logo
ಕನ್ನಡ ಸುದ್ದಿ  /  ಕ್ರಿಕೆಟ್  /  ಅಹಮದಾಬಾದ್‌ನಲ್ಲಿ ಗರಿಷ್ಠ 365, ಕನಿಷ್ಠ 85 ರನ್; ವಿಶ್ವಕಪ್‌ ಫೈನಲ್‌ ಆತಿಥ್ಯದ ನರೇಂದ್ರ ಮೋದಿ ಸ್ಟೇಡಿಯಂ ದಾಖಲೆಗಳಿವು

ಅಹಮದಾಬಾದ್‌ನಲ್ಲಿ ಗರಿಷ್ಠ 365, ಕನಿಷ್ಠ 85 ರನ್; ವಿಶ್ವಕಪ್‌ ಫೈನಲ್‌ ಆತಿಥ್ಯದ ನರೇಂದ್ರ ಮೋದಿ ಸ್ಟೇಡಿಯಂ ದಾಖಲೆಗಳಿವು

Raghavendra M Y HT Kannada

Nov 17, 2023 10:34 PM IST

google News

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ

  • ಭಾರತ-ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಆತಿಥ್ಯ ವಹಿಸಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈವರೆಗೆ ನಡೆದಿರುವ ಪಂದ್ಯಗಳು, ಗರಿಷ್ಠ, ಕನಿಷ್ಠ ರನ್ ಸರಾಸರಿ ರನ್ ಮಾಹಿತಿ ಇಲ್ಲಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ

ಅಹಮದಾಬಾದ್ (ಗುಜರಾತ್): ಐಸಿಸಿ ಏಕದಿನ ವಿಶ್ವಕಪ್‌ (ICC ODI World Cup 2023) ಉದ್ಘಾಟನಾ ಪಂದ್ಯಕ್ಕೆ ಸಾಕ್ಷಿಯಾಗಿದ್ದ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ (Narendra Modi Stadium) ಇದೀಗ ಫೈನಲ್ (World Cup Final) ಪಂದ್ಯಕ್ಕೂ ವೇದಿಕೆ ಕಲ್ಪಿಸಿದೆ.

ನವೆಂಬರ್ 19 (ಭಾನುವಾರ) ರಂದು ಭಾರತ ಮತ್ತು ಆಸ್ಟ್ರೇಲಿಯಾ (India vs Australia) 2023ರ ಚಾಂಪಿಯನ್ ಪಟ್ಟಗಾಗಿ ಸೆಣಸಾಡಲಿವೆ. ಜಗತ್ತಿನ ಅತಿ ದೊಡ್ಡ ಕ್ರೀಡಾಂಗಣದಲ್ಲಿ ಒಂದಾಗಿರುವ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಎಷ್ಟು ಪಂದ್ಯಗಳು ನಡೆದಿವೆ, ಗರಿಷ್ಠ, ಕನಿಷ್ಠ, ಸರಾಸರಿ ರನ್ ಸೇರಿ ಯಾವೆಲ್ಲಾ ದಾಖಲೆಗಳಿಗೆ ಸಾಕ್ಷಿಯಾಗಿದೆ ಎಂಬುದನ್ನು ಅಂಕಿ ಅಂಶಗಳ ಸಹಿತಿ ಇಲ್ಲಿದೆ.

1984ರಲ್ಲಿ ಮೊದಲ ಬಾರಿ ಏಕದಿನ ಪಂದ್ಯಕ್ಕೆ ಸಾಕ್ಷಿ

ಸ್ಟೇಡಿಯಂ ಅನ್ನು ಈ ಮೊದಲು ಗುಜರಾತ್ ಸ್ಟೇಡಿಯಂ ಮತ್ತು ಸರ್ದಾರ್ ಪಟೇಲ್ ಸ್ಟೇಡಿಯಂ ಎಂದು ಕರೆಯಲಾಗುತ್ತಿತ್ತು. 1982ರಲ್ಲಿ ಮೈದಾನ ಪೂರ್ಣಗೊಂಡು ಪಂದ್ಯಗಳಿಗೆ ಸಿದ್ಧವಾಗಿತ್ತು. 1984ರಲ್ಲಿ ಮೊದಲ ಬಾರಿಗೆ ಇಲ್ಲಿ ಏಕದಿನ ಪಂದ್ಯವನ್ನು ಆಯೋಜಿಸಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ 30 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳು ನಡೆದಿವೆ. ಇದರಲ್ಲಿ ಟಾಸ್ ಗೆದ್ದ ತಂಡಗಳು 17 ಬಾರಿ ಗೆಲುವು ಸಾಧಿಸಿವೆ.

ಪ್ರಧಾನಿ ನರೇಂದ್ರ ಮೋದಿ ಅವರ ಹೆಚ್ಚಿನ ಆಸಕ್ತಿ ವಹಿಸಿದ ಪರಿಣಾಮವಾಗಿ ಬಿಸಿಸಿಐ ಈ ಸ್ಟೇಡಿಯಂ ಅನ್ನು ಪುನರ್ ನಿರ್ಮಾಣ ಮಾಡಿದೆ. 1 ಲಕ್ಷಕ್ಕೂ ಅಧಿಕ ಆಸನಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಅತ್ಯಾಧುನಿಕ ಕ್ರೀಡಾ ಸೌಲಭ್ಯಗಳನ್ನು ಇಲ್ಲಿ ಒದಗಿಸಲಾಗಿದೆ.

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕನಿಷ್ಠ 85 ರನ್

ಈ ಮೈದಾನದಲ್ಲಿ ಗರಿಷ್ಠ 365 ರನ್‌ ಆಗಿದೆ. 2010ರಲ್ಲಿ ಭಾರತ ವಿರುದ್ಧ ದಕ್ಷಿಣ ಆಫ್ರಿಕಾ ಈ ಬಹೃತ್ ಮೊತ್ತವನ್ನು ಪೇರಿಸಿತ್ತು. ಇನ್ನ ಇದೇ ಮೈದಾನದಲ್ಲಿ 85 ರನ್ ಕನಿಷ್ಠ ಮೊತ್ತವಾಗಿದೆ. 2006ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಜಿಂಬಾಬ್ವೆ 85 ರನ್ ಗಳಿಸಿತ್ತು.

ಅಂತಾರಾಷ್ಟ್ರೀಯ 30 ಏಕದಿನ ಪಂದ್ಯಗಳನ್ನು ಇಲ್ಲಿ ನಡೆದಿದ್ದು, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದಾಗ 15 ತಂಡಗಳು ಗೆದ್ದಿವೆ. ಟಾಸ್ ಗೆದ್ದು ಚೇಸಿಂಗ್ ಮಾಡಿದ ತಂಡಗಳು ಇಲ್ಲಿ 15 ಬಾರಿ ಜಯ ಕಂಡಿವೆ. ಓವರ್‌ಗೆ ಸರಾಸರಿ 5.03 ರನ್ ಆಗಿದ್ದು, ಒಂದು ವಿಕೆಟ್‌ಗೆ ಸರಾಸರಿ 31.72 ರನ್ ಆಗಿದೆ. ಮೊದಲು ಬ್ಯಾಟಿಂಗ್ ಮಾಡಿದಾಗ ಸರಾಸರಿ ರನ್ 243 ಆಗಿದೆ.

2023ರ ವಿಶ್ವಕಪ್‌ಗೂ ಮುನ್ನ ಅಹಮದಾಬಾದ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಲಾ ಒಂದು ಬಾರಿ ಮುಖಾಮುಖಿಯಾಗಿದ್ದು, ಟೀಂ ಇಂಡಿಯಾಯೇ ಗೆಲುವು ಸಾಧಿಸಿದೆ. ಸದ್ಯ ಐಸಿಸಿ ಏಕದಿನ ವಿಶ್ವಕಪ್ ಫೈನಲ್‌ ಪಂದ್ಯಕ್ಕೆ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯ ವಹಿಸಿದ್ದ, ಟೀಂ ಇಂಡಿಯಾದ ಇಲ್ಲಿ ಅಬ್ಬರಿಸುವುದರಲ್ಲೇ ಅನುಮಾನವೇ ಇಲ್ಲ. ಭರ್ಜರಿ ಫಾರ್ಮ್‌ನಲ್ಲಿರುವ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ ಬ್ಯಾಟಿಂಗ್‌ನಲ್ಲಿ ಮಿಂಚಿದರೆ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್ ಹಾಗೂ ರವೀಂದ್ರ ಜಡೇಜಾ ಬೌಲಿಂಗ್ ವಿಭಾಗವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ