logo
ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತೀಯ ಬೌಲರ್‌ಗಳ ದಂಡಿಸಿದ ಡೀನ್ ಎಲ್ಗರ್; ರೋಹಿತ್ ಶರ್ಮಾ ಕಳಪೆ ನಾಯಕತ್ವಕ್ಕೆ ರವಿ ಶಾಸ್ತ್ರಿ ಅಸಮಾಧಾನ

ಭಾರತೀಯ ಬೌಲರ್‌ಗಳ ದಂಡಿಸಿದ ಡೀನ್ ಎಲ್ಗರ್; ರೋಹಿತ್ ಶರ್ಮಾ ಕಳಪೆ ನಾಯಕತ್ವಕ್ಕೆ ರವಿ ಶಾಸ್ತ್ರಿ ಅಸಮಾಧಾನ

Jayaraj HT Kannada

Dec 27, 2023 07:52 PM IST

google News

ಭಾರತ ಕ್ರಿಕೆಟ್‌ ತಂಡದ ನಾಯಕ ರೋಹಿತ್‌ ಶರ್ಮಾ

    • ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದ 2ನೇ ದಿನ, ರೋಹಿತ್ ಶರ್ಮಾ ಅವರ ನಾಯಕತ್ವದ ಬಗ್ಗೆ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭಾರತ ಕ್ರಿಕೆಟ್‌ ತಂಡದ ನಾಯಕ ರೋಹಿತ್‌ ಶರ್ಮಾ
ಭಾರತ ಕ್ರಿಕೆಟ್‌ ತಂಡದ ನಾಯಕ ರೋಹಿತ್‌ ಶರ್ಮಾ (REUTERS)

ಸೆಂಚುರಿಯನ್‌ನ ಸೂಪರ್‌ಸ್ಪೋರ್ಟ್ ಪಾರ್ಕ್‌ನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ (South Africa vs India, 1st Test) ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್‌ ಪಂದ್ಯದಲ್ಲಿ ಹರಿಣಗಳು ಹಿಡಿತ ಸಾಧಿಸಿದ್ದಾರೆ. 2ನೇ ದಿನದಾಟದಲ್ಲಿ ಭಾರತ ಆಲೌಟ್‌ ಆದ ಬೆನ್ನಲ್ಲೇ, ಬ್ಯಾಟಿಂಗ್‌ನಲ್ಲಿ ದಕ್ಷಿಣ ಆಫ್ರಿಕಾ ಬ್ಯಾಟರ್‌ಗಳು ಕ್ರೀಸ್‌ಕಚ್ಚಿ ಆಡುತ್ತಿದ್ದಾರೆ. ಹೀಗಾಗಿ ಭಾರತದ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ (Ravi Shastri), ರೋಹಿತ್ ಶರ್ಮಾ ನಾಯಕತ್ವದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೊದಲ ಇನ್ನಿಂಗ್ಸ್‌ನಲ್ಲಿ ಭಾರತವು ಕೇವಲ 245 ರನ್ ಗಳಿಸಿ ಆಲೌಟ್‌ ಆಯ್ತು. ಆ ಬಳಿಕ ದಕ್ಷಿಣ ಆಫ್ರಿಕಾವು ತನ್ನ ಮೊದಲ ಇನ್ನಿಂಗ್ಸ್‌ ಆರಂಭಿಸಿತು. ಊಟದ ಅವಧಿಯ ನಂತರ, ದಕ್ಷಿಣ ಆಫ್ರಿಕಾದ ಬ್ಯಾಟರ್‌ಗಳನ್ನು ಕಟ್ಟಿಹಾಕಲು ಭಾರತವು ತನ್ನ ಬತ್ತಳಿಕೆಯಲ್ಲಿರುವ ಎಲ್ಲಾ ಬೌಲಿಂಗ್‌ ಅಸ್ತ್ರಗಳನ್ನು ಪ್ರಯೋಗಿಸಿತು. ಆದರೆ, ಚಹಾ ವಿರಾಮದ ವೇಳೆಗೆ ಮೂರು ವಿಕೆಟ್‌ (194/3) ಮಾತ್ರ ಪಡೆಯುವಲ್ಲಿ ಭಾರತ ಯಶಸ್ವಿಯಾಗಿದೆ. ಡೀನ್ ಎಲ್ಗರ್ ಆಕರ್ಷಕ ಶತಕ ಸಿಡಿಸಿ ಅಬ್ಬರಿಸಿದ್ದಾರೆ.

ಎಲ್ಗರ್ ಜೊತೆಗೂಡಿದ ಜೋರ್ಜಿ ಉತ್ತಮ ಜೊತೆಯಾಟವಾಡಿದರು. ಜೋರ್ಜಿ ಔಟಾದ ಬಳಿಕ ಎಲ್ಗರ್ ಜೊತೆಗೂಡಿದ ಬೆಡಿಂಗ್‌ಹ್ಯಾಮ್‌ ಕೂಡಾ ಉತ್ತಮ ಸಾಥ್‌ ನೀಡಿದರು.

ಇದನ್ನೂ ಓದಿ | ಸೆಂಚುರಿಯನ್‌ನಲ್ಲಿ ಸೆಂಚುರಿ ಸಾಧನೆ; ದಕ್ಷಿಣ ಆಫ್ರಿಕಾ ವಿರುದ್ಧ ಕೆಎಲ್ ರಾಹುಲ್ ಮತ್ತೊಂದು ಶತಕ ದಾಖಲೆ

ನಿರ್ಭಿತಿಯಿಂದ ಉತ್ತಮ ಹೊಡೆತಗಳನ್ನಾಡಿದ‌ ಅನುಭವಿ ಎಲ್ಗರ್, ಭಾರತವನ್ನು ಒತ್ತಡಕ್ಕೆ ಸಿಲುಕಿಸಿದರು. ಊಟದ ವಿರಾಮದ ಬಳಿಕ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಬದಲಿಗೆ ಶಾರ್ದೂಲ್ ಠಾಕೂರ್ ಮತ್ತು ಪ್ರಸಿದ್ಧ್ ಕೃಷ್ಣ ಅವರನ್ನು ರೋಹಿ ಬೌಲಿಂಗ್‌ಗೆ ಇಳಿಸಿದರು. ಆದರೆ, ನಾಯಕನ ತಂತ್ರಗಳು ತಂಡಕ್ಕೆ ನೆರವಾಗಲಿಲ್ಲ.

ಪ್ರಸಿದ್ಧ್‌ ದುಬಾರಿ

ಕಳೆದ ಬಾರಿಯ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಶಾರ್ದೂಲ್ ಠಾಕೂರ್‌ ಐತಿಹಾಸಿಕ ಏಳು ವಿಕೆಟ್ ಕಬಳಿಸಿ ಮಿಂಚಿದ್ದರು. ಹೀಗಾಗಿ ನಾಯಕನ ನಿರ್ಧಾರದ ಹಿಂದೆ ತರ್ಕವಿದೆ. ಆದರೆ, ಪದಾರ್ಪಣೆ ಮಾಡಿದ ಪ್ರಸಿದ್ಧ್ ಕೃಷ್ಣ ಅವರನ್ನು ಬೌಲಿಂಗ್‌ ಇಳಿಸಿದ ಹಿಂದೆ ಸರಿಯಾದ ಲಾಜಿಕ್‌ ಇಲ್ಲ. ಇವರಿಬ್ಬರ 8 ಓವರ್ ಬೌಲಿಂಗ್‌ನಲ್ಲಿ ಬರೋಬ್ಬರಿ 42 ರನ್‌ಗಳು ಸೋರಿಕೆಯಾದವು. ಶಾರ್ದೂಲ್ ಮತ್ತು ಪ್ರಸಿದ್ಧ್ ಉತ್ತಮವಾಗಿಯೇ ಬೌಲ್ ಮಾಡಿದರು. ಆದರೆ, ತಂಡ ನಿರೀಕ್ಷಿಸಿದಷ್ಟು ಲೈನ್‌ ಆಂಡ್ ಲೆಂತ್ ಡೆಲಿವರಿ ಬರಲಿಲ್ಲ. ಎಲ್ಗರ್ ಯಾವುದೇ ಒತ್ತಡ ಇಲ್ಲದೆ ಬ್ಯಾಟ್‌ ಬೀಸಿ ಶತಕ ಸಿಡಿಸಿದರು.

“ಊಟದ ವಿರಾಮದ ನಂತರದ‌ ಅವಧಿಯನ್ನು ಪ್ರಾರಂಭಿಸುವಾಗ ಈ ಇಬ್ಬರು (ಶಾರ್ದೂಲ್ ಮತ್ತು ಪ್ರಸಿದ್ಧ್) ಕೊನೆಯ ಆಯ್ಕೆ” ಎಂದು ಶಾಸ್ತ್ರಿ ಕಾಮೆಂಟರಿಯಲ್ಲಿ ಹೇಳಿದ್ದಾರೆ.

ಇದನ್ನೂ ಓದಿ | ಈ ಹಂತದಲ್ಲಿ ವಿರಾಟ್‌ಗೆ ಹೆಚ್ಚು ಅಭ್ಯಾಸದ ಅಗತ್ಯವಿಲ್ಲ; ಕೊಹ್ಲಿ ನಿಲುವು ಸಮರ್ಥಿಸಿದ ಕೋಚ್

ಭಾರತ ತಂಡದ ಆಟದ ತಂತ್ರಗಳಿಂದ ಭಾರತದ ಮಾಜಿ ಆಲ್ ರೌಂಡರ್ ಶಾಸ್ತ್ರಿ ಸ್ವಲ್ಪ ಮಟ್ಟಿಗೆ ಸಿಟ್ಟಿಗೆದ್ದಂತೆ ತೋರುತ್ತಿತ್ತು. “ನಾನು ತರಬೇತುದಾರನಾಗಿದ್ದಾಗ ನಾವು ಹಲವಾರು ಬಾರಿ ಚರ್ಚೆ ನಡೆಸಿದ್ದೆವು. ಹೆಚ್ಚಾಗಿ ನಾವು ಸೆಷನ್ ಆರಂಭದಲ್ಲಿ ಇಬ್ಬರು ಅತ್ಯುತ್ತಮ ಬೌಲರ್‌ಗಳನ್ನು ಕಣಕ್ಕಿಳಿಸಿಲು ಆದ್ಯತೆ ನೀಡುತ್ತಿದ್ದೆವು” ಎಂದು ಅವರು ಹೇಳಿದ್ದಾರೆ.

ಜಸ್ಪ್ರೀತ್‌ ಬುಮ್ರಾ ರನ್‌ ರೇಟ್‌ಗೆ ಬ್ರೇಕ್ ಹಾಕಿ ಎರಡು ವಿಕೆಟ್‌ ಪಡೆದರು. ಸಿರಾಜ್‌ ಎರಡು ವಿಕೆಟ್‌ ಕಬಳಿಸಿದರು.

ವಿಡಿಯೋ ನೋಡಿ | JAMMU KASHMIR: ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ನಿಗೂಢ ಸ್ಫೋಟಕ ವಸ್ತುಗಳು ; ಸ್ಥಳಕ್ಕೆ ಸೇನೆ ಹಾಗೂ ಬಾಂಬ್ ಸ್ಕ್ಯಾಡ್

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ