logo
ಕನ್ನಡ ಸುದ್ದಿ  /  ಕ್ರಿಕೆಟ್  /  ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಸರಣಿ ಗೆಲುವಿನ ತವಕ; ಹವಾಮಾನ, ಪಿಚ್ ವರದಿ, ಮುಖಾಮುಖಿ ದಾಖಲೆ, ಪ್ಲೇಯಿಂಗ್ Xi ವಿವರ ಇಲ್ಲಿದೆ

ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಸರಣಿ ಗೆಲುವಿನ ತವಕ; ಹವಾಮಾನ, ಪಿಚ್ ವರದಿ, ಮುಖಾಮುಖಿ ದಾಖಲೆ, ಪ್ಲೇಯಿಂಗ್ XI ವಿವರ ಇಲ್ಲಿದೆ

Prasanna Kumar P N HT Kannada

Jul 13, 2024 01:57 PM IST

google News

ಭಾರತ vs ಜಿಂಬಾಬ್ವೆ 4ನೇ ಟಿ20ಐ ಕದನ; ಪಿಚ್, ಹವಾಮಾನ ವರದಿ, ಮುಖಾಮುಖಿ ದಾಖಲೆ, ಪ್ಲೇಯಿಂಗ್ XI ವಿವರ ಇಲ್ಲಿದೆ

    • India vs Zimbabwe 4th T20I: ಭಾರತ ಮತ್ತು ಜಿಂಜಾಬ್ವೆ ನಡುವಿನ 4ನೇ ಟಿ20ಐ ಪಂದ್ಯವು ಜುಲೈ 13ರಂದು ನಡೆಯಲಿದೆ. ಈ ಪಂದ್ಯಕ್ಕೆ ಪಿಚ್ ಹಾಗೂ ಹವಾಮಾನ ವರದಿ ಹೇಗಿದೆ? ಎಂಬುದರ ವಿವರ ಇಲ್ಲಿದೆ.
ಭಾರತ vs ಜಿಂಬಾಬ್ವೆ 4ನೇ ಟಿ20ಐ ಕದನ; ಪಿಚ್, ಹವಾಮಾನ ವರದಿ, ಮುಖಾಮುಖಿ ದಾಖಲೆ, ಪ್ಲೇಯಿಂಗ್ XI ವಿವರ ಇಲ್ಲಿದೆ
ಭಾರತ vs ಜಿಂಬಾಬ್ವೆ 4ನೇ ಟಿ20ಐ ಕದನ; ಪಿಚ್, ಹವಾಮಾನ ವರದಿ, ಮುಖಾಮುಖಿ ದಾಖಲೆ, ಪ್ಲೇಯಿಂಗ್ XI ವಿವರ ಇಲ್ಲಿದೆ

ಭಾರತ ಮತ್ತು ಜಿಂಬಾಬ್ವೆ ನಡುವಣ ನಾಲ್ಕನೇ ಟಿ20ಐ ಪಂದ್ಯ ಇಂದು (ಜುಲೈ 13) ಜರುಗಲಿದೆ. ಮೊದಲ ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸಿದ್ದ ಜಿಂಬಾಬ್ವೆ, ಎರಡು ಮತ್ತು ಮೂರನೇ ಪಂದ್ಯದಲ್ಲಿ ಶರಣಾಯಿತು. ಇದರೊಂದಿಗೆ ಭಾರತ ಸರಣಿಯಲ್ಲಿ 2-1ರಲ್ಲಿ ಮುನ್ನಡೆ ಸಾಧಿಸಿತು. ಇದೀಗ ಸರಣಿ ಕೈತಪ್ಪದಂತೆ ನೋಡಿಕೊಳ್ಳಲು ಆತಿಥೇಯ ತಂಡ ಸಜ್ಜಾಗಿವೆ. ಈ ಪಂದ್ಯಕ್ಕೂ ಹರಾರೆ ಸ್ಪೋರ್ಟ್ಸ್​ ಕ್ಲಬ್​ ಆತಿಥ್ಯ ವಹಿಸುತ್ತಿದೆ.

ಟಿ20 ವಿಶ್ವಕಪ್ ವಿಜೇತ ತಂಡದಲ್ಲಿ ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್, ಶಿವಂ ದುಬೆ ಅವರು 3ನೇ ಟಿ20ಐ ಪಂದ್ಯದ ಪ್ಲೇಯಿಂಗ್​ 11ನಲ್ಲಿ ಅವಕಾಶ ಪಡೆದಿದ್ದರು. ಅವರು ಮತ್ತೆ ಅವಕಾಶ ಪಡೆಯುವುದು ಖಚಿತವಾಗಿದೆ. ಮುಕೇಶ್ ಕುಮಾರ್ ತಂಡದಲ್ಲಿ ಅವಕಾಶ ಪಡೆಯುವ ನಿರೀಕ್ಷೆ ಇದೆ. ನಾಯಕ ಶುಭ್ಮನ್ ಗಿಲ್-ಜೈಸ್ವಾಲ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. 3 ಮತ್ತು 4ನೇ ಕ್ರಮಾಂಕದಲ್ಲಿ ಅಭಿಷೇಕ್ ಶರ್ಮಾ, ಋತುರಾಜ್ ಗಾಯಕ್ವಾಡ್ ಆಡಲಿದ್ದಾರೆ. ಆದರೆ ಅಭಿಷೇಕ್​ ಬದಲಿಗೆ ರಿಯಾನ್ ಪರಾಗ್​ಗೆ ಅವಕಾಶ ನೀಡಲು ಮ್ಯಾನೇಜ್​ಮೆಂಟ್ ಚಿಂತಿಸಿದೆ.

ಆದರೆ ಧ್ರುವ್ ಜುರೆಲ್ ಮತ್ತೊಮ್ಮೆ ಅವಕಾಶ ವಂಚಿತರಾಗಲಿದ್ದಾರೆ. ಅನುಭವಿ ಸಂಜು ಸ್ಯಾಮ್ಸನ್​ ಮತ್ತೊಮ್ಮೆ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಉಳಿದಂತೆ ರಿಂಕು ಸಿಂಗ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಖಲೀಲ್ ಅಹ್ಮದ್, ಮುಕೇಶ್ ಕುಮಾರ್ ಮುಂದುವರೆಯಬಹುದು. ಹರಾರೆ ಸ್ಪೋರ್ಟ್ಸ್ ಕ್ಲಬ್ ಪಿಚ್​​ ರಿಪೋರ್ಟ್, ಟಿ20ಐ ಅಂಕಿ-ಅಂಶಗಳು, ಹವಾಮಾನ ಮುನ್ಸೂಚನೆ, ಪ್ಲೇಯಿಂಗ್ 11 ವಿವರ ಇಲ್ಲಿದೆ.

ಜುಲೈ 6ರಂದು ಹರಾರೆ ಹವಾಮಾನ ಮುನ್ಸೂಚನೆ

ಹರಾರೆಯಲ್ಲಿ ಶನಿವಾರವೂ (ಜುಲೈ 13) ಬಿಸಿಲು ಇರಲಿದೆ. AccuWeather.com ಪ್ರಕಾರ, ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಶನಿವಾರದ ತಾಪಮಾನವು ಸುಮಾರು 20-24 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮಳೆಯ ಸಾಧ್ಯತೆಗಳು ಅತ್ಯಲ್ಪವಾಗಿದ್ದು, ಪೂರ್ಣ ಪ್ರಮಾಣದ ಪಂದ್ಯವನ್ನು ಆಡಲಾಗುತ್ತದೆ.

ಹರಾರೆ ಸ್ಪೋರ್ಟ್ಸ್ ಕ್ಲಬ್ ಪಿಚ್ ವರದಿ

4ನೇ ಟಿ20ಗೂ ಹರಾರೆ ಸ್ಪೋರ್ಟ್ಸ್ ಕ್ಲಬ್‌ ಆತಿಥ್ಯ ವಹಿಸುತ್ತಿದೆ. ಕಳೆದ ಕೆಲವು ಪಂದ್ಯಗಳಲ್ಲಿ ಬ್ಯಾಟಿಂಗ್‌ಗೆ ಸಂಬಂಧಿಸಿದಂತೆ ಪಿಚ್ ಉತ್ತಮವಾಗಿದೆ. ಪಿಚ್ ಸಮತೋಲಿತವಾಗಿದ್ದು, ಬೌನ್ಸ್ ಇರುವುದಿಲ್ಲ. 10 ಓವರ್​​​ಗಳ ನಂತರ ಪಿಚ್​​​ ಸ್ಪಿನ್ನರ್​​ಗಳಿಗೆ ನೆರವಾಗಲಿದೆ. ಆಟದ ಆರಂಭದಲ್ಲಿ ವೇಗಿಗಳು ಪ್ರಾಬಲ್ಯ ಸಾಧಿಸಲಿದ್ದಾರೆ. ಟಾಸ್ ಗೆದ್ದವರೇ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಬಹುದು.

ಭಾರತ vs ಜಿಂಬಾಬ್ವೆ 3ನೇ ಟಿ20ಐ ದಿನಾಂಕ, ಸಮಯ, ಟೆಲಿಕಾಸ್ಟ್ ಮಾಹಿತಿ

ಪಂದ್ಯದ ದಿನಾಂಕ: ಶನಿವಾರ, ಜುಲೈ 13

ಪಂದ್ಯದ ಆರಂಭದ ಸಮಯ: 4:30 ಸಂಜೆ (ಭಾರತೀಯ ಕಾಲಮಾಮನ)

ಟಿವಿ ಚಾನೆಲ್‌ಗಳು: ಸೋನಿ ಸ್ಪೋರ್ಟ್ಸ್ ಟೆನ್ 5 ಮತ್ತು ಸೋನಿ ಸ್ಪೋರ್ಟ್ಸ್ ಟೆನ್ 3 ಚಾನೆಲ್‌

ಲೈವ್ ಸ್ಟ್ರೀಮಿಂಗ್: SonyLIV (ಸೋನಿ ಲಿವ್)

ಭಾರತ vs ಜಿಂಬಾಬ್ವೆ ಟಿ20ಐ ಹೆಡ್ ಟು ಹೆಡ್ ದಾಖಲೆ

ಟಿ20ಐ ಕ್ರಿಕೆಟ್​ನಲ್ಲಿ ಜಿಂಬಾಬ್ವೆ ವಿರುದ್ಧ ಭಾರತ ಹೆಚ್ಚು ಮೇಲುಗೈ ಸಾಧಿಸಿದೆ. ಉಭಯ ತಂಡಗಳು ಮುಖಾಮುಖಿಯಾದ 11 ಪಂದ್ಯಗಳ ಪೈಕಿ ಭಾರತ 8 ಬಾರಿ ಗೆದ್ದಿದೆ. ಜಿಂಬಾಬ್ವೆ 3ರಲ್ಲಿ ಗೆಲುವಿನ ನಗೆ ಬೀರಿದೆ.

ಹರಾರೆ ಮೈದಾನದಲ್ಲಿ ಭಾರತ vs ಜಿಂಬಾಬ್ವೆ ಟಿ20ಐ ದಾಖಲೆ

ಪಂದ್ಯಗಳು: 10

ಭಾರತ ಗೆದ್ದಿದೆ: 7

ಜಿಂಬಾಬ್ವೆ ಗೆಲುವು: 3

ಜಿಂಬಾಬ್ವೆ ವಿರುದ್ಧ ಭಾರತ ಗರಿಷ್ಠ ಮೊತ್ತ: 234

ಜಿಂಬಾಬ್ವೆ ವಿರುದ್ಧ ಭಾರತ ಕನಿಷ್ಠ ಮೊತ್ತ: 102

ಭಾರತದ ವಿರುದ್ಧ ಜಿಂಬಾಬ್ವೆ ಗರಿಷ್ಠ ಮೊತ್ತ: 170

ಭಾರತದ ವಿರುದ್ಧ ಜಿಂಬಾಬ್ವೆ ಕನಿಷ್ಠ ಮೊತ್ತ: 99

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ