Rohit Sharma: ಮತ್ತೊಂದು ಬ್ಯಾಟಿಂಗ್ ಮೈಲಿಗಲ್ಲು ಸಾಧಿಸಿದ ರೋಹಿತ್​ ಶರ್ಮಾ; ಈ ದಾಖಲೆ ಬರೆದ ಭಾರತದ 17ನೇ ಆಟಗಾರ-rohit sharma achieves another batting milestone indian captain completes 4000 runs in tests becomes 17th indian prs ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  Rohit Sharma: ಮತ್ತೊಂದು ಬ್ಯಾಟಿಂಗ್ ಮೈಲಿಗಲ್ಲು ಸಾಧಿಸಿದ ರೋಹಿತ್​ ಶರ್ಮಾ; ಈ ದಾಖಲೆ ಬರೆದ ಭಾರತದ 17ನೇ ಆಟಗಾರ

Rohit Sharma: ಮತ್ತೊಂದು ಬ್ಯಾಟಿಂಗ್ ಮೈಲಿಗಲ್ಲು ಸಾಧಿಸಿದ ರೋಹಿತ್​ ಶರ್ಮಾ; ಈ ದಾಖಲೆ ಬರೆದ ಭಾರತದ 17ನೇ ಆಟಗಾರ

Rohit Sharma Record : ಇಂಗ್ಲೆಂಡ್​ ವಿರುದ್ಧದ ನಾಲ್ಕನೇ ಟೆಸ್ಟ್​ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್​ ಶರ್ಮಾ ಹೊಸ ದಾಖಲೆ ಬರೆದಿದ್ದಾರೆ. ಈ ದಾಖಲೆ ಬರೆದ ಭಾರತದ 17ನೇ ಆಟಗಾರ.

ಮತ್ತೊಂದು ಬ್ಯಾಟಿಂಗ್ ಮೈಲಿಗಲ್ಲು ಸಾಧಿಸಿದ ರೋಹಿತ್​ ಶರ್ಮಾ
ಮತ್ತೊಂದು ಬ್ಯಾಟಿಂಗ್ ಮೈಲಿಗಲ್ಲು ಸಾಧಿಸಿದ ರೋಹಿತ್​ ಶರ್ಮಾ (ANI )

ರೋಹಿತ್ ಶರ್ಮಾ ದಾಖಲೆಗಳನ್ನು ಛಿದ್ರಗೊಳಿಸುವುದನ್ನು ಮುಂದುವರೆಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ರಾಂಚಿ ಟೆಸ್ಟ್ ಪಂದ್ಯದ 3ನೇ ದಿನದಂದು ಮತ್ತೊಂದು ಬ್ಯಾಟಿಂಗ್ ಮೈಲಿಗಲ್ಲು ಸಾಧಿಸಿದ್ದಾರೆ. ಔಟಾಗದೆ 24 ರನ್ ಗಳಿಸಿ ದಿನದಾಟ ಮುಗಿಸಿದ ರೋಹಿತ್ ಟೆಸ್ಟ್​​ನಲ್ಲಿ 4000 ರನ್ ಪೂರೈಸಿದ್ದಾರೆ. ಅವರು ಟೆಸ್ಟ್‌ನಲ್ಲಿ 4000 ರನ್ ಗಳಿಸಿದ 17ನೇ ಭಾರತ ಬ್ಯಾಟ್ಸ್‌ಮನ್ ಆಗಿದ್ದಾರೆ. ರೋಹಿತ್ ಈಗ ಟೆಸ್ಟ್ ನಲ್ಲಿ 4003* ರನ್ ಗಳಿಸಿದ್ದಾರೆ.

ಟೆಸ್ಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ 15921 ರನ್ ಗಳಿಸಿದ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನ ಪಡೆದಿದ್ದಾರೆ. ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಮಾಸ್ಟರ್ ಬ್ಲಾಸ್ಟರ್ ಅತಿ ಹೆಚ್ಚು ರನ್ ಗಳಿಸಿದ ವಿಶ್ವದಾಖಲೆಯನ್ನು ಹೊಂದಿದ್ದಾರೆ. ಗರಿಷ್ಠ ಟೆಸ್ಟ್ ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ರಾಹುಲ್ ದ್ರಾವಿಡ್ ಸಚಿನ್ ನಂತರದ ಸ್ಥಾನದಲ್ಲಿದ್ದಾರೆ.

ಪ್ರಸ್ತುತ ಭಾರತದ ಮುಖ್ಯಕೋಚ್ ಆಗಿರುವ ದ್ರಾವಿಡ್, 13,265 ರನ್​ಗಳೊಂದಿಗೆ ತಮ್ಮ ವೃತ್ತಿಜೀವನ ಮುಗಿಸಿದ್ದಾರೆ. ನಂತರ ಸ್ಥಾನದಲ್ಲಿ ಘಟಾನುಘಟಿ ಆಟಗಾರರೇ ಇದ್ದಾರೆ. ಇದುವರೆಗೆ ಭಾರತದ ಪರ ಟೆಸ್ಟ್‌ನಲ್ಲಿ 4000 ರನ್‌ಗಳ ಮೈಲುಗಲ್ಲನ್ನು ತಲುಪಿರುವ ಭಾರತೀಯ ಕ್ರಿಕೆಟಿಗರ ಪಟ್ಟಿ ಇಲ್ಲಿದೆ. ಯಾರು ಎಷ್ಟೆಲ್ಲಾ ಟೆಸ್ಟ್​ ರನ್ ಕಲೆ ಹಾಕಿದ್ದಾರೆ ಎಂಬುದನ್ನು ಬನ್ನಿ ನೋಡೋಣ.

ಟೆಸ್ಟ್​​​​ನಲ್ಲಿ 4000+ ರನ್ ಗಳಿಸಿದವರು

ಸಚಿನ್ ತೆಂಡೂಲ್ಕರ್​ - 15921

ರಾಹುಲ್ ದ್ರಾವಿಡ್ - 13,265

ಸುನಿಲ್ ಗವಾಸ್ಕರ್ - 10122

ವಿರಾಟ್ ಕೊಹ್ಲಿ - 8848

ವಿವಿಎಸ್​ ಲಕ್ಷ್ಮಣ್ - 8781

ವೀರೇಂದ್ರ ಸೆಹ್ವಾಗ್ - 8503

ಸೌರವ್ ಗಂಗೂಲಿ - 7212

ಚೇತೇಶ್ವರ್ ಪೂಜಾರ - 7195

ದಿಲೀಪ್ ವೆಂಗ್​ಸರ್ಕರ್ - 6868

ಮೊಹಮ್ಮದ್ ಅಜರುದ್ದೀನ್ - 6215

ಗುಂಡಪ್ಪ ವಿಶ್ವನಾಥ್ - 6080

ಕಪಿಲ್ ದೇವ್ - 5248

ಅಜಿಂಕ್ಯ ರಹಾನೆ - 5077

ಎಂಎಸ್ ಧೋನಿ - 4876

ಮೊಹಿಂದರ್ ಅಮರನಾಥ್ - 4378

ಗೌತಮ್ ಗಂಭೀರ್ - 4154

ರೋಹಿತ್​ ಶರ್ಮಾ - 4003* (ಹೊಸ ಸೇರ್ಪಡೆ)

ರೋಹಿತ್ ಈ ಪಟ್ಟಿಯಲ್ಲಿ ಗಂಭೀರ್ ಅವರನ್ನು ಹಿಂದಿಕ್ಕುವ ಸನಿಹದಲ್ಲಿದ್ದಾರೆ. ಭಾರತದ ಮಾಜಿ ಆರಂಭಿಕ ಆಟಗಾರ 58 ಟೆಸ್ಟ್ ಪಂದ್ಯಗಳಲ್ಲಿ 4154 ರನ್‌ಗಳೊಂದಿಗೆ ತಮ್ಮ ವೃತ್ತಿಜೀವನ ಮುಗಿಸಿದರು. ಅವರು 2018ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರು. ರೋಹಿತ್ 2013ರಲ್ಲಿ ತಮ್ಮ ಟೆಸ್ಟ್‌ಗೆ ಪದಾರ್ಪಣೆ ಮಾಡಿದರು. ತಮ್ಮ ಚೊಚ್ಚಲ ಪಂದ್ಯದ ನಂತರ 6 ವರ್ಷಗಳ ನಂತರ ಟೆಸ್ಟ್​ ತಂಡದಿಂದ ಹೊರಗಿದ್ದರು. 2019ರಲ್ಲಿ ಟೆಸ್ಟ್​​ನಲ್ಲಿ ಆರಂಭಿಕರಾಗಿ ಕಣಕ್ಕಿಳಿದು ನಂತರ ತಮ್ಮ ಸ್ಥಾನ ಭದ್ರಪಡಿಸಿಕೊಂಡರು.

ರೋಹಿತ್ 2022ರಲ್ಲಿ ಅವರು ಟೆಸ್ಟ್ ನಾಯಕನಾಗಿ ನೇಮಕಗೊಂಡರು. 2021/22 ಋತುವಿನಲ್ಲಿ ಪೂರ್ಣ ಸಮಯದ ವೈಟ್-ಬಾಲ್ ನಾಯಕರಾಗಿ ಅಧಿಕಾರ ವಹಿಸಿಕೊಂಡರು. ಅವರ ನೇತೃತ್ವದಲ್ಲಿ ಭಾರತ 2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ತಲುಪಿತು. ಇದಕ್ಕೂ ಮೊದಲು 2023ರಲ್ಲಿ ಭಾರತವು ಆಸ್ಟ್ರೇಲಿಯಾ ತಂಡವನ್ನು ಸ್ವದೇಶದಲ್ಲಿ ಟೆಸ್ಟ್ ಸರಣಿಯಲ್ಲಿ ಸೋಲಿಸಿತು. ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಭಾರತ 2-1 ಮುನ್ನಡೆ ಸಾಧಿಸಿದೆ.

mysore-dasara_Entry_Point