logo
ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತ-ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್ ದಿನ ಅಹಮದಾಬಾದ್‌ನಲ್ಲಿ ಅದ್ಧೂರಿ ಕಾರ್ಯಕ್ರಮ; ಏರ್ ಶೋಗೂ ಸಿದ್ಧತೆ

ಭಾರತ-ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್ ದಿನ ಅಹಮದಾಬಾದ್‌ನಲ್ಲಿ ಅದ್ಧೂರಿ ಕಾರ್ಯಕ್ರಮ; ಏರ್ ಶೋಗೂ ಸಿದ್ಧತೆ

Raghavendra M Y HT Kannada

Nov 16, 2023 11:17 PM IST

google News

ಭಾರತ-ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ಏರ್ ಶೋ ನಡೆಯಲಿದೆ

  • ನವೆಂಬರ್ 19 ರಂದು ಭಾರತ-ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ಅಹಮದಾಬಾದ್‌ನಲ್ಲಿ ಏರ್‌ ಶೋ ನಡೆಸಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. 

ಭಾರತ-ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ಏರ್ ಶೋ ನಡೆಯಲಿದೆ
ಭಾರತ-ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ಏರ್ ಶೋ ನಡೆಯಲಿದೆ

ಅಹಮದಾಬಾದ್ (ಗುಜರಾತ್): ಕೋಲ್ಕತ್ತದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ 2ನೇ ಸೆಮಿ ಫೈನಲ್ (ODI World Cup 2nd Semi Final) ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ (South Africa) ತಂಡವನ್ನು 3 ವಿಕೆಟ್‌ಗಳಿಂದ ಸೋಲಿಸಿದ ಆಸ್ಟ್ರೇಲಿಯಾ (Australia) ಎರಡನೇ ತಂಡವಾಗಿ ಫೈನಲ್ (World Cup Final) ಪ್ರವೇಶಿಸಿದೆ. ನವೆಂಬರ್ 19 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ (India vs Australia) ತಂಡಗಳು ವಿಶ್ವಕಪ್‌ಗಾಗಿ ಕಾದಾಟ ನಡೆಸಲಿವೆ.

ಏಕದಿನ ವಿಶ್ವಕಪ್ ಫೈನಲ್ ಪಂದ್ಯ ಆರಂಭಕ್ಕೂ ಮುನ್ನ ಅದ್ಧೂರಿ ಕಾರ್ಯಕ್ರಮ ಆಯೋಜಿಸಲಾಗಿದೆ. ಸ್ಟಾರ್ ಕಲಾವಿದರಿಂದ ಸಂಗೀತ, ನೃತ್ಯ ಸೇರಿದಂತೆ ಹಲವು ಮನರಂಜ ಕಾರ್ಯಕ್ರಮಗಳು ನಡೆಯಲಿವೆ. ಇದಕ್ಕೂ ಮುನ್ನ ಅಹಮದಾಬಾದ್‌ನಲ್ಲಿ ಏರ್ ಶೋ ಕೂಡ ನಡೆಯಲಿದೆ ಎಂದು ವರದಿಯಾಗಿದೆ. ಭಾರತೀಯ ವಾಯು ಪಡೆ ಬಾನಾಂಗಳದಲ್ಲಿ ತನ್ನ ಶಕ್ತಿ ಪ್ರದರ್ಶನವನ್ನು ತೋರಿಸಲಿದೆ.

ಏರ್ ಶೋ ಕುರಿತು ಐಎಎಫ್‌ ಗುಜರಾತ್ ಪಿಆರ್‌ಒ ಘೋಷಣೆ

ರಕ್ಷಣಾ ಇಲಾಖೆಯ ಗುಜರಾತ್ ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ (ಪಿಆರ್‌ಒ) ವಿಶ್ವಕಪ್ ಫೈನಲ್ ವೇಳೆ ಏರ್ ಶೋ ನಡೆಸುವುದಾಗಿ ಪ್ರಕಟಿಸಿದ್ದಾರೆ. ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡವು 10 ನಿಮಿಷಗಳ ಕಾಲ ಬಾನಾಂಗಳದಲ್ಲಿ ಜನರನ್ನು ಆಕರ್ಷಿಸಲಿದೆ ಎಂದು ಪಿಆರ್‌ಒ ಮೂಲಗಳು ಸ್ಪಷ್ಟಪಡಿಸಿವೆ.

ಶುಕ್ರವಾರ (ನವೆಂಬರ್ 17) ಮತ್ತು ಶನಿವಾರ (ನವೆಂಬರ್ 18) ಏರ್‌ ಶೋಗಾಗಿ ಸೂರ್ ಕಿರಣ್ ತಂಡ ಅಭ್ಯಾಸವನ್ನೂ ಕೂಡ ಮಾಡಲಿದೆ. ಭಾರತೀಯ ವಾಯು ಸೇನೆ (ಐಎಎಫ್‌)ಯ ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡವು ಸಾಮಾನ್ಯವಾಗಿ 9 ವಿಮಾನಗಳನ್ನು ಒಳಗೊಂಡಿರುತ್ತದೆ. ಇದು ಈವರೆಗೆ ದೇಶಾದ್ಯಂತ ಹಲವು ಭಾಗಗಳಲ್ಲಿ ಪ್ರದರ್ಶನಗಳನ್ನು ನೀಡಿದೆ. ವಿಜಯ ರಚನೆ, ಬ್ಯಾರೆಲ್ ರೋಲ್ ಸ್ಕಿಲ್, ಆಕಾದಲ್ಲಿ ವಿವಿಧ ಆಕಾರಗಳ ರಚನೆಯನ್ನು ಮಾಡುವ ಮೂಲಕ ಐಎಫ್‌ನಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡಿದೆ.

ನ್ಯೂಜಿಲೆಂಡ್ ಮಣಿಸಿ ಏಕದಿನ ವಿಶ್ವಕಪ್ ಫೈನಲ್‌ ಪ್ರವೇಶಿಸಿದ ಟೀಂ ಇಂಡಿಯಾ

ಮುಂಬೈನಲ್ಲಿ ನಡೆದಿದ್ದ ವಿಶ್ವಕಪ್ ಸೆಮಿಫೈನಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ 70 ರನ್‌ಗಳ ರೋಚಕ ಗೆಲುವು ಸಾಧಿಸಿ ಮೊದಲ ತಂಡವಾಗಿ ಫೈನಲ್ ಪ್ರವೇಶಿಸಿತ್ತು. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದಿದ್ದ ನ್ಯೂಜಿಲೆಂಡ್ ವಿರುದ್ಧದ ವಿಶ್ವಕಪ್ ಸೆಮಿ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ನಿಗದಿತ 50 ಓವರ್‌ಗಳಲ್ಲಿ 4 ವಿಕೆಷ್ಟಕ್ಕೆ ನಷ್ಟಕ್ಕೆ 397 ರನ್ ಬಾರಿಸಿತ್ತು.

ರೋಹಿತ್ ಶರ್ಮಾ 47, ಶುಭ್ಮನ್ ಗಿಲ್ ಔಟಾಗದೆ 80, ವಿರಾಟ್ ಕೊಹ್ಲಿ 117, ಶ್ರೇಯಸ್ ಅಯ್ಯರ್ 105, ಕೆಎಲ್ ರಾಹುಲ್ 39 ರನ್ ಬಾರಿಸಿದ್ದರು. 398 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ್ದ ನ್ಯೂಜಿಲೆಂಡ್ ಪಡೆ ಡೇರಿಲ್ ಮಿಚೆಲ್ ಅವರ (134) ಆಕರ್ಷಕ ಶತಕದ ಹೊರತಾಗಿ 48.5 ಓವರ್‌ಗಳಲ್ಲಿ 327 ರನ್ ಗಳಿಗೆ ಸರ್ವ ಪತನ ಕಂಡಿತು. ಟೀಂ ಇಂಡಿಯಾ ಪರ ಮೊಹಮ್ಮದ್ ಶಮಿ 7 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ