ಕನ್ನಡ ಸುದ್ದಿ  /  ಕ್ರಿಕೆಟ್  /  ಟಿ20 ವಿಶ್ವಕಪ್​ನಲ್ಲಿ ನಾಯಕನಾಗಲು ರೋಹಿತ್​ ಶರ್ಮಾ ಯೋಗ್ಯರಲ್ಲ; ಈತನಿಗೆ ಅವಕಾಶ ಕೊಡಿ ಎಂದ ಕೆಕೆಆರ್​ ಮಾಜಿ ಡೈರೆಕ್ಟರ್

ಟಿ20 ವಿಶ್ವಕಪ್​ನಲ್ಲಿ ನಾಯಕನಾಗಲು ರೋಹಿತ್​ ಶರ್ಮಾ ಯೋಗ್ಯರಲ್ಲ; ಈತನಿಗೆ ಅವಕಾಶ ಕೊಡಿ ಎಂದ ಕೆಕೆಆರ್​ ಮಾಜಿ ಡೈರೆಕ್ಟರ್

Joy Bhattacharjya : ಟಿ20 ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್​ ಶರ್ಮಾ ಅವರು ಭಾರತ ತಂಡವನ್ನು ಮುನ್ನಡೆಸಲು ಯೋಗ್ಯರಲ್ಲ. ಅವರ ಬದಲಿಗೆ ಜಸ್ಪ್ರೀತ್ ಬುಮ್ರಾ ಉತ್ತಮ ಆಯ್ಕೆ ಎಂದು ಕೆಕೆಆರ್ ಮಾಜಿ ಡೈರೆಕ್ಟರ್ ಜಾಯ್ ಭಟ್ಟಾಚಾರ್ಯ ಹೇಳಿಕೆ ನೀಡಿದ್ದಾರೆ.

ಟಿ20 ವಿಶ್ವಕಪ್​ನಲ್ಲಿ ನಾಯಕನಾಗಲು ರೋಹಿತ್​ ಶರ್ಮಾ ಯೋಗ್ಯರಲ್ಲ; ಈತನಿಗೆ ಅವಕಾಶ ಕೊಡಿ ಎಂದ ಕೆಕೆಆರ್​ ಮಾಜಿ ಡೈರೆಕ್ಟರ್
ಟಿ20 ವಿಶ್ವಕಪ್​ನಲ್ಲಿ ನಾಯಕನಾಗಲು ರೋಹಿತ್​ ಶರ್ಮಾ ಯೋಗ್ಯರಲ್ಲ; ಈತನಿಗೆ ಅವಕಾಶ ಕೊಡಿ ಎಂದ ಕೆಕೆಆರ್​ ಮಾಜಿ ಡೈರೆಕ್ಟರ್

ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ (T20 World Cup 2024) ಭಾರತ ತಂಡವನ್ನು (Team India) ಪ್ರಕಟಿಸಲು ಕೆಲವೇ ದಿನಗಳು ಬಾಕಿ ಇರುವಾಗ ಕೋಲ್ಕತ್ತಾ ನೈಟ್​ ರೈಡರ್ಸ್ ಮಾಜಿ ನಿರ್ದೇಶಕ ಜಾಯ್ ಭಟ್ಟಾಚಾರ್ಯ (Joy Bhattacharjya) ನಾಯಕತ್ವ ಬದಲಾವಣೆಯ ಕುರಿತು ಮಾತನಾಡಿದ್ದಾರೆ. ಟಿ20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ಮುನ್ನಡೆಸಲು ರೋಹಿತ್​ ಶರ್ಮಾ (Rohit Sharma) ಅವರು ಯೋಗ್ಯರಲ್ಲ ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ. ಅವರ ಬದಲಿಗೆ 30 ವರ್ಷದ ಜಸ್ಪ್ರೀತ್ ಬುಮ್ರಾ (Jasprit Bumrah) ಭಾರತ ತಂಡವನ್ನು ಮುನ್ನಡೆಸಲು ಯೋಗ್ಯರು ಎಂದಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ರೋಹಿತ್ ಶರ್ಮಾ ಅವರು ಟಿ20 ವಿಶ್ವಕಪ್‌ನಲ್ಲಿ ಭಾರತವನ್ನು ಮುನ್ನಡೆಸಲು ಸಿದ್ಧರಾಗಿದ್ದಾರೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಈ ಬಗ್ಗೆ ಖಚಿತಪಡಿಸಿದ್ದಾರೆ. ಬಿಸಿಸಿಐ ಕಾರ್ಯಕ್ರಮದಲ್ಲಿ ಜಯ್​ ಶಾ ಹೇಳಿದ್ದರು. ಇದರ ನಡುವೆಯೂ ರೋಹಿತ್​ ಶರ್ಮಾ ಅವರನ್ನು ಕೆಳಗಿಳಿಸಿ ಜಸ್ಪ್ರೀತ್ ಬುಮ್ರಾಗೆ ಅವಕಾಶ ನೀಡಬೇಕೆಂದು ಜಾಯ್ ಭಟ್ಟಾಚಾರ್ಯ ಬಿಸಿಸಿಐಗೆ ಹೇಳಿದ್ದಾರೆ. ಇದು ಕ್ರಿಕೆಟ್ ವಲಯದಲ್ಲಿ ಹೊಸ ಚರ್ಚೆಯನ್ನು ಹುಟ್ಟು ಹಾಕಿದೆ.

ಈಗಾಗಲೇ ವಿರಾಟ್ ಕೊಹ್ಲಿ ಭಾರತ ಟಿ20ಐ ತಂಡದಲ್ಲಿ ಸ್ಥಾನ ಪಡೆಯಲು ಅರ್ಹರೇ ಎಂಬ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಆದರೆ ಕೊಹ್ಲಿ ಐಪಿಎಲ್​ನಲ್ಲಿ 400 ಕ್ಕೂ ಹೆಚ್ಚು ರನ್ ಗಳಿಸುವ ಮೂಲಕ ಮುಟ್ಟಿ ನೋಡಿಕೊಳ್ಳುವಂತೆ ಉತ್ತರಿಸಿದ್ದಾರೆ. ಈಗ ರೋಹಿತ್​​ ಸ್ಥಾನಕ್ಕೆ ಕುತ್ತು ತರುವ ಚರ್ಚೆಗಳು ಆರಂಭಗೊಂಡಿವೆ. ಏಪ್ರಿಲ್ 30ರಂದು ದೆಹಲಿಯಲ್ಲಿ ಅಜಿತ್ ಅಗರ್ಕರ್ ನೇತೃತ್ವದ ಸೆಲೆಕ್ಷನ್ ಕಮಿಟಿ ಸಭೆ ಸೇರಿ ಟಿ20 ವಿಶ್ವಕಪ್​​ಗೆ ತಂಡವನ್ನು ಪ್ರಕಟಿಸುವ ಸಾಧ್ಯತೆ ಇದೆ.

ಏತನ್ಮಧ್ಯೆ, ಕೆಕೆಆರ್ ಮಾಜಿ ನಿರ್ದೇಶಕ ಜಾಯ್ ಭಟ್ಟಾಚಾರ್ಯ ಹೊಸ ಚರ್ಚೆಯನ್ನು ಹುಟ್ಟು ಹಾಕಿದ್ದಾರೆ. ರೋಹಿತ್​ ಶರ್ಮಾ ಅವರನ್ನು ಟಿ20 ವಿಶ್ವಕಪ್‌ಗೆ ಭಾರತ ತಂಡದ ನಾಯಕರನ್ನಾಗಿ ನೇಮಿಸಬಾರದಿತ್ತು ಎಂದು ಹೇಳಿದ್ದಾರೆ. ಭಟ್ಟಾಚಾರ್ಯ ಮೆಗಾ ಈವೆಂಟ್‌ನಲ್ಲಿ ಜಸ್ಪ್ರೀತ್ ಬುಮ್ರಾ ಭಾರತ ತಂಡವನ್ನು ಮುನ್ನಡೆಸುವುದನ್ನು ನೋಡಲು ಬಯಸಿದ್ದಾರೆ. ಇದೇ ಕಾರಣಕ್ಕೆ ಈ ಹೇಳಿಕೆ ಕೊಟ್ಟಿದ್ದಾರೆ.

ರೋಹಿತ್ ಪ್ರದರ್ಶನವನ್ನೂ ಟೀಕಿಸಿದ ಭಟ್ಟಾಚಾರ್ಯ

ಟಿ20 ವಿಶ್ವಕಪ್‌ ಟೂರ್ನಿಗೆ ಭಾರತ ತಂಡದ ನಾಯಕರಾಗಿ ರೋಹಿತ್ ಅವರನ್ನು ನೇಮಿಸಿರುವುದೇ ತಂಡಕ್ಕೆ ದೊಡ್ಡ ಆಘಾತ ನೀಡಿದೆ. ಈ ಹಂತದಲ್ಲಿ ಟಿ20ಐ ಸ್ವರೂಪದಲ್ಲಿ ತಂಡವನ್ನು ಮುನ್ನಡೆಸಲು ರೋಹಿತ್​ ಸೂಕ್ತ ಆಯ್ಕೆಯಲ್ಲ ಎಂದು ಕ್ರಿಕ್‌ಬಜ್‌ನಲ್ಲಿ ನಡೆದ ಸಂವಾದದಲ್ಲಿ ಹೇಳಿದ್ದಾರೆ. ಹಿಟ್​ಮ್ಯಾನ್ ಬದಲಿಗೆ ವೇಗಿ ಜಸ್ಪ್ರೀತ್ ಬುಮ್ರಾ ಅವರನ್ನು ಆಯ್ಕೆ ಮಾಡುತ್ತೇನೆ ಎಂದು ಹೇಳಿದ್ದಾರೆ.

ರೋಹಿತ್​ಗೆ ಕ್ಯಾಪ್ಟನ್ಸಿ ಬೇಡ ಎಂದಿರುವ ಭಟ್ಟಾಚಾರ್ಯ, ಆತನ ಟಿ20 ಪ್ರದರ್ಶನವನ್ನೂ ಟೀಕಿಸಿದ್ದಾರೆ. ಈ ಹಂತದಲ್ಲಿ ಓಪನರ್​​ಗಳು ರೋಹಿತ್​ ಅವರನ್ನೇ ಮೀರಿಸುವಂತಹ ಪರ್ಫಾಮೆನ್ಸ್ ನೀಡುತ್ತಿದ್ದಾರೆ. ರೋಹಿತ್ ಬಗ್ಗೆ ನನಗೆ ಹೆಚ್ಚಿನ ಗೌರವವಿದೆ. ಅವರು ಅದ್ಭುತ ಕ್ರಿಕೆಟಿಗ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಪ್ರಸ್ತುತ ಬ್ಯಾಟಿಂಗ್ ಫಾರ್ಮ್‌ ಕಳೆದುಕೊಂಡಿದ್ದಾರೆ. ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್ ಮತ್ತು ಶುಭ್ಮನ್ ಗಿಲ್ ಇದೀಗ ಉತ್ತಮ ಫಾರ್ಮ್‌ನಲ್ಲಿದ್ದು, ಓಪನಿಂಗ್‌ಗೆ ಪ್ರಬಲ ಸ್ಪರ್ಧಿಗಳಾಗಿದ್ದಾರೆ ಎಂದು ಹೇಳಿದ್ದಾರೆ.

ವಿಶ್ವಕಪ್ ಗೆಲ್ಲಿಸಿಕೊಡುವುದು ಮಾತ್ರ ಬಾಕಿ ಎಂದ ಕೆಕೆಆರ್ ಮಾಜಿ ಡೈರೆಕ್ಟರ್

ಆದಾಗ್ಯೂ, ರೋಹಿತ್​ ಶರ್ಮಾ ನಾಯಕನಾಗಿರುವ ಕಾರಣ ಅವರು ಇನ್ನಿಂಗ್ಸ್​ ಆರಂಭಿಸುತ್ತಾರೆ. ಇದರಿಂದ ಇನ್​ಫಾರ್ಮ್​ ಬ್ಯಾಟರ್​​ಗಳಲ್ಲಿ ಒಬ್ಬರು ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕಾಗುತ್ತದೆ ಎಂದು ತನ್ನ ಅಭಿಪ್ರಾಯ ಹೇಳಿದ್ದಾರೆ. ಕ್ರಿಕೆಟ್‌ನಲ್ಲಿ ಎಲ್ಲವನ್ನೂ ಸಾಧಿಸಿರುವ ಹಿಟ್​ಮ್ಯಾನ್, ಟೀಮ್ ಇಂಡಿಯಾಗೆ ವಿಶ್ವಕಪ್‌ ಗೆಲ್ಲಿಸಿಕೊಡುವುದು ಮಾತ್ರ ಬಾಕಿಯಿದೆ. 2007ರಲ್ಲಿ ಟಿ20 ವಿಶ್ವಕಪ್‌ ಗೆದ್ದ ಭಾರತ ತಂಡದಲ್ಲಿದ್ದ ರೋಹಿತ್​, ಈಗ ಮತ್ತೊಂದು ವಿಶ್ವಕಪ್‌ ಗೆಲ್ಲಿಸಿಕೊಟ್ಟು ವಿದಾಯ ಹೇಳುವ ಯೋಜನೆಯಲ್ಲಿದ್ದಾರೆ ಎಂದಿದ್ದಾರೆ.

ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

IPL_Entry_Point