logo
ಕನ್ನಡ ಸುದ್ದಿ  /  ಕ್ರಿಕೆಟ್  /  Ipl Auction 2025: ಜಿಯೊ ಸಿನಿಮಾದಲ್ಲಿ ಸಮಸ್ಯೆ: ಐಪಿಎಲ್ ಹರಾಜು ನೋಡಲು ಪರ್ಯಾಯವೇನು? ಸಂಪೂರ್ಣ ಮಾಹಿತಿ ಇಲ್ಲಿದೆ

IPL Auction 2025: ಜಿಯೊ ಸಿನಿಮಾದಲ್ಲಿ ಸಮಸ್ಯೆ: ಐಪಿಎಲ್ ಹರಾಜು ನೋಡಲು ಪರ್ಯಾಯವೇನು? ಸಂಪೂರ್ಣ ಮಾಹಿತಿ ಇಲ್ಲಿದೆ

Raghavendra M Y HT Kannada

Nov 24, 2024 07:34 PM IST

google News

ಐಪಿಎಲ್ ಹರಾಜು ಪ್ರಕ್ರಿಯೆ ಆರಂಭಕ್ಕೆ ಕೆಲವು ನಿಮಿಷಗಳು ಮುನ್ನೂ ಜಿಯೊ ಸೇವೆ ಸ್ಥಗಿತಗೊಂಡಿತ್ತು ಎಂದು ವರದಿಯಾಗಿದೆ. ಸಮಸ್ಯೆಯನ್ನು ಬಗೆಹರಿಸಲಾಗಿದೆ

    • ಜೆಡ್ಡಾದಲ್ಲಿನ ಐಪಿಎಲ್ ಹರಾಜು ಆರಂಭಕ್ಕೂ ಮುನ್ನವೇ ಜಿಯೊ ಸಿನಿಮಾ ಫ್ಲಾಟ್ ಫಾರ್ಮ್ ನಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಕೂಡಲೇ ಎಚ್ಚೆತ್ತು ಈ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಒಂದು ವೇಳೆ ನಿಮ್ಮ ಮೊಬೈಲ್ ಆ್ಯಪ್ ಅಥವಾ ವೆಬೈ ಸೈಟ್ ನಲ್ಲಿ ಐಪಿಎಲ್ ಹರಾಜು ಲೈವ್ ಸ್ಟ್ರೀಮಿಂಗ್ ಸಾಧ್ಯವಾಗುತ್ತಿಲ್ಲ ಎಂದಾದರೆ ನಿಮಗಾಗಿ ಅಗತ್ಯ ಮಾಹಿತಿ ಇಲ್ಲಿದೆ.
ಐಪಿಎಲ್ ಹರಾಜು ಪ್ರಕ್ರಿಯೆ ಆರಂಭಕ್ಕೆ ಕೆಲವು ನಿಮಿಷಗಳು ಮುನ್ನೂ ಜಿಯೊ ಸೇವೆ ಸ್ಥಗಿತಗೊಂಡಿತ್ತು ಎಂದು ವರದಿಯಾಗಿದೆ. ಸಮಸ್ಯೆಯನ್ನು ಬಗೆಹರಿಸಲಾಗಿದೆ
ಐಪಿಎಲ್ ಹರಾಜು ಪ್ರಕ್ರಿಯೆ ಆರಂಭಕ್ಕೆ ಕೆಲವು ನಿಮಿಷಗಳು ಮುನ್ನೂ ಜಿಯೊ ಸೇವೆ ಸ್ಥಗಿತಗೊಂಡಿತ್ತು ಎಂದು ವರದಿಯಾಗಿದೆ. ಸಮಸ್ಯೆಯನ್ನು ಬಗೆಹರಿಸಲಾಗಿದೆ

ಸೌದಿ ಅರೇಬಿಯಾದ ಜೆಡ್ಡಾದಲ್ಲಿ 2 ದಿನಗಳ ಐಪಿಎಲ್ 2025 ಹರಾಜು ಪ್ರಕ್ರಿಯೆ ಇಂದು (ನವೆಂಬರ್ 24, ಭಾನುವಾರ) ಆರಂಭವಾಗಿದೆ. ಆದರೆ ಹರಾಜು ಪ್ರಕ್ರಿಯೆ ಆರಂಭಕ್ಕೂ ಮುನ್ನವೇ ತಾಂತ್ರಿಕ ದೋಷದಿಂದ ಜಿಯೊ ಸಿನಿಮಾ ಡಿಜಿಟಲ್ ತಾಣ ಸ್ಥಗಿತಗೊಂಡಿದೆ. ಆನ್ ಲೈನ್ ಮೂಲಕ ಹರಾಜು ಪ್ರಕ್ರಿಯೆಯನ್ನು ವೀಕ್ಷಿಸಬೇಕೆಂದು ಪ್ಲಾನ್ ಮಾಡಿಕೊಂಡಿದ್ದ ಜಿಯೊ ಸಿನಿಮಾ ಗ್ರಾಹಕರಿಗೆ ಇದು ಬಾರಿ ನಿರಾಸೆ ಮೂಡಿಸುವ ಸಾಧ್ಯತೆ ಇತ್ತು. ಆದರೆ ಈ ಸಂಬಂಧ ದೂರುಗಳು ಬಂದ ಕೂಡಲೇ ಎಚ್ಚೆತ್ತು ಭಾನುವಾರ (ನವೆಂಬರ್ 24) ಮಧ್ಯಾಹ್ನ 3.30 ರೊಳಗೆ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಐಪಿಎಲ್ ಹರಾಜು ಪ್ರಕ್ರಿಯೆ 3.30ಕ್ಕೆ ಆರಂಭವಾಯಿತು.

ಆನ್ ಲೈನ್ ಸಮಸ್ಯೆಗಳ ಬಗ್ಗೆ ವರದಿ ಮಾಡುವ ಡೌನ್ ಡೆಕ್ಟರ್ ಮಾಹಿತಿ ಪ್ರಕಾರ, ಜಿಯೊ ಸಿನಿಮಾಗೆ ಸಂಬಂಧಿಸಿದಂತೆ ಶೇಕಡಾ 39 ರಷ್ಟು ಮೊಬೈಲ್ ಇಂಟರ್ನೆಟ್, ಶೇಕಡಾ 31 ರಷ್ಟು ವೆಬ್ ಸೈಟ್ ಸಮಸ್ಯೆಗಳ ಬಗ್ಗೆ ವರದಿಗಳು ಬಂದಿವೆ ಎಂದು ತಿಳಿಸಿದೆ.

ಜಿಯೊ ಸಿನಿಮಾ ಸಮಸ್ಯೆಗಳನ್ನು ಬಗೆಹರಿಸಿದೆ. ಒಂದು ವೇಳೆ ನಿಮ್ಮ ಮೊಬೈಲ್ ಅಥವಾ ವೈಬ್ ಸೈಟ್ ನಲ್ಲಿ ಇನ್ನೂ ಎರರ್ ಬರುತ್ತಿದ್ದರೆ ಈ ಕೆಳಗೆ ನೀಡಿರುವ ಹಂತಗಳ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ

  • ಮೊದಲು ನಿಮ್ಮ ಇಂಟರ್ ನೆಟ್ ಅನ್ನು ಪರಿಶೀಲಿಸಿಕೊಳ್ಳಿ - ನಿಮ್ಮ ವೈ-ಫೈ ಅಥವಾ ಮೊಬೈಲ್ ಡೇಟಾ ಇದೆಯಾ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಸ್ಟೀಮಿಂಗ್ ನೆರವಾಗುವಂತ ಇಂಟರ್ ನೆಟ್ ಸ್ಪೀಡ್ ಮತ್ತು ಆಫರ್ ಗಳನ್ನು ಪರಿಶೀಲಿಸಿಕೊಳ್ಳಿ
  • ಕ್ಯಾಚಿ ಮತ್ತು ಡೇಟಾವನ್ನು ಕ್ಲಿಯರ್ ಮಾಡಿ - ಆಂಡ್ರಾಯ್ಡ್ ಮೊಬೈಲ್ ಫೋನ್ ನಲ್ಲಿ ಸೆಟ್ಟಿಂಗ್ - ಆ್ಯಪ್ಸ್ - ಜಿಯೊ ಸಿನಿಮಾ - ಸ್ಟೋರೇಜ್ ಗೆ ಹೋಗಿ ಕ್ಯಾಚಿ ಮತ್ತು ಡೇಟಾವನ್ನು ಕ್ಲಿಯರ್ ಮಾಡಿ
  • ಆ್ಯಪ್ ಅಪ್ಡೇಟ್ ಮಾಡಿ - ಜಿಯೊ ಸಿನಿಮಾದ ಲೇಟೆಸ್ಟ್ ಆ್ಯಪ್ ಅನ್ನು ನೀವು ಬಳಸುತ್ತಿದ್ದೀರಾ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇದಕ್ಕಾಗಿ ಆ್ಯಪ್ ಅನು ಅಪ್ಡೇಟ್ ಮಾಡಿಕೊಳ್ಳಿ
  • ಆ್ಯಪ್ ರಿಇನ್‌ಸ್ಟಾಲ್ ಮಾಡಿ - ಒಂದು ವೇಳೆ ಎರರ್ ಮುಂದುವರಿದಿದ್ದರೆ ಆ್ಯಪ್ ಅನ್ನು ರಿಇನ್‌ಸ್ಟಾಲ್ ಮಾಡಿ ನೋಡಿ
  • ಜಿಯೊ ಸಿನಿಮಾ ವೆಬ್ ಸೈಟ್ ನಿಂದ ಪ್ರಯತ್ನಿಸಿ - www.jiocinema.com ಗೆ ಲಾಗಿ ಆಗಿ ಈ ವೆಬ್ ಸೈಟ್ ಮೂಲಕವೂ ಸ್ಟ್ರೀಮಿಂಗ್ ಪ್ರಯತ್ನಿಸಿ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ಮೆಗಾ ಹರಾಜು ಇದೇ ಮೊದಲ ಬಾರಿಗೆ ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯುತ್ತಿದೆ. ವಿದೇಶದಲ್ಲಿ ನಡೆಯುತ್ತಿರುವ ಎರಡನೆ ಹರಾಡು ಇದಾಗಿದೆ. ಕಳೆದ ವರ್ಷ ದುಬೈನಲ್ಲಿ ಐಪಿಎಲ್ ಹರಾಜು ನಡೆದಿತ್ತು.

ಐಪಿಎಲ್ 2025 ರ ಮೆಗಾ ಹರಾಜಿಗೆ 1574 ಆಟಗಾರರ ಪೈಕಿ, ಬಿಸಿಸಿಐ ಆರಂಭದಲ್ಲಿ ಒಟ್ಟು 574 ಹೆಸರನ್ನು ಅಂತಿಮಗೊಳಿಸಿತ್ತು. ಇದಾದ ಬಳಿಕ ಮೂರು ಹೆಸರುಗಳು - ಜೋಫ್ರಾ ಆರ್ಚರ್ (ಇಂಗ್ಲೆಂಡ್), ಸೌರಭ್ ನೇತ್ರವಲ್ಕರ್ (ಯುಎಸ್ಎ) ಹಾಗೂ ಹಾರ್ದಿಕ್ ತಮೋರ್ (ಭಾರತ) ಅವರನ್ನು ನಂತರ ಪಟ್ಟಿಗೆ ಸೇರಿಸಲಾಯಿತು. ಹೀಗಾಗಿ ಅಂತಿಮ ಪಟ್ಟಿ 577 ಆಗಿದೆ. ಅಂತಿಮ ಪಟ್ಟಿಯಲ್ಲಿ 367 ಭಾರತೀಯ ಆಟಗಾರರು ಹಾಗೂ 210 ವಿದೇಶಿ ಕ್ರಿಕೆಟಿಗರು ಇದ್ದಾರೆ.

ಅನ್‌ಕ್ಯಾಪ್ಡ್ ಆಟಗಾರರ ಪಟ್ಟಿಯಲ್ಲಿ 319 ಭಾರತೀಯರಿದ್ದರೆ, 12 ವಿದೇಶಿ ಆಟಗಾರರು ಇದ್ದಾರೆ. ಹರಾಜಿನಲ್ಲಿ 70 ಸಾಗರೋತ್ತರ ಸ್ಲಾಟ್‌ಗಳನ್ನು ಒಳಗೊಂಡಂತೆ ಎಲ್ಲಾ 10 ತಂಡಗಳು ಒಟ್ಟು 204 ಸ್ಲಾಟ್‌ಗಳನ್ನು ಭರ್ತಿ ಮಾಡಲಿವೆ. ಏತನ್ಮಧ್ಯೆ, ಏಳು ಭಾರತೀಯರು ಎರಡು ಮಾರ್ಕ್ಯೂ ಸೆಟ್‌ಗಳಲ್ಲಿ ಸ್ಥಾನ ಪಡೆದಿದ್ದಾರೆ. ಅವರೆಂದರೆ ರಿಷಬ್ ಪಂತ್, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಯುಜ್ವೇಂದ್ರ ಚಾಹಲ್ ಮತ್ತು ಅರ್ಷದೀಪ್ ಸಿಂಗ್ ಗೆ ಹರಾಜಿನಲ್ಲಿ 2 ಕೋಟಿ ಮೂಲ ಬೆಲೆ ನಿಗದಿಯಾಗಿತ್ತು. ಈ ಎಲ್ಲಾ ಆಟಗಾರರು ಉತ್ತಮ ಮೊತ್ತಕ್ಕೆ ತಂಡಗಳ ಪಾಲಾಗಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ