ರಿಷಭ್ ಪಂತ್‌ಗೆ​ ಜಾಕ್‌​ಪಾಟ್, 27 ಕೋಟಿಗೆ ಲಕ್ನೋ ಪಾಲು; ನಿಮಿಷಗಳ ಅಂತರದಲ್ಲಿ ಐಪಿಎಲ್ ದುಬಾರಿ ಆಟಗಾರ ಅಯ್ಯರ್​ ದಾಖಲೆ ಬ್ರೇಕ್
ಕನ್ನಡ ಸುದ್ದಿ  /  ಕ್ರಿಕೆಟ್  /  ರಿಷಭ್ ಪಂತ್‌ಗೆ​ ಜಾಕ್‌​ಪಾಟ್, 27 ಕೋಟಿಗೆ ಲಕ್ನೋ ಪಾಲು; ನಿಮಿಷಗಳ ಅಂತರದಲ್ಲಿ ಐಪಿಎಲ್ ದುಬಾರಿ ಆಟಗಾರ ಅಯ್ಯರ್​ ದಾಖಲೆ ಬ್ರೇಕ್

ರಿಷಭ್ ಪಂತ್‌ಗೆ​ ಜಾಕ್‌​ಪಾಟ್, 27 ಕೋಟಿಗೆ ಲಕ್ನೋ ಪಾಲು; ನಿಮಿಷಗಳ ಅಂತರದಲ್ಲಿ ಐಪಿಎಲ್ ದುಬಾರಿ ಆಟಗಾರ ಅಯ್ಯರ್​ ದಾಖಲೆ ಬ್ರೇಕ್

ಐಪಿಎಲ್‌ ಮೆಗಾ ಹರಾಜಿನಲ್ಲಿ ರಿಷಬ್‌ ಪಂತ್‌ ಖರೀದಿಗೆ ತಂಡಗಳು ಮುಗಿ ಬಿದ್ದವು. 20.75 ಕೋಟಿಗೆ ಲಕ್ನೋ ಸೂಪರ್‌ ಜೈಂಟ್ಸ್‌ ಬಿಡ್‌ ಮುಗಿಸಿತು. ಈ ಕ್ಷಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಆರ್‌ಟಿಎಂ ಕಾರ್ಡ್‌ ಬಳಸಿತು. ಆದರೆ, ಲಕ್ನೋ ತಂಡ 27 ಕೋಟಿ ರೂ ಬಿಡ್‌ ಕರೆದು ಪಂತ್‌ ತಮಗೆ ಬೇಕೆಂದಿತು. ಅಷ್ಟರಲ್ಲಿ ಡೆಲ್ಲಿ ಬಿಡ್‌ನಿಂದ ಹಿಂದೆ ಸರಿಯಿತು.

ಬರೋಬ್ಬರಿ 27 ಕೋಟಿ ಕೊಟ್ಟು ರಿಷಬ್ ಪಂತ್ ಖರೀದಿಸಿದ ಲಕ್ನೋ ಸೂಪರ್ ಜೈಂಟ್ಸ್
ಬರೋಬ್ಬರಿ 27 ಕೋಟಿ ಕೊಟ್ಟು ರಿಷಬ್ ಪಂತ್ ಖರೀದಿಸಿದ ಲಕ್ನೋ ಸೂಪರ್ ಜೈಂಟ್ಸ್

ಐಪಿಎಲ್‌ 2025ರ ಆವೃತ್ತಿಯ ಮೆಗಾ ಹರಾಜಿನಲ್ಲಿ, ರಿಷಬ್‌ ಪಂತ್‌ ಭಾರಿ ಮೊತ್ತಕ್ಕೆ ಸೇಲ್‌ ಆಗಿದ್ದಾರೆ. ಹರಾಜಿಗೂ ಮುನ್ನವೇ ದೊಡ್ಡ ಮೊತ್ತ ಪಡೆಯುವ ನಿರೀಕ್ಷೆ ಮೂಡಿಸಿದ್ದ ವಿಕೆಟ್‌ ಕೀಪರ್‌, ಬರೋಬ್ಬರಿ 27 ಕೋಟಿ ರೂ ಮೊತ್ತಕ್ಕೆ ಲಕ್ನೋ ಸೂಪರ್‌ ಜೈಂಟ್ಸ್‌ ಪಾಲಾಗಿದ್ದಾರೆ. ಮೂಲ ಬೆಲೆ 2 ಕೋಟಿ ರೂಪಾಯಿಗೆ ರಿಷಬ್‌ ಪಂತ್‌ ಖರೀದಿಗೆ ರಾಯಲ್‌ ಚಾಲೆಂಜರ್ಸ್ ಬೆಂಗಳೂರು‌ ಮತ್ತು ಲಕ್ನೋ ಸೂಪರ್‌ ಜೈಂಟ್ಸ್‌ ಪೈಪೋಟಿಗಿಳಿದವು. ಕ್ಷಣ ಮಾತ್ರದಲ್ಲೇ ಬಿಡ್‌ 10 ಕೋಟಿಗೇರಿತು. ಈ ವೇಳೆ ಆರ್‌ಸಿಬಿ ಬಿಡ್ಡಿಂಗ್‌ ತುಸು ನಿಧಾನಗೊಳಿಸಿತು. ಈ ವೇಳೆ ಸನ್‌ರೈಸರ್ಸ್‌ ಹೈದರಾಬಾದ್‌ ಬಿಡ್‌ ವಾರ್‌ಗೆ ಇಳಿಯಿತು. ಮಾಲಕಿ ಕಾವ್ಯಾ ಮಾರನ್‌ ತಾನು ಪಂತ್‌ ಬಿಟ್ಟುಕೊಡಲ್ಲ ಎಂಬಂತೆ ಬಿಡ್ಡಿಂಗ್‌ ವಾರ್‌ಗೆ ಧುಮುಕಿದರು. ಬರೋಬ್ಬರಿ 20 ಕೋಟಿ ಬಿಡ್‌ ಮಾಡಿದರು.

ಒಂದು ಹಂತದಲ್ಲಿ 20.75 ಕೋಟಿಗೆ ಲಕ್ನೋ ಸೂಪರ್‌ ಜೈಂಟ್ಸ್‌ ಬಿಡ್‌ ಮುಗಿಸಿತು. ಈ ಕ್ಷಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಆರ್‌ಟಿಎಂ ಕಾರ್ಡ್‌ ಬಳಸಿ ಪಂತ್‌ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲು ಮುಂದಾಯ್ತು. ಆದರೆ, ಲಕ್ನೋ ತಂಡ 27 ಕೋಟಿ ರೂ ಬಿಡ್‌ ಕರೆದು ಪಂತ್‌ ತಮಗೆ ಬೇಕೆಂದಿತು. ಅಷ್ಟರಲ್ಲಿ ಡೆಲ್ಲಿ ಬಿಡ್‌ನಿಂದ ಹಿಂದೆ ಸರಿಯಿತು.

2018 ರ ಹರಾಜಿಗೆ ಮುಂಚಿತವಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಉಳಿಸಿಕೊಂಡ ಮೂವರು ಆಟಗಾರರ ಪೈಕಿ ರಿಷಭ್ ಪಂತ್ ಕೂಡಾ ಒಬ್ಬರು. ಐಪಿಎಲ್ 2020 ಸೇರಿದಂತೆ ಮುಂದಿನ ಎರಡು ಸೀಸನ್‌ಗಳಿಗೆ ಪಂತ್‌ ಅವರನ್ನು ಡೆಲ್ಲಿ ಉಳಿಸಿಕೊಂಡಿತು. ಶ್ರೇಯಸ್‌ ಅಯ್ಯರ್ ಗಾಯದ‌ ಹಿನ್ನೆಲೆಯಲ್ಲಿ ಐಪಿಎಲ್ 2021ರ ಆವೃತ್ತಿಗೆ ಡೆಲ್ಲಿ ತಂಡದ ನಾಯಕನಾಗಿ ಆಯ್ಕೆಯಾದರು. ಈವರೆಗೆ ಐಪಿಎಲ್‌ನಲ್ಲಿ 1 ಶತಕ ಹಾಗೂ 18 ಅರ್ಧಶತಕಗಳನ್ನು ಸಿಡಿಸಿದ್ದಾರೆ.

ಐಪಿಎಲ್‌ನಲ್ಲಿ ಪಂತ್ 1 ಶತಕ ಮತ್ತು 12 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಕಳೆದ ಆವೃತ್ತಿಯಲ್ಲಿ ಡೆಲ್ಲಿ ಪರ 446 ರನ್‌ ಗಳಿಸಿದ್ದಾರೆ. ಇದರಲ್ಲಿ 88 ರನ್‌ ಗರಿಷ್ಠ ಮೊತ್ತ. 155.40ರ ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟ್‌ ಬೀಸಿರುವ ಅವರು 3 ಅರ್ಧಶತಕ ಸಿಡಿಸಿದ್ದಾರೆ.

2016ರಲ್ಲಿ 1.9 ಕೋಟಿ ರೂಪಾಯಿಗೆ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಸೇರಿಕೊಂಡ ಪಂತ್‌, 2018ರ ವೇಳೆಗೆ ತಮ್ಮ ಸಂಭಾವನೆಯನ್ನು 8 ಕೋಟಿಗೆ ಏರಿಸಿಕೊಂಡರು. 2021ರ ವೇಳೆಗೆ ಇದು 15 ಕೋಟಿಗೆ ಏರಿಕೆಯಾಯ್ತು. ಮುಂದಿನ ಆವೃತ್ತಿಯಲ್ಲಿ 16 ಕೋಟಿಗೆ ಏರಿತು. ಕಳೆದ ಆವೃತ್ತಿಯಲ್ಲೂ ಪಂತ್‌ 16 ಕೋಟಿ ರೂಪಾಯಿಗೆ ಡೆಲ್ಲಿ ಪರ ಆಡಿದ್ದರು. ಇದೀಗ ಈ ಬಾರಿ ಬೃಹತ್‌ ಮೊತ್ತಕ್ಕೆ ಬಿಕರಿಯಾಗಿದ್ದಾರೆ.

ಐಪಿಎಲ್​ನಲ್ಲಿ ಪಂತ್​ ಪ್ರದರ್ಶನ

  • ಪಂದ್ಯ - 111
  • ರನ್ - 3284
  • ಬೆಸ್ಟ್ - 128*
  • ಸರಾಸರಿ - 35.31
  • ಸ್ಟ್ರೈಕ್​ರೇಟ್ - 148.93
  • 50/100 - 18/01
  • 4/6 - 296/154
  • ನಾಟೌಟ್ - 17

ಶ್ರೇಯಸ್ ಅಯ್ಯರ್ 26.75 ಕೋಟಿಗೆ ಸೇಲ್

ಇದಕ್ಕೂ ಮುನ್ನ 2 ಕೋಟಿ ಮೂಲ ಬೆಲೆಯ ಶ್ರೇಯಸ್ ಅಯ್ಯರ್ 26.75 ಕೋಟಿ ರೂಪಾಯಿಗೆ ಪಂಜಾಬ್ ಕಿಂಗ್ಸ್‌ಗೆ ಬಿಕರಿಯಾದರು. ಅತ್ತ ಜೋಸ್‌ ಬಟ್ಲರ್‌ ಖರೀದಿಗೆ ರಾಜಸ್ಥಾನ್‌ ರಾಯಲ್ಸ್‌ ಮತ್ತು ಗುಜರಾತ್ ಟೈಟಾನ್ಸ್‌ ಬಿಡ್‌ ಪೈಪೋಟಿಗೆ ಇಳಿದವು. ಮಾಜಿ ಆಟಗಾರನ ಖರೀದಿಗೆ ರಾಯಲ್ಸ್‌ ಭಾರಿ ಆಸಕ್ತಿ ತೋರಿತು. 34 ವರ್ಷದ ಇಂಗ್ಲೆಂಡ್‌ ವಿಕೆಟ್‌ ಕೀಪರ್‌ ಕೊನೆಗೆ ಗುಜರಾತ್‌ ಟೈಟಾನ್ಸ್‌ ಪಾಲಾದರು.‌

 

Whats_app_banner