logo
ಕನ್ನಡ ಸುದ್ದಿ  /  ಕ್ರಿಕೆಟ್  /  ಕೆಎಲ್ ರಾಹುಲ್​​ಗೆ ಬೆರಳಿಗೆ ಗಾಯ, ಆತಂಕದಲ್ಲಿ ಭಾರತ ತಂಡ; ಕನ್ನಡಿಗನ ಸ್ಥಾನ ತುಂಬಬಲ್ಲ ಮೂವರು ಆಟಗಾರರು ಇವರೇ

ಕೆಎಲ್ ರಾಹುಲ್​​ಗೆ ಬೆರಳಿಗೆ ಗಾಯ, ಆತಂಕದಲ್ಲಿ ಭಾರತ ತಂಡ; ಕನ್ನಡಿಗನ ಸ್ಥಾನ ತುಂಬಬಲ್ಲ ಮೂವರು ಆಟಗಾರರು ಇವರೇ

Prasanna Kumar P N HT Kannada

Dec 22, 2024 06:49 AM IST

google News

ಕೆಎಲ್ ರಾಹುಲ್​​ಗೆ ಬೆರಳಿಗೆ ಗಾಯ, ಆತಂಕದಲ್ಲಿ ಭಾರತ ತಂಡ; ಕನ್ನಡಿಗನ ಸ್ಥಾನ ತುಂಬಬಲ್ಲ ಮೂವರು ಆಟಗಾರರು ಇವರೇ

    • KL Rahul: ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಆರಂಭಿಕ ಆಟಗಾರ ಕೆಎಲ್ ರಾಹುಲ್ ಅಭ್ಯಾಸದ ವೇಳೆ ಗಾಯಗೊಂಡಿದ್ದು, ಬಲಗೈಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಇವರ ಸ್ಥಾನ ತುಂಬಲು ಮೂವರು ಕಾತರದಿಂದ ಕಾಯುತ್ತಿದ್ದಾರೆ.
ಕೆಎಲ್ ರಾಹುಲ್​​ಗೆ ಬೆರಳಿಗೆ ಗಾಯ, ಆತಂಕದಲ್ಲಿ ಭಾರತ ತಂಡ; ಕನ್ನಡಿಗನ ಸ್ಥಾನ ತುಂಬಬಲ್ಲ ಮೂವರು ಆಟಗಾರರು ಇವರೇ
ಕೆಎಲ್ ರಾಹುಲ್​​ಗೆ ಬೆರಳಿಗೆ ಗಾಯ, ಆತಂಕದಲ್ಲಿ ಭಾರತ ತಂಡ; ಕನ್ನಡಿಗನ ಸ್ಥಾನ ತುಂಬಬಲ್ಲ ಮೂವರು ಆಟಗಾರರು ಇವರೇ (AFP)

ಬಾರ್ಡರ್​ ಗವಾಸ್ಕರ್ ಟ್ರೋಫಿಯಲ್ಲಿ (Border Gavaskar Trophy 2025) ಆಸ್ಟ್ರೇಲಿಯಾ ಮತ್ತು ಭಾರತ ತಂಡಗಳ (India vs Australia 4th Test) ನಡುವೆ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್​ನಲ್ಲಿ (MCG) ನಡೆಯಲಿದೆ. ಉಭಯ ತಂಡಗಳಿಗೂ ಈ ಮೆಗಾ ಪಂದ್ಯ ಅತ್ಯಂತ ಮಹತ್ವದ್ದಾಗಿದ್ದು, ತೀವ್ರ ಕಸರತ್ತು ನಡೆಸುತ್ತಿವೆ. ಇದರ ನಡುವೆ ಟೀಮ್ ಇಂಡಿಯಾಗೆ ಆಘಾತವೊಂದು ಎದುರಾಗಿದೆ. ಸರಣಿಯಲ್ಲಿ ಅದ್ಭುತ ಫಾರ್ಮ್​​ನಲ್ಲಿರುವ ಆರಂಭಿಕ ಆಟಗಾರ ಕೆಎಲ್ ರಾಹುಲ್ ಅಭ್ಯಾಸ ನಡೆಸುವ ವೇಳೆ ಗಾಯಗೊಂಡಿದ್ದು, ಭಾರತದ ಟೀಮ್ ಮ್ಯಾನೇಜ್​ಮೆಂಟ್​​ ತೀವ್ರ ತಲೆನೋವು ತಂದಿಟ್ಟಿದೆ.

ಆಸ್ಟ್ರೇಲಿಯಾದ ಬೌಲರ್​​ಗಳಿಗೆ ಇನ್ನಿಲ್ಲದಂತೆ ಕಾಡಿದ ಕೆಎಲ್ ರಾಹುಲ್ ಭರ್ಜರಿ ಅಭ್ಯಾಸ ನಡೆಸುವ ಸಂದರ್ಭದಲ್ಲಿ ಬಲಗೈ ಬೆರಳಿಗೆ, ತೋಳಿಗೆ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಗಾಯಗೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವೈರಲ್ ವಿಡಿಯೋದಲ್ಲಿ ಗಾಯಕ್ಕೆ ಚಿಕಿತ್ಸೆ ಪಡೆಯುತ್ತಿರುವುದನ್ನು ಕಾಣಬಹುದು. ಆ ಬಳಿಕ ಅವರು ಅಭ್ಯಾಸ ನಡೆಸಲಿಲ್ಲ. ಪ್ರಸ್ತುತ ಇಂಡೋ-ಆಸೀಸ್ ನಡುವೆ ಮೂರು ಪಂದ್ಯಗಳು ನಡೆದಿದ್ದು ಸರಣಿ 1-1ರಲ್ಲಿ ಸಮಬಲಗೊಂಡಿದೆ.

ಪ್ರಸ್ತುತ ರಾಹುಲ್ ಅವರಿಗೆ ಗಂಭೀರ ಗಾಯವಾಗಿದೆಯೇ ಇಲ್ಲವೇ ಎನ್ನುವುದರ ಕುರಿತು ಬಹಿರಂಗಗೊಂಡಿಲ್ಲ. ಹಾಗೆಯೇ ಇನ್ನೂ ಎಷ್ಟು ದಿನಗಳ ವಿಶ್ರಾಂತಿ ಪಡೆಯಬೇಕು ಎಂಬ ಕುರಿತು ಮಾಹಿತಿ ಸಿಕ್ಕಿಲ್ಲ. ಪ್ರಸ್ತುತ ಸರಣಿಯಲ್ಲಿ ಭಾರತ ತಂಡದ ಪರ ಸ್ಥಿರ ಪ್ರದರ್ಶನ ನೀಡುತ್ತಿರುವ ಆಟಗಾರರ ಪೈಕಿ ಕೆಎಲ್ ರಾಹುಲ್ ಒಬ್ಬರಾಗಿದ್ದು, ಅವರ ಮೇಲೆ ವೈದ್ಯಕೀಯ ತಂಡ ಸಂಪೂರ್ಣ ನಿಗಾ ಇಟ್ಟಿದೆ. ಗಾಯಗೊಂಡ ಬಳಿಕ ಕೆಎಲ್ ರಾಹುಲ್ ಪ್ರಾಕ್ಟೀಸ್ ಆರಂಭಿಸಲಿಲ್ಲ. ರಾಹುಲ್ ಪ್ರಸ್ತುತ 235 ರನ್ ಸಿಡಿಸಿ ಭಾರತದ ಪರ ಮೊದಲ ಅಥವಾ ಬಿಜಿಟಿ ಸರಣಿಯಲ್ಲಿ 2ನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ.

ಕೆಎಲ್ ರಾಹುಲ್ ಗಾಯಗೊಂಡಿದ್ದು ಇದೇ ಮೊದಲಲ್ಲ!

ಕೆಎಲ್ ರಾಹುಲ್ ಸರಣಿಗಳ ಮಧ್ಯೆ ಗಾಯಗೊಂಡಿದ್ದು ಇದೇ ಮೊದಲಲ್ಲ. ಇದೇ ವರ್ಷ ನಡೆದ ಇಂಗ್ಲೆಂಡ್ ವಿರುದ್ದದ ಸರಣಿಯಲ್ಲಿ ಮೊದಲ ಟೆಸ್ಟ್ ನಂತರ ಗಾಯಗೊಂಡಿದ್ದ ಕೆಎಲ್ ರಾಹುಲ್ ಬಳಿಕ ಸಂಪೂರ್ಣ ಸರಣಿಯಿಂದಲೇ ಹೊರಬಿದ್ದರು. ಅಲ್ಲದೆ, ರಾಹುಲ್ ಸ್ಥಾನಕ್ಕೆ ಧ್ರುವ್ ಜುರೆಲ್ ಆಗಮಿಸಿ ವಿಕೆಟ್ ಕೀಪರ್ ಜವಾಬ್ದಾರಿ ನಿರ್ವಹಿಸುವಂತೆ ಮಾಡಿತು. ರಾಹುಲ್ ಗಾಯಗೊಂಡ ಬಳಿಕ ನೇರವಾಗಿ ಐಪಿಎಲ್​​ನಲ್ಲಿ ಕಣಕ್ಕಿಳಿದರು. ಈ ಹಿಂದೆಯೂ ಹಲವು ಬಾರಿ ಸರಣಿ ನಡುವೆಯೂ ಗಾಯಗೊಂಡಿದ್ದರು.

ಕೆಎಲ್ ರಾಹುಲ್​ಗೆ ಸುವರ್ಣಾವಕಾಶ ಒಲಿದಿದ್ದು ಹೇಗೆ?

ಬಾರ್ಡರ್​ ಗವಾಸ್ಕರ್ ಟ್ರೋಫಿ ಸರಣಿಯ ಬಹುಪಾಲು ಪಂದ್ಯಗಳಿಗೆ ಕೆಎಲ್ ರಾಹುಲ್ ಹೊರಗುಳಿಯುವ ನಿರೀಕ್ಷೆ ಇತ್ತು. ಆದರೆ ನಾಯಕ ರೋಹಿತ್​ ಶರ್ಮಾ ಮೊದಲ ಟೆಸ್ಟ್​ಗೆ ಅಲಭ್ಯರಾದ ಕಾರಣ ಆರಂಭಿಕ ಸ್ಥಾನದಲ್ಲಿ ಕಣಕ್ಕಿಳಿದು ಮಿಂಚಿದರು. ಪರಿಣಾಮ ಆ ಸ್ಥಾನ ಭದ್ರಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಎರಡನೇ ಟೆಸ್ಟ್​​ಗೆ ಮರಳಿದ ರೋಹಿತ್ 2019ರ ನಂತರ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದರು. ಆ ಮೂಲಕ ತನ್ನ ಸ್ಥಾನವನ್ನು ರಾಹುಲ್​ಗೆ ತ್ಯಾಗ ಮಾಡಿದರು. ಮೊದಲ ಟೆಸ್ಟ್​​ನಲ್ಲಿ ಅರ್ಧಶತಕ ಸಿಡಿಸಿದ್ದ ರಾಹುಲ್, 2ನೇ ಟೆಸ್ಟ್​​ನಲ್ಲಿ ನಿರಾಸೆ ಮೂಡಿಸಿದರು. ನಂತರ ರಾಹುಲ್ 3ನೇ ಟೆಸ್ಟ್​​ನಲ್ಲಿ ಭಾರತದ ಮೊದಲ ಇನ್ನಿಂಗ್ಸ್​​ನಲ್ಲಿ 139 ಎಸೆತಗಳಲ್ಲಿ 84 ರನ್ ಗಳಿಸಿ ಗಮನ ಸೆಳೆದರು. ಆದರೆ ಪಂದ್ಯ ಡ್ರಾಗೊಂಡಿತು.

ರಾಹುಲ್ ಸ್ಥಾನ ತುಂಬಬಲ್ಲ ಮೂವರು ಆಟಗಾರರು

ಒಂದು ವೇಳೆ ಕೆಎಲ್ ರಾಹುಲ್ ಇಂಜುರಿಯಾಗಿ ಸರಣಿಯಿಂದ ಹೊರಬಿದ್ದರೆ, ಅವರ ಸ್ಥಾನ ತುಂಬಲು ಪೈಪೋಟಿ ನಡೆಸುತ್ತಿದ್ದಾರೆ. ಮಧ್ಯಮ ಕ್ರಮಾಂಕದಿಂದ ರೋಹಿತ್​​ ಸ್ಥಾನಕ್ಕೆ ಮರಳಿದರೆ, ರಾಹುಲ್ ಸ್ಥಾನವನ್ನು ಧ್ರುವ್ ಜುರೆಲ್ ತುಂಬಬಹುದು. ಈ ಹಿಂದೆ ಅವರ ಸ್ಥಾನ ನಿಭಾಯಿಸಿ ಸಂಪೂರ್ಣ ಯಶಸ್ಸು ಕಂಡಿದ್ದಾರೆ. ಮತ್ತೊಬ್ಬ ಆಟಗಾರ ಸರ್ಫರಾಜ್ ಖಾನ್ ತವರಿನಲ್ಲಿ ಟೀಮ್ ಇಂಡಿಯಾ ಪರ ಕೊನೆಯದಾಗಿ ಆಡಿದ್ದರು. ಇದೀಗ ಮತ್ತೆ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಎಲ್ಲಾ ಆಸ್ಟ್ರೇಲಿಯನ್ ಪಿಚ್‌ಗಳಲ್ಲಿ ಎಂಸಿಜಿ ಮತ್ತು ಎಸ್​​ಸಿಜಿ ಅವರ ಬ್ಯಾಟಿಂಗ್ ಶೈಲಿಗೆ ಹೊಂದುತ್ತದೆ. ಭಾರತದ ಪರ ಆಕ್ರಮಣಕಾರಿ ಆಟವನ್ನು ಅವರು ಆಡಲಿದ್ದಾರೆ. ಅಭಿಮನ್ಯು ಈಶ್ವರನ್ ಸಹ ರಾಹುಲ್​ ಸ್ಥಾನ ತುಂಬಲು ಸಮರ್ಥರಿದ್ದಾರೆ. ಆ ಮೂಲಕ ಚೊಚ್ಚಲ ಅವಕಾಶಕ್ಕೆ ಕಾತರದಿಂದ ಕಾಯುತ್ತಿದ್ದಾರೆ. ಅಭಿಮನ್ಯು ಈಗಾಗಲೇ ಅದ್ಭುತ ಪ್ರದರ್ಶನ ಮೂಲಕ ಗಮನ ಸೆಳೆದಿದ್ದಾರೆ. ಆದರೆ ಯಾರಿಗೆ ಅವಕಾಶ ಸಿಗುತ್ತದೆ ಎಂಬುದು ಕುತೂಹಲ ಮೂಡಿಸಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ