ನನ್ನನ್ನು ಕ್ಷಮಿಸಿ; ಬಾರ್ಡರ್-ಗವಾಸ್ಕರ್ ಟ್ರೋಫಿಗೆ ಆಯ್ಕೆಯಾಗದ್ದಕ್ಕೆ ಮೊಹಮ್ಮದ್ ಶಮಿ ಮೊದಲ ಪ್ರತಿಕ್ರಿಯೆ ವೈರಲ್
ಕನ್ನಡ ಸುದ್ದಿ  /  ಕ್ರಿಕೆಟ್  /  ನನ್ನನ್ನು ಕ್ಷಮಿಸಿ; ಬಾರ್ಡರ್-ಗವಾಸ್ಕರ್ ಟ್ರೋಫಿಗೆ ಆಯ್ಕೆಯಾಗದ್ದಕ್ಕೆ ಮೊಹಮ್ಮದ್ ಶಮಿ ಮೊದಲ ಪ್ರತಿಕ್ರಿಯೆ ವೈರಲ್

ನನ್ನನ್ನು ಕ್ಷಮಿಸಿ; ಬಾರ್ಡರ್-ಗವಾಸ್ಕರ್ ಟ್ರೋಫಿಗೆ ಆಯ್ಕೆಯಾಗದ್ದಕ್ಕೆ ಮೊಹಮ್ಮದ್ ಶಮಿ ಮೊದಲ ಪ್ರತಿಕ್ರಿಯೆ ವೈರಲ್

ಬಾರ್ಡರ್-ಗವಾಸ್ಕರ್ ಟ್ರೋಫಿಗೆ ಆಯ್ಕೆಯಾದ 18 ಸದಸ್ಯರ ಭಾರತ ತಂಡದಲ್ಲಿ ಸ್ಥಾನ ಪಡೆಯದ ನಂತರ ಸ್ಟಾರ್​ ವೇಗಿ ಮೊಹಮ್ಮದ್ ಶಮಿ ಅವರು ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ವೇಗಿ ಮೊಹಮ್ಮದ್ ಶಮಿ
ವೇಗಿ ಮೊಹಮ್ಮದ್ ಶಮಿ (Action Images via Reuters)

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ನಡುವೆಯೇ ಪ್ರತಿಷ್ಠಿತ ಬಾರ್ಡರ್ ಗವಾಸ್ಕರ್​ ಟ್ರೋಫಿಗೆ (Border-Gavaskar Trophy) ಬಲಿಷ್ಠ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಮೊಹಮ್ಮದ್ ಶಮಿ (Mohammed Shami) ಸ್ಥಾನ ಪಡೆಯುವುದು ಖಚಿತ ಎನ್ನುವ ನಿರೀಕ್ಷೆ ಇತ್ತು. ಆದರೆ ಇನ್ನೂ ಫಿಟ್ ಆಗದ ಕಾರಣ ಕೊನೆಯ ಕ್ಷಣದಲ್ಲಿ ಹೆಸರು ಕೈ ತಪ್ಪಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿ ತಂಡದ ಆಯ್ಕೆಯಿಂದ ಹೊರಗುಳಿದ ನಂತರ ಮೊಹಮ್ಮದ್ ಶಮಿ ಅವರು ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ.

ಪ್ರಸ್ತುತ ಟೀಮ್ ಇಂಡಿಯಾ ನ್ಯೂಜಿಲೆಂಡ್ ಎದುರು ಭಾರತ ತಂಡ ಸೋಲು ಕಂಡಿದೆ. ಇನ್ನೂ ಒಂದು ಪಂದ್ಯ ಬಾಕಿ ಉಳಿದಿದ್ದು, ಗೆದ್ದು ವೈಟ್​ವಾಶ್ ಮುಖಭಂಗದಿಂದ ಪಾರಾಗಲು ಯೋಜನೆ ರೂಪಿಸಿದೆ. ಅಲ್ಲದೆ, 2025ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೆ ತಲುಪಲು ಈ ಗೆಲುವು ಮುಖ್ಯವಾಗಿದೆ. ಹಾಗೆಯೇ ಬಾರ್ಡರ್-ಗವಾಸ್ಕರ್ ಟ್ರೋಫಿ ಕೂಡ ಗೆಲ್ಲುವುದು ಪ್ರಮುಖವಾಗಿದೆ. ಆಸೀಸ್ ಪಿಚ್​​ಗಳಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ನೀಡಬೇಕಾಗಿದೆ.

ಸ್ಟಾರ್ ವೇಗಿ ಶಮಿ ಆಸೀಸ್ ಸರಣಿಗೆ ವರ್ಷದ ನಂತರ ಮರಳುತ್ತಾರೆ ಎಂಬ ನಿರೀಕ್ಷೆಗಳಿದ್ದರೂ ಅಂತಿಮ 18 ಜನರ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ. ಆಸ್ಟ್ರೇಲಿಯಾ ಪ್ರವಾಸಕ್ಕೆ ಸ್ಥಾನ ಪಡೆಯದ ನಂತರ ಶಮಿ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಜಿಮ್‌ನಲ್ಲಿ ಬೆವರು ಹರಿಸುತ್ತಿರುವ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ತಮ್ಮ ಫ್ಯಾನ್ಸ್​ ಮತ್ತು ಬಿಸಿಸಿಐಗೆ ಕ್ಷಮೆಯಾಚಿಸಿದ್ದಾರೆ. ಶೀಘ್ರದಲ್ಲೇ ರೆಡ್-ಬಾಲ್ ಕ್ರಿಕೆಟ್ ಆಡಲು ಮರಳಲು ಶ್ರಮಿಸುವುದಾಗಿ ಭರವಸೆ ನೀಡಿದ್ದಾರೆ.

ಪ್ರಯತ್ನ ಹಾಕುತ್ತಿದ್ದೇನೆ ಎಂದ ಶಮಿ

ನನ್ನ ಪ್ರಯತ್ನವನ್ನು ನಾನು ಹಾಕುತ್ತಿದ್ದೇನೆ. ನನ್ನ ಬೌಲಿಂಗ್ ಫಿಟ್​​ನೊಂದಿಗೆ ದಿನದಿಂದ ದಿನಕ್ಕೆ ಉತ್ತಮಗೊಳ್ಳುತ್ತಿದ್ದೇನೆ. ಪಂದ್ಯಕ್ಕೆ ತಯಾರಾಗಲು ಮತ್ತು ದೇಶೀಯ ರೆಡ್ ಬಾಲ್ ಕ್ರಿಕೆಟ್ ಆಡಲು ಕಠಿಣ ಪರಿಶ್ರಮ ಹಾಕುವುದನ್ನು ಮುಂದುವರಿಸುತ್ತಿದ್ದೇನೆ. ಎಲ್ಲಾ ಕ್ರಿಕೆಟ್ ಫ್ಯಾನ್ಸ್ ಮತ್ತು ಬಿಸಿಸಿಐಗೆ ಕ್ಷಮೆಯಾಚಿಸುತ್ತೇನೆ. ಆದರೆ, ಶೀಘ್ರದಲ್ಲೇ ನಾನು ರೆಡ್ ಬಾಲ್ ಕ್ರಿಕೆಟ್ ಆಡಲು ಸಿದ್ಧ. ಐ ಲವ್​ ಆಲ್​ ಎಂದು ಕ್ಯಾಪ್ಶನ್ ಬರೆದಿದ್ದಾರೆ. ನವೆಂಬರ್​ 22ರಿಂದ ಸರಣಿ ಆರಂಭವಾಗಲಿದೆ.

ಬಿಜಿಟಿಗೆ ಶಮಿಯನ್ನು ಏಕೆ ಆಯ್ಕೆ ಮಾಡಲಿಲ್ಲ?

2023ರ ಏಕದಿನ ವಿಶ್ವಕಪ್ ಫೈನಲ್‌ ನಂತರ ಮೊಹಮ್ಮದ್ ಶಮಿ ಪಾದದ ಗಾಯದ ಸಮಸ್ಯೆಗೆ ಒಳಗಾದರು. ಆದರೆ ಈ ಗಾಯವು ಸ್ಪರ್ಧಾತ್ಮಕ ಕ್ರಿಕೆಟ್​ನಿಂದ ಒಂದು ವರ್ಷದಿಂದ ಹೊರಗಿಟ್ಟಿದೆ. ತದ ನಂತರ ಲಂಡನ್​​​ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆ ಬಳಿಕ ಹಲವು ತಿಂಗಳ ಬಳಿಕ ವಿಶ್ರಾಂತಿ ಪಡೆದರು. ಆ ನಂತರ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಪುನರ್ವಸತಿ ಪಡೆದರು. ಬಿಜಿಟಿ ಸರಣಿಗೆ ಫಿಟ್ ಮಾಡಲು ಬಿಸಿಸಿಐ ಸಾಕಷ್ಟು ಕಷ್ಟಪಟ್ಟಿತು. ಆದರೆ ಅದು ಸಾಧ್ಯವಾಗಿಲ್ಲ.

ಎನ್​ಸಿಎನಲ್ಲಿ ರಿಹ್ಯಾಬ್​ನಲ್ಲಿದ್ದಾಗಲೇ ಮತ್ತೊಮ್ಮೆ ಮೊಣಕಾಲಿಗೆ ಗಾಯಗೊಂಡಿದ್ದರು. ಹೀಗಾಗಿ ಅದರಿಂದ ಚೇತರಿಸಿಕೊಳ್ಳಲು ಮತ್ತಷ್ಟು ಸಮಯ ಹಿಡಿಯುತ್ತಿದೆ. ದುರದೃಷ್ಟವಶಾತ್ ಅವರು ಆಸ್ಟ್ರೇಲಿಯಾಕ್ಕೆ ಎಲ್ಲಾ ಪ್ರಮುಖ ಪ್ರವಾಸವನ್ನು ಕಳೆದುಕೊಳ್ಳಬೇಕಾಯಿತು.

ಬಾರ್ಡರ್-ಗವಾಸ್ಕರ್ ಟ್ರೋಫಿಗೆ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಅಭಿಮನ್ಯು ಈಶ್ವರನ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ರಿಷಭ್ ಪಂತ್ (ವಿಕೆಟ್ ಕೀಪರ್​), ಸರ್ಫರಾಜ್ ಖಾನ್, ಧ್ರುವ್ ಜುರೆಲ್ (ವಿಕೆಟ್ ಕೀಪರ್​), ಆರ್ ಅಶ್ವಿನ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಪ್ರಸಿದ್ಧ್ ಕೃಷ್ಣ, ಹರ್ಷಿತ್ ರಾಣಾ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್.

Whats_app_banner