ಕೆಎಲ್ ರಾಹುಲ್​ಗೆ ಭಾರೀ ನಿರಾಸೆ, 14 ಕೋಟಿಗೆ ಡೆಲ್ಲಿ ಕ್ಯಾಪಿಟಲ್ಸ್ ಸೇರಿದ ಕನ್ನಡಿಗ, ನಿರೀಕ್ಷೆ ಹುಸಿಗೊಳಿಸಿದ ಆರ್​ಸಿಬಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಕೆಎಲ್ ರಾಹುಲ್​ಗೆ ಭಾರೀ ನಿರಾಸೆ, 14 ಕೋಟಿಗೆ ಡೆಲ್ಲಿ ಕ್ಯಾಪಿಟಲ್ಸ್ ಸೇರಿದ ಕನ್ನಡಿಗ, ನಿರೀಕ್ಷೆ ಹುಸಿಗೊಳಿಸಿದ ಆರ್​ಸಿಬಿ

ಕೆಎಲ್ ರಾಹುಲ್​ಗೆ ಭಾರೀ ನಿರಾಸೆ, 14 ಕೋಟಿಗೆ ಡೆಲ್ಲಿ ಕ್ಯಾಪಿಟಲ್ಸ್ ಸೇರಿದ ಕನ್ನಡಿಗ, ನಿರೀಕ್ಷೆ ಹುಸಿಗೊಳಿಸಿದ ಆರ್​ಸಿಬಿ

KL Rahul: ಟೀಮ್ ಇಂಡಿಯಾ ಆರಂಭಿಕ ಆಟಗಾರ ಕೆಎಲ್ ರಾಹುಲ್ ಅವರನ್ನು ಕೇವಲ 14 ಕೋಟಿ ರೂಪಾಯಿಗೆ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ತನ್ನ ಬುಟ್ಟಿಗೆ ಹಾಕಿಕೊಂಡಿದೆ. ಆರ್​ಸಿಬಿ ಕೆಲಹೊತ್ತು ಬಿಡ್ ಮಾಡಿ ಹಿಂದೆ ಸರಿಯಿತು.

ಕೆಎಲ್ ರಾಹುಲ್​ಗೆ ಭಾರೀ ನಿರಾಸೆ, 14 ಕೋಟಿಗೆ ಡೆಲ್ಲಿ ಕ್ಯಾಪಿಟಲ್ಸ್ ಸೇರಿದ ಕನ್ನಡಿಗ, ನಿರೀಕ್ಷೆ ಹುಸಿಗೊಳಿಸಿದ ಆರ್​ಸಿಬಿ
ಕೆಎಲ್ ರಾಹುಲ್​ಗೆ ಭಾರೀ ನಿರಾಸೆ, 14 ಕೋಟಿಗೆ ಡೆಲ್ಲಿ ಕ್ಯಾಪಿಟಲ್ಸ್ ಸೇರಿದ ಕನ್ನಡಿಗ, ನಿರೀಕ್ಷೆ ಹುಸಿಗೊಳಿಸಿದ ಆರ್​ಸಿಬಿ

ಇಂಡಿಯನ್ ಪ್ರೀಮಿಯರ್ ಲೀಗ್ 2025 ಮೆಗಾ ಹರಾಜಿನಲ್ಲಿ (IPL 2025 Mega Auction) ಭಾರತ ತಂಡದ ಸ್ಟಾರ್​ ವಿಕೆಟ್ ಕೀಪರ್​ ಬ್ಯಾಟರ್ ಕೆಎಲ್ ರಾಹುಲ್ (KL Rahul) ಅವರಿಗೆ ಭಾರಿ ನಿರಾಸೆಯಾಗಿದೆ. ಕೇವಲ 14 ಕೋಟಿ ರೂಪಾಯಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಬಿಕರಿಯಾಗಿದ್ದಾರೆ. ಮೆಗಾ ಹರಾಜಿಗೂ ಮುನ್ನ ಭಾರೀ ನಿರೀಕ್ಷೆ ಹುಟ್ಟು ಹಾಕಿದ್ದ ಆಟಗಾರರಲ್ಲಿ ಒಬ್ಬರಾಗಿದ್ದ ರಾಹುಲ್ ನಿರೀಕ್ಷೆಯಂತೆ ಬೃಹತ್ ಮೊತ್ತ ಪಡೆಯುವಲ್ಲಿ ವಿಫಲರಾಗಿದ್ದಾರೆ. ರಿಷಭ್ ಪಂತ್, ಶ್ರೇಯಸ್ ಅಯ್ಯರ್ ಅವರಂತೆ ರಾಹುಲ್ ಕೂಡ 20 ಕೋಟಿ ಮೇಲೆ ಖರೀದಿಯಾಗುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಸಾಧ್ಯವಾಗಿಲ್ಲ.

ಕನ್ನಡಿಗ ಕೆಎಲ್‌ ರಾಹುಲ್‌ ಖರೀದಿಗೆ ಆರ್‌ಸಿಬಿ ಆರಂಭದಿಂದಲೇ ಬಿಡ್‌ ಮಾಡಿತು. ಅತ್ತ ಕೆಕೆಆರ್‌ ಕೂಡಾ ಪ್ರಬಲ ಪೈಪೋಟಿ ನೀಡಿತು. ಹರಾಜಿಗೂ ಮುನ್ನವೇ ಕನ್ನಡಿಗನನ್ನು ಆರ್‌ಸಿಬಿ ತಂಡ ಖರೀದಿ ಮಾಡುವ ಬಗ್ಗೆ ಭಾರಿ ನಿರೀಕ್ಷೆ ಇತ್ತು. ಅದರಂತೆಯೇ ಬೆಂಗಳೂರು ತಂಡ ಕೂಡಾ ಬಿಡ್‌ ನಡೆಸಿತು. 10 ಕೋಟಿ ದಾಟುತ್ತಿದ್ದಂತೆಯೇ ಆರ್‌ಸಿಬಿ ತುಸು ಹಿಂದೆ ಸರಿಯಿತು. ಅಷ್ಟರಲ್ಲಿ ಡೆಲ್ಲಿ ಅಖಾಡಕ್ಕೆ ಬಂತು. ಕೊನೆಗೆ 14 ಕೋಟಿ ರೂಪಾಯಿಗೆ ರಾಹಲ್‌ ಡೆಲ್ಲಿ ಪಾಲಾದರು. ಆದರೆ ನಾಯಕತ್ವ ಹುಡುಕುತ್ತಿದ್ದ ಆರ್​ಸಿಬಿ 14 ಕೋಟಿಗೆ ಬಿಡ್​ ಮಾಡುವಲ್ಲಿ ವಿಫಲವಾಯಿತು. ಲೋಕಲ್ ಬಾಯ್​ಗೆ ಮಣೆ ಹಾಕುವಲ್ಲಿ ಮತ್ತೆ ಎಡವಿತು. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಆರ್​ಸಿಬಿ ಟ್ರೋಲ್ ಆಗುತ್ತಿದೆ.

ಎಲ್​ಎಸ್​ಜಿ ಮಾಲೀಕರ ಜೊತೆಗೆ ಮುನಿಸು

2022ರ ಐಪಿಎಲ್​ನಲ್ಲಿ ನೂತನ ಐಪಿಎಲ್​ ಫ್ರಾಂಚೈಸಿಯಾಗಿದ್ದ ಲಕ್ನೋ ಸೂಪರ್ ಜೈಂಟ್ಸ್​ ಪರ ಮೂರು ವರ್ಷಗಳ ಕಾಲ ರಾಹುಲ್ ಆಡಿದ್ದಾರೆ. ಆದರೆ ಕಳೆದ ಸೀಸನ್​ನಲ್ಲಿ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯ ಸೋತಿದ್ದಕ್ಕೆ ಎಲ್​ಎಸ್​ಜಿ ಮಾಲೀಕ ಸಂಜೀವ್ ಗೋಯೆಂಕಾ ಅವರು ನಾಯಕ ಕೆಎಲ್ ರಾಹುಲ್​ರನ್ನು ಸಾರ್ವಜನಿಕವಾಗಿ ವಾಗ್ದಾಳಿ ನಡೆದಿದ್ದರು. ಇದರ ವಿಡಿಯೋ ವೈರಲ್ ಆಗಿತ್ತು. ಆ ಬಳಿಕ ಇಬ್ಬರ ನಡುವೆ ಮುನಿಸು ಏರ್ಪಟ್ಟಿತ್ತು. ಮುನಿಸು ಶಮನ ಮಾಡಲು ಗೋಯೆಂಕಾ ಯತ್ನಿಸಿದ್ದರು. ಆದರೆ ವಿಫಲವಾಗಿದ್ದರು. ಹೀಗಾಗಿ ಫ್ರಾಂಚೈಸಿ ತೊರೆದರು.

ಕೆಎಲ್ ರಾಹುಲ್ ನಾಯಕತ್ವ ದಾಖಲೆ

ಪಂದ್ಯಗಳು - 64

ಗೆಲುವು - 31

ಸೋಲು - 31

ಟೈ - 2

ಗೆಲುವಿನ ಶೇಕಡಾವಾರು - 50.00

ಐಪಿಎಲ್​ನಲ್ಲಿ ಕೆಎಲ್ ರಾಹುಲ್​ ಪ್ರದರ್ಶನ

ಪಂದ್ಯ - 132

ರನ್ - 4683

ಬೆಸ್ಟ್ - 132*

ಸರಾಸರಿ - 45.47

ಸ್ಟ್ರೈಕ್​ರೇಟ್ - 134.61

50/100 - 37/04

4/6 - 400/187

ನಾಟೌಟ್ - 20

2024ರ ಐಪಿಎಲ್​ನಲ್ಲಿ ಕೆಎಲ್ ರಾಹುಲ್​ ಪ್ರದರ್ಶನ

ಪಂದ್ಯ - 14

ರನ್ - 520

ಬೆಸ್ಟ್ - 82

ಸರಾಸರಿ - 37.14

ಸ್ಟ್ರೈಕ್​ರೇಟ್ - 136.13

50/100 - 04/00

4/6 - 45/19

ನಾಟೌಟ್ - 0

ವರ್ಷತಂಡಸಂಬಳ
2025ಡೆಲ್ಲಿ ಕ್ಯಾಪಿಟಲ್ಸ್14 ಕೋಟಿ
2024ಲಕ್ನೋ ಸೂಪರ್ ಜೈಂಟ್ಸ್17 ಕೋಟಿ
2023 (ರಿಟೇನ್)ಲಕ್ನೋ ಸೂಪರ್ ಜೈಂಟ್ಸ್17 ಕೋಟಿ
2022ಲಕ್ನೋ ಸೂಪರ್ ಜೈಂಟ್ಸ್ 17 ಕೋಟಿ
2021ಕಿಂಗ್ಸ್ XI ಪಂಜಾಬ್ 11 ಕೋಟಿ
2020 (ರಿಟೇನ್)ಕಿಂಗ್ಸ್ XI ಪಂಜಾಬ್ 11 ಕೋಟಿ
2019 (ರಿಟೇನ್)ಕಿಂಗ್ಸ್ XI ಪಂಜಾಬ್ 11 ಕೋಟಿ
2018ಕಿಂಗ್ಸ್ XI ಪಂಜಾಬ್ 11 ಕೋಟಿ
2017 (ಗಾಯ)ರಾಯಲ್ ಚಾಲೆಂಜರ್ಸ್ ಬೆಂಗಳೂರು 1 ಕೋಟಿ
2016 (ಟ್ರಾನ್ಸಫರ್)ರಾಯಲ್ ಚಾಲೆಂಜರ್ಸ್ ಬೆಂಗಳೂರು 1 ಕೋಟಿ
2015ಸನ್ ರೈಸರ್ಸ್ ಹೈದರಾಬಾದ್ 1 ಕೋಟಿ
2014ಸನ್ ರೈಸರ್ಸ್ ಹೈದರಾಬಾದ್ 1 ಕೋಟಿ
2013ರಾಯಲ್ ಚಾಲೆಂಜರ್ಸ್ ಬೆಂಗಳೂರು 10 ಲಕ್ಷ

Whats_app_banner