logo
ಕನ್ನಡ ಸುದ್ದಿ  /  ಕ್ರಿಕೆಟ್  /  Ind Vs Ban 2nd Test: 5ನೇ ದಿನದಾಟದಲ್ಲಿ ಭಾರತ ತಂಡವನ್ನು ಸೋಲಿಸಲು ಬಾಂಗ್ಲಾ ಮಾಡಿರುವ ಮೆಗಾ ಪ್ಲಾನ್ ರಿವೀಲ್

IND vs BAN 2nd Test: 5ನೇ ದಿನದಾಟದಲ್ಲಿ ಭಾರತ ತಂಡವನ್ನು ಸೋಲಿಸಲು ಬಾಂಗ್ಲಾ ಮಾಡಿರುವ ಮೆಗಾ ಪ್ಲಾನ್ ರಿವೀಲ್

Prasanna Kumar P N HT Kannada

Oct 01, 2024 08:53 AM IST

google News

5ನೇ ದಿನದಾಟದಲ್ಲಿ ಭಾರತ ತಂಡವನ್ನು ಸೋಲಿಸಲು ಬಾಂಗ್ಲಾ ಮಾಡಿರುವ ಮೆಗಾ ಪ್ಲಾನ್ ರಿವೀಲ್

    • Bangladesh Cricket Team: ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ನ ಐದನೇ ಹಾಗೂ ಅಂತಿಮ ದಿನದಂದು ಭಾರತವು ಮೇಲುಗೈ ಸಾಧಿಸಲಿದೆ ಎಂದು ಪರಿಗಣಿಸಲಾಗಿದೆ. ಆದರೆ, ಬಾಂಗ್ಲಾದೇಶ ಟೀಮ್ ಇಂಡಿಯಾವನ್ನು ಕಟ್ಟಿ ಹಾಕಲು ಮಾಸ್ಟರ್ ಪ್ಲಾನ್ ರೂಪಿಸಿದೆ.
5ನೇ ದಿನದಾಟದಲ್ಲಿ ಭಾರತ ತಂಡವನ್ನು ಸೋಲಿಸಲು ಬಾಂಗ್ಲಾ ಮಾಡಿರುವ ಮೆಗಾ ಪ್ಲಾನ್ ರಿವೀಲ್
5ನೇ ದಿನದಾಟದಲ್ಲಿ ಭಾರತ ತಂಡವನ್ನು ಸೋಲಿಸಲು ಬಾಂಗ್ಲಾ ಮಾಡಿರುವ ಮೆಗಾ ಪ್ಲಾನ್ ರಿವೀಲ್

ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಕಾನ್ಪುರದಲ್ಲಿ ನಡೆಯುತ್ತಿದೆ. ಎರಡನೇ ಮತ್ತು ಮೂರನೇ ದಿನ ಮಳೆ ಅಡ್ಡಿ ಪಡಿಸಿದ ಕಾರಣ ಪಂದ್ಯ ಸರಾಗವಾಗಿ ನಡೆಸಲು ಸಾಧ್ಯವಾಗಲಿಲ್ಲ. ಇದೀಗ ನಾಲ್ಕನೇ ದಿನದಾಟದ ಅಂತ್ಯಕ್ಕೆ ಬಾಂಗ್ಲಾದೇಶದ ಸ್ಕೋರ್ ಎರಡನೇ ಇನಿಂಗ್ಸ್‌ನಲ್ಲಿ 2 ವಿಕೆಟ್‌ಗೆ 26 ರನ್ ಆಗಿದೆ. ಈ ಮೂಲಕ ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್ ಆಧಾರದಲ್ಲಿ ಟೀಮ್ ಇಂಡಿಯಾಕ್ಕಿಂತ 26 ರನ್​ಗಳ ಹಿಂದಿದೆ.

ಟೆಸ್ಟ್‌ನ ಐದನೇ ಹಾಗೂ ಅಂತಿಮ ದಿನದಂದು ಭಾರತವು ಮೇಲುಗೈ ಸಾಧಿಸಲಿದೆ ಎಂದು ಪರಿಗಣಿಸಲಾಗಿದೆ. ಆದರೆ, ಬಾಂಗ್ಲಾದೇಶ ಟೀಮ್ ಇಂಡಿಯಾವನ್ನು ಕಟ್ಟಿ ಹಾಕಲು ಮಾಸ್ಟರ್ ಪ್ಲಾನ್ ರೂಪಿಸಿದೆ. ಪಂದ್ಯ ಡ್ರಾ ಆಗುವ ಸಾಧ್ಯತೆಗಳಿದ್ದರೂ ಬಾಂಗ್ಲಾದೇಶ ಗೆಲುವಿನ ನಿರೀಕ್ಷೆಯಲ್ಲಿದೆ. ನಾಲ್ಕನೇ ದಿನದಾಟದ ಅಂತ್ಯದ ನಂತರ ಬಾಂಗ್ಲಾದೇಶದ ಆಲ್ ರೌಂಡರ್ ಮೆಹೆಂದಿ ಹಸನ್ ಮಿರಾಜ್ ಸುದ್ದಿಗೋಷ್ಠಿಯಲ್ಲಿ ಮಾತನಾಡುವ ಐದನೇ ದಿನಕ್ಕೆ ತಮ್ಮ ತಯಾರಿ ಏನು ಎಂಬುದನ್ನು ರಿವೀಲ್ ಮಾಡಿದ್ದಾರೆ.

ನಮ್ಮ ಬ್ಯಾಟ್ಸ್‌ಮನ್‌ಗಳಿಗೆ ಇದು ಸುಲಭವಲ್ಲ

ನಾವು ಈ ರೀತಿ ಟೆಸ್ಟ್ ಪಂದ್ಯಗಳನ್ನು ಅನೇಕ ಬಾರಿ ಆಡಿದ್ದೇವೆ, ಈ ರೀತಿಯ ಸಂದರ್ಭವನ್ನು ಎದುರಿಸಿದ್ದೇವೆ ಎಂದು ಮೆಹದಿ ಹಸನ್ ಮಿರಾಜ್ ಹೇಳಿದ್ದಾರೆ. ಇಲ್ಲಿಂದ ಪಂದ್ಯವನ್ನು ಸುಮ್ಮನೆ ಸೋಲುತ್ತೇವೆ ಎಂದಲ್ಲ, ಇಂತಹ ಸ್ಥಿತಿಗಳಿಂದಲೇ ಹಲವು ಟೆಸ್ಟ್ ಪಂದ್ಯಗಳನ್ನು ಗೆದ್ದಿದ್ದೇವೆ. ಇಲ್ಲಿಯವರೆಗೆ ಈ ವಿಕೆಟ್ ಬ್ಯಾಟಿಂಗ್‌ಗೆ ಉತ್ತಮವಾಗಿದೆ. ನಮ್ಮ ಬ್ಯಾಟ್ಸ್‌ಮನ್‌ಗಳಿಗೆ ಇದು ಸುಲಭವಲ್ಲ ಎಂದು ನಾನು ಭಾವಿಸುತ್ತೇನೆ.ಆದರೆ ನಾವು ಮೊದಲ ಸೆಷನ್‌ನಲ್ಲಿ ಉತ್ತಮವಾಗಿ ಬ್ಯಾಟ್ ಮಾಡಿದರೆ ಅದು ನಮಗೆ ಧನಾತ್ಮಕವಾಗಿರುತ್ತದೆ. ನಾವು ಗೆಲುವಿನ ನಿರೀಕ್ಷೆಯಲ್ಲಿದ್ದರೆ ಇದಕ್ಕೆ ಸ್ವಲ್ಪ ಸಮಯ ಬೇಕು ಎಂದು ನಾನು ಭಾವಿಸುತ್ತೇನೆ. ಟೆಸ್ಟ್ ಗೆಲ್ಲುವ ಅವಕಾಶ ಖಂಡಿತಾ ಇದೆ. ಆ ಅವಕಾಶ ಸಿಕ್ಕಿರೆ ಬಿಡುವುದಿಲ್ಲ ಎಂದು ಹೇಳಿದ್ದಾರೆ.

ನಾವು ಖಂಡಿತವಾಗಿಯೂ ಗೆಲುವಿನತ್ತ ಸಾಗುತ್ತೇವೆ

ಕಾನ್ಪುರ ಟೆಸ್ಟ್​ನಲ್ಲಿ ಇಂದು ಐದನೇ ದಿನದಾಟ ನಡೆಯಲಿದ್ದು, ಭಾರತ ತಂಡಕ್ಕೆ ನಾವು ಮೊದಲು ಟಾರ್ಗೆಟ್ ನೀಡಬೇಕು, ಅದರ ನಂತರ 10 ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಬೇಕು. ಆದರೆ ಈ ಸಮಯದಲ್ಲಿ ನಾವು ಟೆಸ್ಟ್ ಗೆಲ್ಲುವುದಕ್ಕಿಂತ ನಮ್ಮ ವಿಕೆಟ್ ಉಳಿಸುವ ಬಗ್ಗೆ ಹೆಚ್ಚು ಯೋಚಿಸುತ್ತೇವೆ ಎಂದು ಮೆಹೆಂದಿ ಹಸನ್ ಮಿರಾಜ್ ಹೇಳುತ್ತಾರೆ. ಐದನೇ ದಿನ ಎಷ್ಟು ಸಾಧ್ಯವೋ ಅಷ್ಟು ಹೊತ್ತು ಬ್ಯಾಟಿಂಗ್ ಮಾಡುವುದೇ ನಮ್ಮ ಪ್ರಯತ್ನ. ಇದಾದ ನಂತರ ಅಂತಹ ಪರಿಸ್ಥಿತಿ ಬಂದರೆ ಖಂಡಿತಾ ಗೆಲುವಿನತ್ತ ಸಾಗುತ್ತೇವೆ, ಆದರೆ ಮೊದಲು ನಮ್ಮ ಬಗ್ಗೆಯೇ ಯೋಚಿಸುತ್ತೇವೆ. ಈ ಸಮಯದಲ್ಲಿ ನಮ್ಮ ಗಮನವು ಪಂದ್ಯವು ಉಳಿಸುವುದರ ಮೇಲೆ ಕೇಂದ್ರೀಕೃತವಾಗಿದೆ ಎಂದು ತಂಡದ ಗೇಮ್ ಪ್ಲಾನ್ ಬಹಿರಂಗ ಪಡಿಸಿದ್ದಾರೆ.

ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್‌ನಲ್ಲಿ 233 ರನ್‌ಗಳಿಗೆ ಆಲೌಟ್ ಆಗಿತ್ತು, ಮೊಮಿನುಲ್ ಹಕ್ ಶತಕ ಮತ್ತು ಜಸ್ಪ್ರೀತ್ ಬುಮ್ರಾ ನಾಲ್ಕು ವಿಕೆಟ್ ಪಡೆದರು. ಪ್ರತ್ಯುತ್ತರವಾಗಿ, ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಅವರ ಅರ್ಧಶತಕಗಳ ನೆರವಿನಿಂದ ಭಾರತವು 9 ವಿಕೆಟ್ ಕಳೆದುಕೊಂಡು 289 ರನ್ ಗಳಿಸಿದಾಗ ಡಿಕ್ಲೇರ್ ಘೋಷಿಸಿತು. ಈ ಸಂದರ್ಭ ಭಾರತ 50, 100, 150, 200 ಮತ್ತು 250 ರನ್ ಅನ್ನು ಅತ್ಯಂತ ವೇಗವಾಗಿ ಗಳಿಸಿದ ತಂಡವಾಯಿತು. ಮತ್ತೊಂದೆಡೆ, ಬಾಂಗ್ಲಾದೇಶ ಎರಡನೇ ಇನ್ನಿಂಗ್ಸ್‌ನಲ್ಲಿ 2 ವಿಕೆಟ್ ನಷ್ಟಕ್ಕೆ 26 ರನ್ ಗಳಿಸಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ