ರವೀಂದ್ರ ಜಡೇಜಾ ಆರಂಭಿಕ, ಅಜಿಂಕ್ಯ ರಹಾನೆ ಹೊರಕ್ಕೆ, ಮೂವರು ಇನ್; SRH ಕದನಕ್ಕೆ ಸಿಎಸ್‌ಕೆ ಸಂಭಾವ್ಯ ಪ್ಲೇಯಿಂಗ್ XI
Apr 28, 2024 08:27 AM IST
ರವೀಂದ್ರ ಜಡೇಜಾ ಆರಂಭಿಕ, ಅಜಿಂಕ್ಯ ರಹಾನೆ ಹೊರಕ್ಕೆ, ಮೂವರು ಇನ್; SRH ಕದನಕ್ಕೆ ಸಿಎಸ್‌ಕೆ ಸಂಭಾವ್ಯ ಪ್ಲೇಯಿಂಗ್ XI
- CSK playing XI vs SRH : ಸೀಸನ್ 17ರ ಐಪಿಎಲ್ನ 46ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳು ಸೆಣಸಾಟ ನಡೆಸಲಿವೆ. ಉಭಯ ತಂಡಗಳ ಪ್ಲೇಯಿಂಗ್ XI ಇಲ್ಲಿದೆ.
ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧ ಸತತ ಎರಡು ಸೋಲಿನ ನಂತರ ಪ್ಲೇಆಫ್ ರೇಸ್ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (CSK), ಲಯಕ್ಕೆ ಮರಳಲು ಸಾಕಷ್ಟು ಕಸರತ್ತು ನಡೆಸುತ್ತಿದೆ. ಚೆಪಾಕ್‌ನಲ್ಲಿ ನಡೆದ ಹಿಂದಿನ ಪಂದ್ಯದಲ್ಲಿ ಮಾರ್ಕಸ್ ಸ್ಟೊಯ್ನಿಸ್ 124* ರನ್ ಗಳಿಸಿ ಋತುರಾಜ್ ಗಾಯಕ್ವಾಡ್ (Ruturaj Gaikwad) ನೇತೃತ್ವದ ತಂಡಕ್ಕೆ ಆಘಾತ ನೀಡಿದ್ದರು. ಇದೀಗ ವಿಧ್ವಂಸಕ ಬ್ಯಾಟಿಂಗ್ ನಡೆಸುತ್ತಿರುವ ಸನ್ರೈಸರ್ಸ್ ಹೈದರಾಬಾದ್ (SRH) ವಿರುದ್ಧ ಮತ್ತೊಮ್ಮೆ ಸೆಣಸಾಟಕ್ಕೆ ಸಜ್ಜಾಗಿದ್ದು, ಸೇಡು ತೀರಿಸಿಕೊಳ್ಳಲು ಯೋಜನೆ ರೂಪಿಸಿದೆ.
ಸಿಎಸ್‌ಕೆ 8 ಪಂದ್ಯಗಳಲ್ಲಿ 4 ಗೆಲುವು ಮತ್ತು 4 ಸೋಲು ಅನುಭವಿಸಿದೆ. ಪ್ಲೇಆಫ್‌ಗೆ ಅರ್ಹತೆ ಪಡೆಯಲು 6 ಪಂದ್ಯಗಳಲ್ಲಿ ಇನ್ನೂ 4 ಗೆಲುವು ಅಗತ್ಯ ಇದೆ. 17ನೇ ಆವೃತ್ತಿಯ ಐಪಿಎಲ್ನ 46ನೇ ಪಂದ್ಯದಲ್ಲಿ ಏಪ್ರಿಲ್ 28 ರಂದು ಸನ್ರೈಸರ್ಸ್ ಹೈದರಾದ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು (SRH vs CSK) ಚೆನ್ನೈನ ಚೆಪಾಕ್ ಮೈದಾನದಲ್ಲಿ ಕಾದಾಟ ನಡೆಸಲಿವೆ. ಇದೇ ಆವೃತ್ತಿಯಲ್ಲಿ ಮುಖಾಮುಖಿಯಾಗಿದ್ದ ಪಂದ್ಯದಲ್ಲಿ ಸಿಎಸ್‌ಕೆ, ಎಸ್ಆರ್ಹೆಚ್ ವಿರುದ್ಧ 6 ವಿಕೆಟ್ಗಳ ಸೋಲನುಭವಿಸಿತ್ತು.
ತಂಡದಲ್ಲಿ ಮೂರು ಬದಲಾವಣೆ ಖಚಿತ
ಅಜಿಂಕ್ಯ ರಹಾನೆ ಅವರ ಫಾರ್ಮ್ ಸಿಎಸ್‌ಕೆಗೆ ಭಾರಿ ಚಿಂತೆಯಾಗಿದೆ. ರಹಾನೆ ಪಂದ್ಯದಿಂದ ಪಂದ್ಯಕ್ಕೆ ಕಳಪೆ ಪ್ರದರ್ಶನ ತೋರುತ್ತಿದ್ದಾರೆ. ಆದ್ದರಿಂದ ಸಿಎಸ್‌ಕೆ ಅವರನ್ನು ಆಡುವ 11ರಿಂದ ಕೈಬಿಡಲು ಚಿಂತನೆ ನಡೆಸಿದೆ. ಹೀಗಾಗಿ ಟೀಮ್ ಮ್ಯಾನೇಜ್ಮೆಂಟ್, ರವೀಂದ್ರ ಜಡೇಜಾ ಅವರನ್ನು ಆರಂಭಿಕರನ್ನಾಗಿ ಕಣಕ್ಕಿಳಿಸಲು ಯೋಜನೆ ರೂಪಿಸಿದೆ. ರಹಾನೆ ಬದಲಿಗೆ ಸಮೀರ್ ರಿಜ್ವಿಯನ್ನು ಆಡಿಸುವ ಸಾಧ್ಯತೆ ಇದ್ದು, ಅವರನ್ನು ಫಿನಿಷರ್ ಆಗಿ ಬಳಸುವ ನಿರೀಕ್ಷೆ ಇದೆ.
ಎಸ್ಆರ್ಹೆಚ್ನ ಬೆದರಿಸುವ ಬ್ಯಾಟಿಂಗ್ ಲೈನ್‌ಅಪ್ ವಿರುದ್ಧ ಕ್ಯುರೇಟರ್ ಡ್ರೈಯರ್ ವಿಕೆಟ್ ಸಿದ್ಧಪಡಿಸಬಹುದು. ಅದು ಸಿಎಸ್‌ಕೆ ಸ್ಪಿನ್ನರ್‌ಗಳಿಗೆ ಸಹಾಯ ಮಾಡುತ್ತದೆ. ತಂಡದ ಸಂಯೋಜನೆಯು ಮುಸ್ತಫಿಜುರ್ ರೆಹಮಾನ್ ಬದಲಿಗೆ ಮಹೇಶ್ ತೀಕ್ಷಣ ಆಡುವ 11ಕ್ಕೆ ಮರಳಬಹುದು. ಬ್ಯಾಟಿಂಗ್ ಆಳ ಹೆಚ್ಚಿಸಲು ದೀಪಕ್ ಚಹಾರ್ ಬದಲಿಗೆ ಶಾರ್ದೂಲ್ ಠಾಕೂರ್ ಅವರಿಗೆ ಅವಕಾಶ ಕೊಡುವ ನಿರೀಕ್ಷೆ ಇದೆ.
ಜಡೇಜಾ ಅವರು ಋತುರಾಜ್ ಗಾಯಕ್ವಾಡ್ ಅವರೊಂದಿಗೆ ಇನ್ನಿಂಗ್ಸ್ ತೆರೆಯಬಹುದು ಎಂದು ಹೇಳಲಾಗಿದೆ. ಮೊಯಿನ್ ಅಲಿ ಅವರು 3ನೇ ಸ್ಥಾನದಲ್ಲಿ ಕಣಕ್ಕಿಳಿಯಲಿದ್ದಾರೆ. ಡ್ಯಾರಿಲ್ ಮಿಚೆಲ್, ಶಿವಂ ದುಬೆ, ಸಮೀರ್ ರಿಜ್ವಿ ಮತ್ತು ಎಂಎಸ್ ಧೋನಿ ಅವರು ಬ್ಯಾಟಿಂಗ್ ಮಾಡಲಿದ್ದಾರೆ. ತುಷಾರ್ ದೇಶಪಾಂಡೆ, ಶಾರ್ದೂಲ್ ಠಾಕೂರ್ ಮತ್ತು ಮಥೀಶ ಪತಿರಾಣ ಪ್ರಬಲ ವೇಗಿ ದಾಳಿಯನ್ನು ಒಳಗೊಂಡಿರಲಿದ್ದು, ತೀಕ್ಷಣ ಅವರು ಜಡೇಜಾ ಜೊತೆಗೆ ಸ್ಪೆಷಲಿಸ್ಟ್ ಸ್ಪಿನ್ನರ್ ಆಗಿರುತ್ತಾರೆ.
ಸಿಎಸ್‌ಕೆ ಸಂಭವನೀಯ ಪ್ಲೇಯಿಂಗ್ XI
ಋತುರಾಜ್ ಗಾಯಕ್ವಾಡ್ (ನಾಯಕ), ರವೀಂದ್ರ ಜಡೇಜಾ, ಮೊಯಿನ್ ಅಲಿ, ಡೇರಿಲ್ ಮಿಚೆಲ್, ಶಿವಂ ದುಬೆ, ಸಮೀರ್ ರಿಜ್ವಿ, ಎಂಎಸ್ ಧೋನಿ (ವಿಕೆಟ್ ಕೀಪರ್), ಶಾರ್ದೂಲ್ ಠಾಕೂರ್, ಮಹೇಶ್ ತೀಕ್ಷಣ, ತುಷಾರ್ ದೇಶಪಾಂಡೆ, ಮತೀಶ ಪತಿರಾಣ.
ಎಸ್ಆರ್ಹೆಚ್ ಸಂಭವನೀಯ ಪ್ಲೇಯಿಂಗ್ XI
ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಏಡನ್ ಮಾರ್ಕ್ರಮ್, ಹೆನ್ರಿಚ್ ಕ್ಲಾಸೆನ್, ಅಬ್ದುಲ್ ಸಮದ್, ನಿತೀಶ್ ಕುಮಾರ್ ರೆಡ್ಡಿ, ಶಹಬಾಜ್ ಅಹ್ಮದ್, ಪ್ಯಾಟ್ ಕಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ಮಯಾಂಕ್ ಯಾದವ್, ಟಿ ನಟರಾಜನ್.
ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ