logo
ಕನ್ನಡ ಸುದ್ದಿ  /  ಕ್ರಿಕೆಟ್  /  ಸೂರ್ಯಕುಮಾರ್ ಅಲ್ಲ; ಅಫ್ಘಾನಿಸ್ತಾನ ಟಿ20 ಸರಣಿಗೆ ನಾಯಕನಾಗಿ ಮರಳಲು ಸಿದ್ಧವಾದ ಸ್ಟಾರ್ ಆಟಗಾರ

ಸೂರ್ಯಕುಮಾರ್ ಅಲ್ಲ; ಅಫ್ಘಾನಿಸ್ತಾನ ಟಿ20 ಸರಣಿಗೆ ನಾಯಕನಾಗಿ ಮರಳಲು ಸಿದ್ಧವಾದ ಸ್ಟಾರ್ ಆಟಗಾರ

Prasanna Kumar P N HT Kannada

Dec 24, 2023 12:55 PM IST

google News

ಭಾರತ ಕ್ರಿಕೆಟ್ ತಂಡ.

    • Hardik Pandya: ಮುಂಬರುವ ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಗೆ ನಾಯಕನಾಗಿ ಹಾರ್ದಿಕ್ ಪಾಂಡ್ಯ ತಂಡಕ್ಕೆ ಮರಳಲಿದ್ದಾರೆ. ಆ ಮೂಲಕ ಊಹಾಪೋಹಾ ಸುದ್ದಿಗಳಿಗೆ ಬ್ರೇಕ್​ ಬಿದ್ದಂತಾಗಿದೆ. 
ಭಾರತ ಕ್ರಿಕೆಟ್ ತಂಡ.
ಭಾರತ ಕ್ರಿಕೆಟ್ ತಂಡ.

ಪಾಲಿನ ಪಾದದ ಗಾಯದ ಕಾರಣ ಏಕದಿನ ವಿಶ್ವಕಪ್​ ಟೂರ್ನಿಯ (ODI World Cup 2023) ಅರ್ಧದಲ್ಲೇ ಹೊರಬಿದ್ದು ಆಸ್ಟ್ರೇಲಿಯಾ (Australia), ಸೌತ್ ಆಫ್ರಿಕಾ (South Africa) ಎದುರಿನ ಸರಣಿಗಳಿಂದ ಹೊರಗುಳಿದ ಭಾರತದ ಸ್ಟಾರ್​ ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ (Hardik Pandya), ಅಫ್ಘನಿಸ್ತಾನ ವಿರುದ್ಧದ ಟಿ20 ಸರಣಿಗೆ ಭಾರತ ತಂಡ (India vs Afghanistan) ಮುನ್ನಡೆಸಲು ಸಿದ್ಧರಾಗಿದ್ದಾರೆ. ಗಾಯದಿಂದ ಚೇತರಿಸಿಕೊಂಡಿಲ್ಲ ಎಂಬ ವದಂತಿಗಳ ಮಧ್ಯೆ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ.

17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ ಮಿನಿ ಹರಾಜಿಗೂ (IPL Mini Auction 2024) ಮುನ್ನ ಟ್ರೇಡಿಂಗ್​ ಪ್ರಕ್ರಿಯೆಯಲ್ಲಿ ಗುಜರಾತ್ ಟೈಟಾನ್ಸ್​ನಿಂದ (Gujarat Titans) ಮುಂಬೈ ಇಂಡಿಯನ್ಸ್ (Mumbai Indians)​​ ತನ್ನ ತಂಡಕ್ಕೆ ಕರೆಸಿಕೊಂಡಿತು. ಅಲ್ಲದೆ, ಕೆಲವು ದಿನಗಳ ನಂತರ ನಾಯಕನಾಗಿಯೂ ಘೋಷಿಸಿ ಅಚ್ಚರಿ ಮೂಡಿಸಿತು. ಈ ಮಧ್ಯೆ ಅಫ್ಘಾನಿಸ್ತಾನ ಟಿ20 ಮತ್ತು ಮುಂಬರುವ ಐಪಿಎಲ್​ಗೂ ಹಾರ್ದಿಕ್ ಚೇತರಿಕೆ ಕಷ್ಟ ಎಂಬ ವರದಿಗಳು ಹೊರಹೊಮ್ಮಿದವು.

ಬಿಸಿಸಿಐ ಮೂಲಗಳು ಹೇಳಿದ್ದೇನು?

ಈ ಬೆಳವಣಿಗೆ ಅಭಿಮಾನಿಗಳ ಕಳವಳಕ್ಕೆ ಕಾರಣವಾಗಿತ್ತು. ಈಗ ನಂಬಲರ್ಹವಾದ ಬಿಸಿಸಿಐ ಮೂಲಗಳು ಖಚಿತಪಡಿಸಿದ್ದು, ಹಾರ್ದಿಕ್ ಪಾದದ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ ಎಂದು ಹೇಳಿದೆ. ಚೇತರಿಸಿಕೊಂಡ ನಂತರ ಹಾರ್ದಿಕ್ ಪಾಂಡ್ಯ ದಿನಂಪ್ರತಿ ತರಬೇತಿ ಪಡೆಯುತ್ತಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ಮೂಲವನ್ನು ಉಲ್ಲೇಖಿಸಿದೆ. ಐಪಿಎಲ್​ಗೆ ಅಲಭ್ಯರಾಗುತ್ತಾರೆ ಎಂಬ ವದಂತಿಗಳಿಂದ ಆತಂಕದ್ದಲ್ಲಿದ್ದ ಮುಂಬೈ ಈಗ ನಿಟ್ಟುಸಿರು ಬಿಟ್ಟಿದೆ.

ಎಲ್ಲವೂ ಊಹಾಪೋಹ

ಹಾರ್ದಿಕ್ ಫಿಟ್ ಆ್ಯಂಡ್ ಫೈನ್ ಆಗಿದ್ದಾರೆ. ವಾಸ್ತವವಾಗಿ ಅವರು ದಿನನಿತ್ಯ ವರ್ಕೌಟ್ ಮಾಡುತ್ತಿದ್ದಾರೆ. ಅವರು ಐಪಿಎಲ್‌ನಿಂದ ಹೊರಗುಳಿಯಲಿದ್ದಾರೆ ಎಂಬ ಎಲ್ಲಾ ಮಾತುಗಳು ಕೇವಲ ವದಂತಿಯಾಗಿದೆ. ಐಪಿಎಲ್ 2024ಕ್ಕೆ ಇನ್ನೂ ನಾಲ್ಕು ತಿಂಗಳು ಉಳಿದಿವೆ. ಆದ್ದರಿಂದ ಈ ಕ್ಷಣದಲ್ಲಿ ಏನಿದ್ದರೂ ಕೇವಲ ಊಹಾಪೋಹ ಎಂದು ಬಿಸಿಸಿಐ ಮೂಲವೊಂದು ಖಚಿತಪಡಿಸಿದೆ.

ಪಾಂಡ್ಯ ಅಲಭ್ಯತೆಯಲ್ಲಿ ಕ್ಯಾಪ್ಟನ್ ಆಗಿದ್ದ ಸೂರ್ಯ

ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಭಾರತ ತಂಡದ ನಾಯಕರನ್ನಾಗಿ ನೇಮಿಸಲಾಯಿತು. ಈಗ ಸೂರ್ಯ ಕೂಡ ಪಾದದ ಗಾಯದಿಂದ ಹೋರಾಡುತ್ತಿದ್ದಾರೆ. ಕನಿಷ್ಠ ಏಳು ವಾರಗಳ ಕ್ರಿಕೆಟ್​ನಿಂದ ದೂರ ಉಳಿಯಲಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಗೆ ಸೂರ್ಯ ಭಾಗವಹಿಸುವುದು ಅನುಮಾನ.

ರೋಹಿತ್​​ ಪ್ರಶ್ನಾರ್ಥಕ ಚಿಹ್ನೆ

ಟಿ20ನಲ್ಲಿ ರೋಹಿತ್ ಶರ್ಮಾ ಭವಿಷ್ಯದ ಮೇಲೆ ದೊಡ್ಡ ಪ್ರಶ್ನಾರ್ಥಕ ಚಿಹ್ನೆ ಇದೆ. ಒಂದು ವೇಳೆ ರೋಹಿತ್ ಮತ್ತೆ ಟಿ20 ಆಡದಿರಲು ನಿರ್ಧರಿಸಿದರೆ, ಹಾರ್ದಿಕ್ ಪಾಂಡ್ಯ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಒಂದು ವೇಳೆ ಪಾಂಡ್ಯ ಫಿಟ್ ಆಗದಿದ್ದರೆ ವಿಶ್ವಕಪ್​ನಲ್ಲಿ ಭಾಗವಹಿಸುವಿಕೆ ಅಪಾಯಕ್ಕೆ ಸಿಲುಕಬಹುದು. ಆದರೆ ವಿಶ್ವಕಪ್​​ಗೂ ಮುನ್ನ ಅಫ್ಘನ್ ವಿರುದ್ಧದ ಟಿ20 ಸರಣಿಯೇ ಕೊನೆ ಅಂತಾರಾಷ್ಟ್ರೀಯ ಕ್ರಿಕೆಟ್​ ಸರಣಿಯಾಗಿದೆ. ವಿಶ್ವಕಪ್​ಗೂ ಮುನ್ನ ಐಪಿಎಲ್​ನಲ್ಲಿ ಕಣಕ್ಕಿಳಿಯಲಿದೆ ಭಾರತ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ