logo
ಕನ್ನಡ ಸುದ್ದಿ  /  ಕ್ರಿಕೆಟ್  /  Test Ranking: ಟೆಸ್ಟ್ ರ‍್ಯಾಂಕಿಂಗ್​ನಲ್ಲಿ ಜಸ್ಪ್ರೀತ್ ಬುಮ್ರಾ ಮತ್ತೆ ನಂ 1, ಯಶಸ್ವಿ ಜೈಸ್ವಾಲ್ ನಂ 2

Test Ranking: ಟೆಸ್ಟ್ ರ‍್ಯಾಂಕಿಂಗ್​ನಲ್ಲಿ ಜಸ್ಪ್ರೀತ್ ಬುಮ್ರಾ ಮತ್ತೆ ನಂ 1, ಯಶಸ್ವಿ ಜೈಸ್ವಾಲ್ ನಂ 2

Prasanna Kumar P N HT Kannada

Nov 27, 2024 06:07 PM IST

google News

ಭಾರತದ ಆಟಗಾರರಿಗೆ ಬಂಪರ್ ಲಾಟರಿ; ಟೆಸ್ಟ್ ರ‍್ಯಾಂಕಿಂಗ್​ನಲ್ಲಿ ಅಗ್ರಸ್ಥಾನಕ್ಕೇರಿದ ಜಸ್ಪ್ರೀತ್ ಬುಮ್ರಾ, ಯಶಸ್ವಿ ಜೈಸ್ವಾಲ್ 2ನೇ ಸ್ಥಾನ!

    • ICC Test Ranking: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್​​ನಲ್ಲಿ ಪರಾಕ್ರಮ ತೋರಿದ ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ಅವರು ಟೆಸ್ಟ್ ರ್ಯಾಂಕಿಂಗ್​ನಲ್ಲಿ ನಂಬರ್ 1 ಟೆಸ್ಟ್ ಪಟ್ಟಕ್ಕೇರಿದ್ದಾರೆ. ಶತಕ ಸಿಡಿಸಿದ ಯಶಸ್ವಿ ಜೈಸ್ವಾಲ್ ಎರಡನೇ ಸ್ಥಾನಕ್ಕೇರಿದ್ದಾರೆ.
ಭಾರತದ ಆಟಗಾರರಿಗೆ ಬಂಪರ್ ಲಾಟರಿ; ಟೆಸ್ಟ್ ರ‍್ಯಾಂಕಿಂಗ್​ನಲ್ಲಿ ಅಗ್ರಸ್ಥಾನಕ್ಕೇರಿದ ಜಸ್ಪ್ರೀತ್ ಬುಮ್ರಾ, ಯಶಸ್ವಿ ಜೈಸ್ವಾಲ್ 2ನೇ ಸ್ಥಾನ!
ಭಾರತದ ಆಟಗಾರರಿಗೆ ಬಂಪರ್ ಲಾಟರಿ; ಟೆಸ್ಟ್ ರ‍್ಯಾಂಕಿಂಗ್​ನಲ್ಲಿ ಅಗ್ರಸ್ಥಾನಕ್ಕೇರಿದ ಜಸ್ಪ್ರೀತ್ ಬುಮ್ರಾ, ಯಶಸ್ವಿ ಜೈಸ್ವಾಲ್ 2ನೇ ಸ್ಥಾನ!

ಟೆಸ್ಟ್ ಕ್ರಿಕೆಟ್​ ನೂತನ ರ‍್ಯಾಂಕಿಂಗ್‌ ಪ್ರಕಟಗೊಂಡಿದ್ದು, ಪರ್ತ್​ ಟೆಸ್ಟ್ ಗೆದ್ದುಕೊಟ್ಟ ಭಾರತದ ಆಟಗಾರರಿಗೆ ಬಂಪರ್​ ಲಾಟರಿ ಹೊಡೆದಿದೆ. ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್​​ನಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಮತ್ತು ಬೌಲಿಂಗ್​ನಲ್ಲಿ ಆತಿಥೇಯರಿಗೆ ಕಾಡಿದ ಜಸ್ಪ್ರೀತ್ ಬುಮ್ರಾ ಶ್ರೇಯಾಂಕದಲ್ಲಿ ಭರ್ಜರಿ ಪ್ರಗತಿ ಕಂಡಿದ್ದಾರೆ. ಬ್ಯಾಟಿಂಗ್ ವಿಭಾಗದಲ್ಲಿ ಯಶಸ್ವಿ, ಎರಡನೇ ಸ್ಥಾನಕ್ಕೇರಿದ್ದು, ಅಗ್ರಸ್ಥಾನಕ್ಕೇರಲು ಒಂದೇ ಹೆಜ್ಜೆ ಬಾಕಿ ಉಳಿದಿದೆ. ಬೌಲಿಂಗ್​ ವಿಭಾಗದಲ್ಲಿ ಬುಮ್ರಾ ನಂಬರ್ 1 ಪಟ್ಟ ಅಲಂಕರಿಸಿದ್ದಾರೆ.

ಆಸೀಸ್ ವಿರುದ್ಧ ಶತಕ, ಅಗ್ರಸ್ಥಾನದತ್ತ ಜೈಸ್ವಾಲ್

ಪರ್ತ್​ ಟೆಸ್ಟ್ ಪಂದ್ಯದಲ್ಲಿ ಅಬ್ಬರಿಸಿ ಬೊಬ್ಬರಿದ 22 ವರ್ಷದ ಯುವ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್ ಅವರು ಟೆಸ್ಟ್ ಶ್ರೇಯಾಂಕದಲ್ಲಿ ನಾಲ್ಕನೇ ಸ್ಥಾನದಿಂದ 2ನೇ ಸ್ಥಾನ ಮೇಲೇರಿ ದ್ವಿತೀಯ ಸ್ಥಾನಕ್ಕೇರಿದ್ದಾರೆ. ಇದೀಗ ನಂಬರ್​ 1 ಪಟ್ಟವನ್ನು ಅಲಂಕರಿಸಲು ದಿಟ್ಟ ಹೆಜ್ಜೆಯನ್ನಿಟ್ಟಿದ್ದಾರೆ. ಪರ್ತ್​ ಟೆಸ್ಟ್​ನಲ್ಲಿ ಮೊದಲ ಇನ್ನಿಂಗ್ಸ್​​ನಲ್ಲಿ ಡಕೌಟ್ ಆಗಿದ್ದ ಜೈಸ್ವಾಲ್, 2ನೇ ಇನ್ನಿಂಗ್ಸ್​​ನಲ್ಲಿ 161 ರನ್ ಚಚ್ಚಿದ್ದರು. ಈ ಅದ್ಭುತ ಪ್ರದರ್ಶನದ ಹಿನ್ನೆಲೆ ಎರಡು ಸ್ಥಾನಕ್ಕೇರಿದ್ದಾರೆ. ತವರಿನಲ್ಲಿ ನ್ಯೂಜಿಲೆಂಡ್ ಎದುರಿನ ಸರಣಿಯಲ್ಲಿ ಮಿಂಚಿದ್ದರೆ ಇನ್ನಷ್ಟು ರೇಟಿಂಗ್ ಅಂಕ ಪಡೆಯುತ್ತಿದ್ದರು. ಜೈಸ್ವಾಲ್ ರೇಟಿಂಗ್ ಅಂಕ 825 ಇದೆ. ಮೊದಲ ಸ್ಥಾನ ಜೋ ರೂಟ್ ಇದ್ದಾರೆ.

ವೀರಾವೇಶದ ಬೌಲಿಂಗ್, ನಂಬರ್ 1 ಆದ ಬುಮ್ರಾ

ಪರ್ತ್​ ಟೆಸ್ಟ್​​ನಲ್ಲಿ ವೇಗಿ ಜಸ್ಪ್ರೀತ್ ಬುಮ್ರಾ ಅವರು ಒಟ್ಟು 8 ವಿಕೆಟ್ ಉರುಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಮೊದಲ ಇನ್ನಿಂಗ್ಸ್​ನಲ್ಲಿ 5 ವಿಕೆಟ್ ಗೊಂಚಲು, ಎರಡನೇ ಇನ್ನಿಂಗ್ಸ್​ನಲ್ಲಿ 3 ವಿಕೆಟ್ ಪಡೆದ ಬುಮ್ರಾ, ಆಸೀಸ್​ ಹೆಡೆಮುರಿಕಟ್ಟುವಲ್ಲಿ ಯಶಸ್ವಿಯಾದರು. ಅಮೋಘ ಪ್ರದರ್ಶನದ ಹಿನ್ನೆಲೆ 2 ಸ್ಥಾನ ಮೇಲೇರಿ ಮತ್ತೆ ನಂ​ಬರ್ 1 ಪಟ್ಟ ಅಲಂಕರಿಸಿದ್ದಾರೆ. ರ್ಯಾಂಕಿಂಗ್​ನಲ್ಲಿ 883 ರೇಟಿಂಗ್​ ಅಂಕ ಪಡೆದಿದ್ದಾರೆ. ಇದಕ್ಕೂ ಮುನ್ನ 3ನೇ ಸ್ಥಾನದಲ್ಲಿದ್ದರು. ಅಗ್ರಸ್ಥಾನದಲ್ಲಿದ್ದ ಸೌತ್ ಆಫ್ರಿಕಾದ ಕಗಿಸೋ ರಬಾಡ 2ನೇ ಸ್ಥಾನಕ್ಕೆ ಕುಸಿದಿದ್ದಾರೆ. ಟಾಪ್-10 ಪಟ್ಟಿಯಲ್ಲಿ ಬುಮ್ರಾ ಜೊತೆಗೆ ಅಶ್ವಿನ್, ಜಡೇಜಾ ಸಹ ಇದ್ದಾರೆ.

ಶತಕ ಸಿಡಿಸಿದ ವಿರಾಟ್ ಕೊಹ್ಲಿ ಎಲ್ಲಿದ್ದಾರೆ?

ಆಸ್ಟ್ರೇಲಿಯಾ ವಿರುದ್ಧವೇ ಶತಕ ಸಿಡಿಸಿದ ವಿರಾಟ್ ಕೊಹ್ಲಿ ಭರ್ಜರಿ ಏರಿಕೆ ಕಂಡಿದ್ದಾರೆ. ಮೊದಲ ಇನ್ನಿಂಗ್ಸ್​​ನಲ್ಲಿ 5 ರನ್ ಗಳಿಸಿದ್ದ ಕೊಹ್ಲಿ, ಎರಡನೇ ಇನ್ನಿಂಗ್ಸ್​ನಲ್ಲಿ ಅಜೇಯ 100 ರನ್ ಚಚ್ಚಿದರು. ಆದರೆ ಈ ಸರಣಿಗೂ ಮುನ್ನ ಟಾಪ್​-20 ರಿಂದಲೇ ಹೊರಬಿದ್ದಿದ್ದ ಕೊಹ್ಲಿ ಇದೀಗ 9 ಸ್ಥಾನ ಮೇಲೇರಿ 13ನೇ ಸ್ಥಾನ ಪಡೆದಿದ್ದಾರೆ.

ಐಸಿಸಿ ಬ್ಯಾಟಿಂಗ್ ಶ್ರೇಯಾಂಕ

  1. ಜೋ ರೂಟ್ (ಇಂಗ್ಲೆಂಡ್) - 903 (ರೇಟಿಂಗ್ ಅಂಕ)
  2. ಯಶಸ್ವಿ ಜೈಸ್ವಾಲ್ (ಭಾರತ) - 825
  3. ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್) - 804
  4. ಹ್ಯಾರಿ ಬ್ರೂಕ್ (ಇಂಗ್ಲೆಂಡ್) - 778
  5. ಡೇರಿಲ್ ಮಿಚೆಲ್ (ನ್ಯೂಜಿಲೆಂಡ್) - 743
  6. ರಿಷಭ್ ಪಂತ್ (ಭಾರತ) - 736
  7. ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ) - 726
  8. ಸೌದ್ ಶಕೀಲ್ (ಪಾಕಿಸ್ತಾನ) - 724
  9. ಕಮಿಂದು ಮೆಂಡಿಸ್ (ಶ್ರೀಲಂಕಾ) - 716
  10. ಟ್ರಾವಿಸ್ ಹೆಡ್ (ಆಸ್ಟ್ರೇಲಿಯಾ) - 713

ಇದನ್ನೂ ಓದಿ: ರನ್ನೂ ಬರಲಿಲ್ಲ, ಮೊಂಡುತನವೂ ಬಿಡಲಿಲ್ಲ; ಹರಾಜಿನಲ್ಲಿ ಯಾರಿಗೂ ಬೇಡವಾದ ಅನ್​ಫಿಟ್ ಪೃಥ್ವಿ ಶಾ, ನಿಂಗಿದು ಬೇಕಿತ್ತಾ...

ಐಸಿಸಿ ಬೌಲಿಂಗ್ ಶ್ರೇಯಾಂಕ

  1. ಜಸ್ಪ್ರೀತ್ ಬುಮ್ರಾ (ಭಾರತ) - 883 (ರೇಟಿಂಗ್ ಅಂಕ)
  2. ಕಗಿಸೊ ರಬಾಡ (ದಕ್ಷಿಣ ಆಫ್ರಿಕಾ) - 872
  3. ಜೋಶ್ ಹೇಜಲ್​ವುಡ್ (ಆಸ್ಟ್ರೇಲಿಯಾ) - 860
  4. ರವಿಚಂದ್ರನ್ ಅಶ್ವಿನ್ (ಭಾರತ) - 807
  5. ಪ್ರಭಾತ್ ಜಯಸೂರ್ಯ (ಶ್ರೀಲಂಕಾ) - 801
  6. ಪ್ಯಾಟ್ ಕಮಿನ್ಸ್ (ಆಸ್ಟ್ರೇಲಿಯಾ) - 796
  7. ರವೀಂದ್ರ ಜಡೇಜಾ (ಭಾರತ) - 794
  8. ನಾಥನ್ ಲಿಯಾನ್ (ಆಸ್ಟ್ರೇಲಿಯಾ- 782
  9. ನೋಮನ್ ಅಲಿ (ಪಾಕಿಸ್ತಾನ) - 759
  10. ಮ್ಯಾಟ್ ಹೆನ್ರಿ (ನ್ಯೂಜಿಲೆಂಡ್) - 750

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ