logo
ಕನ್ನಡ ಸುದ್ದಿ  /  ಕ್ರಿಕೆಟ್  /  Csk Retention List: ಎಮೋಜಿಗಳೊಂದಿಗೆ ತಾನು ಉಳಿಸಿಕೊಳ್ಳುವ ಆಟಗಾರರ ಸುಳಿವು ನೀಡಿದ ಸಿಎಸ್​ಕೆ; ಆ ಐವರು ಯಾರು?

CSK Retention List: ಎಮೋಜಿಗಳೊಂದಿಗೆ ತಾನು ಉಳಿಸಿಕೊಳ್ಳುವ ಆಟಗಾರರ ಸುಳಿವು ನೀಡಿದ ಸಿಎಸ್​ಕೆ; ಆ ಐವರು ಯಾರು?

Prasanna Kumar P N HT Kannada

Oct 30, 2024 04:06 PM IST

google News

CSK Retention List: ಎಮೋಜಿಗಳೊಂದಿಗೆ ತಾನು ಉಳಿಸಿಕೊಳ್ಳುವ ಆಟಗಾರರ ಸುಳಿವು ನೀಡಿದ ಸಿಎಸ್​ಕೆ

    • IPL 2025: ಐಪಿಎಲ್ 2025 ಮೆಗಾ ಹರಾಜಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದೆ. ಕೇವಲ ಎಮೋಜಿಗಳನ್ನು ಪೋಸ್ಟ್​ ಮಾಡುವ ಮೂಲಕ ತಮ್ಮ ತಂಡದಲ್ಲಿ ಉಳಿಯುವ ಆಟಗಾರರು ಇವರೇ ಎಂದು ಸುಳಿವು ನೀಡಿದೆ. ಹಾಗಾದರೆ ಆ ಆಟಗಾರರು ಯಾರಿರಬಹುದು?
CSK Retention List: ಎಮೋಜಿಗಳೊಂದಿಗೆ ತಾನು ಉಳಿಸಿಕೊಳ್ಳುವ ಆಟಗಾರರ ಸುಳಿವು ನೀಡಿದ ಸಿಎಸ್​ಕೆ
CSK Retention List: ಎಮೋಜಿಗಳೊಂದಿಗೆ ತಾನು ಉಳಿಸಿಕೊಳ್ಳುವ ಆಟಗಾರರ ಸುಳಿವು ನೀಡಿದ ಸಿಎಸ್​ಕೆ

ಇಂಡಿಯನ್ ಪ್ರೀಮಿಯರ್ ಲೀಗ್​ 2025ರ ಮೆಗಾ ಹರಾಜಿಗೂ (IPL 2025 Mega Auction) ಮುನ್ನ 10 ಫ್ರಾಂಚೈಸಿಗಳು ಅಕ್ಟೋಬರ್​ 31ರೊಳಗೆ ತಾವು ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (BCCI) ಸಲ್ಲಿಸಬೇಕಿದೆ. ಈ ನಿಟ್ಟಿನಲ್ಲಿ ಎಲ್ಲಾ ಫ್ರಾಂಚೈಸಿಗಳು ಪಟ್ಟಿಯನ್ನು ಸಿದ್ಧಪಡಿಸಿವೆ. ಆದರೆ, ಕೊನೆಯ ದಿನಾಂಕಕ್ಕೆ ಒಂದೇ ದಿನ ಬಾಕಿ ಇದ್ದರೂ ಯಾವುದೇ ಫ್ರಾಂಚೈಸಿ ಪಟ್ಟಿಯನ್ನು ಪ್ರಕಟಿಸಿಲ್ಲ. ಕೊನೆಯ ಕ್ಷಣದವರೆಗೆ ಪ್ರಕಟಿಸುವುದೂ ಇಲ್ಲ. ಏಕೆಂದರೆ, ಎದುರಾಳಿ ತಂಡಗಳು ತಾವು ಉಳಿಸಿಕೊಳ್ಳುವ ತಂತ್ರಗಳನ್ನು ಬದಲಿಸಲು ಅವಕಾಶ ನೀಡಿದಂತಾಗುತ್ತದೆ. ಈ ಕಾರಣಕ್ಕೆ ಯಾವ ತಂಡವೂ ತಮ್ಮ ರಿಟೇನ್ ಪಟ್ಟಿಯನ್ನು ಪ್ರಕಟಿಸಿಲ್ಲ!

ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಆಟಗಾರರ ಪಟ್ಟಿಯನ್ನು ಘೋಷಿಸುವ ಗಡುವಿಗೂ ಮುನ್ನ ಯಾರನ್ನೆಲ್ಲಾ ಉಳಿಸಿಕೊಳ್ಳುತ್ತದೆ ಎಂಬುದು ಎಲ್ಲರಿಗೂ ಕುತೂಹಲ ಮೂಡಿಸಿದೆ. ಎಂಎಸ್ ಧೋನಿ (MS Dhoni) ಅವರನ್ನು ಉಳಿಸಿಕೊಳ್ಳುವುದು ಖಚಿತವಾಗಿದೆ. ಆದರೆ ಅವರೊಂದಿಗೆ ತಂಡದಲ್ಲಿ ಉಳಿಯುವ ಆಟಗಾರರು ಯಾರು ಎಂಬುದು ಸದ್ಯದ ಪ್ರಶ್ನೆ. ಈ ಮಿಲಿಯನ್ ಡಾಲರ್ ಪ್ರಶ್ನೆಯ ನಡುವೆ ಸಿಎಸ್​ಕೆ (CSK) ಸುಳಿವೊಂದನ್ನು ನೀಡಿದೆ. ತನ್ನ ಎಕ್ಸ್​ ಖಾತೆಯಲ್ಲಿ ಎಮೋಜಿಗಳೊಂದಿಗೆ ತಮ್ಮನ್ನು ಉಳಿಸಿಕೊಳ್ಳುವ ಆಟಗಾರರ ಬಗ್ಗೆ ಸುಳಿವು ನೀಡಿದೆ. ಆ ಮೂಲಕ ಅಭಿಮಾನಿಗಳಿಗೆ ತಲೆಗೆ ಹುಳ ಬಿಟ್ಟಿದೆ. ಎಮೋಜಿಗಳು ಹೇಳುತ್ತಿರುವುದೇನು, ಯಾವೆಲ್ಲಾ ಆಟಗಾರರನ್ನು ಸೂಚಿಸುತ್ತಿವೆ ಎಂದು ತಲೆ ಕೆಡಿಸಿಕೊಳ್ಳುವಂತೆ ಮಾಡಿದೆ.

ಐಪಿಎಲ್ 2025 ಮೆಗಾ ಹರಾಜಿಗೆ ಮೊದಲು, ಪ್ರತಿ ಫ್ರಾಂಚೈಸಿ ಗರಿಷ್ಠ 6 ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶ ನೀಡಿದೆ. ಬಯಸಿದರೆ ಇಬ್ಬರು ಅನ್​ಕ್ಯಾಪ್ಡ್​ ಆಟಗಾರರನ್ನೂ ಉಳಿಸಿಕೊಳ್ಳಬಹುದು. ಅಲ್ಲದೆ, ನಾಲ್ಕು ಕ್ಯಾಪ್ಡ್​, ಒಬ್ಬ ಅನ್​ಕ್ಯಾಪ್ಡ್​ ಆಟಗಾರನನ್ನು ಆಯ್ಕೆ ಮಾಡಬಹುದು. ಸಿಎಸ್​ಕೆ ಕೂಡ ಇದೇ ರೀತಿಯ ಕಾರ್ಯತಂತ್ರದೊಂದಿಗೆ ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ಸಿದ್ಧಪಡಿಸಿದೆ. ಅದನ್ನು ಎಮೋಜಿಗಳೊಂದಿಗೆ ಸುಳಿವು ನೀಡಿದೆ. ಸಿಎಸ್​ಕೆ ಪೋಸ್ಟ್​​ನಲ್ಲಿ ಎಮೋಜಿಗಳನ್ನು ನೋಡಿದರೆ ನಿಮಗೆ ಏನಾದರೂ ಸುಳಿವು ಸಿಕ್ಕಿತಾ? ಈ ಪೋಸ್ಟ್ ಇಲ್ಲಿದೆ ನೋಡಿ.

ಎಮೋಜಿಗಳು ಹೇಳುತ್ತಿರುವ ಆಟಗಾರರು ಯಾರಿರಬಹುದು?

  1. ಮೊದಲ ಎಮೋಜಿ ನಾಯಕ ಋತುರಾಜ್ ಗಾಯಕ್ವಾಡ್​​ಗೆ ಹೋಲುತ್ತಿದೆ. ಲವ್, ಸ್ಟಾರ್ ಆಟಗಾರ, ಹ್ಯಾಂಡ್​ ಶೇಕ್ ಮತ್ತು ಫೈಯರ್ ಬ್ರಾಂಡ್ ಎಮೋಜಿಗಳು ಗಾಯಕ್ವಾಡ್​ರನ್ನೇ ಸೂಚಿಸುತ್ತಿವೆ.
  2. ಎರಡನೇ ಎಮೋಜಿ ಶಿವಂ ದುಬೆಯನ್ನು ಸೂಚಿಸುತ್ತಿದೆ. ಮಸಲ್ ಹೀರೋ, ಪವರ್ ಹಿಟ್ಟರ್, ತಂಡದಲ್ಲಿ ಆ್ಯಂಕರ್ ಇನ್ನಿಂಗ್ಸ್ ಆಡುವುದನ್ನು ಎಮೋಜಿಗಳು ತಿಳಿಸುತ್ತಿವೆ.
  3. ಮೂರನೇ ಎಮೋಜಿ ಶ್ರೀಲಂಕಾ ಕ್ರಿಕೆಟಿಗ ಮಥಿಶಾ ಪತಿರಾಣ. ಘಟಾನುಘಟಿ, ಯಾವುದೇ ಪವರ್​ ಹಿಟ್ಟರ್​ ಬ್ಯಾಟರ್​​ಗಳಾನ್ನಾದರೂ ತನ್ನ ವೇಗದ ಬೌಲಿಂಗ್ ಮೂಲಕ ವಿಕೆಟ್ ಎಗರಿಸುತ್ತಾರೆ ಎಂದು ಎಮೋಜಿಗಳು ಅರ್ಥ ನೀಡುತ್ತಿವೆ.
  4. ನಾಲ್ಕನೇ ಎಮೋಜಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ; ಇಲ್ಲಿ ಹೆಲಿಕಾಪ್ಟರ್​​ ಎಮೋಜಿಯೊಂದೇ ಸಾಕು ಆ ಆಟಗಾರ ಯಾರೆಂದು ಸೂಚಿಸಲು.
  5. ಐದನೇ ಎಮೋಜಿ ರವೀಂದ್ರ ಜಡೇಜಾ. ಕುದುರೆ ಸವಾರಿ ಮಾಡುವ ಮತ್ತು ಖಡ್ಗ ಝಳಪಿಸುವ ಏಕೈಕ ಕ್ರಿಕೆಟಿಗ ಅಂದರೆ ಜಡ್ಡು ಮಾತ್ರ. ಈ ಎಮೋಜಿಗಳು ಅದನ್ನೇ ಹೇಳುತ್ತಿವೆ.

2022ರಲ್ಲೂ ಇಂತಹದ್ದೇ ಪೋಸ್ಟ್ ಹಾಕಿದ್ದ ಸಿಎಸ್​ಕೆ

ಇಲ್ಲಿ ಮತ್ತೊಂದು ಆಶ್ಚರ್ಯಕರ ವಿಷಯವೂ ಅಡಗಿದೆ? ಐಪಿಎಲ್ 2022ರ ಮೆಗಾ ಹರಾಜಿಗೂ ಮುನ್ನ ಸಿಎಸ್​ಕೆ ಇದೇ ರೀತಿ ಎಮೋಜಿಗಳನ್ನು ಪೋಸ್ಟ್ ಮಾಡಿತ್ತು. ಅಂದು ಸಿಎಸ್​ಕೆ ರವೀಂದ್ರ ಜಡೇಜಾ, ಎಂಎಸ್ ಧೋನಿ, ಮೊಯೀನ್ ಅಲಿ ಮತ್ತು ಋತುರಾಜ್ ಗಾಯಕ್ವಾಡ್ ಅವರನ್ನು ಉಳಿಸಿಕೊಂಡಿತ್ತು. ಇದೀಗ ಯೆಲ್ಲೋ ಆರ್ಮಿ ಯಾರೆನ್ನೆಲ್ಲಾ ಉಳಿಸಿಕೊಳ್ಳಲಿದೆ ಎನ್ನುವುದು ಕುತೂಹಲ ಮೂಡಿಸಿದೆ. ಅದಕ್ಕಾಗಿ ಕೆಲವೇ ಗಂಟೆಗಳಷ್ಟೇ ಬಾಕಿ ಉಳಿದಿದೆ. ಮತ್ತೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ತಮ್ಮ ನಾಯಕ ರಿಷಭ್ ಪಂತ್ ಅವರನ್ನು ಹರಾಜಿಗೆ ಬಿಡಲಿದೆ ಎಂಬ ವರದಿಗಳಿವೆ. ಪಂತ್ ಹರಾಜಿಗೆ ಬಂದರೆ ಆರ್​ಸಿಬಿ ಮತ್ತು ಸಿಎಸ್​ಕೆ ಆತನನ್ನು ಖರೀದಿಸುವ ಲೆಕ್ಕಚಾರ ಹಾಕಿಕೊಂಡಿವೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ