ಟಿ20 ವಿಶ್ವಕಪ್: ಭಾರತ vs ಆಸ್ಟ್ರೇಲಿಯಾ ಫ್ಯಾಂಟಸಿ ತಂಡ; ಬಲಿಷ್ಠ ಆಟಗಾರರು ಹಾಗೂ ಗೆಲ್ಲುವ ಫೇವರೆಟ್‌ ಟೀಮ್
ಕನ್ನಡ ಸುದ್ದಿ  /  ಕ್ರಿಕೆಟ್  /  ಟಿ20 ವಿಶ್ವಕಪ್: ಭಾರತ Vs ಆಸ್ಟ್ರೇಲಿಯಾ ಫ್ಯಾಂಟಸಿ ತಂಡ; ಬಲಿಷ್ಠ ಆಟಗಾರರು ಹಾಗೂ ಗೆಲ್ಲುವ ಫೇವರೆಟ್‌ ಟೀಮ್

ಟಿ20 ವಿಶ್ವಕಪ್: ಭಾರತ vs ಆಸ್ಟ್ರೇಲಿಯಾ ಫ್ಯಾಂಟಸಿ ತಂಡ; ಬಲಿಷ್ಠ ಆಟಗಾರರು ಹಾಗೂ ಗೆಲ್ಲುವ ಫೇವರೆಟ್‌ ಟೀಮ್

India vs Australia: ಟಿ20 ವಿಶ್ವಕಪ್‌ನಲ್ಲಿ ಜೂನ್‌ 24ರ ಸೋಮವಾರ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿವೆ. ಪಂದ್ಯದ ಫ್ಯಾಂಟಸಿ ತಂಡ, ನಾಯಕ ಹಾಗೂ ಬಲಿಷ್ಠ ಆಟಗಾರರ ವಿವರ ಹೀಗಿದೆ.

ಟಿ20 ವಿಶ್ವಕಪ್: ಭಾರತ vs ಆಸ್ಟ್ರೇಲಿಯಾ ಫ್ಯಾಂಟಸಿ ತಂಡ
ಟಿ20 ವಿಶ್ವಕಪ್: ಭಾರತ vs ಆಸ್ಟ್ರೇಲಿಯಾ ಫ್ಯಾಂಟಸಿ ತಂಡ (AP)

ಸೇಂಟ್ ಲೂಸಿಯಾದಲ್ಲಿ ಜೂನ್‌ 24ರ ಸೋಮವಾರ ನಡೆಯಲಿರುವ ಟಿ20 ವಿಶ್ವಕಪ್‌ 2024ರ ಸೂಪರ್ 8 ಪಂದ್ಯದಲ್ಲಿ ಬಲಿಷ್ಠ ತಂಡಗಳೆರಡು ಮುಖಾಮುಖಿಯಾಗುತ್ತಿವೆ. ಭಾರತ ತಂಡಕ್ಕೆ ಆಸ್ಟ್ರೇಲಿಯಾ ತಂಡ ಸವಾಲೆಸೆಯಲು ಸಜ್ಜಾಗಿದೆ. ಈ ಪಂದ್ಯದಲ್ಲಿ ಗೆದ್ದ ತಂಡವು ಸೂಪರ್‌ 8 ಹಂತದ ಗ್ರೂಪ್ 1ರಲ್ಲಿ ಅಗ್ರಸ್ಥಾನ ಪಡೆಯುವ ಸಾಧ್ಯತೆಯಿದೆ. ಎರಡೂ ತಂಡಗಳು ಪ್ರಬಲ ಬ್ಯಾಟಿಂಗ್‌ ಹಾಗೂ ಬೌಲಿಂಗ್ ಲೈನಪ್‌ ಹೊಂದಿದ್ದು, ಟೂರ್ನಿಯಲ್ಲಿ ಪ್ರಚಂಡ ಫಾರ್ಮ್‌ನಲ್ಲಿದೆ. ಹೀಗಾಗಿ ಸೇಂಟ್ ಲೂಸಿಯಾದಲ್ಲಿ ಭಾರಿ ರನ್‌ ಮಳೆ ನಿರೀಕ್ಷಿಸಲಾಗಿದೆ.

ಪಂದ್ಯಕ್ಕೂ ಮುನ್ನ ಉಭಯ ತಂಡಗಳ ನಡುವಿನ ದಾಖಲೆಗಳು, ಬಲಿಷ್ಠ ಆಟಗಾರರು ಹಾಗೂ ಇತರ ವಿವರಗಳನ್ನು ನೋಡೋಣ.

ಕೊನೆಯ 5 ಪಂದ್ಯಗಳ ಫಲಿತಾಂಶ

ತಂಡಫಲಿತಾಂಶ
ಭಾರತW W W A W
ಆಸ್ಟ್ರೇಲಿಯಾW W W W W

ಭಾರತ ಸಂಭಾವ್ಯ ತಂಡ

  • ಬ್ಯಾಟರ್‌ಗಳು: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಯಶಸ್ವಿ ಜೈಸ್ವಾಲ್
  • ವಿಕೆಟ್ ಕೀಪರ್: ರಿಷಭ್ ಪಂತ್
  • ಆಲ್‌ರೌಂಡರ್‌ಗಳು: ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ
  • ಬೌಲರ್‌ಗಳು: ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ಕುಲ್ದೀಪ್ ಯಾದವ್,

ಆಸ್ಟ್ರೇಲಿಯಾ ಸಂಭಾವ್ಯ ತಂಡ

  • ಬ್ಯಾಟರ್‌ಗಳು: ಡೇವಿಡ್ ವಾರ್ನರ್, ಟ್ರಾವಿಸ್ ಹೆಡ್, ಟಿಮ್ ಡೇವಿಡ್‌
  • ವಿಕೆಟ್ ಕೀಪರ್: ಮ್ಯಾಥ್ಯೂ ವೇಡ್
  • ಆಲ್‌ರೌಂಡರ್‌ಗಳು: ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್ವೆಲ್, ಮಾರ್ಕಸ್ ಸ್ಟೊಯ್ನಿಸ್
  • ಬೌಲರ್‌ಗಳು: ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಜೋಶ್ ಹೇಜಲ್ವುಡ್, ಆಡಮ್ ಜಂಪಾ

ಆಸೀಸ್‌ ವಿರುದ್ಧ ವಿರಾಟ್ ಕೊಹ್ಲಿ ದಾಖಲೆ

ಆಸ್ಟ್ರೇಲಿಯಾ ವಿರುದ್ಧ ವಿರಾಟ್ ಉತ್ತಮ ದಾಖಲೆ ಹೊಂದಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ದಾಖಲೆ ಹೀಗಿವೆ

ಆಟಗಾರಇನ್ನಿಂಗ್ಸ್ರನ್ಸರಾಸರಿಸ್ಟ್ರೈಕ್‌ ರೇಟ್‌ 50s/100s
ವಿರಾಟ್‌ ಕೊಹ್ಲಿ29117065129.714/0

ನಿರೀಕ್ಷೆ ಮೂಡಿಸಿರುವ ಆಟಗಾರರು

ಸೂರ್ಯಕುಮಾರ್‌ ಯಾದವ್: ಅಫ್ಘಾನಿಸ್ತಾನ ವಿರುದ್ಧದದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಅದಕ್ಕೂ ಮುನ್ನ ಪಾಕ್‌ ವಿರುದ್ಧದ ಪಂದ್ಯದಲ್ಲೂ ಅರ್ಧಶತಕ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ವಿಶ್ವದ ನಂಬರ್‌ ಬ್ಯಾಟರ್‌ ಮಧ್ಯಮ ಕ್ರಮಾಂಕದಲ್ಲಿ ಅಪಾಯಕಾರಿಯಾಗಲಿದ್ದಾರೆ.

ರಿಷಭ್ ಪಂತ್: ಪಂತ್ ಅವರ ಅಸಾಂಪ್ರದಾಯಿಕ ಸ್ಟ್ರೋಕ್ ಪ್ಲೇ, ಯಾವುದೇ ತಂಡದ ವಿರುದ್ಧವೂ ಮ್ಯಾಚ್ ವಿನ್ನಿಂಗ್‌ ಪ್ರದರ್ಶನ ನೀಡಲು ನೆರವಾಗುತ್ತದೆ. ಪಂದ್ಯಾವಳಿಯಲ್ಲಿ ಅವರು ಉತ್ತಮ ಫಾರ್ಮ್‌ನಲ್ಲಿದ್ದು, ಕಠಿಣ ಬ್ಯಾಟಿಂಗ್ ಪಿಚ್‌ಗಳಲ್ಲೂ ನಾಲ್ಕು ಇನ್ನಿಂಗ್ಸ್‌ಗಳಲ್ಲಿ 116 ರನ್ ಗಳಿಸಿದ್ದಾರೆ. 3ನೇ ಕ್ರಮಾಂಕಕ್ಕೆ ಬಡ್ತಿ ಪಡೆದು ಮಿಂಚುತ್ತಿದ್ದಾರೆ.

ಟ್ರಾವಿಸ್ ಹೆಡ್: ಹೆಡ್‌ ಪ್ರಸ್ತುತ ಉತ್ತಮ ಫಾರ್ಮ್‌ನಲ್ಲಿದ್ದಾರೆ. ವಿಶ್ವದ ಅತ್ಯಂತ ಅಪಾಯಕಾರಿ ಆರಂಭಿಕ ಆಟಗಾರ, ಪ್ರತಿ ಬಾರಿಯೂ ಭಾರತ ವಿರುದ್ಧದ ನಿರ್ಣಾಯಕ ಪಂದ್ಯಗಳಲ್ಲಿ ಅಬ್ಬರಿಸುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಹೀಗಾಗಿ ಭಾರತಕ್ಕೆ ಇವರು ಪ್ರಮುಖ ಭೀತಿಯಾಗಿದ್ದಾರೆ.

ಮಿಚೆಲ್ ಸ್ಟಾರ್ಕ್: ಹೊಸ ಚೆಂಡಿನೊಂದಿಗೆ ಅಬ್ಬರಿಸಬಲ್ಲ ಸಾಮರ್ಥ್ಯ ಹೊಂದಿರುವ ಸ್ಟಾರ್ಕ್‌, ವೈಟ್-ಬಾಲ್ ಕ್ರಿಕೆಟ್ ಇತಿಹಾಸದಲ್ಲಿ ವಿಶ್ವದ ಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರು.

ಭಾರತ-ಆಸ್ಟ್ರೇಲಿಯಾ ಮುಖಾಮುಖಿ ದಾಖಲೆ

ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಚುಟುಕು ಸ್ವರೂಪದಲ್ಲಿ ಈವರೆಗೆ 31 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ 19 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಅತ್ತ ಆಸ್ಟ್ರೇಲಿಯಾ 11 ಪಂದ್ಯಗಳಲ್ಲಿ ಗೆದ್ದಿದೆ. ಕಳೆದ ಐದು ಮುಖಾಮುಖಿಗಳಲ್ಲಿಯೂ ಭಾರತ ಹಿಡಿತ ಕಾಯ್ದುಕೊಂಡಿದೆ. ಇದರ ಪ್ರಕಾರ ಈ ಪಂದ್ಯದಲ್ಲಿಯೂ ಭಾರತ ಗೆಲ್ಲುವು ಫೇವರೆಟ್‌ ತಂಡವಾಗಿದೆ.

ಪಂದ್ಯಗಳುಭಾರತದ ಗೆಲುವುಆಸ್ಟ್ರೇಲಿಯಾ ಗೆಲುವುಫಲಿತಾಂಶವಿಲ್ಲ
ಟಿ20 ವಿಶ್ವಕಪ್320
ಕೊನೆಯ 5 ಪಂದ್ಯ410
ಒಟ್ಟು19111

ಫ್ಯಾಂಟಸಿ ತಂಡ

ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿಗೆ ನಮ್ಮ ಫ್ಯಾಂಟಸಿ ಇಲೆವೆನ್ ಹೀಗಿದೆ. ಭಾರತದ 6 ಮತ್ತು ಆಸ್ಟ್ರೇಲಿಯಾದ 5 ಆಟಗಾರರು ತಂಡದಲ್ಲಿದ್ದಾರೆ. ರೋಹಿತ್ ಮತ್ತು ಟ್ರಾವಿಸ್ ಹೆಡ್ ಇನ್ನಿಂಗ್ಸ್ ಆರಂಭಿಸಲಿದ್ದು, ಸೂರ್ಯಕುಮಾರ್, ಕೊಹ್ಲಿ ಮತ್ತು ಸ್ಟೋಯ್ನಿಸ್ ಮಧ್ಯಮ ಕ್ರಮಾಂಕದಲ್ಲಿದ್ದಾರೆ. ಬುಮ್ರಾ ಮತ್ತು ಸ್ಟಾರ್ಕ್ ಹೊಸ ಚೆಂಡನ್ನು ಹಂಚಿಕೊಳ್ಳಲಿದ್ದು, ಮಧ್ಯಮ ಓವರ್‌ಗಳಲ್ಲಿ ಜಂಪಾ ಪ್ರಮುಖ ಸ್ಪಿನ್ನರ್‌ ಆಗಿದ್ದಾರೆ. ನಮ್ಮ ತಂಡಕ್ಕೆ ಜಸ್ಪ್ರೀತ್‌ ಬುಮ್ರಾ ನಾಯಕ.

ಉಭಯ ತಂಡಗಳು ಕೊನೆಯ ಬಾರಿಗೆ ಭಾರತದಲ್ಲಿ ನಡೆದ ಟಿ20 ಸರಣಿಯಲ್ಲಿ ಮುಖಾಮುಖಿಯಾಗಿದ್ದವು. ಸೂರ್ಯಕುಮಾರ್‌ ಯಾದವ್‌ ನೇತೃತ್ವದಲ್ಲಿ ಭಾರತ ತಂಡವು ಸರಣಿಯನ್ನು 4-1 ಅಂತರದಿಂದ ಗೆದ್ದಿತ್ತು.

Whats_app_banner