logo
ಕನ್ನಡ ಸುದ್ದಿ  /  ಕ್ರಿಕೆಟ್  /  ವಿರಾಟ್ ಕೊಹ್ಲಿಗೆ ನಮ್ಮ ಅವಶ್ಯಕತೆ ಇಲ್ಲ, ಆದರೆ ನಮಗೆ ವಿರಾಟ್ ಕೊಹ್ಲಿಯ ಅಗತ್ಯವಿದೆ; ವೇಗಿ ಜಸ್ಪ್ರೀತ್ ಬುಮ್ರಾ

ವಿರಾಟ್ ಕೊಹ್ಲಿಗೆ ನಮ್ಮ ಅವಶ್ಯಕತೆ ಇಲ್ಲ, ಆದರೆ ನಮಗೆ ವಿರಾಟ್ ಕೊಹ್ಲಿಯ ಅಗತ್ಯವಿದೆ; ವೇಗಿ ಜಸ್ಪ್ರೀತ್ ಬುಮ್ರಾ

Raghavendra M Y HT Kannada

Nov 26, 2024 11:00 AM IST

google News

ಆಸ್ಟ್ರೇಲಿಯಾ ವಿರುದ್ಧದ ಪರ್ತ್ ಟೆಸ್ಟ್ ಪಂದ್ಯದ ಬಳಿಕ ನಾಯಕ ಜಸ್ಪ್ರೀತ್ ಬುಮ್ರಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಶತಕ ಬಾರಿಸಿ ಸಂಭ್ರಮಿಸಿದ ವಿರಾಟ್ ಕೊಹ್ಲಿ.

    • ವಿರಾಟ್ ಕೊಹ್ಲಿಗೆ ನಮ್ಮ ಅಗತ್ಯವಿಲ್ಲ, ನಮಗೆ ವಿರಾಟ್ ಕೊಹ್ಲಿ ಬೇಕು ಎಂದು ಟೀಂ ಇಂಡಿಯಾದ ವೇಗಿ, ಪರ್ತ್ ಟೆಸ್ಟ್ ಗಾಗಿ ತಂಡದ ನಾಯಕತ್ವ ವಹಿಸಿದ್ದ ಜಸ್ಪ್ರೀತ್ ಬುಮ್ರಾ ಹೇಳಿದ್ದಾರೆ. ಬುಮ್ರಾ ಅವರು ಹೀಗೆ ಹೇಳೋದಿಕ್ಕೆ ಅಂದೊಂದು ಕಾರಣವಿದೆ. 
ಆಸ್ಟ್ರೇಲಿಯಾ ವಿರುದ್ಧದ ಪರ್ತ್ ಟೆಸ್ಟ್ ಪಂದ್ಯದ ಬಳಿಕ ನಾಯಕ ಜಸ್ಪ್ರೀತ್ ಬುಮ್ರಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಶತಕ ಬಾರಿಸಿ ಸಂಭ್ರಮಿಸಿದ ವಿರಾಟ್ ಕೊಹ್ಲಿ.
ಆಸ್ಟ್ರೇಲಿಯಾ ವಿರುದ್ಧದ ಪರ್ತ್ ಟೆಸ್ಟ್ ಪಂದ್ಯದ ಬಳಿಕ ನಾಯಕ ಜಸ್ಪ್ರೀತ್ ಬುಮ್ರಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಶತಕ ಬಾರಿಸಿ ಸಂಭ್ರಮಿಸಿದ ವಿರಾಟ್ ಕೊಹ್ಲಿ.

ಆಸ್ಟ್ರೇಲಿಯಾದ ಪರ್ತ್ ನಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿ ಸಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸೀಸ್ ವಿರುದ್ಧ ಟೀಂ ಇಂಡಿಯಾ ದಾಖಲೆಯ ಗೆಲುವು ಸಾಧಿಸಿದೆ. ನಾಯಕ ಜಸ್ಪ್ರೀತ್ ಬುಮ್ರಾ ಅವರ ಬೆಂಕಿಯ ಬೌಲಿಂಗ್ ದಾಳಿ, ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ ಸೇರಿದಂತೆ ಆಟಗಾರರ ಸಂಘಟಿತ ಹೋರಾಟದ ಫಲವಾಗಿ ಪ್ಯಾಟ್ ಕಮ್ಮಿನ್ಸ್ ಪಡೆಯ ವಿರುದ್ಧ 295 ರನ್ ಗಳಿಂದ ಜಯಭೇರಿ ಬಾರಿಸಿತು. ವಿಶೇಷವಾಗಿ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಶತಕ ಶತಕ ಬಾರಿಸಿದರು. ಈ ಮೂಲಕ ಬರೋಬ್ಬರಿ 30 ಇನ್ನಿಂಗ್ಸ್ ಗಳ ನಂತರ ತಮ್ಮ 81ನೇ ಶತಕವನ್ನು ಪೂರೈಸಿದರು. ಪರ್ತ್ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಜೇಯ 100 ರನ್ ಬಾರಿಸಿದ್ದರು. ಬ್ಯಾಟಿಂಗ್ ಹೊರತಾಗಿ, ಫೀಲ್ಡಿಂಗ್ ಮಾಡುವಾಗ ನಾಯಕತ್ವ ವಹಿಸಿದ್ದ ಜಸ್ಪ್ರೀತ್ ಬುಮ್ರಾಗೆ ಸಾಕಷ್ಟು ಬೆಂಬಲ ನೀಡಿದರು.

ಭಾರತದ ಗೆಲುವಿನ ನಂತರ ನಾಯಕ ಜಸ್ಪ್ರೀತ್ ಬುಮ್ರಾ ವಿರಾಟ್ ಕೊಹ್ಲಿಯನ್ನು ಶ್ಲಾಘಿಸಿದ್ದಾರೆ. ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಬುಮ್ರಾ, ಫಾರ್ಮ್ ಸಮಸ್ಯೆಯಿಂದ ವಿರಾಟ್ ಎಂದೂ ತಂಡದಿಂದ ಹೊರಗುಳಿದವರಲ್ಲ. ವಿರಾಟ್ ಕೊಹ್ಲಿಗೆ ನಮ್ಮ ಅಗತ್ಯವಿಲ್ಲ, ಆದರೆ ನಮಗೆ ವಿರಾಟ್ ಕೊಹ್ಲಿ ಬೇಕು ಎಂದು ಮೆಚ್ಚುಗೆಯ ಮಾತುಗಳನ್ನು ಹೇಳಿದ್ದಾರೆ.

ಅವರು ಯಾವ ರೀತಿಯ ಆಟಗಾರ, ಅವರು ಪ್ರದರ್ಶನ ನೀಡುವ ರೀತಿ, ತಂಡಕ್ಕಾಗಿ ಅವರ ಅನುಭವ. ಈ ಎಲ್ಲಾ ಅಂಶಗಳಿಂದಾಗಿಯೇ ಭಾರತಕ್ಕೆ ವಿರಾಟ್ ಕೊಹ್ಲಿ ಅಗತ್ಯವಿದೆ. ಅವರು ನಮಗೆ ಬಹಳ ಮುಖ್ಯವಾದ ಆಟಗಾರ ಎಂದಿದ್ದಾರೆ. ವಿರಾಟ್ ಕೊಹ್ಲಿ ಹಲವು ಇನ್ನಿಂಗ್ಸ್ ಗಳಿಂದ ಶತಕ ಪೂರೈಸಲು ಸಾಧ್ಯವಾಗುತ್ತಿಲ್ಲ ಎಂಬ ಟೀಕೆಗಳು ಕೇಳಿಬಂದಿದ್ದವು. ಪರ್ತ್ ಟೆಸ್ಟ್ ನಲ್ಲಿ ಕೊಹ್ಲಿ ಶತಕದ ಮೂಲಕ ಟೀಕಾರರ ಬಾಯಿ ಮುಚ್ಚಿಸಿದ್ದಾರೆ.

ಪರ್ತ್ ನಲ್ಲಿ ನಡದೆ ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 150 ರನ್ ಗಳಿಗೆ ಕುಸಿಯಿತು, ನಂತರ ಮೊದಲ ದಿನದ ಪಂದ್ಯದಲ್ಲಿ ಬಹಳ ಹಿಂದೆ ಬೀಳುವಂತೆ ತೋರಿತು. ಆದರೆ ಭಾರತೀಯ ಬೌಲರ್ಗಳು ಅದ್ಭುತ ಪ್ರದರ್ಶನ ನೀಡಿ ಆತಿಥೇಯರನ್ನು 104 ರನ್ ಗಳಿಗೆ ಕಟ್ಟಿಹಾಕಿದರು.

ಮೊದಲ ಇನ್ನಿಂಗ್ಸ್ ನ ಹಿನ್ನಡೆಯನ್ನು ಮೆಟ್ಟಿನಿಂತು 46 ರನ್ ಗಳ ಮುನ್ನಡೆಯನ್ನು ಪಡೆಯಲಾಯಿತು. ಇದರ ನಂತರ, ಬ್ಯಾಟರ್ ಗಳು ಉತ್ತಮ ರನ್ ಗಳಿಸುವ ಮೂಲಕ ಎರಡನೇ ಇನ್ನಿಂಗ್ಸ್ ನಲ್ಲಿ ತಂಡದ ಕೆಲಸವನ್ನು ಸುಲಭಗೊಳಿಸಿದರು. ಎರಡನೇ ಇನ್ನಿಂಗ್ಸ್ ನಲ್ಲಿ ಭಾರತ 487 ರನ್ ಗಳಿಸಿ ಆಸ್ಟ್ರೇಲಿಯಾವನ್ನು ಸಂಪೂರ್ಣವಾಗಿ ಹಿನ್ನಡೆಗೆ ತಳ್ಳಿತು. ಗೆಲ್ಲಲು 534 ರನ್ ಗುರಿ ಪಡೆದ ಕಾಂಗರೂಗಳು ಇಡೀ ತಂಡವನ್ನು 238 ರನ್ ಗಳಿಗೆ ಆಲೌಟ್ ಮಾಡುವ ಮೂಲಕ 295 ರನ್ ಗಳ ಅಮೋಘ ವಿಜಯವನ್ನು ಪಡೆಯಿತು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ