logo
ಕನ್ನಡ ಸುದ್ದಿ  /  ಕ್ರಿಕೆಟ್  /  ಸಂಜು ಸ್ಯಾಮ್ಸನ್ ಶತಕಕ್ಕೆ ಜೋಸ್ ಬಟ್ಲರ್ ಬಹುಪರಾಕ್; ಧ್ರುವ್ ಜುರೆಲ್, ಸರ್ಫರಾಜ್ ಖಾನ್ ಕಮೆಂಟ್ ಹೀಗಿದೆ

ಸಂಜು ಸ್ಯಾಮ್ಸನ್ ಶತಕಕ್ಕೆ ಜೋಸ್ ಬಟ್ಲರ್ ಬಹುಪರಾಕ್; ಧ್ರುವ್ ಜುರೆಲ್, ಸರ್ಫರಾಜ್ ಖಾನ್ ಕಮೆಂಟ್ ಹೀಗಿದೆ

Jayaraj HT Kannada

Nov 09, 2024 06:37 PM IST

google News

ಸಂಜು ಸ್ಯಾಮ್ಸನ್ ಶತಕಕ್ಕೆ ಜೋಸ್ ಬಟ್ಲರ್ ಬಹುಪರಾಕ್

    • ದಕ್ಷಿಣ ಆಫ್ರಿಕಾ ವಿರುದ್ಧ ಸ್ಫೋಟಕ ಶತಕ ಸಿಡಿಸಿದ ನಂತರ ಸಂಜು ಸ್ಯಾಮ್ಸನ್ ತಮ್ಮ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್‌ಗೆ ಜೋಸ್‌ ಬಟ್ಲರ್‌ ಮಾತ್ರವಲ್ಲದೆ ಭಾರತದ ಸಹ ಆಟಗಾರರು ಕೂಡಾ ಕಾಮೆಂಟ್‌ ಮಾಡಿದ್ದಾರೆ.
ಸಂಜು ಸ್ಯಾಮ್ಸನ್ ಶತಕಕ್ಕೆ ಜೋಸ್ ಬಟ್ಲರ್ ಬಹುಪರಾಕ್
ಸಂಜು ಸ್ಯಾಮ್ಸನ್ ಶತಕಕ್ಕೆ ಜೋಸ್ ಬಟ್ಲರ್ ಬಹುಪರಾಕ್ (HT_PRINT)

ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕು ಪಂದ್ಯಗಳ ಟಿ20 ಸರಣಿ ಮೊದಲ ಪಂದ್ಯದಲ್ಲಿಯೇ ಭಾರತ ತಂಡ 61 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಟೀಮ್‌ ಇಂಡಿಯಾ, ದಕ್ಷಿಣ ಆಫ್ರಿಕಾ (South Africa vs India) ತಂಡಕ್ಕೆ 203 ರನ್‌ಗಳ ಬೃಹತ್ ಗುರಿ ನೀಡಿತು. ಇದಕ್ಕೆ ಪ್ರತಿಯಾಗಿ ಚೇಸಿಂಗ್‌ಗಿಳಿದ ಹರಿಣಗಳು, 17.5 ಓವರ್‌ಗಳಲ್ಲಿ 141 ರನ್‌ಗಳಿಗೆ ಆಲೌಟ್ ಆಯ್ತು.

ಮೊದಲು ಬ್ಯಾಟಿಂಗ್‌ ಮಾಡಿದ ಭಾರತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 202 ರನ್ ಗಳಿಸಿತ್ತು. ಆರಂಭಿಕ ಆಟಗಾರ ಹಾಗೂ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್‌ 50 ಎಸೆತಗಳಲ್ಲಿ ಏಳು ಬೌಂಡರಿಗಳು ಮತ್ತು 10 ಸ್ಫೋಟಕ ಸಿಕ್ಸರ್‌ ಸಹಿತ 107 ರನ್ ಸಿಡಿಸಿದರು. ಇವರ ಸ್ಟ್ರೈಕ್ ರೇಟ್‌ 214.00. ಟಿ20ಯಲ್ಲಿ ಸತತ ಶತಕಗಳನ್ನು ಬಾರಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಸ್ಯಾಮ್ಸನ್ ಪಾತ್ರರಾದರು.

ಪಂದ್ಯದ ನಂತರ ತಮ್ಮ ಫೋಟೋವನ್ನು ಸಂಜು ಸ್ಯಾಮ್ಸನ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್‌ಗೆ ಅಭಿಮಾನಿಗಳು ಹಾಗೂ ಅವರ ಸಹ ಆಟಗಾರರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಪಂದ್ಯದ ಬಳಿಕ ನಾಯಕ ಸೂರ್ಯಕುಮಾರ್‌ ಯಾದವ್‌ ಕೂಡಾ ಕೇರಳದ ಬ್ಯಾಟರ್‌ ಅನ್ನು ಹಾಡಿ ಹೊಗಳೀದ್ದಾರೆ. ಇದೇ ವೇಳೆ ಐಪಿಎಲ್ 2024ರವರೆಗೆ ರಾಜಸ್ಥಾನ್‌ ರಾಯಲ್ಸ್‌ ತಂಡದಲ್ಲಿ ಸ್ಯಾಮ್ಸನ್ ಅವರ ಸಹ ಆಟಗಾರರಾಗಿದ್ದ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಕೂಡಾ, ಸಂಜು ಪೋಸ್ಟ್‌ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ. ಇದೇ ವೇಳೆ ಅವರೊಂದಿಗೆ ಸರ್ಫರಾಜ್ ಖಾನ್ ಕೂಡ ಕಾಮೆಂಟ್‌ ಮಾಡಿದ್ದಾರೆ. ಮತ್ತೊಂದೆಡೆ ವಿಕೆಟ್ ಕೀಪರ್ ಹಾಗೂ ಬ್ಯಾಟರ್ ಧ್ರುವ್ ಜುರೆಲ್ "ಚೆಟ್ಟಾ" ಎಂದು ಕಾಮೆಂಟ್ ಮಾಡಿದ್ದಾರೆ.

ಪಂದ್ಯದಲ್ಲಿ ಸ್ಯಾಮ್ಸನ್‌ ಪ್ರದರ್ಶನವೇ ಹೈಲೈಟ್‌ ಆಗಿತ್ತು. ಭಾರತದ ಉಳಿದ ಬ್ಯಾಟರ್‌ಗಳು ಕಳಪೆ ಪ್ರದರ್ಶನ ನೀಡಿದರು. ಒಂದು ಹಂತದಲ್ಲಿ ಭಾರತವು 220ಕ್ಕೂ ಹೆಚ್ಚು ರನ್ ಗಳಿಸುವ ನಿರೀಕ್ಷೆಯಲ್ಲಿತ್ತು. ಆದರೆ ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ ಅವರ ಜೊತೆಯಾಟ ಮುರಿಯುತ್ತುದ್ದ ಹಾಗೆ ಭಾಋತದ ಪಂದ್ಯದಲ್ಲಿ ಸಮತೋಲನ ಕಳೆದುಕೊಂಡಿತು. ಕೊನೆಯ ಆರು ಓವರ್‌ಗಳಲ್ಲಿ ಕೇವಲ 40 ರನ್ ಗಳಿಸಲಷ್ಟೇ ಸಾಧ್ಯವಾಯಿತು.

ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಸಂಜು ಪಂದ್ಯದ ನಂತರ ಮಾತನಾಡಿದರು. “ಮೈದಾನದಲ್ಲಿ ನನ್ನ ಆಟವನ್ನು ನಿಜವಾಗಿಯೂ ಆನಂದಿಸಿದೆ. ನನ್ನ ಪ್ರಸ್ತುತ ಫಾರ್ಮ್‌ ಅನ್ನು ಸರಿಯಾಗಿ ಬಳಸಿಕೊಳ್ಳುತ್ತಿದ್ದೇನೆ. ನಾವು ಆಕ್ರಮಣಕಾರಿ ಆಟದ ಬಗ್ಗೆ ಯೋಚಿಸುತ್ತಿದ್ದೇವೆ. ಒಮ್ಮೆ ಮೂರು-ನಾಲ್ಕು ಎಸೆತಗಳನ್ನು ಎದುರಿಸಿದ ನಂತರ ಬೌಂಡರಿ ಹೊಡೆಯಲು ಮುಂದಾಗುತ್ತಿದ್ದೆ. ನಾನು ಆಟದ ಬಗ್ಗೆ ಹೆಚ್ಚು ಯೋಚಿಸುತ್ತಿಲ್ಲ. ಕೆಲವೊಮ್ಮೆ ಪ್ರಯತ್ನ ಫಲ ನೀಡುತ್ತದೆ, ಕೆಲವೊಮ್ಮೆ ಆಗಲ್ಲ. ನಾವು ಸರಣಿಯನ್ನು ಗೆಲುವಿನೊಂದಿಗೆ ಆರಂಭಿಸಿರುವುದು ಸಂತೋಷವಾಗಿದೆ” ಎಂದು ಅವರು ಹೇಳಿದ್ದಾರೆ.

ಬಟ್ಲರ್‌, ಧ್ರುವ್‌ ಜುರೆಲ್‌ ಹಾಗೂ ಸರ್ಫರಾಜ್‌ ಖಾನ್‌ ಕಾಮೆಂಟ್

ತನ್ನ ಕೊನೆಯ ಪಂದ್ಯದಲ್ಲಿ ಶತಕ ಬಾರಿಸಿದ್ದ ಸಂಜು, ಸೌತ್ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲೂ ಸೆಂಚುರಿ ಗಡಿ ದಾಟಿದ್ದಾರೆ. ಆ ಮೂಲಕ ಹಲವು ದಾಖಲೆ ಬರೆದಿದ್ದಾರೆ. ಸೂರ್ಯಕುಮಾರ್ ನಂತರ ದಕ್ಷಿಣ ಆಫ್ರಿಕಾದಲ್ಲಿ ಟಿ20 ಶತಕ ಗಳಿಸಿದ 2ನೇ ಭಾರತೀಯ ಬ್ಯಾಟರ್ ಸ್ಯಾಮ್ಸನ್. 2023ರ ಡಿಸೆಂಬರ್ 14ರಂದು ಜೋಹಾನ್ಸ್‌ಬರ್ಗ್‌ನಲ್ಲಿ ಸೂರ್ಯ 56 ಎಸೆತಗಳಲ್ಲಿ 100 ರನ್ ಗಳಿಸಿದ್ದರು. ಸ್ಯಾಮ್ಸನ್ 107 ರನ್ ಗಳಿಸಿದ್ದು, ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20ಗಳಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ. ಈ ಹಿಂದೆ ಧರ್ಮಶಾಲಾದಲ್ಲಿ ರೋಹಿತ್ ಶರ್ಮಾ 66 ಎಸೆತಗಳಲ್ಲಿ 106 ರನ್ ಗಳಿಸಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ