IPL 2025 Mega Auction: ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಈ ಐವರಿಗೆ ಹಣದ ಮಳೆ, ಆ ಆಟಗಾರರು ಯಾರು ನೋಡಿ
Nov 07, 2024 12:04 PM IST
2025ರ ಐಪಿಎಲ್ ಮೆಗಾ ಹರಾಜು
- ಭಾರತದ ವಿಕೆಟ್ ಕೀಪರ್-ಕಮ್-ಬ್ಯಾಟರ್ ರಿಷಬ್ ಪಂತ್ ಅತಿ ಹೆಚ್ಚು ಮೊತ್ತಕ್ಕೆ ಬಿಡ್ ಮಾಡಬಹುದಾದ ಐದು ವಿಕೆಟ್ ಕೀಪರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಈಗಾಗಲೇ ಐದಾರು ಫ್ರಾಂಚೈಸಿಗಳು ಪಂತ್ ಖರೀದಿಸಲು ಮುಂದಾಗಿವೆ. ಈ ಐದು ಫ್ರಾಂಚೈಸಿಗಳಲ್ಲಿ ಆರ್‌ಸಿಬಿ, ಸಿಎಸ್ಕೆ, ಪಂಬಾಬ್ ಕಿಂಗ್ಸ್, ಲಕ್ನೋ ಮತ್ತು ಕೆಕೆಆರ್ ಸೇರಿವೆ.
ಐಪಿಎಲ್ 2025ರ ಮೆಗಾ ಹರಾಜು ನವೆಂಬರ್ 24 ಮತ್ತು 25 ರಂದು ಜಿದ್ದಾದಲ್ಲಿ ನಡೆಯಲಿದೆ. ಈ ಮೆಗಾ ಹರಾಜಿನಲ್ಲಿ ಒಟ್ಟು 1574 ಕ್ರಿಕೆಟಿಗರು ಸ್ಥಾನ ಪಡೆದುಕೊಂಡಿದ್ದಾರೆ. ಇವರಲ್ಲಿ ಯಾರಿಗೆ ಹೆಚ್ಚು ಹಣ ಸಿಗಲಿದೆ, ಯಾರು ದಾಖಲೆಯ ಮೊತ್ತಕ್ಕೆ ಸೇಲ್ ಆಗಲಿದ್ದಾರೆ ಎಂಬ ಲೆಕ್ಕಾಚಾರ ಈಗಾಗಲೇ ಶುರುವಾಗಿದೆ. ಮುಖ್ಯವಾಗಿ ವಿಕೆಟ್ ಕೀಪರ್‌ಗಳ ಮಧ್ಯೆ ಕಠಿಣ ಪೈಪೋಟಿ ಏರ್ಪಟ್ಟಿದೆ. ಸದ್ಯ ಈ ಐದು ಸ್ಟಾರ್ ವಿಕೆಟ್ ಕೀಪರ್‌ಗಳು ದೊಡ್ಡ ಮೊತ್ತಕ್ಕೆ ಹರಾಜಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಭಾರತದ ವಿಕೆಟ್ ಕೀಪರ್-ಕಮ್-ಬ್ಯಾಟರ್ ರಿಷಬ್ ಪಂತ್ ಅತಿ ಹೆಚ್ಚು ಮೊತ್ತಕ್ಕೆ ಬಿಡ್ ಮಾಡಬಹುದಾದ ಐದು ವಿಕೆಟ್ ಕೀಪರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಈಗಾಗಲೇ ಐದಾರು ಫ್ರಾಂಚೈಸಿಗಳು ಪಂತ್ ಖರೀದಿಸಲು ಮುಂದಾಗಿವೆ. ಈ ಐದು ಫ್ರಾಂಚೈಸಿಗಳಲ್ಲಿ ಆರ್‌ಸಿಬಿ, ಸಿಎಸ್ಕೆ, ಪಂಬಾಬ್ ಕಿಂಗ್ಸ್, ಲಕ್ನೋ ಮತ್ತು ಕೆಕೆಆರ್ ಸೇರಿವೆ. ತಂಡಕ್ಕೆ ಸೇರ್ಪಡೆಗೊಳ್ಳುವುದರಿಂದ ವಿಕೆಟ್ ಕೀಪರ್ ಜೊತೆಗೆ ಸ್ಫೋಟಕ ಬ್ಯಾಟ್ಸ್‌ಮನ್ ಹಾಗೂ ನಾಯಕನಾಗಿ ಮಿಂಚಲಿರುವ ಪಂತ್ ಮೇಲೆ ಎಲ್ಲ ಫ್ರಾಂಚೈಸಿಗಳು ಕಣ್ಣಿಟ್ಟಿವೆ.
ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ತೊರೆದಿರುವ ಕೆಎಲ್ ರಾಹುಲ್ ಅವರಿಗೂ ಹಲವು ಫ್ರಾಂಚೈಸಿಗಳು ಗಾಳ ಹಾಕುತ್ತಿವೆ. ಪಂತ್‌ರಂತೆ ರಾಹುಲ್ ತಂಡವನ್ನು ಸೇರಿಕೊಳ್ಳುವುದರಿಂದ ತಂಡಕ್ಕೆ ವಿಕೆಟ್ ಕೀಪರ್ ಜೊತೆಗೆ ಸ್ಫೋಟಕ ಬ್ಯಾಟ್ಸ್‌ಮನ್ ಹಾಗೂ ನಾಯಕ ಕೂಡ ಸಿಗಲಿದ್ದು, ಎಲ್ಲಾ ಫ್ರಾಂಚೈಸಿಗಳು ರಾಹುಲ್ ಮೇಲೆ ಕಣ್ಣಿಟ್ಟಿವೆ. ಮುಖ್ಯವಾಗಿ ರಾಹುಲ್ ಅವರನ್ನು ಖರೀದಿಸಲು ಆರ್‌ಸಿಬಿ ಮುಂದಾಗಿದೆ ಎನ್ನಲಾಗಿದೆ.
ಈ ಹಿಂದೆ ಮುಂಬೈ ಇಂಡಿಯನ್ಸ್ ಪರ ಆಡಿದ್ದ ಇಶಾನ್ ಕಿಶನ್ ಕೂಡ ಮೆಗಾ ಹರಾಜಿನಲ್ಲಿ ದುಬಾರಿ ಮೊತ್ತಕ್ಕೆ ಸೇಲ್ ಆಗುವುದು ಖಚಿತವಾಗಿದೆ. ಮುಂಬೈ ತಂಡದಲ್ಲಿ ಈಗಾಗಲೇ ಐದು ಸೀಮಿತ ಓವರ್‌ಗಳ ಆಟಗಾರರನ್ನು ಉಳಿಸಿಕೊಂಡಿರುವುದರಿಂದ ಕಿಶನ್‌ಗಾಗಿ ಆರ್‌ಟಿಎಂ ಕಾರ್ಡ್ ಅನ್ನು ಬಳಸಲಾಗುವುದಿಲ್ಲ. ಇದರೊಂದಿಗೆ ಮುಂದಿನ ಆವೃತ್ತಿಯಿಂದ ಕಿಶನ್ ಹೊಸ ತಂಡದೊಂದಿಗೆ ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಕಿಶನ್ ವಿಕೆಟ್ ಕೀಪರ್ ಮಾತ್ರವಲ್ಲದೆ ಆರಂಭಿಕ ಬ್ಯಾಟ್ಸ್‌ಮನ್ ಕೂಡ ಆಗಿದ್ದು, ತಂಡಕ್ಕೆ ವೇಗದ ಸ್ಫೋಟಕ ನೀಡುವಲ್ಲಿ ಹೆಸರುವಾಸಿಯಾಗಿದ್ದಾರೆ.
ಕಳೆದ ಕೆಲವು ಆವೃತ್ತಿಗಳಲ್ಲಿ ರಾಜಸ್ಥಾನ್ ರಾಯಲ್ಸ್ನ ಮುಖ್ಯ ಬ್ಯಾಟರ್ ಆಗಿದ್ದ ಇಂಗ್ಲಿಷ್ ಆಟಗಾರ ಜೋಸ್ ಬಟ್ಲರ್ ಅವರನ್ನು ಇದೀಗ ತಂಡದಿಂದ ಕೈಬಿಡಲಾಗಿದೆ. ಫ್ರಾಂಚೈಸಿ ಈಗಾಗಲೇ ಆರು ಆಟಗಾರರನ್ನು ತಂಡದಲ್ಲಿ ಉಳಿಸಿಕೊಂಡಿದ್ದು, ಬಟ್ಲರ್ ಮುಂದಿನ ಆವೃತ್ತಿಯಿಂದ ಹೊಸ ತಂಡದೊಂದಿಗೆ ಆಡಲಿದ್ದಾರೆ. ಬಟ್ಲರ್ ಆರಂಭಿಕರಾಗಿ ಮಾತ್ರವಲ್ಲದೆ ವಿಕೆಟ್ ಕೀಪರ್ ಆಗಿಯೂ ತಂಡಕ್ಕೆ ನೆರವಾಗಬಲ್ಲರು.
ದಕ್ಷಿಣ ಆಫ್ರಿಕಾದ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್ ಅವರನ್ನು ಲಕ್ನೋ ಸೂಪರ್‌ಜೈಂಟ್ಸ್ ಫ್ರಾಂಚೈಸಿ ಹರಾಜಿಗೆ ಬಿಡುಗಡೆ ಮಾಡಿದೆ. ಹಾಗಾಗಿ ಅವರು ಆರಂಭಿಕರಾಗಿ ಮಾತ್ರವಲ್ಲದೆ ವಿಕೆಟ್ ಕೀಪರ್ ಆಗಿಯೂ ತಂಡಕ್ಕೆ ಕೊಡುಗೆ ನೀಡಬಲ್ಲರು. ಡಿಕಾಕ್ ಅನ್ನು ಖರೀದಿಸಲು ಹಲಲವು ಫ್ರಾಂಚೈಸಿಗಳು ಮುಂದೆ ಬರಲಿವೆ.
ವರದಿ: ವಿನಯ್ ಭಟ್