logo
ಕನ್ನಡ ಸುದ್ದಿ  /  ಕ್ರಿಕೆಟ್  /  ಹೆಲ್ಲೋ, ಹೀರೋ ಆಗೋಕೆ ಪ್ರಯತ್ನಿಸಬೇಡ; ಹೆಲ್ಮೆಟ್ ಧರಿಸದೆ ಕ್ಲೋಸ್-ಇನ್ ಫೀಲ್ಡಿಂಗ್​ಗೆ ನಿರ್ಧರಿಸಿದ ಸರ್ಫರಾಜ್​ಗೆ ಬೈದ ರೋಹಿತ್​

ಹೆಲ್ಲೋ, ಹೀರೋ ಆಗೋಕೆ ಪ್ರಯತ್ನಿಸಬೇಡ; ಹೆಲ್ಮೆಟ್ ಧರಿಸದೆ ಕ್ಲೋಸ್-ಇನ್ ಫೀಲ್ಡಿಂಗ್​ಗೆ ನಿರ್ಧರಿಸಿದ ಸರ್ಫರಾಜ್​ಗೆ ಬೈದ ರೋಹಿತ್​

Prasanna Kumar P N HT Kannada

Feb 25, 2024 11:17 PM IST

google News

ಹೆಲ್ಮೆಟ್ ಧರಿಸಿದೆ ಕ್ಲೋಸ್-ಇನ್ ಫೀಲ್ಡಿಂಗ್​ಗೆ ನಿರ್ಧರಿಸಿದ ಸರ್ಫರಾಜ್​ಗೆ ಬೈದ ರೋಹಿತ್​

    • Rohit Sharma warns Sarfaraz Khan : ಫೀಲ್ಡಿಂಗ್​ ವೇಳೆ ಯುವ ಆಟಗಾರ ಸರ್ಫರಾಜ್ ಖಾನ್ ತೋರಿದ ನಿರ್ಲಕ್ಷ್ಯಕ್ಕೆ ರೋಹಿತ್ ಶರ್ಮಾ ಕಿಡಿ ಕಾರಿದ್ದಾರೆ. ಅದರ ವಿಡಿಯೋ ವೈರಲ್ ಆಗಿದೆ.
ಹೆಲ್ಮೆಟ್ ಧರಿಸಿದೆ ಕ್ಲೋಸ್-ಇನ್ ಫೀಲ್ಡಿಂಗ್​ಗೆ ನಿರ್ಧರಿಸಿದ ಸರ್ಫರಾಜ್​ಗೆ ಬೈದ ರೋಹಿತ್​
ಹೆಲ್ಮೆಟ್ ಧರಿಸಿದೆ ಕ್ಲೋಸ್-ಇನ್ ಫೀಲ್ಡಿಂಗ್​ಗೆ ನಿರ್ಧರಿಸಿದ ಸರ್ಫರಾಜ್​ಗೆ ಬೈದ ರೋಹಿತ್​

ರಾಂಚಿಯಲ್ಲಿ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ (India vs England 4th Test) ಗೆಲುವಿನ ಅಂಚಿನಲ್ಲಿದೆ. ಕೇವಲ 192 ರನ್​ ಟಾರ್ಗೆಟ್ ಪಡೆದಿರುವ ರೋಹಿತ್​ ಪಡೆ, ನಾಲ್ಕನೇ ದಿನದಾಟದಂದು ಗೆಲುವಿಗೆ 152 ರನ್​ಗಳ ಅಗತ್ಯ ಇದೆ. ಮೂರನೇ ದಿನದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 40 ರನ್ ಗಳಿಸಿದೆ. ಇದಕ್ಕೂ ಮುನ್ನ ಭಾರತೀಯ ಸ್ಪಿನ್ನರ್​ಗಳಾದ ಆರ್ ಅಶ್ವಿನ್ ಮತ್ತು ಕುಲ್ದೀಪ್ ಯಾದವ್ ಸ್ಪಿನ್​ ಮೋಡಿಗೆ ಬೆಚ್ಚಿ ಬಿದ್ದ ಇಂಗ್ಲೆಂಡ್, ತನ್ನ ಎರಡನೇ ಇನ್ನಿಂಗ್ಸ್​​ನಲ್ಲಿ 145 ರನ್​ಗಳಿಗೆ ಕುಸಿಯಿತು.

ಮೊದಲ ಇನ್ನಿಂಗ್ಸ್​​​ನಲ್ಲಿ 46 ರನ್​ಗಳ ಹಿನ್ನಡೆ ಅನುಭವಿಸಿದ ಭಾರತ, ದ್ವಿತೀಯ ಇನ್ನಿಂಗ್ಸ್​​ನಲ್ಲಿ ಸೊಗಸಾದ ಬೌಲಂಗ್​ ಮತ್ತು ಫೀಲ್ಡಿಂಗ್ ನಡೆಸಿತು. ಫೀಲ್ಡಿಂಗ್​ ವೇಳೆ ಯುವ ಆಟಗಾರ ಸರ್ಫರಾಜ್ ಖಾನ್ (Sarfaraz Khan) ತೋರಿದ ನಿರ್ಲಕ್ಷ್ಯಕ್ಕೆ ರೋಹಿತ್ ಶರ್ಮಾ (Rohit Sharma) ಕಿಡಿ ಕಾರಿದ್ದಾರೆ. ಮುಂಬೈ ಆಟಗಾರನಿಗೆ ಟೀಮ್ ಇಂಡಿಯಾ ನಾಯಕ ಬೈದಿರುವ ಮಾತುಗಳು ಸ್ಟಂಪ್ಸ್​ನ ಮೈಕ್​​ನಲ್ಲಿ ರೆಕಾರ್ಡ್ ಆಗಿವೆ. ದೊಡ್ಡ ಹೀರೋ ಆಗೋಕೆ ಪ್ರಯತ್ನಿಸಬೇಡ ಎಂದು ಕೋಪ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದೆ.

ಬೈದಿದ್ದೇಕೆ ರೋಹಿತ್​ ಶರ್ಮಾ?

ಸರ್ಫರಾಜ್​ಗೆ ಬೈದ ಘಟನೆ 47ನೇ ಓವರ್​​ನಲ್ಲಿ ನಡೆಯಿತು. ಇಂಗ್ಲೆಂಡ್ ತಂಡವನ್ನು ಆಲೌಟ್​ ಮಾಡಲು ಭಾರತಕ್ಕೆ 2 ವಿಕೆಟ್ ಬೇಕಿತ್ತು. ಈ ವೇಳೆ ತಂತ್ರ ರೂಪಿಸಿದ ನಾಯಕ ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ ಮತ್ತು ಕುಲ್ದೀಪ್​ ಯಾದವ್ ಅವರನ್ನು ಬೌಲಿಂಗ್​ನಲ್ಲಿ ರೊಟೆಟ್ ಮಾಡುತ್ತಿದ್ದರು. 47ನೇ ಓವರ್​​​ನಲ್ಲಿ ಕುಲ್ದೀಪ್ ಯಾದವ್ ಬೌಲಿಂಗ್​ ಮಾಡುವ ವೇಳೆ ಡೀಪ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಸರ್ಫರಾಜ್ ಖಾನ್ ಅವರನ್ನು ರೋಹಿತ್ ಅವರು ತಮ್ಮ ಸ್ಥಾನವನ್ನು ಲಾಂಗ್ ಆನ್‌ನಿಂದ ಸಿಲ್ಲಿ ಮಿಡ್-ಆಫ್‌ಗೆ ಬರುವಂತೆ ಹೇಳಿದರು.

ತನ್ನ ನಾಯಕನ ಕರೆಗೆ ಪ್ರತಿಕ್ರಿಯಿಸಿದ ಸರ್ಫರಾಜ್​, ಹೆಲ್ಮೆಟ್ ಧರಿಸದೆ ಕ್ಲೋಸ್-ಇನ್ ಸ್ಥಾನದಲ್ಲಿ (ಬ್ಯಾಟ್ಸ್​​ಮನ್​​ ಹತ್ತಿರದಲ್ಲಿ) ಫೀಲ್ಡಿಂಗ್ ನಡೆಸಲು ನಿರ್ಧರಿಸಿದರು. ಇದು ಅಪಾಯಕಾರಿ ಎಂದು ಗೊತ್ತಿದ್ದರೂ ಸರ್ಫರಾಜ್​​ ನಡೆ, ರೋಹಿತ್​ಗೆ ಕೋಪ ತರಿಸಿತು. ಏಕ್​ಧಮ್ ಬೈದೇ ಬಿಟ್ಟ ಹಿಟ್​ಮ್ಯಾನ್, ಓಯೇ, ಹೀರೋ ನಹಿ ಬನ್ನೇ ಕಾ (ಹಲ್ಲೋ, ಹೀರೋ ಆಗೋಕೆ ಪ್ರಯತ್ನ ಮಾಡಬೇಡ) ಎಂದು ಎಚ್ಚರಿಸಿದ್ದಾರೆ.

ಅಲ್ಲದೆ, ಅಂಪೈರ್​ ಸಹ ಸರ್ಫರಾಜ್​ಗೆ ಬುದ್ಧಿವಾದ ಹೇಳಿದರು. ಹೀಗಾಗಿ ಕುಲ್ದೀಪ್ 4ನೇ ಎಸೆತ ಬೌಲ್ ಮಾಡಲು ಕಾಯಬೇಕಾಯಿತು. ಆದರೆ ಹೆಲ್ಮೆಟ್​ ಧರಿಸುವಂತೆ ಹೇಳಿದ್ದರೂ ಸರ್ಫರಾಜ್, ರೋಹಿತ್​ರನ್ನು​ ಮನವೊಲಿಸಲು ಪ್ರಯತ್ನಿಸಿದರು. ಇದು ಹಿಟ್​​ಮ್ಯಾನ್​ಗೆ ಕೋಪ ತರಿಸಿತು. ಬಳಿಕ ಅಂಪೈರ್ ಕುಮಾರ್ ಧರ್ಮಸೇನಾ ಮಧ್ಯಪ್ರವೇಶಿಸಿ, 'ಇಲ್ಲ, ನೀವು ಹಾಗೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿ ಬುದ್ಧಿವಾದ ಹೇಳಿದರು. ಕ್ಲೋಸ್-ಇನ್ ಸ್ಥಾನಗಳಲ್ಲಿ ಫೀಲ್ಡಿಂಗ್ ಮಾಡುವಾಗ ಹೆಲ್ಮೆಟ್ ಕಡ್ಡಾಯ ಎಂದು ತಿಳಿ ಹೇಳಿದರು. ಆಗ ಹೆಲ್ಮೆಟ್ ತರಿಸಿಕೊಂಡರು.

ಘಟನೆ ವಿವರಿಸಿದ ದಿನೇಶ್ ಕಾರ್ತಿಕ್

ರೋಹಿತ್​ ಶರ್ಮಾ ಸರ್ಫರಾಜ್​ಗೆ ಹೇಳಿದ್ದನ್ನು ಕಾಮೆಂಟರಿ ಮಾಡುತ್ತಿದ್ದ ದಿನೇಶ್ ಕಾರ್ತಿಕ್ ವಿವರಿಸಿದ್ದಾರೆ. ‘ಏ ಭಾಯ್ ಹೀರೋ ನಹೀ ಬನ್ನೆ ಕಾ, ನಿನ್ನ ಹೆಲ್ಮೆಟ್​​ಗಾಗಿ ಕಾಯಿ’ (ಸಹೋದರ ಹೀರೋ ಆಗೋಕೆ ಪ್ರಯತ್ನಿಸಬೇಡ, ಹೆಲ್ಮೆಟ್ ಬರೋವರೆಗೆ ಕಾಯಿ) ಎಂದು ರೋಹಿತ್ ಹೇಳಿದ್ದರು ಎಂದು ದಿನೇಶ್ ವಿವರಿಸಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ