logo
ಕನ್ನಡ ಸುದ್ದಿ  /  ಕ್ರಿಕೆಟ್  /  ತಂಡದ ಗೆಲುವಿಗೆ ಆದ್ಯತೆ ನೀಡೋರು ಬೇಕು, ಇಂತಹವರಲ್ಲ; ಕೆಎಲ್ ರಾಹುಲ್ ವಿರುದ್ಧ ಸಂಜೀವ್ ಗೋಯೆಂಕಾ ವಾಗ್ದಾಳಿ

ತಂಡದ ಗೆಲುವಿಗೆ ಆದ್ಯತೆ ನೀಡೋರು ಬೇಕು, ಇಂತಹವರಲ್ಲ; ಕೆಎಲ್ ರಾಹುಲ್ ವಿರುದ್ಧ ಸಂಜೀವ್ ಗೋಯೆಂಕಾ ವಾಗ್ದಾಳಿ

Prasanna Kumar P N HT Kannada

Nov 01, 2024 11:55 AM IST

google News

ಕೆಎಲ್ ರಾಹುಲ್ ವಿರುದ್ಧ ಸಂಜೀವ್ ಗೋಯೆಂಕಾ ವಾಗ್ದಾಳಿ

  • Sanjiv Goenka and KL Rahul: ಲಕ್ನೋ ಸೂಪರ್ ಜೈಂಟ್ಸ್ ಮಾಲೀಕ ಸಂಜೀವ್ ಗೋಯೆಂಕಾ ಅವರು ಸ್ಟಾರ್ ಬ್ಯಾಟರ್​ ಕೆಎಲ್ ರಾಹುಲ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಕೆಎಲ್ ರಾಹುಲ್ ವಿರುದ್ಧ ಸಂಜೀವ್ ಗೋಯೆಂಕಾ ವಾಗ್ದಾಳಿ
ಕೆಎಲ್ ರಾಹುಲ್ ವಿರುದ್ಧ ಸಂಜೀವ್ ಗೋಯೆಂಕಾ ವಾಗ್ದಾಳಿ ((X Images))

ಇಂಡಿಯನ್ ಪ್ರೀಮಿಯರ್ ಲೀಗ್​ 2025 ರ ಆವೃತ್ತಿಗೆ ಲಕ್ನೋ ಸೂಪರ್ ಜೈಂಟ್ಸ್ ತಂಡವು ಐವರನ್ನು ಉಳಿಸಿಕೊಂಡಿದೆ. ಆದರೆ ನಾಯಕ ಕೆಎಲ್ ರಾಹುಲ್ ಅವರನ್ನು ತಂಡದಿಂದ ಕಿತ್ತೊಗೆದಿದೆ. ಇದರೊಂದಿಗೆ ಎಲ್ಎಸ್​ಜಿ-ಕೆಎಲ್ ರಾಹುಲ್ ನಡುವಿನ 3 ವರ್ಷಗಳ ಸುದೀರ್ಘ ಸಂಬಂಧ ಕೊನೆಗೊಂಡಿದೆ. ಮೆಗಾ ಹರಾಜಿಗೂ ಮುನ್ನ ​ನಿಕೋಲಸ್ ಪೂರನ್ (21 ಕೋಟಿ), ರವಿ ಬಿಷ್ಣೋಯ್ (11 ಕೋಟಿ), ಮಯಾಂಕ್ ಯಾದವ್ (11 ಕೋಟಿ), ಮೊಹ್ಸಿನ್ ಖಾನ್ (4 ಕೋಟಿ) ಅವರನ್ನು ಉಳಿಸಿಕೊಳ್ಳಲಾಗಿದೆ. ರಿಟೆನ್ಶನ್ ಮುಗಿದ ಬಳಿಕ ಕೆಎಲ್ ರಾಹುಲ್ ವಿರುದ್ಧ ಮಾಲೀಕ ಸಂಜೀವ್ ಗೋಯೆಂಕಾ ವಾಗ್ದಾಳಿ ನಡೆಸಿದ್ದಾರೆ.

ಈಗ, ಎಲ್ಎಸ್​​​ಜಿ ಆಟಗಾರರನ್ನು ಉಳಿಸಿಕೊಂಡ ನಂತರ ತಂಡದ ಮಾಲೀಕ ಸಂಜೀವ್ ಗೋಯೆಂಕಾ, ರಾಹುಲ್ ಅವರನ್ನು ತರಾಟೆಗೆ ತೆಗೆದುಕೊಂಡರು. ಸ್ಟಾರ್ ಸ್ಪೋರ್ಟ್ಸ್​​ನಲ್ಲಿ ಪ್ರಸಾರವಾದ ವಿಡಿಯೋ ಸಂದೇಶದಲ್ಲಿ ಗೋಯೆಂಕಾ ಅವರು ಪೂರನ್, ಬಿಷ್ಣೋಯ್, ಬದೋನಿ, ಮೊಹ್ಸಿನ್, ಮಯಾಂಕ್ ಉಳಿಸಿಕೊಳ್ಳಲು ಹಿಂದಿರುವ ತಾರ್ಕಿಕತೆಯನ್ನು ವಿವರಿಸಿದ್ದಾರೆ. ತಮ್ಮ ಹಿತಾಸಕ್ತಿಗಾಗಿ ಅಲ್ಲ, ತಮ್ಮ ವೈಯಕ್ತಿಕ ಗುರಿಗಳು, ವೈಯಕ್ತಿಕ ಆಕಾಂಕ್ಷೆಗಳಿಗಿಂತ ತಂಡಕ್ಕೆ ಮೊದಲ ಸ್ಥಾನ ನೀಡುವ ಆಟಗಾರನನ್ನು ರಿಟೇನ್ ಮಾಡಿಕೊಳ್ಳುವುದು ಸರಳ ಮನಸ್ಥಿತಿಯಾಗಿತ್ತು ಎಂದು ಹೇಳಿದ್ದಾರೆ.

ರಾಹುಲ್ ಮತ್ತು ಗೋಯೆಂಕಾ ನಡುವೆ ಮನಸ್ತಾಪ

17ನೇ ಆವೃತ್ತಿಯ ಐಪಿಎಲ್​ನಲ್ಲಿ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯ ಮುಗಿದ ನಂತರ ಗೋಯೆಂಕಾ, ರಾಹುಲ್ ಅವರನ್ನು ತರಾಟೆ ತೆಗೆದುಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅಂದು ಹೈದರಾಬಾದ್​​ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ SRH​ ವಿರುದ್ಧ ಎಲ್ಎಸ್​ಜಿ 10 ವಿಕೆಟ್​​ಗಳ ಸೋಲನುಭವಿಸಿದ ಕೆಲವೇ ನಿಮಿಷಗಳಲ್ಲಿ ಘಟನೆ ನಡೆದಿತ್ತು. ಮಾಲೀಕ, ನಾಯಕನೊಂದಿಗೆ ವಾಗ್ವಾದ ನಡೆಸುತ್ತಿದ್ದನ್ನು ವಿಡಿಯೋದಲ್ಲಿ ಕಾಣಬಹುದು. ಅಂದಿನಿಂದ ಈವರೆಗೂ ರಾಹುಲ್, ಲಕ್ನೋ ತಂಡ ತೊರೆಯುತ್ತಾರೆ ಎಂದು ಹೇಳಲಾಗಿತ್ತು. ಆ ಬಳಿಕ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು. ಎಲ್ಲಾ ಬೆಳವಣಿಗೆಗಳ ನಡೆದ ಕಾರಣ ಅವರೇ ತಂಡವನ್ನು ತೊರೆಯಲು ನಿರ್ಧರಿಸಿದ್ದರು.

ಪೂರನ್ ಸ್ವಯಂಚಾಲಿತ ಆಯ್ಕೆ

ನಿಕೋಲಸ್ ಪೂರನ್ ಸ್ವಯಂಚಾಲಿತ ಆಯ್ಕೆಯಾಗಿದೆ. ಆದರೆ ಇದು ಕೊನೆಯ ಕ್ಷಣದಲ್ಲಿ ನಡೆದ ತೀರ್ಮಾನ. ನಮ್ಮಲ್ಲಿ ಮೊಹ್ಸಿನ್ ಖಾನ್ ಮತ್ತು ಆಯುಷ್ ಬದೋನಿ ಅವರನ್ನು ಅನ್​ಕ್ಯಾಪ್ಡ್​ ಆಟಗಾರರನ್ನಾಗಿ ಉಳಿಸಿಕೊಂಡಿದ್ದೇವೆ. ಈ ಪ್ರಕ್ರಿಯೆಯಲ್ಲಿ ಜಹೀರ್ ಖಾನ್, ಜಸ್ಟಿನ್ ಲ್ಯಾಂಗರ್ ಮತ್ತು ವಿಶ್ಲೇಷಕರು ಭಾಗಿಯಾಗಿದ್ದರು ಎಂದು ಹೇಳಿದ್ದಾರೆ. ಐಪಿಎಲ್ 2024 ರಲ್ಲಿ ಕೆಎಲ್ ರಾಹುಲ್ ಎಲ್ಎಸ್​​ಜಿ ಪರ 14 ಪಂದ್ಯಗಳನ್ನು ಆಡಿದ್ದು,  37.14 ಸರಾಸರಿಯಲ್ಲಿ 520 ರನ್ ಗಳಿಸಿದ್ದಾರೆ. ಆದರೆ ಅವರ ಸ್ಟ್ರೈಕ್​ರೇಟ್ ತೀವ್ರ ಟೀಕೆಗೆ ಗುರಿಯಾಗಿತ್ತು. ಐಪಿಎಲ್ 2024 ರಲ್ಲಿ 136.13 ಸ್ಟ್ರೈಕ್ ರೇಟ್ ಹೊಂದಿದ್ದ ರಾಹುಲ್, ಎಲ್ಎಸ್​ಜಿ ಪರ ಆಡಿದ 38 ಪಂದ್ಯಗಳಲ್ಲಿ 1,200 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಇದೀಗ ಅವರು ಈಗ ಮೆಗಾ ಹರಾಜಿಗೆ ಪ್ರವೇಶಿಸುತ್ತಿದ್ದು, ಅವರನ್ನು ಯಾವ ಫ್ರಾಂಚೈಸಿ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ