logo
ಕನ್ನಡ ಸುದ್ದಿ  /  ಕ್ರಿಕೆಟ್  /  Rcb Vs Csk: ರೋಹಿತ್ ಶರ್ಮಾ ಎಂಐ ತೊರೆದು ಈ ತಂಡದ ಪರ ಆಡ್ಬೇಕು; ಎಚ್‌ಟಿ ಸಮೀಕ್ಷೆಯಲ್ಲಿ ಫ್ಯಾನ್ಸ್‌ ಹೀಗಂದ್ರು

RCB vs CSK: ರೋಹಿತ್ ಶರ್ಮಾ ಎಂಐ ತೊರೆದು ಈ ತಂಡದ ಪರ ಆಡ್ಬೇಕು; ಎಚ್‌ಟಿ ಸಮೀಕ್ಷೆಯಲ್ಲಿ ಫ್ಯಾನ್ಸ್‌ ಹೀಗಂದ್ರು

Jayaraj HT Kannada

May 06, 2024 05:25 PM IST

ರೋಹಿತ್ ಶರ್ಮಾ ಎಂಐ ತೊರೆದು ಈ ತಂಡದ ಪರ ಆಡ್ಬೇಕು

    • ಐಪಿಎಲ್ 2024ರ ಬಳಿಕ ರೋಹಿತ್ ಮುಂಬೈ ಇಂಡಿಯನ್ಸ್ ತೊರೆಯಬೇಕೇ ಎಂಬ ಕುರಿತು ಹಿಂದೂಸ್ತಾನ್‌ ಟೈಮ್ಸ್‌ ಓದುಗರ ಸಮೀಕ್ಷೆ ನಡೆಸಿತು. ಅಭಿಮಾನಿಗಳ ಪ್ರಕಾರ, ಹಿಟ್‌ಮ್ಯಾನ್‌ ಎಂಐ ತಂಡ ತೊರೆದು ಅತಿ ದೊಡ್ಡ ಅಭಿಮಾನಿ ಬಳಗವಿರುವ ಮತ್ತೊಂದು ತಂಡ ಸೇರಬೇಕೆಂದು ಹೇಳಿಕೊಂಡಿದ್ದಾರೆ.
ರೋಹಿತ್ ಶರ್ಮಾ ಎಂಐ ತೊರೆದು ಈ ತಂಡದ ಪರ ಆಡ್ಬೇಕು
ರೋಹಿತ್ ಶರ್ಮಾ ಎಂಐ ತೊರೆದು ಈ ತಂಡದ ಪರ ಆಡ್ಬೇಕು (AFP-HT)

ಐಪಿಎಲ್‌ 2025ರ ಆವೃತ್ತಿಗೂ ಮುನ್ನ ಮೆಗಾ ಹರಾಜು ನಡೆಯಲಿದೆ. ಪ್ರಸ್ತುತ 17ನೇ ಆವೃತ್ತಿಯ ಪಂದ್ಯಾವಳಿ ನಡೆಯುತ್ತಿದ್ದು, ಟೂರ್ನಿಯ ಆರಂಭಕ್ಕೂ ಮುನ್ನವೇ ಮುಂಬೈ ಇಂಡಿಯನ್ಸ್‌ ತಂಡದಲ್ಲಿ ಹಲವು ಮಹತ್ವದ ಬದಲಾವಣೆಗಳಾದವು. ನಾಯಕತ್ವದಿಂದ ರೋಹಿತ್‌ ಶರ್ಮಾ ಅವರನ್ನು ಕೆಳಗಿಳಿಸಿ ಹಾರ್ದಿಕ್‌ ಪಾಂಡ್ಯಗೆ ತಂಡವನ್ನು ಮುನ್ನಡೆಸುವ ಜವಾಬ್ದಾರಿ ನೀಡಲಾಯ್ತು. ಆ ಬಳಿಕ ಅಭಿಮಾನಿಗಳ ಅಸಮಾಧಾನ ಜೋರಾಯ್ತು. ಸದ್ಯ ಮುಂದಿನ ಆವೃತ್ತಿ ವೇಳೆಗೆ ಹಿಟ್‌ಮ್ಯಾನ್‌ ಮುಂಬೈ ತೊರೆಯಬೇಕು ಎಂಬ ಮಾತುಗಳು ಕೇಳಿಬರುತ್ತಿವೆ. ಇದೇ ಬೇರೆ ಯಾವ ತಂಡದ ಪರ ಆಡಬೇಕು ಎಂಬ ಬಗ್ಗೆ ಅಭಿಮಾನಿಗಳು ತಮ್ಮದೇ ಉತ್ತರ ಕೊಡುತ್ತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Rajat Patidar: ಸ್ಫೋಟಕ ಬ್ಯಾಟಿಂಗ್ ಹಿಂದಿನ ರಹಸ್ಯವನ್ನು ಬಿಚ್ಚಿಟ್ಟ ಆರ್‌ಬಿಸಿ ಬ್ಯಾಟರ್ ರಜತ್ ಪಾಟಿದಾರ್

ಆರ್​ಸಿಬಿ vs ಸಿಎಸ್​ಕೆ ಪಂದ್ಯ ಮಳೆಯಿಂದ ರದ್ದಾದರೆ ರಿಸರ್ವ್​ ಡೇ ಇದೆಯೇ; ಸೋಲು-ಗೆಲುವಿನ ಲೆಕ್ಕಾಚಾರವೇನು?

RCB vs CSK Match: ಬೆಂಗಳೂರಿನಲ್ಲಿ ಮಳೆ ಆರಂಭ; ಆರ್‌ಸಿಬಿ-ಸಿಎಸ್‌ಕೆ ಹೈವೋಲ್ಟೇಜ್ ಪಂದ್ಯದ ಟಾಸ್ ತಡವಾಗುವ ಸಾಧ್ಯತೆ

ಆರ್‌ಸಿಬಿ vs ಸಿಎಸ್‌ಕೆ: ಬೆಂಗಳೂರಲ್ಲಿ ಭಾರಿ ಮಳೆ; ಕನಿಷ್ಠ 5 ಓವರ್‌ ಪಂದ್ಯ ನಡೆಸಲು ಎಷ್ಟು ಗಂಟೆಯವರೆಗೆ ಸಮಯವಿದೆ?

ರೋಹಿತ್ ಬದಲಿಗೆ ಮುಂಬೈ ಇಂಡಿಯನ್ಸ್ ನಾಯಕನಾಗಿ ನೇಮಕಗೊಂಡ ಹಾರ್ದಿಕ್ ಪಾಂಡ್ಯಗೆ, ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದ್ದು ಗೊತ್ತೇ ಇದೆ. ಮುಂಬೈ ಇಂಡಿಯನ್ಸ್ ತವರಿನ ಅಭಿಮಾನಿಗಳೇ ಹಾರ್ದಿಕ್ ವಿರುದ್ಧ ಘೋಷಣೆ ಕೂಗಿದರು. ಇದು ವ್ಯಾಪಕ ಚರ್ಚೆಗೂ ಕಾರಣವಾಯ್ತು.

ಅತ್ತ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವು, ಋತುರಾಜ್ ಗಾಯಕ್ವಾಡ್ ಅವರಿಗೆ ನಾಯಕತ್ವ ನೀಡಿತು. ದಿಗ್ಗಜ ಕ್ರಿಕೆಟಿಗ ಎಂಎಸ್ ಧೋನಿ ನಾಯಕತ್ವದಿಂದ ಕೆಳಗಿಳಿದ ನಂತರ, ಮುಂದಿನ ಆವೃತ್ತಿಯಲ್ಲಿ ಸಿಎಸ್‌ಕೆ ನಾಯಕತ್ವಕ್ಕೆ ರೋಹಿತ್‌ ಶರ್ಮಾ ಮರಳಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ | ಎಂಎಸ್ ಧೋನಿ ಬದಲು ಬೌಲರ್​ಗೆ ಅವಕಾಶ ನೀಡಿ; ಕ್ರಿಕೆಟ್ ತ್ಯಜಿಸಿ ಎಂದು ಮಾಹಿ ವಿರುದ್ಧ ಗುಡುಗಿದ ಹರ್ಭಜನ್ ಸಿಂಗ್

ಮುಂಬೈ ಹಾಗೂ ಚೆನ್ನೈ ತಂಡದ ಮಾಜಿ ಆಟಗಾರ ಅಂಬಾಟಿ ರಾಯುಡು, ರೋಹಿತ್‌ ಶರ್ಮಾ ಐಪಿಎಲ್ ಭವಿಷ್ಯದ ಕುರಿತು ಈ ಹಿಂದೆ ಮಾತನಾಡಿದ್ದರು. ಮುಂದಿನ ಋತುವಿನಲ್ಲಿ ಭಾರತದ ನಾಯಕನನ್ನು ನಾಯಕನನ್ನಾಗಿ ಪಡೆಯಲು ಐಪಿಎಲ್‌ನ ಎಲ್ಲಾ ತಂಡಗಳು ಇಷ್ಟಪಡುತ್ತವೆ ಎಂದು ಹೇಳಿದ್ದರು. ಈ ಋತುವಿನಲ್ಲಿ ಮುಂಬೈ ಇಂಡಿಯನ್ಸ್‌ ತಂಡವು ಅವರನ್ನು ನಡೆಸಿಕೊಂಡಿರುವುದಕ್ಕಿಂತ ಉತ್ತಮವಾಗಿ ಯಾವ ತಂಡ ಪರಿಗಣಿಸುತ್ತದೆಯೋ, ಆ ಫ್ರಾಂಚೈಸಿಗೆ ಅವರು ಹೋಗಬಹುದು ಎಂದು ರಾಯುಡು ಹೇಳಿಕೊಂಡಿದ್ದಾರೆ.

ಎಚ್‌ಟಿ ಸಮೀಕ್ಷೆಯಲ್ಲಿ ಅಭಿಮಾನಿಗಳು ಏನಂದ್ರು?

ಹಾಗಿದ್ದರೆ, 2024ರ ಆವೃತ್ತಿ ಬಳಿಕ ರೋಹಿತ್ ಅವರು ಮುಂಬೈ ಇಂಡಿಯನ್ಸ್ ತೊರೆಯಬೇಕೇ? ಅಥವಾ ಅದೇ ತಂಡದ ಪರ ಮುಂದುವರೆಯಬೇಕೆ? ಒಂದು ವೇಳೆ ಇಲ್ಲವಾದರೆ ಸಿಎಸ್‌ಕೆ, ಆರ್‌ಸಿಬಿ ಹೀಗೆ ಯಾವ ತಂಡದ ಪರ ಆಡಬೇಕು ಎಂಬು ಕುರಿತು ಹಿಂದೂಸ್ತಾನ್ ಟೈಮ್ಸ್ ಓದುಗರ ಸಮೀಕ್ಷೆ ನಡೆಸಿತು. ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯಕ್ಕೂ ಮುನ್ನ ನಡೆಸಿದ ಸಮೀಕ್ಷೆ ಪ್ರಕಾರ, ರೋಹಿತ್ ಮುಂಬೈ ತೊರೆದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಬೇಕೆಂಬ ಪರವಾಗಿ ಅಭಿಮಾನಿಗಳು ಹೆಚ್ಚು ಮತ ಚಲಾಯಿಸಿದ್ದಾರೆ.

ರೋಹಿತ್ ಮುಂಬೈ ತೊರೆದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಬೇಕೆಂದು ಅಭಿಮಾನಿಗಳ ಇಂಗಿತ

ಪ್ರಸಕ್ತ ಆವೃತ್ತಿಯ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಭಾರತದ ನಾಯಕ ರೋಹಿತ್ ಶರ್ಮಾ ಆಡಿದ ಮೊದಲ ಆರು ಪಂದ್ಯಗಳಲ್ಲಿ 261 ರನ್ ಗಳಿಸಿದರು. ಐದು ಬಾರಿ ಚಾಂಪಿಯನ್ ಆಗಿರುವ ತಂಡದ ಪರ ರೋಹಿತ್ ಶರ್ಮಾ ಒಂದು ಶತಕ (105) ಬಾರಿಸಿದ್ದಾರೆ. ಆದರೆ, ಮೊದಲ ಆರು ಪಂದ್ಯಗಳ ನಂತರ ರೋಹಿತ್ ಫಾರ್ಮ್‌ನಲ್ಲಿ ಕುಸಿತ ಕಂಡಿದೆ. ನಂತರದ ಐದು ಪಂದ್ಯಗಳಲ್ಲಿ ಅವರು ಕೇವಲ 65 ರನ್ ಮಾತ್ರ ಗಳಿಸಿದ್ದಾರೆ.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ