logo
ಕನ್ನಡ ಸುದ್ದಿ  /  ಕ್ರಿಕೆಟ್  /  ಮಾರಾಟಕ್ಕಿದೆ ಐಪಿಎಲ್‌ನ ಗುಜರಾತ್‌ ಟೈಟಾನ್ಸ್ ತಂಡ; ಖರೀದಿಗೆ ಮುಂದಾದ ಗೌತಮ್ ಅದಾನಿ ಮತ್ತು ಟೊರೆಂಟ್ ಗ್ರೂಪ್

ಮಾರಾಟಕ್ಕಿದೆ ಐಪಿಎಲ್‌ನ ಗುಜರಾತ್‌ ಟೈಟಾನ್ಸ್ ತಂಡ; ಖರೀದಿಗೆ ಮುಂದಾದ ಗೌತಮ್ ಅದಾನಿ ಮತ್ತು ಟೊರೆಂಟ್ ಗ್ರೂಪ್

Jayaraj HT Kannada

Jul 19, 2024 01:18 PM IST

google News

ಐಪಿಎಲ್ ತಂಡ ಗುಜರಾತ್ ಟೈಟಾನ್ಸ್ ಖರೀದಿಗೆ ಮುಂದಾದ ಗೌತಮ್ ಅದಾನಿ ಮತ್ತು ಟೊರೆಂಟ್ ಗ್ರೂಪ್!

    • ಮೂರು ವರ್ಷಗಳಿಂದ ಐಪಿಎಲ್‌ನಲ್ಲಿ ಆಡುತ್ತಿರುವ ಗುಜರಾತ್ ಟೈಟಾನ್ಸ್ ತಂಡದ ಪ್ರಸ್ತುತ ಮಾರುಕಟ್ಟೆ ಮೌಲ್ಯ 1.5 ಬಿಲಿಯನ್ ಡಾಲರ್‌ವರೆಗೆ ಇದೆ ಎಂದು ಅಂದಾಜಿಸಲಾಗಿದೆ. ಇದೀಗ ಸಿವಿಸಿ ಕ್ಯಾಪಿಟಲ್ಸ್ ಮಾಲೀಕತ್ವದಲ್ಲಿ ಬಹುಪಾಲು ಖರೀದಿಗೆ ಅದಾನಿ ಗ್ರೂಪ್ ಮತ್ತು ಟೊರೆಂಟ್ ಗ್ರೂಪ್ ಸಿದ್ಧತೆ ನಡೆಸಿದೆ.
ಐಪಿಎಲ್ ತಂಡ ಗುಜರಾತ್ ಟೈಟಾನ್ಸ್ ಖರೀದಿಗೆ ಮುಂದಾದ ಗೌತಮ್ ಅದಾನಿ ಮತ್ತು ಟೊರೆಂಟ್ ಗ್ರೂಪ್!
ಐಪಿಎಲ್ ತಂಡ ಗುಜರಾತ್ ಟೈಟಾನ್ಸ್ ಖರೀದಿಗೆ ಮುಂದಾದ ಗೌತಮ್ ಅದಾನಿ ಮತ್ತು ಟೊರೆಂಟ್ ಗ್ರೂಪ್!

ಐಪಿಎಲ್ ಮಾಜಿ ಚಾಂಪಿಯನ್‌ ಆಗಿರುವ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯ ನಿಯಂತ್ರಣ ಪಾಲಿನ ಮಾರಾಟ ಮತ್ತು ಖರೀದಿ ವಿಚಾರವಾಗಿ ಅದಾನಿ ಗ್ರೂಪ್ ಮತ್ತು ಟೊರೆಂಟ್ ಗ್ರೂಪ್, ಫ್ರಾಂಚೈಸಿ ಮಾಲೀಕತ್ವ ಹೊಂದಿರುವ ಖಾಸಗಿ ಈಕ್ವಿಟಿ ಸಂಸ್ಥೆಯಾಗಿರುವ ಸಿವಿಸಿ ಕ್ಯಾಪಿಟಲ್ಸ್ ಪಾರ್ಟ್‌ನರ್ಸ್‌ ಜೊತೆಗೆ ಮಾತುಕತೆ ನಡೆಸುತ್ತಿವೆ ಎಂದು ವರದಿಯಾಗಿದೆ. ಪ್ರಸ್ತುತ ಗುಜರಾತ್‌ ಟೈಟಾನ್ಸ್‌ ಫ್ರಾಂಚೈಸಿಯ ಮಾಲೀಕತ್ವ ಹೊಂದಿರುವ‌ ಸಿವಿಸಿ ಕ್ಯಾಪಿಟಲ್ಸ್, ಫ್ರಾಂಚೈಸಿಯಲ್ಲಿ ಅಲ್ಪ ಹಿಡಿತ ಉಳಿಸಿಕೊಂಡು ಉಳಿದ ಬಹುಪಾಲು ಮಾಲೀಕತ್ವವನ್ನು ಮಾರಾಟ ಮಾಡಲು ಸಜ್ಜಾಗಿದೆ ಎಂದು ತಿಳಿದುಬಂದಿದೆ.

ಈ ಕುರಿತು ಬಲ್ಲ ಮೂಲಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ಹೊಸ ತಂಡಗಳು ಪಾಲನ್ನು ಮಾರಾಟ ಮಾಡುವುದನ್ನು ತಡೆಯುವ ಬಿಸಿಸಿಐ ಲಾಕ್-ಇನ್ ಅವಧಿಯು 2025ರ ಫೆಬ್ರವರಿ ತಿಂಗಳಲ್ಲಿ ಕೊನೆಗೊಳ್ಳಲಿದೆ.

ಕಳೆದ ಮೂರು ವರ್ಷಗಳಿಂದ ಐಪಿಎಲ್‌ ಆಡುತ್ತಿರುವ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು, ಚೊಚ್ಚಲ ಆವೃತ್ತಿಯಲ್ಲೇ ಚಾಂಪಿಯನ್‌ ಪಟ್ಟಕ್ಕೇರಿ ತನ್ನ ಮಾರುಕಟ್ಟೆ ಮೌಲ್ಯವನ್ನು ಹೆಚ್ಚಿಸಿಕೊಂಡಿತ್ತು. ಸದ್ಯ ಫ್ರಾಂಚೈಸಿಯ ಮಾರುಕಟ್ಟೆ ಮೌಲ್ಯವು 1 ಬಿಲಿಯನ್ ಡಾಲರ್‌ನಿಂದ 1.5 ಬಿಲಿಯನ್ ಡಾಲರ್‌ವರೆಗೆ ಇರಬಹುದು ಎಂದು ಅಂದಾಜಿಸಲಾಗಿದೆ. ಸಿವಿಸಿ ಕ್ಯಾಪಿಟಲ್ಸ್‌ ಸಂಸ್ಥೆಯು 2021ರಲ್ಲಿ ಫ್ರಾಂಚೈಸಿಯನ್ನು 5625 ಕೋಟಿ ರೂಪಾಯಿ ನೀಡಿ ಖರೀದಿಸಿತ್ತು.‌ ಅಂದರೆ, ಮೂರು ವರ್ಷಗಳಲ್ಲಿ ಫ್ರಾಂಚೈಸಿ ಮೌಲ್ಯವು ದುಪ್ಪಟ್ಟಾಗಿದೆ.

2021ರಲ್ಲಿ ನಡೆದ ಫ್ರಾಂಚೈಸ್‌ ಬಿಡ್ಡಿಂಗ್‌ ವೇಳೆ ಅಹಮದಾಬಾದ್ ಮೂಲದ ಫ್ರಾಂಚೈಸಿಯನ್ನು ತೆಕ್ಕೆಗೆ ಹಾಕಿಕೊಳ್ಳುವ ಅವಕಾಶವನ್ನು ಕಳೆದುಕೊಂಡಿದ್ದ ಅದಾನಿ ಮತ್ತು ಟೊರೆಂಟ್, ಆಗಿನಿಂದಲೂ ಗುಜರಾತ್ ಟೈಟಾನ್ಸ್‌ ಫ್ರಾಂಚೈಸಿಯಲ್ಲಿ ಹೆಚ್ಚಿನ ಪಾಲನ್ನು ಖರೀದಿಸಲು ನಿರಂತರವಾಗಿ ಸ್ಪರ್ಧಿಸುತ್ತಿದೆ. ಇದೀಗ ದೊಡ್ಡ ಮಟ್ಟದ ಪಾಲನ್ನು ಪಡೆಯಲು ಮಾರುಕಟ್ಟೆ ದೈತ್ಯರು ಸಿದ್ಧತೆ ನಡೆಸುತ್ತಿದ್ದಾರೆ.‌

ಡಬ್ಲ್ಯುಪಿಎಲ್‌ನಲ್ಲಿಯೂ ಹೂಡಿಕೆ

ವ್ಯವಹಾರದದಲ್ಲಿ ಪಳಗಿತ ಉದ್ಯಮಿ ಗೌತಮ್ ಅದಾನಿ ಅವರು ಈಗಾಗಲೇ ಮಹಿಳಾ ಪ್ರೀಮಿಯರ್ ಲೀಗ್ (WPL) ಮತ್ತು UAE-brd ಇಂಟರ್ನ್ಯಾಷನಲ್ ಲೀಗ್ ಟಿ20ಯಲ್ಲಿ ತಂಡಗಳನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಕ್ರಿಕೆಟ್‌ನಲ್ಲಿ ಹೂಡಿಕೆ ಮಾಡಿದ್ದಾರೆ. 2023ರಲ್ಲಿ, ಅದಾನಿ ಅವರು ಡಬ್ಲ್ಯೂಪಿಎಲ್‌ನಲ್ಲಿ ಅಹಮದಾಬಾದ್ ಫ್ರಾಂಚೈಸಿಯನ್ನು 1,289 ಕೋಟಿ ಬಿಡ್ ಮಾಡಿ ಪಡೆದುಕೊಂಡಿತ್ತು.

“2021ರಲ್ಲಿ ಫ್ರಾಂಚೈಸಿಯನ್ನು ತೆಕ್ಕೆಗೆ ಹಾಕಿಕೊಳ್ಳುವ ಅವಕಾಶ ಕಳೆದುಕೊಂಡ ನಂತರ, ಅದಾನಿ ಗ್ರೂಪ್ ಮತ್ತು ಟೊರೆಂಟ್ ಎರಡೂ‌ ಸಂಸ್ಥೆಗಳು ಗುಜರಾತ್ ಟೈಟಾನ್ಸ್‌ನಲ್ಲಿ ಹೆಚ್ಚಿನ ಪಾಲನ್ನು ಖರೀದಿಸಲು ತೀವ್ರ ಸ್ಪರ್ಧೆಗಿಳಿದಿದೆ" ಎಂದು ವಿಷಯದ ಬಗ್ಗೆ ತಿಳಿದಿರುವ ಅಧಿಕಾರಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಮತ್ತೊಬ್ಬ ಅಧಿಕಾರಿ ಪ್ರಕಾರ, “ಐಪಿಎಲ್ ಫ್ರಾಂಚೈಸಿಗಳು ಸಾಕಷ್ಟು ಹೂಡಿಕೆದಾರರ ಗಮನ ಸೆಳೆಯುತ್ತಿವೆ. ಏಕೆಂದರೆ ಟೂರ್ನಿಯು ಭಾರಿ ಪ್ರಮಾಣದ ನಗದು ಹರಿವಿನೊಂದಿಗೆ ಆಕರ್ಷಕ ಆಸ್ತಿಯಾಗಿ ಸ್ಥಾಪಿಸಲ್ಪಟ್ಟಿದೆ,” ಎಂದು ಅವರು ಹೇಳಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ