logo
ಕನ್ನಡ ಸುದ್ದಿ  /  ಕ್ರಿಕೆಟ್  /  Shahid Afridi: ಸಚಿನ್ ಕೊಟ್ಟ ಬ್ಯಾಟ್​ನಿಂದಲೇ ವಿಶ್ವ ದಾಖಲೆ ಬರೆದೆ, ಅದು ವೃತ್ತಿಜೀವನವನ್ನೇ ಬದಲಿಸಿತು; ಶಾಹೀದ್ ಅಫ್ರಿದಿ ಭಾವುಕ

Shahid Afridi: ಸಚಿನ್ ಕೊಟ್ಟ ಬ್ಯಾಟ್​ನಿಂದಲೇ ವಿಶ್ವ ದಾಖಲೆ ಬರೆದೆ, ಅದು ವೃತ್ತಿಜೀವನವನ್ನೇ ಬದಲಿಸಿತು; ಶಾಹೀದ್ ಅಫ್ರಿದಿ ಭಾವುಕ

Prasanna Kumar P N HT Kannada

Aug 19, 2023 08:49 AM IST

ಸಚಿನ್ ತೆಂಡೂಲ್ಕರ್ ಮತ್ತು ಶಾಹೀದ್ ಅಫ್ರಿದಿ.

    • Shahid Afridi: ಶ್ರೀಲಂಕಾ ವಿರುದ್ಧ ವಿಶ್ವದಾಖಲೆ ಬರೆಯಲು ಬಳಸಿದ ಬ್ಯಾಟ್​​ ಈಗಲೂ ನನ್ನ ಬಳಿ ಭದ್ರವಾಗಿದೆ. ಸಚಿನ್ ತೆಂಡೂಲ್ಕರ್​ ನೀಡಿರುವ ಆ ಬ್ಯಾಟ್​ ನನಗೆ ತುಂಬಾನೇ ಸ್ಪೆಷಲ್​​ ಎಂದು ಪಾಕಿಸ್ತಾನದ ಬ್ಯಾಟರ್​ ಶಾಹೀದ್​ ಅಫ್ರಿದಿ ಹೇಳಿದ್ದಾರೆ.
ಸಚಿನ್ ತೆಂಡೂಲ್ಕರ್ ಮತ್ತು ಶಾಹೀದ್ ಅಫ್ರಿದಿ.
ಸಚಿನ್ ತೆಂಡೂಲ್ಕರ್ ಮತ್ತು ಶಾಹೀದ್ ಅಫ್ರಿದಿ.

ವಿಶ್ವ ಕ್ರಿಕೆಟ್​ನ ಮೋಸ್ಟ್​ ಡೇಂಜರಸ್ ಬ್ಯಾಟರ್​ ಎನಿಸಿಕೊಂಡಿದ್ದ ಶಾಹೀದ್​ ಅಫ್ರಿದಿ (Shahid Afridi), ಕ್ರಿಕೆಟ್​ ದೇವರು ಸಚಿನ್​ ತೆಂಡೂಲ್ಕರ್ (Sachin Tendulkar) ಅವರನ್ನು ನೆನೆದಿದ್ದಾರೆ. ಅವರು ನೀಡಿದ ಉಡುಗೊರೆಯೊಂದು ತನ್ನ ವೃತ್ತಿ ಜೀವನವನ್ನೇ ಬದಲಾಯಿಸಿತು ಎಂದು ಹೇಳಿದ್ದಾರೆ. ಈಗಲೂ ಅವರು ಕೊಟ್ಟಿರುವ ಬ್ಯಾಟ್​ ಗಿಫ್ಟ್​ ಅನ್ನು ಭದ್ರವಾಗಿಟ್ಟುಕೊಂಡಿದ್ದೇನೆ ಎಂದು ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ವಿಶ್ವದ ಅತ್ಯುತ್ತಮ ತಂಡ; ಐರ್ಲೆಂಡ್ ವಿರುದ್ಧ ಪಾಕಿಸ್ತಾನ ಸರಣಿ ಗೆದ್ದ ನಂತರ ತಮ್ಮನ್ನು ತಾವೇ ಹೊಗಳಿಕೊಂಡ ಪಿಸಿಬಿ ಅಧ್ಯಕ್ಷ

ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯಬೇಕಾದ ಆರಂಭಿಕರನ್ನು ಹೆಸರಿಸಿದ ಇರ್ಫಾನ್ ಪಠಾಣ್; ಯಶಸ್ವಿ ಜೈಸ್ವಾಲ್‌ ಬೇಡವಂತೆ!

ನಾನು ಒಮ್ಮೆ ಹೋದರೆ, ನೀವು ಮತ್ತೆ ನನ್ನ ನೋಡಲ್ಲ; ನಿವೃತ್ತಿ ಕುರಿತು ವಿರಾಟ್ ಕೊಹ್ಲಿ ಅಚ್ಚರಿ ಹೇಳಿಕೆ, ಫ್ಯಾನ್ಸ್​ಗೆ ಆತಂಕ

ಕ್ರಿಕೆಟ್​​​ನಲ್ಲಿ ಆಟಗಾರರು ಧರಿಸುವ ನೆಕ್ ಡಿವೈಸ್ ಅಥವಾ ಕ್ಯೂ-ಕಾಲರ್​ ಎಂದರೇನು; ಪ್ರಯೋಜನ ಮತ್ತು ಬೆಲೆ ಎಷ್ಟು?

ಶಾಹಿದ್ ಅಫ್ರಿದಿ, ಅರ್ಧ ಗಂಟೆ ಕ್ರೀಸ್​​ನಲ್ಲಿದ್ದರೆ ಸಾಕಿತ್ತು. ಎದುರಾಳಿ ಬೌಲರ್​​ಗಳ ಬೆವರು ಸುರಿಸದೆ ವಾಪಸ್ ಹೋಗುತ್ತಿರಲಿಲ್ಲ. ಆದರೆ, ಕ್ರೀಸ್​ಗೆ ಬಂದ ನಂತರ ಔಟಾಗುತ್ತಿದ್ದದ್ದೇ ಹೆಚ್ಚು. ಒಂದು ವೇಳೆ ಔಟಾಗಿಲ್ಲ ಅಂದರೆ, ಬೌಂಡರಿ-ಸಿಕ್ಸರ್​​ಗಳಿಂದಲೇ ಸ್ಕೋರ್​​ ಬೋರ್ಡ್​​ನಲ್ಲಿ ತಂಡದ ಮೊತ್ತ ಹೆಚ್ಚಿಸುತ್ತಿದ್ದರು.

ಅತಿ ವೇಗದ ಶತಕ ಸಿಡಿಸಿದ ಅಫ್ರಿದಿ

ಕೀನ್ಯಾ ವಿರುದ್ಧದ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಶಾಹಿದ್ ಅಫ್ರಿದಿ, 1996ರಲ್ಲಿ ಶ್ರೀಲಂಕಾ ವಿರುದ್ಧ 37 ಎಸೆತಗಳಲ್ಲಿ ಶತಕ ಬಾರಿಸಿ ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗದ ಶತಕ ದಾಖಲಿಸಿದ ದಾಖಲೆ ನಿರ್ಮಿಸಿದ್ದರು. ಶಾಹಿದ್ ಅಫ್ರಿದಿ 37 ಎಸೆತಗಳಲ್ಲಿ 11 ಸಿಕ್ಸರ್ ಮತ್ತು 6 ಬೌಂಡರಿಗಳ ನೆರವಿನಿಂದ 102 ರನ್ ಗಳಿಸಿದರು.

ಅಫ್ರಿದಿ ದಾಖಲೆ 18 ವರ್ಷಗಳ ಕಾಲ ಹಾಗೇ ಇತ್ತು. 2014ರಲ್ಲಿ ಕೋರಿ ಆ್ಯಂಡರ್ಸನ್ ವೆಸ್ಟ್ ಇಂಡೀಸ್ ವಿರುದ್ಧ 36 ಎಸೆತಗಳಲ್ಲಿ ಶತಕ ಸಿಡಿಸಿ ಈ ದಾಖಲೆ ಮುರಿದಿದ್ದರು. ನಂತರ 2015ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಎಬಿ ಡಿವಿಲಿಯರ್ಸ್ 31 ಎಸೆತಗಳಲ್ಲಿ ಶತಕ ಬಾರಿಸಿ ಏಕದಿನದಲ್ಲಿ ಅತಿ ವೇಗದ ಶತಕ ಸಿಡಿಸಿದ ಬ್ಯಾಟ್ಸ್​ಮನ್ ಎನಿಸಿಕೊಂಡರು.

ಆ ಶತಕ ಸಿಡಿಸಿದ್ದು ಸಚಿನ್ ಬ್ಯಾಟ್​​ನಿಂದ

ಆದರೆ ಈ ದಾಖಲೆಯ ಶತಕ ನಿರ್ಮಿಸಿದ್ದು, ಕ್ರಿಕೆಟ್​ ದೇವರು ಸಚಿನ್​ ತೆಂಡೂಲ್ಕರ್ ನೀಡಿದ ಬ್ಯಾಟ್​​ನಿಂದ ಎಂಬುದು ವಿಶೇಷ. ಈ ವಿಷಯ ಎಷ್ಟೋ ಮಂದಿಗೆ ತಿಳಿದಿಲ್ಲ. ಪಾಕಿಸ್ತಾನದ ಬ್ಯಾಟರ್​​ ವಕಾರ್ ಯೂನಿಸ್, ಸಚಿನ್​ ಬ್ಯಾಟ್​ ಅನ್ನು ಅಫ್ರಿದಿಗೆ ನೀಡಿ ಕಣಕ್ಕಿಳಿಸಿದ್ದರು. ಅಂದು ಕೇವಲ 37 ಎಸೆತಗಳಲ್ಲಿ ಶತಕ ಸಿಡಿಸಿ ಮಿಂಚಿದ್ದರು.

‘ಬ್ಯಾಟನ್ನು ಕಾಪಾಡಿಕೊಂಡಿದ್ದೇನೆ’

ಈ ಬಗ್ಗೆ ಮಾತನಾಡಿರುವ ಅಫ್ರಿದಿ, ಶ್ರೀಲಂಕಾ ವಿರುದ್ಧ ವಿಶ್ವದಾಖಲೆ ಬರೆಯಲು ಬಳಸಿದ ಬ್ಯಾಟ್​​ ಈಗಲೂ ನನ್ನ ಬಳಿ ಭದ್ರವಾಗಿದೆ. ಆ ಬ್ಯಾಟ್​ ನನಗೆ ತುಂಬಾನೇ ಸ್ಪೆಷಲ್​​. ಅದು ನನ್ನ ಫೇವರಿಟ್ ಕ್ರಿಕೆಟರ್​ ಸಚಿನ್ ತೆಂಡೂಲ್ಕರ್​ ಅವರ ಬ್ಯಾಟ್. ಅವರು ಕೊಟ್ಟಿರುವ ಬ್ಯಾಟ್​​ನಿಂದ ವಿಶ್ವದಾಖಲೆ ಬರೆದಿದ್ದನ್ನು ನಾನು ಎಂದಿಗೂ ಮರೆಯಲ್ಲ ಎಂದು ಪಾಕಿಸ್ತಾನ ಮಾಜಿ ನಾಯಕ ಅಭಿಮಾನ ಮೆರೆದಿದ್ದಾರೆ.

‘ತುಂಬಾ ಖುಷಿಪಟ್ಟಿದ್ದೆ’

ಆ ಬ್ಯಾಟ್​ ತಮ್ಮ ಕೈಗೆ ಹೇಗೆ ಸೇರಿತು ಎಂಬುದನ್ನು ವಿವರಿಸಿದ ಅಫ್ರಿದಿ, ವಕಾರ್ ಯೂನಿಸ್, ಸಚಿನ್ ತೆಂಡೂಲ್ಕರ್ ಅವರನ್ನು ಕೇಳಿ ಆ ಬ್ಯಾಟ್​​ ತಂದುಕೊಟ್ಟಿದ್ದರು. ಪಂದ್ಯಕ್ಕೂ ಮುನ್ನ ಬೇರೆ ಬ್ಯಾಟ್​​ಗಳೊಂದಿಗೆ ಅಭ್ಯಾಸ ನಡೆಸಿದ್ದೆ. ಇನ್ಮುಂದೆ ಈ ಬ್ಯಾಟ್​​ನಿಂದ ಅಭ್ಯಾಸ ನಡೆಸು ಎಂದು ಹೇಳಿದ್ದರು. ಆ ಬ್ಯಾಟ್​ ಸಚಿನ್​ರದ್ದು ಎಂದು ತಿಳಿದ ಕೂಡಲೇ ತುಂಬಾ ಖುಷಿಪಟ್ಟೆ ಎಂದು ಅಫ್ರಿದಿ ತಿಳಿಸಿದ್ದಾರೆ.

‘ಆ ಬ್ಯಾಟ್​​​ನಿಂದ ಮತ್ತೆ ಆಡಿಲ್ಲ’

ನಾನು ಪ್ರಸ್ತುತ ಈ ಮಟ್ಟದಲ್ಲಿದ್ದೇನೆ ಅಂದರೆ ಸಚಿನ್ ತೆಂಡೂಲ್ಕರ್ ಬ್ಯಾಟಿಂಗ್ ಪಾತ್ರ ಬಹಳ ಮುಖ್ಯ. ಅದರ ನಂತರ ಕೆಲವೊಮ್ಮೆ ನಾನು ಆ ಬ್ಯಾಟ್‌ನೊಂದಿಗೆ ಆಡಲು ಬಯಸಿದ್ದೆ. ಆದರೆ, ಆ ಬ್ಯಾಟ್ ಮೌಲ್ಯ ಯಾವತ್ತೂ ಕಡಿಮೆಯಾಗಬಾರದು ಎಂಬ ಕಾರಣಕ್ಕೆ ಮತ್ತೆ ಎಂದೂ ಆ ಬ್ಯಾಟ್​ ಅನ್ನು ಬಳಸಲೇ ಇಲ್ಲ ಎಂದು ಶಾಹಿದ್ ಅಫ್ರಿದಿ ಪ್ರತಿಕ್ರಿಯಿಸಿದ್ದಾರೆ.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ