logo
ಕನ್ನಡ ಸುದ್ದಿ  /  ಕ್ರಿಕೆಟ್  /  ಛೇ.. ಎಂಥಾ ಅವಕಾಶ ಮಿಸ್ ಮಾಡಿಕೊಳ್ತು ಆರ್​ಸಿಬಿ; ಕೈಗೆಟುಕುವ ದರದಲ್ಲೇ ಸಿಕ್ಕ ಆಟಗಾರರನ್ನು ಖರೀದಿಸದೆ ಕೈಬಿಟ್ಟ ಬೆಂಗಳೂರು

ಛೇ.. ಎಂಥಾ ಅವಕಾಶ ಮಿಸ್ ಮಾಡಿಕೊಳ್ತು ಆರ್​ಸಿಬಿ; ಕೈಗೆಟುಕುವ ದರದಲ್ಲೇ ಸಿಕ್ಕ ಆಟಗಾರರನ್ನು ಖರೀದಿಸದೆ ಕೈಬಿಟ್ಟ ಬೆಂಗಳೂರು

Prasanna Kumar P N HT Kannada

Nov 24, 2024 06:50 PM IST

google News

ಛೇ.. ಎಂಥಾ ಅವಕಾಶ ಮಿಸ್ ಮಾಡಿಕೊಳ್ತು ಆರ್​ಸಿಬಿ; ಕೈಗೆಟುಕುವ ದರದಲ್ಲೇ ಸಿಕ್ಕ ಆಟಗಾರರನ್ನು ಖರೀದಿಸದೆ ಕೈಬಿಟ್ಟ ಬೆಂಗಳೂರು

    • IPL 2025 Mega Auction: ಐಪಿಎಲ್ 2025 ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೆಎಲ್ ರಾಹುಲ್ ಸೇರಿದಂತೆ ಪ್ರಮುಖ ಆಟಗಾರರನ್ನು ಖರೀದಿಸದೆ ವಿಫಲವಾಯಿತು.
ಛೇ.. ಎಂಥಾ ಅವಕಾಶ ಮಿಸ್ ಮಾಡಿಕೊಳ್ತು ಆರ್​ಸಿಬಿ; ಕೈಗೆಟುಕುವ ದರದಲ್ಲೇ ಸಿಕ್ಕ ಆಟಗಾರರನ್ನು ಖರೀದಿಸದೆ ಕೈಬಿಟ್ಟ ಬೆಂಗಳೂರು
ಛೇ.. ಎಂಥಾ ಅವಕಾಶ ಮಿಸ್ ಮಾಡಿಕೊಳ್ತು ಆರ್​ಸಿಬಿ; ಕೈಗೆಟುಕುವ ದರದಲ್ಲೇ ಸಿಕ್ಕ ಆಟಗಾರರನ್ನು ಖರೀದಿಸದೆ ಕೈಬಿಟ್ಟ ಬೆಂಗಳೂರು

ರಾಯಲ್ ಚಾಲೆಂಜರ್ಸ್​ ಬೆಂಗಳೂರು ಪ್ರತಿ ವರ್ಷದಂತೆ ಈ ಬಾರಿಯೂ ದೊಡ್ಡ ತಪ್ಪನ್ನೇ ಮಾಡಿಬಿಟ್ಟಿದೆ. ಕೈಗೆಟುಕುವ ದರದಲ್ಲೇ ಆಟಗಾರರು ಸಿಕ್ತಿದ್ದರೂ ಖರೀದಿಸದೆ ಕೈಕಟ್ಟಿ ಕುಳಿತಿತ್ತು. ಅದರಲ್ಲೂ ಮುಖ್ಯವಾಗಿ ಟೀಮ್ ಇಂಡಿಯಾ ಸ್ಟಾರ್​ ವಿಕೆಟ್ ಕೀಪರ್ ಬ್ಯಾಟರ್​ ಕೆಎಲ್ ರಾಹುಲ್ ಖರೀದಿಗೆ ಒಲವು ತೋರದೇ ಇರುವುದು ಬೆಂಗಳೂರು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಲೋಕಲ್ ಬಾಯ್​ ರಾಹುಲ್​ ಆರ್​ಸಿಬಿ ಖರೀದಿಸುವುದು ಪಕ್ಕಾ ಎಂದು ಮೂಲಗಳು ಹೇಳಿದ್ದವು. ತನ್ನ ಪರ್ಸ್​​ನಲ್ಲಿ ದುಡ್ಡಿದ್ದರೂ ಬಿಚ್ಚಲು ಹಿಂದೆ ಮುಂದೆ ನೋಡಿದ್ದು ವಿಪರ್ಯಾಸ.

ಆಲ್​ ಇನ್​ ಒನ್ ಕೆಎಲ್ ರಾಹುಲ್

ಎರಡನೇ ಸೆಟ್​ನಲ್ಲಿ 2 ಕೋಟಿ ಮೂಲ ಬೆಲೆಯೊಂದಿಗೆ ಹರಾಜಿಗೆ ಬಂದ ಕನ್ನಡಿಗ ಕೆಎಲ್ ರಾಹುಲ್ ಖರೀದಿಗೆ ಆರ್‌ಸಿಬಿ ಆರಂಭದಿಂದಲೇ ಬಿಡ್‌ ಮಾಡುವ ಮೂಲಕ ಒಲವು ತೋರಿತು. ಆದರೆ ಕೋಲ್ಕತ್ತಾ ನೈಟ್ ರೈಡರ್ಸ್ ಪ್ರಬಲ ಪೈಪೋಟಿ ನೀಡಿತು. ಸೆಕೆಂಡ್ ಕೂಡ ಗ್ಯಾಪ್ ಕೊಡದೆ ಉಭಯ ಫ್ರಾಂಚೈಸಿಗಳು ಜಿದ್ದಿಗೆ ಬಿದ್ದವು. ಇದು ಆರ್​ಸಿಬಿ ಫ್ಯಾನ್ಸ್​ ಖುಷಿ ಹೆಚ್ಚಿಸಿತು. ಎಷ್ಟು ಕೋಟಿಯಾದರೂ ಆರ್​ಸಿಬಿ ಖರೀದಿ ಮಾಡುತ್ತದೆ ಎಂದು ಭಾವಿಸಿದ್ದರು. ಮೊದಲು ಬಿರುಸಾಗಿ ಬಿಡ್ ಮಾಡಿದ ರೆಡ್ ಆರ್ಮಿ, 10 ಕೋಟಿ ದಾಟುತ್ತಿದ್ದಂತೆಯೇ ತುಸು ಹಿಂದೆ ಸರಿಯಿತು.

ಅಷ್ಟರಲ್ಲಿ ಅಖಾಡಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಅಖಾಡಕ್ಕೆ ಎಂಟ್ರಿಕೊಟ್ಟಿತು. ಆರ್​ಸಿಬಿ ಹಿಂದೆ ಮುಂದೆ ನೋಡುತ್ತಾ ಬಿಡ್ ಸಲ್ಲಿಸಿತು. ಕೊನೆಗೆ ಕೆಎಲ್ ರಾಹುಲ್ 14 ಕೋಟಿಗೆ ಡೆಲ್ಲಿ ಪಾಲಾದರು. ಪಕ್ಕಾ ಕ್ಲಾಸ್ ಆಟಗಾರ ರಾಹುಲ್​ರನ್ನು ಆರ್​ಟಿಎಂ ಮೂಲಕವಾದರೂ ಖರೀದಿಸಬಹುದಿತ್ತು. ಆರಂಭಿಕ ಆಟಗಾರ, ವಿಕೆಟ್ ಕೀಪರ್​, ಮಧ್ಯಮ ಕ್ರಮಾಂಕದಲ್ಲೂ ಬ್ಯಾಟ್ ಮಾಡುತ್ತಾರೆ, ಕ್ಯಾಪ್ಟನ್ಸಿ ಮೆಟಿರಿಯಲ್, ಅದ್ಭುತ ಫೀಲ್ಡರ್​, ಎಲ್ಲದಕ್ಕಿಂತ ಮುಖ್ಯವಾಗಿ ಕನ್ನಡಿಗನಾಗಿದ್ದ ರಾಹುಲ್​ಗೆ 14 ಕೋಟಿ ಮೇಲೆ ಬಿಡ್​ ಸಲ್ಲಿಸದೇ ಇರುವುದು ಅಚ್ಚರಿ ಮೂಡಿಸಿತು.

ನಿಧಾನವಾಗಿ ಆಡುತ್ತಾರೆ ಎಂದು ಖರೀದಿಸಲಿಲ್ಲವೇ?

ಮೊದಲಿಗೆ 8.75 ಕೋಟಿ ರೂಪಾಯಿಗೆ ಇಂಗ್ಲೆಂಡ್ ತಂಡದ ಹೊಡಿಬಡಿ ಆಟಗಾರ ಲಿಯಾಮ್ ಲಿವಿಂಗ್​ಸ್ಟನ್ ಖರೀದಿಸಿದ್ದ ಆರ್​ಸಿಬಿ, ರಾಹುಲ್​ಗೆ ಬಿಡ್​ ಮಾಡುವ ಅವಧಿಯಲ್ಲಿ ಪರ್ಸ್​​ನಲ್ಲಿ 74.25 ಕೋಟಿ ಇತ್ತು. ಆದರೆ ರಾಹುಲ್​ ಮೇಲೆ ಬಂಡವಾಳ ಹೂಡಲು ಹಿಂದೆ ಮುಂದೆ ನೋಡಿತು. ಕೆಲವು ಫ್ರಾಂಚೈಸಿಗಳು ತಮ್ಮಲ್ಲಿ ಪರ್ಸ್ ಮೊತ್ತ ಕಡಿಮೆ ಇದ್ದರೂ ತಮಗೆ ಬೇಕಾದ ಆಟಗಾರರಿಗೆ ಹಣ ಮಳೆ ಸುರಿಸಿದವು. ವಿಕೆಟ್ ಕೀಪರ್, ಕ್ಯಾಪ್ಟನ್, ಓಪನರ್​, ಅನುಭವಿ ಆಟಗಾರನಾಗಿದ್ದರೂ ಖರೀದಿಗೆ ಹಿಂದೆ ಸರಿದಿದ್ದೇಕೆ? ಹೇಗೂ ಆರ್​ಸಿಬಿಗೆ ಓಪನರ್​, ಕ್ಯಾಪ್ಟನ್, ವಿಕೆಟ್ ಕೀಪರ್ ಬೇಕಿತ್ತು. ರಾಹುಲ್ ಖರೀದಿಸಿದ್ದರೆ ಒಬ್ಬರಿಂದಲೇ ಎಲ್ಲಾ ಸ್ಲಾಟ್ ಫಿಲ್ ಆಗುತ್ತಿತ್ತು.

ಕಳೆದ ಐಪಿಎಲ್​ಗಳಲ್ಲಿ ನಿಧಾನವಾಗಿ ಬ್ಯಾಟಿಂಗ್ ಮಾಡಿದ್ದಾರೆ ಎಂಬ ಕಾರಣಕ್ಕೆ ಖರೀದಿಸಲಿಲ್ಲವೇ? ಹಾಗಿದ್ದರೆ ಐಪಿಎಲ್​ನಲ್ಲಿ ವೇಗದ ಅರ್ಧಶತಕ ಯಾರ ಹೆಸರನಲ್ಲಿ ಎಂಬುದನ್ನು ತೆರೆದುನೋಡಿದರೆ ಉತ್ತಮ. 14 ಎಸೆತಗಳಲ್ಲೇ ಅರ್ಧಶತಕ ಬಾರಿಸಿದ್ದಾರೆ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ನಿಜವಾಗಲೂ ರಾಹುಲ್​ಗೆ 14 ಕೋಟಿಗೆ ಖರೀದಿಸಿಲು ಅರ್ಹರಿದ್ದರು. ಆರ್​ಸಿಬಿ ಆರ್​ಟಿಬಿ ಕಾರ್ಡ್ ಬಳಸಿಯೂ ರಾಹುಲ್ ಖರೀದಿಗೆ ಮುಂದಾಗಬಹುದಿತ್ತು. ಆರ್​ಟಿಎಂ ಕಾರ್ಡ್​ನಲ್ಲಿ ಇನ್ನೊಂದು 3 ಕೋಟಿ ಹೆಚ್ಚು ಘೋಷಿಸಿದ್ದರೆ ಡೆಲ್ಲಿ ಬಿಡ್​ನಿಂದ ಹಿಂದೆ ಸರಿಯುತ್ತಿತ್ತು.

ಈ ಆಟಗಾರರ ಮೇಲೆ ಬಿಡ್ ಮಾಡಿ ಸುಮ್ಮನಾದ ಆರ್​ಸಿಬಿ

ರಾಹುಲ್​ಗೆ ಮಾತ್ರವಲ್ಲ, ಹೊಡಿಬಡಿ ಆಟಗಾರ ಡೇವಿಡ್ ಮಿಲ್ಲರ್ (7.50 ಕೋಟಿ), ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್ (11.75 ಕೋಟಿ)​, ಭಾರತದ ವೇಗಿ ಮೊಹಮ್ಮದ್ ಸಿರಾಜ್ (12.25 ಕೋಟಿ), ಸೌತ್ ಆಫ್ರಿಕಾದ ಕಗಿಸೋ ರಬಾಡ (10.75 ಕೋಟಿ), ಇಂಗ್ಲೆಂಡ್ ವಿಕೆಟ್ ಕೀಪರ್ ಜೋಸ್ ಬಟ್ಲರ್​ (15.75 ಕೋಟಿ), ಮೊಹಮ್ಮದ್ ಶಮಿ (10 ಕೋಟಿ), ಡೆವೋನ್ ಕಾನ್ವೆ (6.75 ಕೋಟಿ) ಸೇರಿದಂತೆ ಪ್ರಮುಖ ಆಟಗಾರರನ್ನೇ ಖರೀದಿಸದೆ ಕೈಬಿಟ್ಟಿತು. ಪ್ರತಿ ಆವೃತ್ತಿಯಲ್ಲೂ ಮಾಡುವ ತಪ್ಪನ್ನೇ ಈ ಬಾರಿಯೂ ಮರುಕಳುಹಿಸಿದೆ. ಈ ಆಟಗಾರರ ಮೇಲೆ ಒಂದೆರೆಡು ಬಾರಿ ಬಿಡ್ ಮಾಡಿ ಸುಮ್ಮನಾಯಿತು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ