logo
ಕನ್ನಡ ಸುದ್ದಿ  /  ಕ್ರಿಕೆಟ್  /  ಸರಣಿ ಮುನ್ನಡೆಗೆ ಭಾರತ-ಜಿಂಬಾಬ್ವೆ ತವಕ; 3ನೇ ಟಿ20ಐಗೆ ಎರಡು ಬದಲಾವಣೆ ಖಚಿತ, ಹವಾಮಾನ, ಪಿಚ್ ರಿಪೋರ್ಟ್

ಸರಣಿ ಮುನ್ನಡೆಗೆ ಭಾರತ-ಜಿಂಬಾಬ್ವೆ ತವಕ; 3ನೇ ಟಿ20ಐಗೆ ಎರಡು ಬದಲಾವಣೆ ಖಚಿತ, ಹವಾಮಾನ, ಪಿಚ್ ರಿಪೋರ್ಟ್

Prasanna Kumar P N HT Kannada

Jul 10, 2024 12:29 PM IST

google News

ಸರಣಿ ಮುನ್ನಡೆಗೆ ಭಾರತ-ಜಿಂಬಾಬ್ವೆ ತವಕ; 3ನೇ ಟಿ20ಐಗೆ ಎರಡು ಬದಲಾವಣೆ ಖಚಿತ, ಹವಾಮಾನ, ಪಿಚ್ ರಿಪೋರ್ಟ್

    • India vs Zimbabwe 3rd T20I: ಭಾರತ ಮತ್ತು ಜಿಂಜಾಬ್ವೆ ನಡುವಿನ 3ನೇ ಟಿ20 ಪಂದ್ಯವು ಇಂದು (ಜುಲೈ 10) ನಡೆಯಲಿದೆ. ಈ ಪಂದ್ಯಕ್ಕೆ ಆತಿಥ್ಯ ವಹಿಸುವ ಹರಾರೆ ಸ್ಪೋರ್ಟ್ಸ್ ಕ್ಲಬ್​ ಪಿಚ್ ಹಾಗೂ ಇಲ್ಲಿನ ಹವಾಮಾನ ವರದಿ ಹೇಗಿದೆ ನೋಡಿ.
ಸರಣಿ ಮುನ್ನಡೆಗೆ ಭಾರತ-ಜಿಂಬಾಬ್ವೆ ತವಕ; 3ನೇ ಟಿ20ಐಗೆ ಎರಡು ಬದಲಾವಣೆ ಖಚಿತ, ಹವಾಮಾನ, ಪಿಚ್ ರಿಪೋರ್ಟ್
ಸರಣಿ ಮುನ್ನಡೆಗೆ ಭಾರತ-ಜಿಂಬಾಬ್ವೆ ತವಕ; 3ನೇ ಟಿ20ಐಗೆ ಎರಡು ಬದಲಾವಣೆ ಖಚಿತ, ಹವಾಮಾನ, ಪಿಚ್ ರಿಪೋರ್ಟ್

ಟೀಮ್ ಇಂಡಿಯಾ ಮತ್ತು ಜಿಂಬಾಬ್ವೆ ನಡುವೆ ಮೂರನೇ ಟಿ20 ಪಂದ್ಯ ಇಂದು (ಜುಲೈ 10) ನಡೆಯಲಿದೆ. ಮೊದಲ ಪಂದ್ಯದಲ್ಲಿ ಜಿಂಬಾಬ್ವೆ ರೋಚಕ ಗೆಲುವು ಸಾಧಿಸಿತ್ತು. ಬಳಿಕ ಭಾರತ ತಿರುಗೇಟು ನೀಡಿತು. ಇದರೊಂದಿಗೆ ಸರಣಿ1-1ರಲ್ಲಿ ಸಮಬಲ ಸಾಧಿಸಿದೆ. ಇದೀಗ ಸಿರೀಸ್​​ನಲ್ಲಿ ಮುನ್ನಡೆ ಸಾಧಿಸಲು ಉಭಯ ತಂಡಗಳು ಸಜ್ಜಾಗಿವೆ. ಈ ಪಂದ್ಯಕ್ಕೆ ಹರಾರೆಯ ಸ್ಪೋರ್ಟ್ಸ್​ ಕ್ಲಬ್​ ಆತಿಥ್ಯ ವಹಿಸುತ್ತಿದೆ. ಆದರೆ ಮೂರನೇ ಟಿ20ಐಗೆ ಭಾರತ ತಂಡದಲ್ಲಿ ಮಹತ್ವದ ಬದಲಾಯಾಗುವ ನಿರೀಕ್ಷೆಯಿದೆ.

3ನೇ ಟಿ20ಐ ಪಂದ್ಯಕ್ಕೆ ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್, ಶಿವಂ ದುಬೆ ಅವರು ತಂಡವನ್ನು ಕೂಡಿಕೊಂಡಿದ್ದಾರೆ. ಹಾಗಾಗಿ ತಂಡದಲ್ಲಿ ಒಂದೆರಡು ಬದಲಾವಣೆ ಆಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ನಾಯಕ ಶುಭ್ಮನ್ ಗಿಲ್ ಜೊತೆಗೆ ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ಅಭಿಷೇಕ್ ಶರ್ಮಾ ಇನ್ನಿಂಗ್ಸ್ ಆರಂಭಿಸಲಿದ್ದಾರೆ. 3ನೇ ಕ್ರಮಾಂಕದಲ್ಲಿ ಋತುರಾಜ್ ಗಾಯಕ್ವಾಡ್ ಮಿಂಚಿದ್ದಾರೆ. ಆದರೆ ಈ ಪಂದ್ಯಕ್ಕೆ ಜೈಸ್ವಾಲ್ ಅವಕಾಶ ಪಡೆಯುವುದು ಖಚಿತವಾಗಿದ್ದು, ಯಾವ ಸ್ಥಾನದಲ್ಲಿ ಆಡಲಿದ್ದಾರೆ ಎಂಬುದು ಗೊಂದಲ ಮೂಡಿಸಿದೆ.

ಆದರೆ ರಿಯಾನ್ ಪರಾಗ್ ಮತ್ತು ಧ್ರುವ್ ಜುರೆಲ್ ಅವಕಾಶ ವಂಚಿತರಾಗಬಹುದು. ಜುರೆಲ್ ಜಾಗಕ್ಕೆ ಅನುಭವಿ ಸಂಜು ಸ್ಯಾಮ್ಸನ್​ ಅವಕಾಶ ಪಡೆಯಬಹುದು. ಉಳಿದಂತೆ ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅವೇಶ್ ಖಾನ್, ಖಲೀಲ್ ಅಹ್ಮದ್, ಮುಕೇಶ್ ಕುಮಾರ್ ಮುಂದುವರೆಯಬಹುದು. ಶಿವಂ ದುಬೆ ವಿಶ್ರಾಂತಿ ನೀಡಬಹುದು. ಹರಾರೆ ಸ್ಪೋರ್ಟ್ಸ್ ಕ್ಲಬ್ ಟಿ20ಐ ಅಂಕಿ-ಅಂಶಗಳು, ದಾಖಲೆ, ಪಿಚ್ ವರದಿ, ಪ್ಲೇಯಿಂಗ್ 11 ಮತ್ತು ಹರಾರೆ ಹವಾಮಾನ ಮುನ್ಸೂಚನೆಯ ವಿವರ ಇಲ್ಲಿದೆ.

ಹರಾರೆ ಸ್ಪೋರ್ಟ್ಸ್ ಕ್ಲಬ್ ಪಿಚ್ ವರದಿ

3ನೇ ಟಿ20ಗೂ ಹರಾರೆ ಸ್ಪೋರ್ಟ್ಸ್ ಕ್ಲಬ್‌ ವೇದಿಕೆ ಒದಗಿಸುತ್ತಿದೆ. ಪಿಚ್ ಸಮತೋಲಿತವಾಗಿದ್ದು, ಬೌನ್ಸ್ ಇರುವುದಿಲ್ಲ. ಪಂದ್ಯದಲ್ಲಿ 10 ಓವರ್​​​ಗಳ ನಂತರ ಪಿಚ್​​​ ಸ್ಪಿನ್ನರ್​​ಗಳಿಗೆ ನೆರವಾಗಲಿದೆ. ಆಟದ ಆರಂಭದಲ್ಲಿ ವೇಗಿಗಳು ಪಂದ್ಯದ ಮೇಲೆ ಪ್ರಾಬಲ್ಯ ಸಾಧಿಸಲಿದ್ದಾರೆ. ಟಾಸ್ ಗೆದ್ದವರೇ ಮೊದಲು ಬ್ಯಾಟಿಂಗ್ ಆಯ್ಕೆ ಮಾಡುವ ನಿರೀಕ್ಷೆ ಇದೆ.

ಜುಲೈ 6ರಂದು ಹರಾರೆ ಹವಾಮಾನ ಮುನ್ಸೂಚನೆ

ಹರಾರೆಯಲ್ಲಿ ಬುಧವಾರವೂ (ಜುಲೈ 10) ಬಿಸಿಲು ಇರಲಿದೆ. ಮಳೆಯ ಭೀತಿ ಇರುವುದಿಲ್ಲ. ಪಂದ್ಯದ ಆರಂಭದಲ್ಲಿ ಗರಿಷ್ಠ ತಾಪಮಾನವು 25 ಡಿಗ್ರಿ ಸೆಲ್ಸಿಯಸ್ ಮತ್ತು ಮುಕ್ತಾಯದ ಹಂತದಲ್ಲಿ 22 ಡಿಗ್ರಿ ಸೆಲ್ಸಿಯನ್ ಆಗುವ ನಿರೀಕ್ಷೆಯಿದೆ.

ಭಾರತ vs ಜಿಂಬಾಬ್ವೆ 2ನೇ ಟಿ20ಐ ದಿನಾಂಕ, ಸಮಯ, ಟೆಲಿಕಾಸ್ಟ್ ಮಾಹಿತಿ

ಪಂದ್ಯದ ದಿನಾಂಕ: ಬುಧವಾರ, ಜುಲೈ 10

ಪಂದ್ಯದ ಆರಂಭದ ಸಮಯ: 4:30 ಸಂಜೆ (ಭಾರತೀಯ ಕಾಲಮಾಮನ)

ಟಿವಿ ಚಾನೆಲ್‌ಗಳು: ಸೋನಿ ಸ್ಪೋರ್ಟ್ಸ್ ಟೆನ್ 5 ಮತ್ತು ಸೋನಿ ಸ್ಪೋರ್ಟ್ಸ್ ಟೆನ್ 3 ಚಾನೆಲ್‌

ಲೈವ್ ಸ್ಟ್ರೀಮಿಂಗ್: SonyLIV (ಸೋನಿ ಲಿವ್)

ಭಾರತ vs ಜಿಂಬಾಬ್ವೆ ಟಿ20ಐ ಹೆಡ್ ಟು ಹೆಡ್ ದಾಖಲೆ

ಟಿ20ಐ ಕ್ರಿಕೆಟ್​ನಲ್ಲಿ ಜಿಂಬಾಬ್ವೆ ವಿರುದ್ಧ ಭಾರತ ಹೆಚ್ಚು ಮೇಲುಗೈ ಸಾಧಿಸಿದೆ. ಉಭಯ ತಂಡಗಳು ಮುಖಾಮುಖಿಯಾದ 10 ಪಂದ್ಯಗಳ ಪೈಕಿ ಭಾರತ 7 ಬಾರಿ ಗೆದ್ದಿದೆ. ಜಿಂಬಾಬ್ವೆ 3ರಲ್ಲಿ ಗೆಲುವಿನ ನಗೆ ಬೀರಿದೆ.

ಹರಾರೆ ಮೈದಾನದಲ್ಲಿ ಭಾರತ vs ಜಿಂಬಾಬ್ವೆ ಟಿ20ಐ ದಾಖಲೆ

ಪಂದ್ಯಗಳು: 9

ಭಾರತ ಗೆದ್ದಿದೆ: 6

ಜಿಂಬಾಬ್ವೆ ಗೆಲುವು: 3

ಜಿಂಬಾಬ್ವೆ ವಿರುದ್ಧ ಭಾರತ ಗರಿಷ್ಠ ಮೊತ್ತ: 234

ಜಿಂಬಾಬ್ವೆ ವಿರುದ್ಧ ಭಾರತ ಕನಿಷ್ಠ ಮೊತ್ತ: 102

ಭಾರತದ ವಿರುದ್ಧ ಜಿಂಬಾಬ್ವೆ ಗರಿಷ್ಠ ಮೊತ್ತ: 170

ಭಾರತದ ವಿರುದ್ಧ ಜಿಂಬಾಬ್ವೆ ಕನಿಷ್ಠ ಮೊತ್ತ: 99

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ