logo
ಕನ್ನಡ ಸುದ್ದಿ  /  ಕ್ರಿಕೆಟ್  /  ಐಪಿಎಲ್ ಹರಾಜಿನ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ತಂಡ ಹೇಗಿದೆ; ಡಿಸಿ ಉಳಿಸಿಕೊಂಡ-ಖರೀದಿಸಿದ ಆಟಗಾರರ ಪಟ್ಟಿ ಹೀಗಿದೆ

ಐಪಿಎಲ್ ಹರಾಜಿನ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ತಂಡ ಹೇಗಿದೆ; ಡಿಸಿ ಉಳಿಸಿಕೊಂಡ-ಖರೀದಿಸಿದ ಆಟಗಾರರ ಪಟ್ಟಿ ಹೀಗಿದೆ

Jayaraj HT Kannada

Nov 25, 2024 10:52 PM IST

google News

ಐಪಿಎಲ್ ಹರಾಜಿನ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ತಂಡ ಹೇಗಿದೆ; ಡಿಸಿ ಆಟಗಾರರ ಪಟ್ಟಿ ಹೀಗಿದೆ

    • ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಬಲಿಷ್ಠ ಆಟಗಾರರನ್ನು ತೆಕ್ಕೆಗೆ ಹಾಕಿಕೊಂಡಿದೆ. ಕೆಎಲ್‌ ರಾಹುಲ್‌, ಮಿಚೆಲ್‌ ಸ್ಟಾರ್ಕ್‌, ಟಿ ನಟರಾಜನ್, ಫಾಫ್‌ ಡುಪ್ಲೆಸಿಸ್‌ ಸೇರಿದಂತೆ ಹಲವು ಅನುಭವಿ ಆಟಗಾರರು ತಂಡ ಸೇರಿಕೊಂಡಿದ್ದಾರೆ.
ಐಪಿಎಲ್ ಹರಾಜಿನ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ತಂಡ ಹೇಗಿದೆ; ಡಿಸಿ ಆಟಗಾರರ ಪಟ್ಟಿ ಹೀಗಿದೆ
ಐಪಿಎಲ್ ಹರಾಜಿನ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ತಂಡ ಹೇಗಿದೆ; ಡಿಸಿ ಆಟಗಾರರ ಪಟ್ಟಿ ಹೀಗಿದೆ (ANI)

ಐಪಿಎಲ್ 2025ರ ಮೆಗಾ ಹರಾಜು ಪ್ರಕ್ರಿಯೆಯು ಜೆದ್ದಾದಲ್ಲಿ ಮುಕ್ತಾಯಗೊಂಡಿದೆ. ಎಲ್ಲಾ 10 ತಂಡಗಳು ಬಲಿಷ್ಠ ತಂಡ ಕಟ್ಟಲು ಸೂಕ್ತ ಆಟಗಾರರನ್ನು ಖರೀದಿ ಮಾಡಿವೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕನ್ನಡಿಗ ಕೆಎಲ್ ರಾಹುಲ್ ಅವರನ್ನು 14 ಕೋಟಿ ರೂ.ಗೆ ಖರೀದಿಸಿತು. ಇದರೊಂದಿಗೆ ವಿಕೆಟ್‌ ಕೀಪರ್‌ ಹಾಗೂ ನಾಯಕನ ಸ್ಥಾನಕ್ಕೆ ಸೂಕ್ತ ಆಟಗಾರನನ್ನು ತೆಕ್ಕೆಗೆ ಹಾಕಿಕೊಂಡಿತು. ಅತ್ತ ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್ ಅವರನ್ನು 11.75 ಕೋಟಿ ರೂ.ಗೆ ಖರೀದಿಸಿದ ತಂಡ, ಇಂಗ್ಲೆಂಡ್‌ನ ಹ್ಯಾರಿ ಬ್ರೂಕ್‌ಗೆ 6.25 ಕೋಟಿ ರೂ. ವಿನಿಯೋಗಿಸಿತು. ಹರಾಜಿನ 2ನೇ ದಿನದಂದು, ತಂಡವು ಆರ್‌ಸಿಬಿ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಅವರನ್ನು 2 ಕೋಟಿ ರೂ.ಗೆ ಖರೀದಿಸಿತು. ವೇಗಿ ಮುಖೇಶ್ ಕುಮಾರ್ ಅವರನ್ನು ಆರ್‌ಟಿಎಂ ಮೂಲಕ 8 ಕೋಟಿ ರೂ.ಗೆ ತೆಕ್ಕೆಗೆ ಹಾಕಿಕೊಂಡಿತು.

ಮೊದಲ ದಿನದ ಹರಾಜಿನಲ್ಲಿ, ಡೆಲ್ಲಿ ಕ್ಯಾಪಿಟಲ್ಸ್ ತಂಡವು ಆರ್‌ಟಿಎಂ ಕಾರ್ಡ್ ಬಳಸಿಕೊಂಡು ಆಸೀಸ್ ಬ್ಯಾಟರ್‌ ಜೇಕ್ ಫ್ರೇಸರ್-ಮೆಕ್ಗುರ್ಕ್ ಅವರನ್ನು 9 ಕೋಟಿ ರೂ.ಗೆ ಖರೀದಿಸಿತು. ಕಳೆದ ವರ್ಷ ಐಪಿಎಲ್‌ ಪದಾರ್ಪಣೆ ಮಾಡಿದ್ದ 22ರ ಹರೆಯದ ಆಟಗಾರ ಸ್ಫೋಟಕ ಪ್ರದರ್ಶನ ನೀಡಿದ್ದರು. ಆಡಿದ ಒಂಬತ್ತು ಇನ್ನಿಂಗ್ಸ್‌ಗಳಲ್ಲಿ 234ರ ಸ್ಟ್ರೈಕ್ ರೇಟ್‌ನೊಂದಿಗೆ 330 ರನ್‌ ಗಳಿಸುವ ಮೂಲಕ ವಿವಿಧ ಫ್ರಾಂಚೈಸಿಗಳ ಗಮನ ಸೆಳೆದಿದ್ದರು.

ಇದೇ ವೇಳೆ ಟಿ ನಟರಾಜನ್ ಅವರನ್ನು 10.75 ಕೋಟಿ ರೂ.ಗೆ ಮತ್ತು ಅಶುತೋಷ್ ಶರ್ಮಾ ಅವರನ್ನು 3.80 ಕೋಟಿ ರೂ.ಗೆ ಖರೀದಿ ಮಾಡಿದೆ. ಮೋಹಿತ್ ಶರ್ಮಾ (2.2 ಕೋಟಿ ರೂ.), ಸಮೀರ್ ರಿಜ್ವಿ (95 ಲಕ್ಷ ರೂ.) ಮತ್ತು ಕರುಣ್ ನಾಯರ್ (50 ಲಕ್ಷ ರೂ.) ಕೂಡಾ ತಂಡ ಸೇರಿಕೊಂಡರು.

ಡಿಸಿ ಮುಖ್ಯ ಕೋಚ್ ಹೇಮಂಗ್ ಬದಾನಿ ತಮ್ಮ ತಂಡದ ಹರಾಜು ವಿಧಾನದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. “ಖರೀದಿಯಿಂದ ತುಂಬಾ ಸಂತೋಷವಾಗಿದೆ. ಕೆಎಲ್ ಮತ್ತು ಸ್ಟಾರ್ಕ್ ಇಬ್ಬರೂ ವಿಶ್ವ ದರ್ಜೆಯ ಆಟಗಾರರು. ಸ್ಟಾರ್ಕ್ ಮ್ಯಾಚ್ ವಿನ್ನರ್, ಅವರು ವಿಕೆಟ್ ಟೇಕರ್. ಇದಕ್ಕಿಂತ ಸಂತೋಷವಾಗಿರಲು ಸಾಧ್ಯವಿಲ್ಲ,” ಎಂದು ಅವರು ಹೇಳಿದರು.

ಡೆಲ್ಲಿ ಕ್ಯಾಪಿಟಲ್ಸ್ 2025 ತಂಡ

  • ಹ್ಯಾರಿ ಬ್ರೂಕ್ (6.25 ಕೋಟಿ ರೂ.)
  • ಜೇಕ್ ಫ್ರೇಸರ್-ಮೆಕ್ಗುರ್ಕ್ (9 ಕೋಟಿ)
  • ಕೆಎಲ್ ರಾಹುಲ್ (14 ಕೋಟಿ)
  • ಮಿಚೆಲ್ ಸ್ಟಾರ್ಕ್ (11.75 ಕೋಟಿ)
  • ಟಿ ನಟರಾಜನ್ (10.75 ಕೋಟಿ)
  • ಅಶುತೋಷ್ ಶರ್ಮಾ (3.8 ಕೋಟಿ)
  • ಮೋಹಿತ್ ಶರ್ಮಾ (2.2 ಕೋಟಿ)
  • ಸಮೀರ್ ರಿಜ್ವಿ (95 ಲಕ್ಷ)
  • ಕರುಣ್ ನಾಯರ್ (50 ಲಕ್ಷ)
  • ಫಾಫ್ ಡು ಪ್ಲೆಸಿಸ್ (2 ಕೋಟಿ ರೂ.)
  • ಮುಖೇಶ್ ಕುಮಾರ್ (8 ಕೋಟಿ ರೂ.)
  • ದರ್ಶನ್ ನಲ್ಕಂಡೆ (30 ಲಕ್ಷ ರೂ.)
  • ವಿಪ್ರಜ್ ನಿಗಮ್ (50 ಲಕ್ಷ ರೂ.)
  • ದುಷ್ಮಂತ ಚಮೀರ (ರೂ. 75 ಲಕ್ಷ)
  • ಡೊನೊವನ್ ಫೆರೇರಾ (75 ಲಕ್ಷ ರೂ.)
  • ಅಜಯ್ ಮಂಡಲ್ (30 ಲಕ್ಷ ರೂ.)
  • ಮನ್ವಂತ್ ಕುಮಾರ್ (30 ಲಕ್ಷ ರೂ.)
  • ತ್ರಿಪುರಾಣ ವಿಜಯ್ (30 ಲಕ್ಷ ರೂ.)
  • ಮಾಧವ್ ತಿವಾರಿ (40 ಲಕ್ಷ ರೂ.).

ಇದನ್ನೂ ಓದಿ | ಕೆಎಲ್ ರಾಹುಲ್​ಗೆ ಭಾರೀ ನಿರಾಸೆ, 14 ಕೋಟಿಗೆ ಡೆಲ್ಲಿ ಕ್ಯಾಪಿಟಲ್ಸ್ ಸೇರಿದ ಕನ್ನಡಿಗ, ನಿರೀಕ್ಷೆ ಹುಸಿಗೊಳಿಸಿದ ಆರ್​ಸಿಬಿ

ತಂಡ ರಿಟೈನ್‌ ಮಾಡಿಕೊಂಡಿರುವ ಆಟಗಾರರು

  • ಅಕ್ಷರ್ ಪಟೇಲ್ (16.5 ಕೋಟಿ)
  • ಕುಲ್ದೀಪ್ ಯಾದವ್ (13.25 ಕೋಟಿ)‌
  • ಟ್ರಿಸ್ಟಾನ್ ಸ್ಟಬ್ಸ್ (10 ಕೋಟಿ)
  • ಅಭಿಷೇಕ್ ಪೊರೆಲ್ (4 ಕೋಟಿ)

ಇದನ್ನೂ ಓದಿ | ಐಪಿಎಲ್ 2025 ಹರಾಜು: ಮುಂಬೈ ಇಂಡಿಯನ್ಸ್ ಖರೀದಿಸಿದ ಆಟಗಾರರ ಸಂಪೂರ್ಣ ಪಟ್ಟಿ; ಹೀಗಿದೆ ಎಂಐ ತಂಡ

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ