ಇಂಟರ್ನೆಟ್ನಲ್ಲಿ ಸದ್ದು ಮಾಡುತ್ತಿದೆ ಎಂಎಸ್ ಧೋನಿ ಹೊಸ ಹೇರ್ಸ್ಟೈಲ್; ಹಾಲಿವುಡ್ ಹೀರೋ ಎಂದ ಫ್ಯಾನ್ಸ್ -Photos
- ಐಪಿಎಲ್ ಸಮಯದಲ್ಲಿ ಹೊಸ ಕೇಶವಿನ್ಯಾಸ ಮಾಡಿ ಗಮನಸೆಳೆದಿದ್ದ ಎಂಎಸ್ ಧೋನಿ, ಇದೀಗ ಮತ್ತೊಮ್ಮೆ ಸಂಪೂರ್ಣ ವಿಭಿನ್ನ ಗೆಟಪ್ನಲ್ಲಿ ಹೇರ್ಕಟ್ ಮಾಡಿಸಿದ್ದಾರೆ. ಉದ್ದಕೂದಲಿಗೆ ಹೆಸರಾಗಿದ್ದ ಮಾಹಿ, ಈ ಬಾರಿ ಮತ್ತಷ್ಟು ಸ್ಟೈಲಿಶ್ ಲುಕ್ನೊಂದಿಗೆ ಬಂದಿದ್ದಾರೆ. ಈ ಫೋಟೋಗಳು ಇಲ್ಲಿವೆ.
- ಐಪಿಎಲ್ ಸಮಯದಲ್ಲಿ ಹೊಸ ಕೇಶವಿನ್ಯಾಸ ಮಾಡಿ ಗಮನಸೆಳೆದಿದ್ದ ಎಂಎಸ್ ಧೋನಿ, ಇದೀಗ ಮತ್ತೊಮ್ಮೆ ಸಂಪೂರ್ಣ ವಿಭಿನ್ನ ಗೆಟಪ್ನಲ್ಲಿ ಹೇರ್ಕಟ್ ಮಾಡಿಸಿದ್ದಾರೆ. ಉದ್ದಕೂದಲಿಗೆ ಹೆಸರಾಗಿದ್ದ ಮಾಹಿ, ಈ ಬಾರಿ ಮತ್ತಷ್ಟು ಸ್ಟೈಲಿಶ್ ಲುಕ್ನೊಂದಿಗೆ ಬಂದಿದ್ದಾರೆ. ಈ ಫೋಟೋಗಳು ಇಲ್ಲಿವೆ.
(1 / 7)
ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ ತಮ್ಮದೇ ಆದ ಶೈಲಿಯಿಂದ ಕ್ರಿಕೆಟ್ ಜಗತ್ತಿನಲ್ಲಿ ಛಾಪು ಮೂಡಿಸಿದ್ದಾರೆ. ಇಂದಿಗೂ, ಧೋನಿಯ ಕೇಶವಿನ್ಯಾಸವನ್ನು ಅಭಿಮಾನಿಗಳು ಇಷ್ಟಪಡುತ್ತಾರೆ. ಈ ಬಾರಿ ಮಾಹಿ ಹೊಸ ಶೈಲಿಯೊಂದಿಗೆ ಬಂದಿದ್ದಾರೆ.(Instagram)
(2 / 7)
ಮಾಹಿ ಅವರ ಹೊಸ ಹೇರ್ ಕಟ್ ಫೋಟೋಗಳು ಕಾಲಕಾಲಕ್ಕೆ ಹೊರಬರುತ್ತಲೇ ಇರುತ್ತವೆ. ಇದಕ್ಕೂ ಮುನ್ನವೂ ಮಹೇಂದ್ರ ಸಿಂಗ್ ಧೋನಿ ತಮ್ಮ ಹೊಸ ಶೈಲಿಯೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದರು.(Instagram)
(3 / 7)
ಸದ್ಯ ಎಂಎಸ್ ಧೋನಿ ರಾಂಚಿಯ ತಮ್ಮ ಫಾರ್ಮ್ಹೌಸ್ನಲ್ಲಿದ್ದಾರೆ. ಮುಂದಿನ ವರ್ಷ ನಡೆಯುವ ಐಪಿಎಲ್ 2025ರಲ್ಲಿ ಮಾಹಿ ಆಡುತ್ತಾರೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ, ಆದರೆ ಈ ಪ್ರಶ್ನೆಗೆ ಉತ್ತರವನ್ನು ತಿಳಿಯಲು ಅಭಿಮಾನಿಗಳು ತುಂಬಾ ಉತ್ಸುಕರಾಗಿದ್ದಾರೆ.
(4 / 7)
ಧೋನಿ ಶೀಘ್ರದಲ್ಲೇ ಸಿಎಸ್ಕೆ ಮ್ಯಾನೇಜ್ಮೆಂಟ್ ಅನ್ನು ಭೇಟಿಯಾಗುವ ಸಾಧ್ಯತೆಯಿದೆ ಮತ್ತು ಐಪಿಎಲ್ 2025ರಲ್ಲಿ ಆಡುವ ಬಗ್ಗೆ ನಿರ್ಣಾಯಕ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ.
(5 / 7)
ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಅಲೀಮ್ ಹಕೀಮ್ ಧೋನಿಗೆ ಈ ಲುಕ್ ನೀಡಿದ್ದಾರೆ. ಈ ಹಿಂದೆಯೂ ಹಕೀಮ್ ಅವರೇ ಎಂಎಸ್ ಧೋನಿಗೆ ಹೇರ್ ಕಟ್ ಮಾಡಿಸಿದ್ದರು. ಈಗ ತಮ್ಮ ಹೊಸ ಕೇಶವಿನ್ಯಾಸ ನೋಟದಲ್ಲಿ ಮಾಹಿ ಅದ್ಭುತವಾಗಿ ಕಾಣುತ್ತಿದ್ದಾರೆ. ಧೋನಿಯ ರೆಟ್ರೋ ಸ್ಟೈಲ್ ಎಲ್ಲರಿಗೂ ಇಷ್ಟವಾಗಿದೆ. ಎಂಎಸ್ ಧೋನಿ ಅವರ ಹೊಸ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಭಿಮಾನಿಗಳು ಬಗೆಬಗೆಯ ಕಾಮೆಂಟ್ ಮಾಡುತ್ತಿದ್ದಾರೆ.
(6 / 7)
ಚಿತ್ರದಲ್ಲಿ ಮಾಹಿ ಹೊಸ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹೇರ್ ಕಟ್ ಮಾಹಿಗೆ ತುಂಬಾ ಚೆನ್ನಾಗಿ ಕಾಣುತ್ತದೆ. ಕೂದಲನ್ನು ಚಿಕ್ಕದಾಗಿ ಕತ್ತರಿಸಿರುವ ಮಾಹ ಲೈಟ್ ಹಾಗಿ ಬಣ್ಣ ಹಾಕಿಸಿದ್ದಾರೆ.
ಇತರ ಗ್ಯಾಲರಿಗಳು