ಐಪಿಎಲ್ 2025 ಹರಾಜು: ಮುಂಬೈ ಇಂಡಿಯನ್ಸ್ ಖರೀದಿಸಿದ ಆಟಗಾರರ ಸಂಪೂರ್ಣ ಪಟ್ಟಿ; ಹೀಗಿದೆ ಎಂಐ ತಂಡ
ಭಾನುವಾರ ನಡೆದ ಐಪಿಎಲ್ 2025ರ ಹರಾಜಿನಲ್ಲಿ ಟ್ರೆಂಟ್ ಬೌಲ್ಟ್ ಎರಡನೇ ಬಾರಿಗೆ ಮುಂಬೈ ಇಂಡಿಯನ್ಸ್ ತಂಡ ಸೇರಿಕೊಂಡರು. ಇದರೊಂದಿಗೆ ಮಾಜಿ ಚಾಂಪಿಯನ್ ಬೌಲಿಂಗ್ ಮತ್ತಷ್ಟು ಬಲಿಷ್ಠವಾಗಿದೆ. ಮುಂಬೈ ಖರೀದಿಸಿದ ಆಟಗಾರರ ಸಂಪೂರ್ಣ ಪಟ್ಟಿ ಇಲ್ಲಿದೆ.
ಸೌದಿ ಅರೇಬಿಯಾದ ಜೆದ್ದಾದಲ್ಲಿ ಐಪಿಎಲ್ 2025ರ ಆವೃತ್ತಿಯ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದೆ. ಮುಂಬೈ ಇಂಡಿಯನ್ಸ್ ತಂಡವು ಈ ಬಾರಿ ಹರಾಜಿಗೂ ಮುನ್ನ ಐವರು ಆಟಗಾರರನ್ನು ರಿಟೈನ್ ಮಾಡಿಕೊಂಡಿತ್ತು. ಇದೀಗ ಹರಾಜಿನಲ್ಲಿ ಪ್ರಬಲ ಆಟಗಾರರನ್ನು ತಂಡ ಸೇರಿಸಿಕೊಂಡಿದೆ. ಭಾನುವಾರ ನಡೆದ ಮೊದಲ ದಿನದ ಹರಾಜಿನಲ್ಲಿ ತಂಡವು ಕೇವಲ ನಾಲ್ಕು ಆಟಗಾರರನ್ನು ಮಾತ್ರ ಖರೀದಿ ಮಾಡಿತ್ತು. ಆ ಬಳಿಕ ಎರಡನೇ ದಿನದ ಹರಾಜಿನಲ್ಲಿ ಮತ್ತಷ್ಟು ಆಟಗಾರರ ಖರೀದಿ ಮಾಡಿದೆ.
ನ್ಯೂಜಿಲೆಂಡ್ ವೇಗದ ಬೌಲರ್ ಟ್ರೆಂಟ್ ಬೌಲ್ಟ್ ಅವರನ್ನುತಂಡವು ಬರೋಬ್ಬರಿ 12.5 ಕೋಟಿ ರೂ.ಗೆ ಖರೀದಿ ಮಾಡಿತು. 2 ಕೋಟಿ ರೂ ಮೂಲಬೆಲೆಗೆ ಹರಾಜಿಗೆ ನಿಂದ ಆಟಗಾರ ಭರ್ಜರಿ ಬೆಲೆ ಪಡೆದರು. ಭಾನುವಾರ ಮುಂಬೈ ಇಂಡಿಯನ್ಸ್ ಖರೀದಿಸಿದ ಏಕೈಕ ವಿದೇಶಿ ಆಟಗಾರ ಬೌಲ್ಟ್.
ಅತ್ತ ನಮನ್ ಧೀರ್ ಅವರನ್ನು 5.25 ಕೋಟಿ ರೂ.ಗೆ ಮತ್ತೆ ತಂಡಕ್ಕೆ ಕರೆಸಿಕೊಂಡರೆ, ರಾಬಿನ್ ಮಿನ್ಜ್ ಅವರನ್ನು 65 ಲಕ್ಷ ರೂ. ಖರ್ಚು ಮಾಡಿತು. ಅತ್ತ ಆರ್‌ಸಿಬಿ ಮಾಜಿ ಸ್ಪಿನ್ನರ್ ಕರಣ್ ಶರ್ಮಾ ಅವರನ್ನು 50 ಲಕ್ಷ ರೂ.ಗೆ ಮಾಜಿ ಚಾಂಪಿಯನ್ ಖರೀದಿಸಿತು.
ನಮನ್ ಧೀರ್ ಖರೀದಿಗೆ ಪೈಪೋಟಿ
ನಮನ್ ಧೀರ್ ಖರೀದಿಗೆ ದೊಡ್ಡ ಪೈಪೋಟಿ ಆರಂಭವಾಯ್ತು. ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್ ನಡುವೆ ನಡೆದ ಬಿಡ್ ವಾರ್‌ನಲ್ಲಿ ಕೊನೆಗೆ ಆಟಗಾರ ಮುಂಬೈ ಪಾಲಾದರು. ಈ ನಡುವೆ ಡೆಲ್ಲಿ ಕ್ಯಾಪಿಟಲ್ಸ್, ರಾಜಸ್ಥಾನ್ ರಾಯಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ಕೂಡಾ ಬಿಡ್ ಮಾಡಿತು. ಆದರೆ ಎಂಐ ತನ್ನ ಆರ್‌ಟಿಎಂ ಆಯ್ಕೆಯನ್ನು ಬಳಸಿಕೊಂಡು ಅವರನ್ನು 5.25 ಕೋಟಿ ರೂ.ಗೆ ಪಡೆಯಲು ನಿರ್ಧರಿಸಿತು. ಧೀರ್ 2024ರಲ್ಲಿ ಮುಂಬೈ ಪರ ಆಡಿದ್ದರು. ತಮ್ಮ ಚೊಚ್ಚಲ ಋತುವಿನಲ್ಲಿ 23.33 ಸರಾಸರಿಯಲ್ಲಿ 140 ರನ್ ಗಳಿಸಿದರು. 177.21 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿ ಗಮನ ಸೆಳೆದಿದ್ದರು.
ಮುಂಬೈ ಇಂಡಿಯನ್ಸ್ ಖರೀದಿ ಮಾಡಿದ ಆಟಗಾರರು
- ಟ್ರೆಂಟ್ ಬೌಲ್ಟ್ (12.5 ಕೋಟಿ ರೂ.)
- ನಮನ್ ಧೀರ್ (5.25 ಕೋಟಿ ರೂ.)
- ರಾಬಿನ್ ಮಿಂಜ್ (65 ಲಕ್ಷ ರೂ.)
- ಕರಣ್ ಶರ್ಮಾ (50 ಲಕ್ಷ ರೂ.)
- ರಿಯಾನ್ ರಿಕೆಲ್ಟನ್ (1 ಕೋಟಿ ರೂ.)
- ದೀಪಕ್ ಚಹಾರ್ (9.25 ಕೋಟಿ ರೂ.)
- ಅಲ್ಲಾ ಗಜನ್ಫರ್ (4.80 ಕೋಟಿ ರೂ.)
- ವಿಲ್ ಜ್ಯಾಕ್ಸ್ (5.25 ಕೋಟಿ ರೂ.)
- ಅಶ್ವನಿ ಕುಮಾರ್ (30 ಲಕ್ಷ ರೂ.)
- ಮಿಚೆಲ್ ಸ್ಯಾಂಟ್ನರ್ (ರೂ. 2 ಕೋಟಿ)
- ರೀಸ್ ಟೋಪ್ಲಿ (75 ಲಕ್ಷ ರೂ.)
- ಕೃಷ್ಣನ್ ಶ್ರೀಜಿತ್ (30 ಲಕ್ಷ ರೂ.)
- ರಾಜ್ ಅಂಗದ್ ಬಾವಾ (30 ಲಕ್ಷ ರೂ.)
- ಸತ್ಯನಾರಾಯಣ ರಾಜು (30 ಲಕ್ಷ ರೂ.)
- ಬೆವನ್ ಜೇಕಬ್ಸ್ (30 ಲಕ್ಷ ರೂ.)
- ಅರ್ಜುನ್ ತೆಂಡೂಲ್ಕರ್ (30 ಲಕ್ಷ ರೂ.)
- ಲಿಜಾದ್ ವಿಲಿಯಮ್ಸ್ (75 ಲಕ್ಷ ರೂ.)
- ವಿಘ್ನೇಶ್ ಪುತ್ತೂರು (30 ಲಕ್ಷ ರೂ.).
ಇದನ್ನೂ ಓದಿ | ಐಪಿಎಲ್ 2025: ಆರ್‌ಸಿಬಿ ತಂಡದ ಆಟಗಾರರ ಪಟ್ಟಿ, ರಿಟೈನ್ ಹಾಗೂ ಹರಾಜಿನಲ್ಲಿ ಖರೀದಿಸಿದ ಆಟಗಾರರ ವಿವರ
ಐಪಿಎಲ್ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ಉಳಿಸಿಕೊಂಡ ಆಟಗಾರರು
- ಜಸ್ಪ್ರೀತ್ ಬುಮ್ರಾ (18 ಕೋಟಿ ರೂ.)
- ಸೂರ್ಯಕುಮಾರ್ ಯಾದವ್ (16.35 ಕೋಟಿ ರೂ.)
- ಹಾರ್ದಿಕ್ ಪಾಂಡ್ಯ (16.35 ಕೋಟಿ ರೂ.)
- ರೋಹಿತ್ ಶರ್ಮಾ (16.30 ಕೋಟಿ ರೂ.)
- ತಿಲಕ್ ವರ್ಮಾ (8 ಕೋಟಿ ರೂ.)
ಇದನ್ನೂ ಓದಿ | ಐಪಿಎಲ್ ಹರಾಜು: ಚೆನ್ನೈ ಸೂಪರ್ ಕಿಂಗ್ಸ್ ಖರೀದಿಸಿದ ಆಟಗಾರರ ಸಂಪೂರ್ಣ ಪಟ್ಟಿ, ಹೀಗಿದೆ ಸಿಎಸ್‌ಕೆ ತಂಡ