ಹಾರ್ದಿಕ್ ಪಾಂಡ್ಯ- ನತಾಶಾ ವಿಚ್ಛೇದನ; ಮೊದಲ ಭೇಟಿಯಿಂದ ಹಿಡಿದು ಡಿವೋರ್ಸ್ವರೆಗೆ.. ಹೇಗಿತ್ತು ಈ ಜೋಡಿಯ ಟೈಮ್ಲೈನ್ ಜರ್ನಿ PHOTOS
- ಟೀಮ್ ಇಂಡಿಯಾ ಕ್ರಿಕೇಟರ್ ಹಾರ್ದಿಕ್ ಪಾಂಡ್ಯ ಮತ್ತು ಪತ್ನಿ ನತಾಶಾ ನಡುವಿನ ಮದುವೆಯ ಬಂಧ ಕಳಚಿ ಬಿದ್ದಿದೆ. ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿ, ಇದೀಗ ವಿಚ್ಛೇದನಕ್ಕೆ ಸಹಿ ಹಾಕುವ ಮೂಲಕ ಪರಸ್ಪರ ದೂರವಾಗಿದ್ದಾರೆ. ಇದೀಗ ಈ ವಿಚಾರವನ್ನು ಅಧಿಕೃತವಾಗಿ ಈ ಜೋಡಿ ಘೋಷಣೆ ಮಾಡಿದೆ. ಹಾಗಾದರೆ, ಈ ಜೋಡಿಯ ಪ್ರೀತಿಯಿಂದ ಹಿಡಿದು ಡಿವೋರ್ಸ್ ವರೆಗಿನ ಟೈಮ್ಲೈನ್ ಇಲ್ಲಿದೆ.
- ಟೀಮ್ ಇಂಡಿಯಾ ಕ್ರಿಕೇಟರ್ ಹಾರ್ದಿಕ್ ಪಾಂಡ್ಯ ಮತ್ತು ಪತ್ನಿ ನತಾಶಾ ನಡುವಿನ ಮದುವೆಯ ಬಂಧ ಕಳಚಿ ಬಿದ್ದಿದೆ. ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿ, ಇದೀಗ ವಿಚ್ಛೇದನಕ್ಕೆ ಸಹಿ ಹಾಕುವ ಮೂಲಕ ಪರಸ್ಪರ ದೂರವಾಗಿದ್ದಾರೆ. ಇದೀಗ ಈ ವಿಚಾರವನ್ನು ಅಧಿಕೃತವಾಗಿ ಈ ಜೋಡಿ ಘೋಷಣೆ ಮಾಡಿದೆ. ಹಾಗಾದರೆ, ಈ ಜೋಡಿಯ ಪ್ರೀತಿಯಿಂದ ಹಿಡಿದು ಡಿವೋರ್ಸ್ ವರೆಗಿನ ಟೈಮ್ಲೈನ್ ಇಲ್ಲಿದೆ.
(1 / 7)
ಹಾರ್ದಿಕ್ ಪಾಂಡ್ಯ- ನತಾಶಾ ಜೋಡಿ ಡಿವೋರ್ಸ್ ಪಡೆದು ದೂರವಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಅಧಿಕೃತ ಘೋಷಣೆಯೂ ಆಗಿದೆ. ಹೀಗಿದೆ ಈ ಜೋಡಿಯ ಪ್ರತಿಕ್ರಿಯೆ. "4 ವರ್ಷಗಳ ಕಾಲ ಒಟ್ಟಿಗೆ ಇದ್ದ ನಂತರ, ಹಾರ್ದಿಕ್ ಮತ್ತು ನಾನು ಪರಸ್ಪರ ಬೇರ್ಪಡಲು ನಿರ್ಧರಿಸಿದ್ದೇವೆ. ಇದೀಗ ನಮ್ಮಿಬ್ಬರ ಹಿತದೃಷ್ಟಿಯಿಂದ ಒಟ್ಟಿಗೆ ಬೇರೆಯಾಗುತ್ತಿದ್ದೇವೆ. ಈ ನಿರ್ಧಾರ ತೆಗೆದುಕೊಳ್ಳಲು ನಮಗೆ ಕಠಿಣವಾಗಿತ್ತು. ನಾವು ಅಗಸ್ತ್ಯನನ್ನು ಪಡೆದಿದ್ದೇವೆ. ಅವನು ನಮ್ಮಿಬ್ಬರ ಜೀವನದ ಕೇಂದ್ರಬಿಂದುವಾಗಿ ಮುಂದುವರಿಯಲಿದ್ದಾನೆ. ಅವನ ಸಂತೋಷಕ್ಕಾಗಿ ನಾವು ಸಾಧ್ಯವಿರುವ ಎಲ್ಲವನ್ನೂ ನೀಡುತ್ತೇವೆ ಎಂದಿದೆ ಈ ಜೋಡಿ.
(2 / 7)
ಟೀಮ್ ಇಂಡಿಯಾ ಸ್ಟಾರ್ ಆಟಗಾರ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಮೊದಲ ಬಾರಿಗೆ ಭೇಟಿಯಾಗಿದ್ದು 2018ರಲ್ಲಿ. ಮುಂಬೈನ ನೈಟ್ ಕ್ಲಬ್ನಲ್ಲಿ ಈ ಜೋಡಿ ಮುಖಾಮುಖಿಯಾಗಿತ್ತು. ಇಬ್ಬರ ಕಾಮನ್ ಫ್ರೆಂಡ್ವೊಬ್ಬರಿಂದ ಇವರಿಬ್ಬರೂ ಆಪ್ತರಾಗಿದ್ದರು. ಅದಾದ ಬಳಿಕ ಅದು ಲವ್ ಅಟ್ ಫಸ್ಟ್ ಸೈಟ್ ಆಗಿಯೂ ಬದಲಾಗಿತ್ತು.
(3 / 7)
ಕೋವಿಡ್ ಪ್ಯಾಂಡಮಿಕ್ ಎಂಟ್ರಿಗೂ ಮುನ್ನ ಅಂದರೆ 2020ರ ಜನವರಿಯಲ್ಲಿ ನತಾಶಾಗೆ ಯಾಚ್ ಹಡಗಿನಲ್ಲಿ ಪ್ರೇಮನಿವೇದನೆ ಮಾಡಿದ್ದರು ಪಾಂಡ್ಯ. ಮಂಡಿಯೂರಿ, ತುಟಿಗೆ ಚುಂಬಿಸಿ ಉಂಗುರ ಹಾಕುವ ಮೂಲಕ ಪ್ರಪೋಸ್ ಮಾಡಿದ್ದರು ಹಾರ್ದಿಕ್. ಇದಕ್ಕೆ ನತಾಶ ಕಡೆಯಿಂದಲೂ ಸಮ್ಮತಿ ಸಿಕ್ಕಿತ್ತು.
(4 / 7)
ಪ್ರೇಮನಿವೇದನೆ ಮೂಲಕ ಒಂದಾಗಿದ್ದ ಈ ಜೋಡಿ, ಅದೇ 2020ರ ಮೇ ತಿಂಗಳಲ್ಲಿ ಸಿಹಿ ಸುದ್ದಿ ನೀಡಿತ್ತು. ನತಾಶಾ ಗರ್ಭಿಣಿಯಾಗಿದ್ದರು. ಅದೇ ತಿಂಗಳು ಕೋರ್ಟ್ ಪ್ರಕಾರ ಸರಳವಾಗಿ ವಿವಾಹವಾದರು. ಜುಲೈ ವೇಳೆಗೆ ಮಗ ಅಗಸ್ತ್ಯನ ಆಗಮನವಾಯ್ತು.
(5 / 7)
ಕೋವಿಡ್ ಹಿನ್ನೆಲೆಯಲ್ಲಿ ಮಗನ ಜತೆಗೆ ಒಟ್ಟಿಗೆ ಕಾಲ ಕಳೆದರು. ಅದಾದ ಬಳಿಕ ಅಂದರೆ 2023ರಲ್ಲಿ ಉದಯ್ಪುರದಲ್ಲಿ ಅದ್ಧೂರಿ ವಿವಾಹ ನೆರವೇರಿತು. ಹಿಂದೂ ಸಂಪ್ರದಾಯದ ಜತೆಗೆ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾಯ್ತು. ಕ್ರಿಕೆಟ್ ಲೋಕದ ಸೆಲೆಬ್ರಿಟಿಗಳು ಮದುವೆಗೆ ಆಗಮಿಸಿದ್ದರು.
(6 / 7)
ಇದೇ ವರ್ಷದ ಮೇ ತಿಂಗಳಲ್ಲಿ Natasa Stankovic Pandya ಎಂಬ ಹೆಸರಿನಲ್ಲಿ ಕೊನೆಯ ಪಾಂಡ್ಯ ಸರ್ನೇಮ್ ಅಳಿಸಿ ಹಾಕಿದ್ದರು.
ಇತರ ಗ್ಯಾಲರಿಗಳು