logo
ಕನ್ನಡ ಸುದ್ದಿ  /  ಕ್ರಿಕೆಟ್  /  ಗಿಲ್ ಜತೆಗೆ ಜಡೇಜಾ, ಸಿರಾಜ್ ಔಟ್, ಮೂವರು ಇನ್; ಬಾಕ್ಸಿಂಗ್ ಡೇ ಟೆಸ್ಟ್​ಗೆ ಭಾರತದ ಸಂಭಾವ್ಯ ಪ್ಲೇಯಿಂಗ್ 11

ಗಿಲ್ ಜತೆಗೆ ಜಡೇಜಾ, ಸಿರಾಜ್ ಔಟ್, ಮೂವರು ಇನ್; ಬಾಕ್ಸಿಂಗ್ ಡೇ ಟೆಸ್ಟ್​ಗೆ ಭಾರತದ ಸಂಭಾವ್ಯ ಪ್ಲೇಯಿಂಗ್ 11

Prasanna Kumar P N HT Kannada

Dec 21, 2024 12:04 PM IST

google News

ಗಿಲ್ ಜತೆಗೆ ಜಡೇಜಾ, ಸಿರಾಜ್ ಔಟ್, ಮೂವರು ಇನ್; ಬಾಕ್ಸಿಂಗ್ ಡೇ ಟೆಸ್ಟ್​ಗೆ ಭಾರತದ ಸಂಭಾವ್ಯ ಪ್ಲೇಯಿಂಗ್ 11

    • India vs Australia 4th Test: ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿರುವ ಟೀಮ್ ಇಂಡಿಯಾ ಯಾವ ಪ್ಲೇಯಿಂಗ್ 11ನೊಂದಿಗೆ ಕಣಕ್ಕಿಳಿಯಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ. ಆದರೂ ಮೂವರು ಬದಲಾವಣೆಯಾಗಲಿದೆ ಎಂದು ವರದಿಯಾಗಿದೆ.
ಗಿಲ್ ಜತೆಗೆ ಜಡೇಜಾ, ಸಿರಾಜ್ ಔಟ್, ಮೂವರು ಇನ್; ಬಾಕ್ಸಿಂಗ್ ಡೇ ಟೆಸ್ಟ್​ಗೆ ಭಾರತದ ಸಂಭಾವ್ಯ ಪ್ಲೇಯಿಂಗ್ 11
ಗಿಲ್ ಜತೆಗೆ ಜಡೇಜಾ, ಸಿರಾಜ್ ಔಟ್, ಮೂವರು ಇನ್; ಬಾಕ್ಸಿಂಗ್ ಡೇ ಟೆಸ್ಟ್​ಗೆ ಭಾರತದ ಸಂಭಾವ್ಯ ಪ್ಲೇಯಿಂಗ್ 11

IND vs AUS 4th Test Probable Playing 11: ಭಾರತ-ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿ ರೋಚಕತೆ ಪಡೆದುಕೊಂಡಿದೆ. ಮೂರು ಪಂದ್ಯಗಳ ನಂತರ 1-1 ಸಮಬಲಗೊಂಡಿದೆ. ಇದೀಗ ನಾಲ್ಕನೇ ಟೆಸ್ಟ್​ ಪಂದ್ಯ ಡಿಸೆಂಬರ್ 26 ರಿಂದ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಉಭಯ ತಂಡಗಳಿಗೂ ಸರಣಿ ಗೆಲ್ಲಲು ಈ ಬಾಕ್ಸಿಂಗ್ ಡೇ ಟೆಸ್ಟ್ ಅತ್ಯಂತ ಮಹತ್ವದ್ದಾಗಿದೆ. ಈ ಪಂದ್ಯ ಗೆದ್ದು ಸರಣಿಯಲ್ಲಿ ಮುನ್ನಡೆ ಸಾಧಿಸುವ ಜೊತೆಗೆ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ಗೇರುವ ಗುರಿಯನ್ನೂ ಹೊಂದಿದೆ. ಹೀಗಿದ್ದಾಗ ಈ ಪಂದ್ಯಕ್ಕೆ ಭಾರತದ ಪ್ಲೇಯಿಂಗ್-11 ಹೇಗಿರಲಿದೆ ಎಂಬುದು ಕುತೂಹಲ ಮೂಡಿಸಿದೆ.

3ನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಗೆದ್ದು ಸರಣಿ ಮುನ್ನಡೆ ಸಾಧಿಸುತ್ತದೆ ಎನ್ನಲಾಗಿತ್ತು. ಆದರೆ, ಕೊನೆಯ ವಿಕೆಟ್‌ಗೆ ಜಸ್ಪ್ರೀತ್ ಬುಮ್ರಾ-ಆಕಾಶ್ ದೀಪ್ ಅವರ ಜೊತೆಯಾಟು ಭಾರತವನ್ನು ಫಾಲೋ-ಆನ್‌ನಿಂದ ರಕ್ಷಿಸಿತು. ನಂತರ 275 ರನ್​ ಗುರಿ ಪಡೆದ ಭಾರತಕ್ಕೆ ಮಳೆ ಅಡ್ಡಿಪಡಿಸಿದ್ದರಿಂದ ಪಂದ್ಯ ಡ್ರಾದಲ್ಲಿ ಅಂತ್ಯ ಕಂಡಿತು. 4ನೇ ಟೆಸ್ಟ್‌ಗೂ ಮುನ್ನ ಭಾರತಕ್ಕೆ ಹಲವು ವಿಷಯಗಳಲ್ಲಿ ಚಿಂತನೆ ನಡೆಸಬೇಕಿದೆ. ಸರಣಿಯಲ್ಲಿ ಬ್ಯಾಟಿಂಗ್ ಸಂಪೂರ್ಣ ನಿರಾಸೆ ಮೂಡಿಸಿದೆ. ಪರ್ತ್‌ ಟೆಸ್ಟ್‌ನ 2ನೇ ಇನ್ನಿಂಗ್ಸ್‌ನಲ್ಲಿ ಜೈಸ್ವಾಲ್, ಕೊಹ್ಲಿ ಶತಕ, 3ನೇ ಟೆಸ್ಟ್‌ನಲ್ಲಿ ಕೆಎಲ್ ರಾಹುಲ್ 2 ಅರ್ಧಶತಕ ಹೊರತುಪಡಿಸಿ ಉಳಿದವರು ವಿಫಲರಾಗಿದ್ದಾರೆ. ಇದೀಗ ಬ್ಯಾಟರ್​​ಗಳು ಮಿಂಚುವುದು ಅಗತ್ಯವಾಗಿದೆ.

ನಾಲ್ಕನೇ ಟೆಸ್ಟ್​ಗೆ ಭಾರತ ತಂಡದಲ್ಲಿ ಮೂರು ಬದಲಾವಣೆ ಖಚಿತ

ಬಾರ್ಡರ್ ಗವಾಸ್ಕರ್​ ಟ್ರೋಫಿಯಲ್ಲಿ ಪುನರಾಗಮನ ಮಾಡಬೇಕೆಂದರೆ ಬ್ಯಾಟರ್​ಗಳು ರನ್ ಗಳಿಸುವುದು ಮುಖ್ಯವಾಗಿದೆ. ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರಿಷಭ್ ಪಂತ್ ಅವರ ಬ್ಯಾಟಿಂಗ್ ಫಾರ್ಮ್ ದೊಡ್ಡ ಚಿಂತೆಯಾಗಿದೆ. ಹೀಗಾಗಿ, ರಾಹುಲ್​ಗೆ ತ್ಯಾಗ ಮಾಡಿದ್ದ ಆರಂಭಿಕ ಸ್ಥಾನವನ್ನು ರೋಹಿತ್​ ಮರಳಿ ಪಡೆಯಲಿದ್ದಾರೆ ಎಂದು ವರದಿಯಾಗಿದೆ. ಆದರೆ ಗಿಲ್ ಬದಲಿಗೆ ರಾಹುಲ್​ರನ್ನು 3ನೇ ಕ್ರಮಾಂಕದಲ್ಲಿ ಆಡಿಸಲು ಟೀಮ್ ಮ್ಯಾನೇಜ್​ಮೆಂಟ್ ಚಿಂತಿಸಿದೆ. ಕಳೆದ 2 ಪಂದ್ಯಗಳ ಜೊತೆಗೆ ವಿದೇಶಿ ಪಿಚ್​​ಗಳಲ್ಲಿ ಅಬ್ಬರಿಸಲು ಹೆಣಗಾಡುತ್ತಿರುವ ಗಿಲ್ 2 ಪಂದ್ಯಗಳಿಂದ 60 ರನ್ ಮಾತ್ರ ಗಳಿಸಿದ್ದಾರೆ. ಹೀಗಾಗಿ ಮೆಲ್ಬೋರ್ನ್ ಟೆಸ್ಟ್​ಗೆ ಕೈಬಿಡಲು ಚಿಂತನೆ ನಡೆದಿದೆ. ಗಿಲ್ ಬದಲಿಗೆ ಸರ್ಫರಾಜ್ ಖಾನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬಹುದು. ಸರ್ಫರಾಜ್ 6ನೇ ಸ್ಲಾಟ್​​ನಲ್ಲಿ ಬ್ಯಾಟ್ ಬೀಸಬಹುದು.

ಮ್ಯಾನೇಜ್​ಮೆಂಟ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡುವ ಬಗ್ಗೆಯೂ ಚಿಂತಿಸಿತ್ತು. ಆದರೆ ನಾಲ್ಕನೇ ಟೆಸ್ಟ್​ ಆರಂಭಕ್ಕೆ ಸಾಕಷ್ಟು ಸಮಯವಿದ್ದ ಕಾರಣ ಈ ನಿರ್ಧಾರ ಹಿಂಪಡೆಯಿತು. ಬುಮ್ರಾ ಸರಣಿಯಲ್ಲಿ ಅದ್ಭುತ ಬೌಲಿಂಗ್ ಮಾಡುತ್ತಿದ್ದು, ಅಗ್ರ ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಹೀಗಿರುವಾಗ ಮೆಲ್ಬೋರ್ನ್​​ ಟೆಸ್ಟ್​ಗೆ ಕೈ ಬಿಡುವುದು ಸೂಕ್ತವಲ್ಲ ಎನ್ನುವುದನ್ನು ಮ್ಯಾನೇಜ್​ಮೆಂಟ್ ಅರಿತುಕೊಂಡಿತು. ಇದೀಗ ಮೊಹಮ್ಮದ್ ಸಿರಾಜ್ ಕೈಬಿಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಸಿರಾಜ್ 13 ವಿಕೆಟ್ ಕಿತ್ತು ಅಗ್ರ 5ರಲ್ಲಿ ಸ್ಥಾನ ಪಡೆದರೂ ಪರಿಸ್ಥಿತಿಗೆ ತಕ್ಕಂತೆ ವಿಕೆಟ್ ಉರುಳಿಸಲು ವಿಫಲರಾಗುತ್ತಿದ್ದಾರೆ ಎನ್ನುವುದು ಮ್ಯಾನೇಜ್​ಮೆಂಟ್ ವಾದ. ಹೀಗಾಗಿ, ಅವರನ್ನು ಬೆಂಚ್​ಗೆ ಕೂರಿಸಿ ಹರ್ಷಿತ್ ರಾಣಾಗೆ ಅವಕಾಶ ನೀಡಬಹುದು ಎಂದು ವರದಿಯಾಗಿದೆ.

ಮೂರನೇ ಟೆಸ್ಟ್​ ಮುಗಿದ ಬೆನ್ನಲ್ಲೇ ಸ್ಪಿನ್ ಆಲ್​ರೌಂಡರ್ ಕೋಟಾಗೆ ವಾಷಿಂಗ್ಟನ್ ಸುಂದರ್​ ಅವರನ್ನು ಪ್ಲೇಯಿಂಗ್ 11ಗೆ ಕರೆತರಲು ಚರ್ಚೆ ನಡೆದಿದೆ. ಕಳೆದ ಟೆಸ್ಟ್​ ಪಂದ್ಯದಲ್ಲಿ ಬ್ಯಾಟಿಂಗ್​ನಲ್ಲಿ ಅಬ್ಬರಿಸಿದ ರವೀಂದ್ರ ಜಡೇಜಾ ಅವರು ಬೌಲಿಂಗ್​ನಲ್ಲಿ ಜಡೇಜಾ ಮಿಂಚದ ಕಾರಣ ಅವರನ್ನು ಬದಲಿಸಬೇಕು ಎಂದು ತೀರ್ಮಾನಕ್ಕೆ ಬಂದಿದೆ ಮ್ಯಾನೇಜ್​ಮೆಂಟ್. ಇಂತಹ ಪರಿಸ್ಥಿತಿಯಲ್ಲಿ ವಾಷಿಂಗ್ಟನ್ ಸುಂದರ್ ಮತ್ತೊಮ್ಮೆ ಪ್ಲೇಯಿಂಗ್ ಇಲೆವೆನ್‌ಗೆ ಸೇರ್ಪಡೆಯಾಗಬಹುದು. ಆದರೆ ಮಹತ್ವದ ಪಂದ್ಯಕ್ಕೆ ಆಟಗಾರರ ಬದಲಾವಣೆ ಆಟಗಾರರ ಆತ್ಮ ವಿಶ್ವಾಸದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದೂ ಚಿಂತನೆ ನಡೆಸಿದೆ. ಹಾಗಾಗಿ ಅಂತಿಮ ಪ್ಲೇಯಿಂಗ್​ನಲ್ಲಿ ಯಾರಿಗೆ ಅವಕಾಶ ಸಿಗುತ್ತದೆ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.

ನಾಲ್ಕನೇ ಟೆಸ್ಟ್‌ಗೆ ಭಾರತದ ಸಂಭಾವ್ಯ ಪ್ಲೇಯಿಂಗ್ 11 

ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್, ಸರ್ಫರಾಜ್ ಖಾನ್/ಧ್ರುವ್ ಜುರೆಲ್, ವಾಷಿಂಗ್ಟನ್ ಸುಂದರ್, ನಿತೀಶ್ ರೆಡ್ಡಿ, ಜಸ್ಪ್ರೀತ್ ಬುಮ್ರಾ, ಹರ್ಷಿತ್ ರಾಣಾ, ಆಕಾಶ್ ದೀಪ್.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ