IPL 2025: ಲಕ್ನೋ ಸೂಪರ್ ಜೈಂಟ್ಸ್ಗೆ ಅನಿರೀಕ್ಷಿತ ಆಘಾತ: ಮೆಗಾ ಹರಾಜಿಗೆ ಎಂಟ್ರಿಕೊಟ್ಟ ಫ್ಲಾಪ್ ಆಟಗಾರ?
Oct 28, 2024 09:51 AM IST
ಲಕ್ನೋ ಸೂಪರ್ ಜೈಂಟ್ಸ್
- KL Rahul: ಲಕ್ನೋ ಸೂಪರ್‌ಜೈಂಟ್ಸ್ ಫ್ರಾಂಚೈಸಿ ಕೆಎಲ್ ರಾಹುಲ್ ಅವರನ್ನು ಕೇವಲ ಆಟಗಾರನಾಗಿ ತಂಡದಲ್ಲಿ ಇರಿಸಲು ಯೋಚಿಸಿದೆ ಎಂದು ತಿಳಿದುಬಂದಿದೆ. ಆದರೆ, ಇದಕ್ಕೆ ರಾಹುಲ್ ಕಡೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಸೂಪರ್ ಜೈಂಟ್ಸ್ ಫ್ರಾಂಚೈಸಿ ರಾಹುಲ್ ಅವರನ್ನು ಕೈಬಿಡಲು ನಿರ್ಧರಿಸಿದೆ.
ಲಕ್ನೋ ಸೂಪರ್ ಜೈಂಟ್ಸ್ (LSG) ಐಪಿಎಲ್ 2025 ಮೆಗಾ ಹರಾಜಿಗೂ ಮುನ್ನ ನಾಯಕ ಕೆಎಲ್ ರಾಹುಲ್ (KL Rahul) ಅವರನ್ನು ಕೈಬಿಡಲು ಸಿದ್ಧವಾಗಿದೆ ಎಂದು ವರದಿಯಾಗಿದೆ. ಐಪಿಎಲ್ (IPL) ಆಡಳಿತ ಮಂಡಳಿಯು ಪ್ರಸ್ತುತ ತಂಡದಿಂದ ಉಳಿಸಿಕೊಂಡಿರುವ ಮತ್ತು ಬಿಡುಗಡೆಯಾದ ಆಟಗಾರರ ಪಟ್ಟಿಯನ್ನು ಸಲ್ಲಿಸಲು ಎಲ್ಲ ಫ್ರಾಂಚೈಸಿಗಳಿಗೆ ಅಕ್ಟೋಬರ್ 31 ರ ಗಡುವನ್ನು ನಿಗದಿಪಡಿಸಿದೆ. ಹೀಗಿರುವಾಗ ಲಕ್ನೋ ಸೂಪರ್‌ಜೈಂಟ್ಸ್ ನಾಯಕ ಕೆಎಲ್ ರಾಹುಲ್ ಮುಂಬರುವ ಐಪಿಎಲ್ ಮೆಗಾ ಹರಾಜಿನಲ್ಲಿ ಭಾಗವಹಿಸುವುದು ಖಚಿತವಾಗಿದೆ.
ಲಕ್ನೋ ಫ್ರಾಂಚೈಸಿ ನೀಡಿದ ಆಫರ್ ಅನ್ನು ರಾಹುಲ್ ತಿರಸ್ಕರಿಸಿದ್ದಾರೆ, ಹೀಗಾಗಿ ಅವರು ಮೆಗಾ ಆಕ್ಷನ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಫ್ರಾಂಚೈಸಿಯ ಮೂಲಗಳು ತಿಳಿಸಿವೆ. ಲಕ್ನೋ ಸೂಪರ್‌ಜೈಂಟ್ಸ್ ಫ್ರಾಂಚೈಸಿ ಕೆಎಲ್ ರಾಹುಲ್ ಅವರನ್ನು ಕೇವಲ ಆಟಗಾರನಾಗಿ ತಂಡದಲ್ಲಿ ಇರಿಸಲು ಯೋಚಿಸಿದೆ ಎಂದು ತಿಳಿದುಬಂದಿದೆ. ಆದರೆ, ಇದಕ್ಕೆ ರಾಹುಲ್ ಕಡೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಸೂಪರ್ ಜೈಂಟ್ಸ್ ಫ್ರಾಂಚೈಸಿ ರಾಹುಲ್ ಅವರನ್ನು ಕೈಬಿಡಲು ನಿರ್ಧರಿಸಿದೆ.
ಕಳೆದ ಮೂರು ಸೀಸನ್‌ಗಳಲ್ಲಿ ಲಕ್ನೋ ಸೂಪರ್‌ಜೈಂಟ್ಸ್ ತಂಡದ ನಾಯಕರಾಗಿದ್ದ ಕೆಎಲ್ ರಾಹುಲ್ ಅದ್ಭುತ ಎನ್ನುವಂತಹ ಪ್ರದರ್ಶನ ನೀಡಲಿಲ್ಲ. ಸ್ಟ್ರೈಕ್ರೇಟ್ ವಿಚಾರದಲ್ಲಿ ಸದಾ ಹಿಂದಿದ್ದರು. ಅವರ ನಾಯಕತ್ವದಲ್ಲಿ ತಂಡ ಸತತ ವೈಫಲ್ಯ ಕೂಡ ಅನುಭವಿಸಿತು. ಈ ಕಾರಣದಿಂದಾಗಿ, ಕಳೆದ ಋತುವಿನಲ್ಲಿ ಹೈದರಾಬಾದ್ ವಿರುದ್ಧದ ಪಂದ್ಯದ ನಂತರ, ರಾಹುಲ್ ಅವರನ್ನು LSG ತಂಡದ ಮಾಲೀಕ ಸಂಜೀವ್ ಗೋಯೆಂಕಾ ಅವರು ಸಾರ್ವಜನಿಕವಾಗಿ ಟೀಕಿಸಿದಂತೆ ಕಂಡುಬಂತು.
ನಾಯಕನನ್ನೇ ಕೈಬಿಡಲು ನಿರ್ಧರಿಸಿದ ಎಲ್ಎಸ್ಜಿ
ಕೆಎಲ್ ರಾಹುಲ್ ಲಕ್ನೋ ಸೂಪರ್ ಜೈಂಟ್ ತೊರೆಯಲಿದ್ದಾರೆ ಎಂಬ ವದಂತಿಗಳು ಕೇಳಿ ಬಂತು. ಆದರೆ, ಕೆಎಲ್ ರಾಹುಲ್ ಪುನಃ ಸಂಜೀವ್ ಗೋಯೆಂಕಾ ಅವರೊಂದಿಗೆ ಕಾಣಿಸಿಕೊಳ್ಳುವ ಮೂಲಕ ಎಲ್ಲಾ ವದಂತಿಗಳಿಗೆ ಅಂತ್ಯ ಹಾಡಿದರು. ಇತ್ತೀಚೆಗಷ್ಟೇ ಕೆಎಲ್ ರಾಹುಲ್ ನಮ್ಮ ಕುಟುಂಬದ ಭಾಗ ಎಂದು ಗೋಯೆಂಕಾ ಕೂಡ ಹೇಳಿದ್ದರು. ಆದರೆ, ಸದ್ಯಕ್ಕೆ, ಲಕ್ನೋ ಒಪ್ಪಂದಕ್ಕೆ ಕೆಎಲ್ ರಾಹುಲ್ ಸಿದ್ಧವಾಗಿಲ್ಲ ಎಂಬುದು ಸ್ಪಷ್ಟವಾಗಿದೆ. ಇದರೊಂದಿಗೆ ಐಪಿಎಲ್ ಮೆಗಾ ಹರಾಜಿಗೂ ಮುನ್ನ ನಾಯಕನನ್ನು ತಂಡದಿಂದ ಕೈಬಿಡಲು LSG ಫ್ರಾಂಚೈಸಿ ನಿರ್ಧರಿಸಿದೆ ಎಂದು ವರದಿಯಾಗಿದೆ.
ಇದರ ಪ್ರಕಾರ ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಕೆಎಲ್ ರಾಹುಲ್ ಕಾಣಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಈ ಹರಾಜಿನ ಮೂಲಕ ಕೆಎಲ್ ರಾಹುಲ್ ಯಾವ ತಂಡದ ಭಾಗವಾಗಲಿದ್ದಾರೆ ಕುತೂಹಲ ಕೆರಳಿಸಿದೆ. ಆಸ್ಟ್ರೇಲಿಯದ ಆಲ್‌ರೌಂಡರ್ ಮಾರ್ಕಸ್ ಸ್ಟೊಯಿನಿಸ್ ಅವರಿಗೆ ರೈಟ್ ಟು ಮ್ಯಾಚ್ (ಆರ್‌ಟಿಎಂ) ಕಾರ್ಡ್ ಬಳಸಬಹುದು ಎಂದು ವರದಿ ಬಹಿರಂಗಪಡಿಸಿದೆ. ಲ್‌ಎಸ್‌ಜಿ ನಿಕೋಲಸ್ ಪೂರನ್, ಮಯಾಂಕ್ ಯಾದವ್, ರವಿ ಬಿಷ್ಣೋಯ್, ಮೊಹ್ಸಿನ್ ಖಾನ್ ಮತ್ತು ಆಯುಷ್ ಬಡೋನಿ ಅವರಂತಹ ಆಟಗಾರರನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ.
ಆರ್ಸಿಬಿ ಸೇರಿದರೂ ಅಚ್ಚರಿ ಇಲ್ಲ
ಇನ್ನು ಹರಾಜಿಗೂ ಮುನ್ನ ರಾಹುಲ್ ಹಲವು ತಂಡಗಳೊಂದಿಗೆ ಸಂಪರ್ಕ ಹೊಂದಿದ್ದಾರಂತೆ. ಆದಾಗ್ಯೂ, ಅವರು ಆಕ್ಷನ್ ಟೇಬಲ್‌ಗೆ ಪ್ರವೇಶಿಸಿದರೆ, ಆರ್ಸಿಬಿ ತಮ್ಮ ಮಾಜಿ ಆಟಗಾರನನ್ನು ಖರೀದಿಸಲು ಪಣ ತೊಡಬಹುದು. 2018 ರಲ್ಲಿ ಪಂಜಾಬ್ ಸೇರುವ ಮೊದಲು, ಅವರು ಆರ್ಸಿಬಿಗಾಗಿ ಕ್ರಮವಾಗಿ 2013 ಮತ್ತು 2016 ರಲ್ಲಿ ಎರಡು ಋತುಗಳನ್ನು ಆಡಿದ್ದರು.
ವರದಿ: ವಿನಯ್ ಭಟ್
ಇದನ್ನೂ ಓದಿ: ವನಿತೆಯರನ್ನು ಬಿಡದೆ ಕಾಡಿದ ಆರ್ಸಿಬಿ ಆಟಗಾರ್ತಿ; ಭಾರತ ವಿರುದ್ಧ 76 ರನ್ಗಳಿಂದ ಗೆದ್ದ ನ್ಯೂಜಿಲೆಂಡ್, ಸರಣಿ ಸಮಬಲ