ಅತಿ ವೇಗದ ಅರ್ಧಶತಕ, ಅತಿ ವೇಗದ ಶತಕ; ಒಂದೇ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ಅಬ್ಬರಕ್ಕೆ 2 ವಿಶ್ವದಾಖಲೆಗಳು ಉಡೀಸ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅತಿ ವೇಗದ ಅರ್ಧಶತಕ, ಅತಿ ವೇಗದ ಶತಕ; ಒಂದೇ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ಅಬ್ಬರಕ್ಕೆ 2 ವಿಶ್ವದಾಖಲೆಗಳು ಉಡೀಸ್

ಅತಿ ವೇಗದ ಅರ್ಧಶತಕ, ಅತಿ ವೇಗದ ಶತಕ; ಒಂದೇ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ಅಬ್ಬರಕ್ಕೆ 2 ವಿಶ್ವದಾಖಲೆಗಳು ಉಡೀಸ್

  • ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಂದು ಮಿಂಚಿನ ವೇಗದಲ್ಲಿ ಬ್ಯಾಟಿಂಗ್ ಮಾಡುವ ಮೂಲಕ ಭಾರತ ತಂಡವು ಟೆಸ್ಟ್ ಕ್ರಿಕೆಟ್ ನಲ್ಲಿ ವೇಗವಾಗಿ ಐವತ್ತು ಮತ್ತು ವೇಗವಾಗಿ ನೂರು ರನ್ ಗಳಿಸಿದ ತಂಡ ಎಂಬ ದಾಖಲೆಯನ್ನು ನಿರ್ಮಿಸಿದೆ.

ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್​​ನಲ್ಲಿ ಭಾರತದ ಬ್ಯಾಟ್ಸ್​​ಮನ್​​ಗಳು ಅಬ್ಬರಿಸಿ ಬೊಬ್ಬರಿದಿದ್ದಾರೆ. ಟೆಸ್ಟ್​​ ಕ್ರಿಕೆಟ್​ನಲ್ಲಿ ಟಿ20 ಶೈಲಿಯಲ್ಲಿ ಬ್ಯಾಟಿಂಗ್ ನಡೆಸಿದ ಕಾರಣ ಭಾರತ ತಂಡವು ಪ್ರಮುಖ ಎರಡು ವಿಶ್ವದಾಖಲೆ ನಿರ್ಮಿಸಿತು, ಒಂದು ವೇಗದ ಅರ್ಧಶತಕ, ಮತ್ತೊಂದು ವೇಗದ ಶತಕ.
icon

(1 / 5)

ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್​​ನಲ್ಲಿ ಭಾರತದ ಬ್ಯಾಟ್ಸ್​​ಮನ್​​ಗಳು ಅಬ್ಬರಿಸಿ ಬೊಬ್ಬರಿದಿದ್ದಾರೆ. ಟೆಸ್ಟ್​​ ಕ್ರಿಕೆಟ್​ನಲ್ಲಿ ಟಿ20 ಶೈಲಿಯಲ್ಲಿ ಬ್ಯಾಟಿಂಗ್ ನಡೆಸಿದ ಕಾರಣ ಭಾರತ ತಂಡವು ಪ್ರಮುಖ ಎರಡು ವಿಶ್ವದಾಖಲೆ ನಿರ್ಮಿಸಿತು, ಒಂದು ವೇಗದ ಅರ್ಧಶತಕ, ಮತ್ತೊಂದು ವೇಗದ ಶತಕ.(PTI)

ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಂದು ನಡೆದಿದ್ದು ಕಡಿಮೆ ಓವರ್​​ಗಳು. ಮಳೆಯ ಕಾರಣ ಪಂದ್ಯ ಎರಡು ದಿನಗಳಿಂದ ಸ್ಥಗಿತಗೊಂಡಿತ್ತು. 4ನೇ ದಿನದಾಟದಂದು ಬಿಡುವು ಕೊಟ್ಟ ಮಳೆ, ಭಾರತ ತಂಡ ಟಿ20 ಶೈಲಿಯಲ್ಲಿ ಬ್ಯಾಟಿಂಗ್ ನಡೆಸಿ ಗಮನ ಸೆಳೆಯಿತು. ಹೇಗಾದರೂ ಫಲಿತಾಂಶ ಪಡೆಯಬೇಕು ಎಂಬ ನಿಟ್ಟಿನಲ್ಲಿ ವೇಗವಾಗಿ ಬ್ಯಾಟಿಂಗ್ ನಡೆಸಿತು. ಬ್ಯಾಟರ್​ಗಳು ಬೌಂಡರಿ-ಸಿಕ್ಸರ್​ಗಳ ಸುರಿಮಳೆಗೈದರು.
icon

(2 / 5)

ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಂದು ನಡೆದಿದ್ದು ಕಡಿಮೆ ಓವರ್​​ಗಳು. ಮಳೆಯ ಕಾರಣ ಪಂದ್ಯ ಎರಡು ದಿನಗಳಿಂದ ಸ್ಥಗಿತಗೊಂಡಿತ್ತು. 4ನೇ ದಿನದಾಟದಂದು ಬಿಡುವು ಕೊಟ್ಟ ಮಳೆ, ಭಾರತ ತಂಡ ಟಿ20 ಶೈಲಿಯಲ್ಲಿ ಬ್ಯಾಟಿಂಗ್ ನಡೆಸಿ ಗಮನ ಸೆಳೆಯಿತು. ಹೇಗಾದರೂ ಫಲಿತಾಂಶ ಪಡೆಯಬೇಕು ಎಂಬ ನಿಟ್ಟಿನಲ್ಲಿ ವೇಗವಾಗಿ ಬ್ಯಾಟಿಂಗ್ ನಡೆಸಿತು. ಬ್ಯಾಟರ್​ಗಳು ಬೌಂಡರಿ-ಸಿಕ್ಸರ್​ಗಳ ಸುರಿಮಳೆಗೈದರು.(AP)

ಬಾಂಗ್ಲಾದೇಶದ 233 ರನ್​ಗಳಿಗೆ ಪ್ರತಿಯಾಗಿ ಬ್ಯಾಟಿಂಗ್ ನಡೆಸಿದ ಭಾರತ, ಕೇವಲ 18 ಎಸೆತಗಳಲ್ಲೇ 50 ರನ್ ಗಳಿಸಿ ವಿಶ್ವದಾಖಲೆ ಬರೆಯಿತು. ಟೆಸ್ಟ್​ ಕ್ರಿಕೆಟ್ ಇತಿಹಾಸದಲ್ಲಿ ಅತಿ ವೇಗವಾಗಿ 50 ರನ್ ಗಳಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಇದರೊಂದಿಗೆ ಇಂಗ್ಲೆಂಡ್ ದಾಖಲೆಯನ್ನು ಪುಡಿಗಟ್ಟಿತು. ಆಂಗ್ಲರು 27 ಎಸೆತಗಳಲ್ಲಿ ಈ ದಾಖಲೆ ನಿರ್ಮಿಸಿದ್ದರು.
icon

(3 / 5)

ಬಾಂಗ್ಲಾದೇಶದ 233 ರನ್​ಗಳಿಗೆ ಪ್ರತಿಯಾಗಿ ಬ್ಯಾಟಿಂಗ್ ನಡೆಸಿದ ಭಾರತ, ಕೇವಲ 18 ಎಸೆತಗಳಲ್ಲೇ 50 ರನ್ ಗಳಿಸಿ ವಿಶ್ವದಾಖಲೆ ಬರೆಯಿತು. ಟೆಸ್ಟ್​ ಕ್ರಿಕೆಟ್ ಇತಿಹಾಸದಲ್ಲಿ ಅತಿ ವೇಗವಾಗಿ 50 ರನ್ ಗಳಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಇದರೊಂದಿಗೆ ಇಂಗ್ಲೆಂಡ್ ದಾಖಲೆಯನ್ನು ಪುಡಿಗಟ್ಟಿತು. ಆಂಗ್ಲರು 27 ಎಸೆತಗಳಲ್ಲಿ ಈ ದಾಖಲೆ ನಿರ್ಮಿಸಿದ್ದರು.(AP)

ಅರ್ಧಶತಕ ಮಾತ್ರವಲ್ಲ, ಶತಕದ ವಿಚಾರದಲ್ಲೂ ವರ್ಲ್ಡ್​ ರೆಕಾರ್ಡ್ ಸೃಷ್ಟಿಸಿತು. ವೇಗವಾಗಿ 100 ರನ್ ಬಾರಿಸಿದ ವಿಶ್ವದ ಮೊದಲ ತಂಡ ಎಂಬ ದಾಖಲೆಗೂ ಪಾತ್ರವಾಯಿತು. ತಂಡದ ಸ್ಕೋರ್ ಕೇವಲ 10.1 ಓವರ್​ಗಳಲ್ಲಿ 100ರ ಗಡಿ ದಾಟಿತು. ಆ ಮೂಲಕ ತನ್ನದೇ ದಾಖಲೆಯನ್ನು ಮುರಿಯಿತು, ಭಾರತ ತಂಡವು ಈ ಹಿಂದೆ 12.2 ಓವರ್​​ಗಳಲ್ಲಿ 100 ರನ್ ಗಳಿಸಿ ದಾಖಲೆ ಬರೆದಿತ್ತು.
icon

(4 / 5)

ಅರ್ಧಶತಕ ಮಾತ್ರವಲ್ಲ, ಶತಕದ ವಿಚಾರದಲ್ಲೂ ವರ್ಲ್ಡ್​ ರೆಕಾರ್ಡ್ ಸೃಷ್ಟಿಸಿತು. ವೇಗವಾಗಿ 100 ರನ್ ಬಾರಿಸಿದ ವಿಶ್ವದ ಮೊದಲ ತಂಡ ಎಂಬ ದಾಖಲೆಗೂ ಪಾತ್ರವಾಯಿತು. ತಂಡದ ಸ್ಕೋರ್ ಕೇವಲ 10.1 ಓವರ್​ಗಳಲ್ಲಿ 100ರ ಗಡಿ ದಾಟಿತು. ಆ ಮೂಲಕ ತನ್ನದೇ ದಾಖಲೆಯನ್ನು ಮುರಿಯಿತು, ಭಾರತ ತಂಡವು ಈ ಹಿಂದೆ 12.2 ಓವರ್​​ಗಳಲ್ಲಿ 100 ರನ್ ಗಳಿಸಿ ದಾಖಲೆ ಬರೆದಿತ್ತು.(PTI)

ಭಾರತ ಮತ್ತು ಬಾನ್ ನಡುವಿನ 2ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಬಾಂಗ್ಲಾದೇಶದ ಬ್ಯಾಟರ್ ಮೊಮಿನುಲ್ ಹಕ್ ಶತಕದ ನೆರವಿನಿಂದ ಭಾರತ 233 ರನ್​​ಗಳಿಗೆ ಆಲೌಟ್ ಆಗಿದೆ. ಬುಮ್ರಾ 3, ಸಿರಾಜ್, ಅಶ್ವಿನ್ ಮತ್ತು ಆಕಾಶ್ ದೀಪ್ ತಲಾ 2, ಜಡೇಜಾ 1 ವಿಕೆಟ್ ಪಡೆದರು. ಜಡ್ಡು ಒಂದು ವಿಕೆಟ್​ ಪಡೆದು ಟೆಸ್ಟ್​​ನಲ್ಲಿ ತನ್ನ ವಿಕೆಟ್​ಗಳ ಸಂಖ್ಯೆಯನ್ನು 300ಕ್ಕೆ ಏರಿಸಿದರು,.
icon

(5 / 5)

ಭಾರತ ಮತ್ತು ಬಾನ್ ನಡುವಿನ 2ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಬಾಂಗ್ಲಾದೇಶದ ಬ್ಯಾಟರ್ ಮೊಮಿನುಲ್ ಹಕ್ ಶತಕದ ನೆರವಿನಿಂದ ಭಾರತ 233 ರನ್​​ಗಳಿಗೆ ಆಲೌಟ್ ಆಗಿದೆ. ಬುಮ್ರಾ 3, ಸಿರಾಜ್, ಅಶ್ವಿನ್ ಮತ್ತು ಆಕಾಶ್ ದೀಪ್ ತಲಾ 2, ಜಡೇಜಾ 1 ವಿಕೆಟ್ ಪಡೆದರು. ಜಡ್ಡು ಒಂದು ವಿಕೆಟ್​ ಪಡೆದು ಟೆಸ್ಟ್​​ನಲ್ಲಿ ತನ್ನ ವಿಕೆಟ್​ಗಳ ಸಂಖ್ಯೆಯನ್ನು 300ಕ್ಕೆ ಏರಿಸಿದರು,.(AP)


ಇತರ ಗ್ಯಾಲರಿಗಳು