದು.
ಒಂದು ವೇಳೆ ಟೀಂ ಇಂಡಿಯಾ 5-0 ಅಂತರದಲ್ಲಿ ಆಸೀಸ್ ವಿರುದ್ಧ ಸರಣಿ ಗೆದ್ದರೆ, ಗೆಲುವಿನ ಶೇಕಡಾವಾರು 69.30 ಆಗಿರುತ್ತದೆ. 4-1 ಅಂತರದಲ್ಲಿ ಸರಣಿ ಗೆದ್ದರೆ ಅಂಕಪಟ್ಟಿಯಲ್ಲಿ 64.04ರ ಮುನ್ನಡೆ ಸಾಧಿಸಲಿದೆ. 3-2ರಲ್ಲಿ ಭಾರತದ ಗೆಲುವಿನ ಶೇಕಡಾವಾರು 58.77 ಆಗಿರುತ್ತದೆ. ಮತ್ತೊಂದೆಡೆ, ಭಾರತವು ಸರಣಿಯನ್ನು 2-3 ಅಂತರದಿಂದ ಗೆದ್ದರೆ, ಗೆಲುವಿನ ಶೇಕಡಾವಾರು 53.51 ಕ್ಕೆ ಹೋಗುತ್ತದೆ ಹಾಗೂ ತಂಡವು 1-4 ರಿಂದ ಸೋತರೆ, ತಂಡದ ಗೆಲುವಿನ ಶೇಕಡಾವಾರು 50 ಕ್ಕಿಂತ ಕಡಿಮೆ ಅಂದರೆ 48.25 ಆಗಿರುತ್ತದೆ. ಒಂದು ವೇಳೆ ಟೆಸ್ಟ್ ಡ್ರಾ ಆದರೆ ಗೆಲುವಿನ ಶೇಕಡಾವಾರು ವಿಭಿನ್ನವಾಗಿರುತ್ತದೆ.
ಈ ಮೇಲಿನ ಅಂಕಿ ಅಂಶಗಳು ಹಾಗೂ ಫಲಿತಾಂಶದದ ಶೇಕಡಾವಾರು ನೋಡಿದರೆ, ಭಾರತವು 5-0 ಅಥವಾ 4-1 ರಿಂದ ಗೆದ್ದರೆ ಡಬ್ಲ್ಯುಟಿಸಿ ಫೈನಲ್ ತಲುಪಲು ಅರ್ಹವಾಗಿರುತ್ತದೆ. ಆದರೆ ಸರಣಿಯನ್ನು 3-2 ರಿಂದ ಗೆಲ್ಲುವುದು ಇನ್ನೂ ಒಂದು ವಿಷಯವಾಗಬಹುದು, ಆದರೆ ಇತರ ಎರಡು ಸನ್ನಿವೇಶಗಳು ಇದ್ದರೆ, ತಂಡವು ಸ್ಪರ್ಧೆಯಿಂದ ಹೊರಗುಳಿಯುತ್ತದೆ. ಫಲಿತಾಂಶವು ಭಾರತದ ಪರವಾಗಿ 3-2 ಆಗಿದ್ದರೆ, ಆಸ್ಟ್ರೇಲಿಯಾವು ಶ್ರೀಲಂಕಾ ವಿರುದ್ಧ ಕನಿಷ್ಠ ಒಂದು ಪಂದ್ಯವನ್ನು ಸೋಲಬೇಕೆಂದು ಟೀಂ ಇಂಡಿಯಾ ಪ್ರಾರ್ಥಿಸಬೇಕಾಗುತ್ತದೆ.
ಕಥೆ ಇಲ್ಲಿಗೆ ಕೊನೆಗೊಳ್ಳುವುದಿಲ್ಲ, ಏಕೆಂದರೆ ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ತಂಡಗಳು ಭಾರತದ ಆಟವನ್ನು ಹಾಳುಮಾಡಬಹುದು. ಒಂದು ವೇಳೆ ಭಾರತ 3-2 ಅಂತರದಲ್ಲಿ ಸರಣಿ ಗೆದ್ದರೆ 58.77ರ ಗೆಲುವಿನ ಪ್ರಮಾಣ ಪಡೆಯಲಿದ್ದು, ಇಂಗ್ಲೆಂಡ್ ವಿರುದ್ಧ 3-0 ಅಂತರದಲ್ಲಿ ಜಯ ಗಳಿಸಿದರೆ ನ್ಯೂಜಿಲೆಂಡ್ ಶೇ.64.29ರಷ್ಟು ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಲಿದೆ. ದಕ್ಷಿಣ ಆಫ್ರಿಕಾಕ್ಕೂ ಇನ್ನೂ ನಾಲ್ಕು ಪಂದ್ಯಗಳು ಉಳಿದಿವೆ. ನಾಲ್ಕು ಪಂದ್ಯಗಳಲ್ಲಿ ಮೂರನ್ನು ಗೆದ್ದರೆ, ಅವರು 61 ರ ಗಡಿ ದಾಟುತ್ತಾರೆ. ಒಂದು ವೇಳೆ ರೀತಿಯ ಫಲಿತಾಂಶ ಬಂದಿದ್ದೇ ಆದರೆ ಭಾರತ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಟೂರ್ನಿಯಿಂದ ಹೊರಬೀಳಲಿದೆ.
ಭಾರತವನ್ನು ಹಿಂದಿಕ್ಕಲು ನ್ಯೂಜಿಲೆಂಡ್ ಗೆ ಮತ್ತೆ 2-0 ಅಂತರದ ಗೆಲುವು ಸಾಕು. ಶ್ರೀಲಂಕಾದ ಬಗ್ಗೆ ಮಾತನಾಡುವುದಾದರೆ, ಅವರು ಉಳಿದ ನಾಲ್ಕು ಟೆಸ್ಟ್ ಗಳಲ್ಲಿ 3 ಪಂದ್ಯಗಳನ್ನು ಗೆದ್ದರೆ ಫೈನಲ್ ತಲುಪುವ ರೇಸ್ ಗೆ ಬರುತ್ತಾರೆ. ಶ್ರೀಲಂಕಾದ ಗೆಲುವಿನ ಶೇಕಡಾವಾರು 61 ಕ್ಕಿಂತ ಹೆಚ್ಚಾಗಿರುತ್ತದೆ, ಇದು ಭಾರತಕ್ಕಿಂತ ಹೆಚ್ಚಾಗಿದೆ. ಇದಲ್ಲದೆ, ಅವರು ದಕ್ಷಿಣ ಆಫ್ರಿಕಾವನ್ನು ಸಹ ಹಿಂದಿಕ್ಕಬಹುದು.
ಟೀಂ ಇಂಡಿಯಾಗೆ ಇರುವ ಮತ್ತೊಂದು ಅವಕಾಶ ಯಾವುದು
ಭಾರತದ ಮತ್ತೊಂದು ಸನ್ನಿವೇಶದ ಬಗ್ಗೆ ಮಾತನಾಡುವುದಾದರೆ, ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ಫಲಿತಾಂಶವು ಭಾರತದ ಪರವಾಗಿ 3-1 ರಿಂದ ಬಂದರೆ. ಒಂದು ಡ್ರಾ ಸಾಧಿಸಿದರೆ ಭಾರತ ಗೆಲುವಿನ ಶೇಕಡಾವಾರು 60.53ಕ್ಕೆ ತಲುಪಲಿದೆ. 3-0 ಅಂತರದಲ್ಲಿ ಗೆದ್ದರೆ ಭಾರತ ಶೇ.61.54ರಷ್ಟು ಗೆಲುವು ಸಾಧಿಸಲಿದೆ. ಆಗ ದಕ್ಷಿಣ ಆಫ್ರಿಕಾದ ಗೆಲುವಿನ ಶೇಕಡಾವಾರು 61.11 ಅನ್ನು ಹಿಂದಿಕ್ಕಲಿದ್ದಾರೆ.
ಈ ತಂಡಗಳನ್ನು ಪರಿಗಣಿಸಿದರೆ ಆಸ್ಟ್ರೇಲಿಯಾದ ಲೆಕ್ಕಾಚಾರಗಳು ತುಂಬಾ ಸರಳವಾಗಿದೆ. ಆರು ಟೆಸ್ಟ್ ಪಂದ್ಯಗಳಲ್ಲಿ ಐದನ್ನು ಗೆದ್ದರೆ, ಅವರು 65.79 ಕ್ಕೆ ತಲುಪುತ್ತಾರೆ ಜೊತೆಗೆ ಡಬ್ಲ್ಯುಟಿಸಿಗೆ ಅರ್ಹತೆ ಪಡೆಯುತ್ತಾರೆ. ನಾಲ್ಕು ಗೆಲುವುಗಳು ಇವರನ್ನು 60.53 ಕ್ಕೆ ಕೊಂಡೊಯ್ಯುತ್ತವೆ. ಆದರೆ ನಾಲ್ಕು ಗೆಲುವು ಮತ್ತು ಒಂದು ಡ್ರಾದೊಂದಿಗೆ, ಅವರ ಸ್ಕೋರ್ 61.11 ತಲುಪ್ತೆ. ಫೈನಲ್ ಗೆ ಸ್ಥಾನ ಪಡೆಯಲು ಭಾರತವು ಉಳಿದ ನಾಲ್ಕು ಟೆಸ್ಟ್ ಗಳಲ್ಲಿ ಮೂರನ್ನು ಗೆಲ್ಲಬೇಕಾಗಿದೆ. ಆಸ್ಟ್ರೇಲಿಯಾವು ಆರು ಟೆಸ್ಟ್ ಪಂದ್ಯಗಳಲ್ಲಿ ನಾಲ್ಕನ್ನು ಗೆದ್ದು ಒಂದು ಪಂದ್ಯವನ್ನು ಡ್ರಾ ಮಾಡಿಕೊಳ್ಳಬೇಕಾಗಿದೆ.