ನಾನು ಹೇಳಿದಂತೆ ಮಾಡಿ, ಸುಲಭವಾಗಿ ಔಟಾಗ್ತಾರೆ ಕೊಹ್ಲಿ; ಸೌತ್ ಆಫ್ರಿಕಾ ಬೌಲರ್ಸ್​ಗೆ ಎಬಿಡಿ ಸಲಹೆ
ಕನ್ನಡ ಸುದ್ದಿ  /  ಕ್ರಿಕೆಟ್  /  ನಾನು ಹೇಳಿದಂತೆ ಮಾಡಿ, ಸುಲಭವಾಗಿ ಔಟಾಗ್ತಾರೆ ಕೊಹ್ಲಿ; ಸೌತ್ ಆಫ್ರಿಕಾ ಬೌಲರ್ಸ್​ಗೆ ಎಬಿಡಿ ಸಲಹೆ

ನಾನು ಹೇಳಿದಂತೆ ಮಾಡಿ, ಸುಲಭವಾಗಿ ಔಟಾಗ್ತಾರೆ ಕೊಹ್ಲಿ; ಸೌತ್ ಆಫ್ರಿಕಾ ಬೌಲರ್ಸ್​ಗೆ ಎಬಿಡಿ ಸಲಹೆ

India Vs South Africa 1st Test: ಮೊದಲ ಟೆಸ್ಟ್​ನಲ್ಲಿ ವಿರಾಟ್ ಕೊಹ್ಲಿಯನ್ನು ಔಟ್ ಮಾಡಲು ಏನೆಲ್ಲಾ ಮಾಡಬೇಕು ಎನ್ನುವುದರ ಬಗ್ಗೆ ಸೌತ್ ಆಫ್ರಿಕಾ ಬೌಲರ್ಸ್ ಲೆಕ್ಕಾಚಾರ ಹಾಕುತ್ತಿದ್ದಾರೆ. ಇದರ ನಡುವೆ ಕೊಹ್ಲಿಯನ್ನು ಔಟ್ ಮಾಡುವ ಬಗ್ಗೆ ಸಲಹೆ ನೀಡಿ‌ ಎಬಿ ಡಿವಿಲಿಯರ್ಸ್ ಅಚ್ಚರಿ‌ ನೀಡಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್.
ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್.

ಡಿಸೆಂಬರ್ 26ರಿಂದ ಭಾರತ ಮತ್ತು ದಕ್ಷಿಣ ಆಫ್ರಿಕಾ (India Vs South Africa 1st Test) ನಡುವೆ ಎರಡು ಪಂದ್ಯಗಳ ಸರಣಿ ಆರಂಭವಾಗಲಿದೆ. ಉಭಯ ತಂಡಗಳು ಅಂತಿಮ ಹಂತದ ಸಿದ್ಧತೆಯಲ್ಲಿ ತೊಡಗಿವೆ. ಹರಿಣಗಳ ನಾಡಲ್ಲಿ ಸರಣಿ ಗೆದ್ದು ಹೊಸ ಇತಿಹಾಸ ನಿರ್ಮಿಸಲು ಟೀಮ್‌ ಇಂಡಿಯಾ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಟಿ20, ಏಕದಿನ ಬಳಿಕ ಟೆಸ್ಟ್ ‌ಸರಣಿ ನಡೆಯುತ್ತಿದೆ. ಈ ಟೆಸ್ಟ್ ಸರಣಿಯಲ್ಲಿ‌ ಎಲ್ಲರ ಕಣ್ಣು ನೆಟ್ಟಿರುವುದು ವಿರಾಟ್ ಕೊಹ್ಲಿ (AB De Villiers) ಮೇಲೆ ಎಂಬುದು ವಿಶೇಷ.

ಏಕೆಂದರೆ‌ ಸೌತ್ ಆಫ್ರಿಕಾ ನೆಲದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಐವತ್ತಕ್ಕೂ ಹೆಚ್ಚಿನ ಸರಾಸರಿಯಲ್ಲಿ‌ ರನ್ ಗಳಿಸಿದ್ದಾರೆ. ಹಾಗಾಗಿ ಈ ಸರಣಿಯಲ್ಲೂ ಅದ್ಭುತ ಪ್ರದರ್ಶನ‌ ನೀಡುವ ನಿರೀಕ್ಷೆಯಲ್ಲಿದ್ದಾರೆ. ತಮ್ಮ‌ ನಾಡಲ್ಲಿ ಅಮೋಘ ಪ್ರದರ್ಶನ ತೋರಿರುವ ಕೊಹ್ಲಿಯನ್ನು ಔಟ್ ಮಾಡುವುದು ಹೇಗೆ ಎಂಬ ಪ್ರಶ್ನೆ ಸೌತ್ ಆಫ್ರಿಕಾ ಬೌಲರ್‌ಗಳಿಗೆ ಸಿಕ್ಕಾಪಟ್ಟೆ ಕಾಡುತ್ತಿದೆ. ಇದರ ನಡುವೆ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ (AB De Villiers), ತನ್ನ ಗೆಳೆಯ ಕೊಹ್ಲಿಯನ್ನು ಔಟ್ ಮಾಡಲು ಸಲಹೆ‌ ನೀಡಿದ್ದಾರೆ.

ಸಲಹೆ ಕೊಟ್ಟ ಎಬಿಡಿ

ನಿಜ, ಈ‌ ಸರಣಿಯಲ್ಲಿ ಸೌತ್ ಆಫ್ರಿಕಾ ಬೌಲರ್‌ಗಳಿಗೆ ವಿರಾಟ್ ವಿಕೆಟ್ ಪಡೆಯುವುದೇ ದೊಡ್ಡ ತಲೆ ನೋವಾಗಿದೆ. ಕೊಹ್ಲಿಯನ್ನು ಔಟ್ ಮಾಡಲು ಏನೆಲ್ಲಾ ಮಾಡಬೇಕು ಎನ್ನುವುದರ ಬಗ್ಗೆ ಲೆಕ್ಕಾಚಾರ ಹಾಕುತ್ತಿದ್ದಾರೆ. ಸ್ಟ್ರಾಟರ್ಜಿ, ಗೇಮ್ ಪ್ಲಾನ್ ರೂಪಿಸುತ್ತಿದ್ದಾರೆ. ಆದರೆ, ಏನನ್ನೂ ಯೋಜನೆ ರೂಪಿಸಿಕೊಳ್ಳಬೇಡಿ. ನಾನು‌ ಕೆಲವೊಂದು ಸಲಹೆ ನೀಡುತ್ತೇನೆ. ಅವುಗಳನ್ನು ಅನುಕರಿಸಿದರೆ ಸಾಕು ಕೊಹ್ಲಿ ಸುಲಭವಾಗಿ ವಿಕೆಟ್ ಒಪ್ಪಿಸುತ್ತಾರೆ ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ. 09ಒ

‘ಹೀಗೆ ಬೌಲ್ ಮಾಡಿ ಕೊಹ್ಲಿ ಔಟ್ ಆಗ್ತಾರೆ’

ಪಿಟಿಐಗೆ‌ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ ವಿಲಿಯರ್ಸ್, ಕೊಹ್ಲಿಯನ್ನು ‌ಸುಲಭವಾಗಿ ಔಟ್ ಮಾಡಲು ಒಂದು‌ ಪರಿಹಾರ ಇದೆ. ನಾಲ್ಕನೇ ಸ್ಟಂಪ್ ಮೇಲೆಯೇ ಪದೆಪದೆ ಬೌಲ್ ಮಾಡಬೇಕು. ಯಾವುದಕ್ಕೂ ಈ ತಂತ್ರವನ್ನು‌ ತಪ್ಪಿಸಬಾರದು. ವಿಕೆಟ್ ಕಾಪಾಡಿಕೊಳ್ಳಲು ಯತ್ನಿಸುತ್ತಿದ್ದರೂ ಅವಕಾಶ ಮಿಸ್ ಮಾಡಿಕೊಳ್ಳಬಾರದು. ಇದೇ‌ ಲೈನ್ ಅಂಡ್ ಲೆಂತ್​ನಲ್ಲಿ ಬೌಲಿಂಗ್ ನಡೆಸಿದರೆ ಖಂಡಿತವಾಗಿ ಔಟಾಗುತ್ತಾರೆ ಎಂದು ಹೇಳಿದ್ದಾರೆ.

‘ಕಾಯಬೇಕು, ಆತುರಬೇಡ’

ವಿರಾಟ್ ಅವರನ್ನು ತಪ್ಪು ಮಾಡಿಸಲು ಪ್ರಯತ್ನ ನಡೆಸಬೇಕು. ನಾಲ್ಕನೇ ಸ್ಟಂಪ್ ಮೇಲೆಯೇ ಚೆಂಡು ಹಾಕಬೇಕು. ಚೆಂಡನ್ನು ಹೊಡೆಯಲು ಟೆಂಪ್ಟ್ ಆಗುವವರೆಗೂ ಅದೇ ಎಸೆತವನ್ನು ಹಾಕಿದರೆ, ಖಂಡಿತವಾಗಿ ಫಲ ಸಿಗುತ್ತದೆ ಎಂದು ಹೇಳಿದ್ದಾರೆ. ಕೊಹ್ಲಿಯನ್ನು ಸಚಿನ್ ತೆಂಡೂಲ್ಕರ್ ಅವರಿಗೆ ಹೋಲಿಸಿದ ಎಬಿ, ಆಫ್ ಸ್ಟಂಪ್ ಹೊರಗೆ ಬೌಲಿಂಗ್ ಮಾಡುವುದು, ಚೆಂಡು ನಿಪ್ಆಗುವರೆಗೂ ಕಾಯುವುದು ಸೂಕ್ತ ಎಂದು ತಮ್ಮ ದೇಶದ ಬೌಲರ್​​ಗಳಿಗೆ ವಿಶೇಷ ಎಂದು ಸಲಹೆ ನೀಡಿದ್ದಾರೆ.

‘ಬಿಗ್​ ಬಿಫೋರ್​​ಗೆ ಕಾಯುವುದು ಮೂರ್ಖತನ’

ಯಾವುದೇ ಕಾರಣಕ್ಕೂ ಎಲ್​ಬಿಡಬ್ಲ್ಯು ಔಟ್ ಮಾಡಲು ಚೆಂಡನ್ನು ಹಾಕಿ ಕೈ ಸುಟ್ಟುಕೊಳ್ಳಬೇಡಿ. ಕೊಹ್ಲಿ‌ ಮತ್ತು ಸಚಿನ್ ಅವರಂತಹ ಆಟಗಾರರು ಮಿಡ್​ ವಿಕೆಟ್ ಮೂಲಕ ಬೌಂಡರಿ ಹೊಡೆಯುತ್ತಾರೆ. ನೀವು ಉತ್ತಮ ಆಟಗಾರನ ಮೇಲೆ ದಾಳಿ ನಡೆಸುವುದು ಅಷ್ಟು ಸುಲಭವಲ್ಲ. ಯಾವಾಗಲೂ ಲೆಗ್ ಬಿಫೋರ್ (ಒಳಬರುವ ಎಸೆತಕ್ಕೆ) ಕಾಯುವುದು ಮೂರ್ಖತನವಾಗಿತ್ತು. ಏಕೆಂದರೆ ಅವರು ಮಿಡ್-ವಿಕೆಟ್​ ಮೂಲಕ ಚೆಂಡನ್ನು ಬಾರಿಸುವ ಮೂಲಕ ಲೆಕ್ಕಾಚಾರಗಳನ್ನು ಹುಸಿಗೊಳಿಸುತ್ತಾರೆ ಎಂದು ಸೂಚಿಸಿದ್ದಾರೆ.

ತಂಡ ಸೇರಿದ ಕೊಹ್ಲಿ

ಆದ್ದರಿಂದ 4ನೇ ಸ್ಪಂಪ್​ ಮೇಲೆ ಚೆಂಡೆಸೆಯಿರಿ. ಔಟ್ ಆಗುವವರೆಗೂ ಕಾಯಿರಿ ಎಂದು ಡಿವಿಲಿಯರ್ಸ್ ಹೇಳಿದ್ದಾರೆ. ಟೆಸ್ಟ್ ಸರಣಿಯ ತಯಾರಿಯಲ್ಲಿ ವಿರಾಟ್ ಕೊಹ್ಲಿ ಭಾರತೀಯ ತಂಡವನ್ನು ಸೇರಿಕೊಂಡಿದ್ದರೂ ಸಹ, ಕುಟುಂಬದ ತುರ್ತುಸ್ಥಿತಿಯಿಂದಾಗಿ ಅವರು ಮನೆಗೆ ಮರಳಿದ್ದರು. ಇದೀಗಮೊದಲ ಟೆಸ್ಟ್‌ಗೆ ಮುಂಚಿತವಾಗಿ ತಂಡವನ್ನು ಸೇರಿಕೊಂಡಿದ್ದಾರೆ.

Whats_app_banner