logo
ಕನ್ನಡ ಸುದ್ದಿ  /  ಕ್ರಿಕೆಟ್  /  ಬಾಬರ್​ ಅಜಮ್ ವಿರುದ್ಧ ಪಾಕಿಸ್ತಾನ ಸಂಸತ್ತಿನಲ್ಲೂ ಟೀಕೆ; ಇಮ್ರಾನ್ ಖಾನ್ ನೋಡಿ ಕಲಿ ಎಂದ ಸಂಸದ ಅಬ್ದುಲ್ ಖಾದಿರ್

ಬಾಬರ್​ ಅಜಮ್ ವಿರುದ್ಧ ಪಾಕಿಸ್ತಾನ ಸಂಸತ್ತಿನಲ್ಲೂ ಟೀಕೆ; ಇಮ್ರಾನ್ ಖಾನ್ ನೋಡಿ ಕಲಿ ಎಂದ ಸಂಸದ ಅಬ್ದುಲ್ ಖಾದಿರ್

Prasanna Kumar P N HT Kannada

Jun 23, 2024 05:30 PM IST

google News

ಬಾಬರ್​ ಅಜಮ್ ವಿರುದ್ಧ ಪಾಕಿಸ್ತಾನ ಸಂಸತ್ತಿನಲ್ಲೂ ಟೀಕೆ; ಇಮ್ರಾನ್ ಖಾನ್ ನೋಡಿ ಕಲಿ ಎಂದ ಸಂಸದ ಅಬ್ದುಲ್ ಖಾದಿರ್

    • Babar Azam: ಟಿ20 ವಿಶ್ವಕಪ್​ 2024 ಟೂರ್ನಿಯಲ್ಲಿ ಹೀನಾಯ ಪ್ರದರ್ಶನ ನೀಡಿದ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ವಿರುದ್ಧ ಸಂಸತ್ತಿನ ಸದಸ್ಯರು ಕಿಡಿಕಾರಿದ್ದಾರೆ.
ಬಾಬರ್​ ಅಜಮ್ ವಿರುದ್ಧ ಪಾಕಿಸ್ತಾನ ಸಂಸತ್ತಿನಲ್ಲೂ ಟೀಕೆ; ಇಮ್ರಾನ್ ಖಾನ್ ನೋಡಿ ಕಲಿ ಎಂದ ಸಂಸದ ಅಬ್ದುಲ್ ಖಾದಿರ್
ಬಾಬರ್​ ಅಜಮ್ ವಿರುದ್ಧ ಪಾಕಿಸ್ತಾನ ಸಂಸತ್ತಿನಲ್ಲೂ ಟೀಕೆ; ಇಮ್ರಾನ್ ಖಾನ್ ನೋಡಿ ಕಲಿ ಎಂದ ಸಂಸದ ಅಬ್ದುಲ್ ಖಾದಿರ್

2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ (T20 World Cup 2024) ಪಾಕಿಸ್ತಾನ ಕಳಪೆ ಪ್ರದರ್ಶನ ತೋರಿತು‌. ಕಳೆದ ವರ್ಷ ರನ್ನರ್​​ಅಪ್​ ಆಗಿದ್ದ ಪಾಕಿಸ್ತಾನ, ಈ ಬಾರಿ ಕ್ರಿಕೆಟ್ ಶಿಶು ಅಮೆರಿಕ ವಿರುದ್ಧ ಸೋತು ಲೀಗ್ ಹಂತದಿಂದಲೇ ಹೊರಬಿತ್ತು. ಪಾಕಿಸ್ತಾನದ ಟಿ20 ವಿಶ್ವಕಪ್ ಸೋಲಿಗೆ ವಿಶ್ವದಾದ್ಯಂತ ತೀವ್ರ ಟೀಕೆ ವ್ಯಕ್ತವಾಯಿತು. ಇದು ಬಾಬರ್ ಅಜಮ್ (Babar Azam) ವಿಶ್ವಾಸಾರ್ಹತೆಯ ಮೇಲೆ ಪ್ರಶ್ನೆ ಹುಟ್ಟು ಹಾಕಿದೆ. ಟೂರ್ನಿಯಿಂದ ಹೊರ ಬಿದ್ದು ಒಂದು ವಾರವಾದರೂ ಬಾಬರ್ ವಿರುದ್ಧ ಟೀಕೆ ನಿಂತಿಲ್ಲ.

ಟಿ20 ವಿಶ್ವಕಪ್ 2024ನಲ್ಲಿ ಕಳಪೆ ಪ್ರದರ್ಶನ ನೀಡಿದ್ದರ ಕುರಿತು ಪಾಕಿಸ್ತಾನ ಸಂಸತ್ತಿನಲ್ಲಿ ಬಾಬರ್ ಅಜಮ್ ಅವರನ್ನು ಟೀಕಿಸಲಾಗಿದೆ. ಮಾಜಿ ಪ್ರಧಾನಿ, ಮಾಜಿ ನಾಯಕ ಇಮ್ರಾನ್ ಖಾನ್​ ಅವರನ್ನು ಅನುಸರಿಸುವಂತೆ ಬಾಬರ್ ಅವರಿಗೆ ಸಲಹೆ ನೀಡಿದ್ದಾರೆ. ನಾಯಕ ಮತ್ತು ಬ್ಯಾಟರ್ ಆಗಿ ಭಯಾನಕ ವೈಫಲ್ಯ ಅನುಭವಿಸಿದ ಬಾಬರ್ ವಿರುದ್ಧ ಪಾಕಿಸ್ತಾನ ಸಂಸದರು ಸಂಸತ್ತಿನಲ್ಲಿ ಗುಡುಗಿದ್ದಾರೆ.

ಸಂಸತ್ತಿನ ಸದಸ್ಯ ಅಬ್ದುಲ್ ಖಾದಿರ್​ ಪಟೇಲ್, ಯುಎಸ್ಎ ಮತ್ತು ಭಾರತ ವಿರುದ್ಧದ ಪಂದ್ಯಗಳಲ್ಲಿ ಸೋಲುಂಡ ಕಾರಣ ಪಾಕಿಸ್ತಾನ ತಂಡದ ನಾಯಕನನ್ನು ಟೀಕಿಸಿದ್ದಾರೆ. ತಂಡದಲ್ಲಿ ಆಗಿರುವ ತಪ್ಪುಗಳ ಕುರಿತು ಪರಿಶೀಲನೆ ನಡೆಸುವಂತೆ ಹೇಳಿದ್ದಾರೆ. ಬಾಬರ್ ಸಾಕಷ್ಟು ತಪ್ಪುಗಳನ್ನು ಮಾಡಿದ್ದಾರೆ. ಆ ತಪ್ಪುಗಳನ್ನು ತಿದ್ದಿಕೊಳ್ಳಬೇಕು ಎಂದು ಸಂಸತ್ತಿನಲ್ಲಿ ಖಾದಿರ್​ ಸೂಚಿಸಿದ್ದಾರೆ.

ಇಮ್ರಾನ್ ಖಾನ್​ ನೋಡಿ ಕಲಿಯಿರಿ ಎಂದು ಅಬ್ದುಲ್

ನಮ್ಮ ಕ್ರಿಕೆಟ್ ತಂಡದಲ್ಲಿ ಏನು ತಪ್ಪಾಗಿದೆ? ಅಮೆರಿಕ ಮತ್ತು ಭಾರತ ಎದುರು ಹೀನಾಯ ಸೋಲು ಕಂಡಿತು. ಇದೆ ಮೊದಲ ಬಾರಿಗೆ ವಿಶ್ವಕಪ್ ಆಡಿದ ಯುಎಸ್​ಎ ವಿರುದ್ಧ ಸೋತಿದ್ದು ನಾಚಿಕೆಗೇಡು. ಹಿರಿಯ ಕ್ರಿಕೆಟಿಗ ಇಮ್ರಾನ್ ಖಾನ್ ಅವರಿಂದ ಬಾಬರ್ ಪಾಠ ಕಲಿಯಬೇಕು ಎಂದು ಹೇಳಿದ್ದಾರೆ. ನನ್ನ ಮೇಲೆ ಪಿತೂರಿ ನಡೆಯುತ್ತಿದೆ ಎಂದು ಬಾಬರ್ ಹೇಳುತ್ತಿದ್ದಾರೆ. ಆದರೆ ಈ ಬಗ್ಗೆ ಯಾರೂ ಮಾತನಾಡುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

ಲೀಗ್​ನಲ್ಲಿ ಯುಎಸ್​ಎ ಎದುರು ಸೂಪರ್​ ಓವರ್​​ನಲ್ಲಿ ಪರಾಭವಗೊಂಡ ಪಾಕ್, ನಂತರ ಟೀಮ್ ಇಂಡಿಯಾ ವಿರುದ್ಧ 120 ರನ್ ಚೇಸ್ ಮಾಡಲು ವಿಫಲವಾಯಿತು. ಕೊನೆಯ ಎರಡು ಪಂದ್ಯಗಳಲ್ಲಿ ಕೆನಡಾ ಮತ್ತು ಐರ್ಲೆಂಡ್ ವಿರುದ್ಧ ಗೆದ್ದುಕೊಂಡರೂ ಸೂಪರ್​-8 ಪ್ರವೇಶಿಸಲು ವಿಫಲವಾಯಿತು. ಯುಎಸ್​ಎ 5 ಅಂಕ ಪಡೆದರೆ, ಪಾಕ್ 4 ಅಂಕ ಪಡೆಯಲಷ್ಟೇ ಸಾಧ್ಯವಾಯಿತು.

ಬಾಬರ್ ಅಜಮ್ ಪ್ರದರ್ಶನ

ಹಾಲಿ ವಿಶ್ವಕಪ್​ ಟೂರ್ನಿಯಲ್ಲಿ ಬಾಬರ್ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಆಡಿ ನಾಲ್ಕು ಪಂದ್ಯಗಳಲ್ಲಿ ಕೇವಲ ಗಳಿಸಿದ್ದು 122. ಬ್ಯಾಟಿಂಗ್ ಸರಾಸರಿ 40.66. ಸ್ಟ್ರೈಕ್​ರೇಟ್​ ಕೇವಲ 101.66. ಈ ಕಳಪೆ ಪ್ರದರ್ಶನದ ಕಾರಣದಿಂದ ಪಾಕ್ ಸೂಪರ್​-8 ಪ್ರವೇಶಿಸಲು ವಿಫಲವಾಯಿತು. ಒಟ್ಟಾರೆ ತಂಡದಲ್ಲಿ ಬೌಲರ್​ಗಳು ತಮ್ಮ ಅಟಕ್ಕೆ ನ್ಯಾಯ ಒದಗಿಸಿದರೂ, ಬ್ಯಾಟರ್​​ಗಳು ತಮ್ಮ ನಂಬಿಕೆ ಉಳಿಸಿಕೊಳ್ಳಲು ಎಡವಿದರು.

2023ರ ಏಕದಿನ ವಿಶ್ವಕಪ್​ ಟೂರ್ನಿಯ ಸೋಲಿನ ಹೊಣೆ ಹೊತ್ತು ನಾಯಕತ್ವ ತ್ಯಜಿಸಿದ್ದ ಬಾಬರ್, ಸುಮಾರು 6 ತಿಂಗಳ ನಂತರ ಮತ್ತೊಮ್ಮೆ ಮೆನ್ ಇನ್ ಗ್ರೀನ್ ತಂಡದ ಜವಾಬ್ದಾರಿ ಹೊತ್ತರು. ಆದರೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇಟ್ಟಿದ್ದ ನಂಬಿಕೆಯನ್ನು ಹುಸಿಗೊಳಿಸಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ