logo
ಕನ್ನಡ ಸುದ್ದಿ  /  ಕ್ರಿಕೆಟ್  /  ಆರ್‌ಸಿಬಿಗೆ ಸಂಕಷ್ಟ; ಮೆಗಾ ಹರಾಜಿನಲ್ಲಿ ಸ್ಥಳೀಯ ಪ್ರತಿಭೆಗಳನ್ನು ಕರೆತರಲು ಕರ್ನಾಟಕ ಸರ್ಕಾರದ ಒತ್ತಡ

ಆರ್‌ಸಿಬಿಗೆ ಸಂಕಷ್ಟ; ಮೆಗಾ ಹರಾಜಿನಲ್ಲಿ ಸ್ಥಳೀಯ ಪ್ರತಿಭೆಗಳನ್ನು ಕರೆತರಲು ಕರ್ನಾಟಕ ಸರ್ಕಾರದ ಒತ್ತಡ

Jayaraj HT Kannada

Oct 22, 2024 02:46 PM IST

google News

ಆರ್‌ಸಿಬಿಗೆ ಸಂಕಷ್ಟ; ಮೆಗಾ ಹರಾಜಿನಲ್ಲಿ ಸ್ಥಳೀಯ ಪ್ರತಿಭೆಗಳನ್ನು ಕರೆತರಲು ಸರ್ಕಾರದ ಒತ್ತಡ

    • ಕಳೆದ ಹಲವು ವರ್ಷಗಳಿಂದ ಆರ್‌ಸಿಬಿ ತಂಡದಲ್ಲಿ ಕರ್ನಾಟಕದ ದೇಶೀಯ ಆಟಗಾರರಿಗೆ ಸಿಕ್ಕ ಅವಕಾಶಗಳು ತೀರಾ ಕಡಿಮೆ. ದೇವದತ್ ಪಡಿಕ್ಕಲ್ ಈ ತಂಡದಿಂದ ಸತತ ಅವಕಾಶ ಪಡೆದ ಕರ್ನಾಟಕದ ಕೊನೆಯ ಆಟಗಾರ. ಕನ್ನಡಿಗರಿಗೆ ತಂಡದಲ್ಲಿ ಅವಕಾಶ ನೀಡಬೇಕೆಂಬ ಸಲುವಾಗಿ ಹೊಸ ಪ್ರಯತ್ನಗಳು ನಡದಿರುವಂತಿದೆ. 
ಆರ್‌ಸಿಬಿಗೆ ಸಂಕಷ್ಟ; ಮೆಗಾ ಹರಾಜಿನಲ್ಲಿ ಸ್ಥಳೀಯ ಪ್ರತಿಭೆಗಳನ್ನು ಕರೆತರಲು ಸರ್ಕಾರದ ಒತ್ತಡ
ಆರ್‌ಸಿಬಿಗೆ ಸಂಕಷ್ಟ; ಮೆಗಾ ಹರಾಜಿನಲ್ಲಿ ಸ್ಥಳೀಯ ಪ್ರತಿಭೆಗಳನ್ನು ಕರೆತರಲು ಸರ್ಕಾರದ ಒತ್ತಡ

ಇಂಡಿಯನ್ ಪ್ರೀಮಿಯರ್ ಲೀಗ್ (IPL) ನ ಮುಂದಿನ ಋತುವಿನ ಹರಾಜು ಪ್ರಕ್ರಿಯೆಗೂ ಮೊದಲು ಧಾರಣ ಪಟ್ಟಿಯನ್ನು ಬಿಡುಗಡೆ ಮಾಡಲು ಎಲ್ಲಾ ಫ್ರಾಂಚೈಸಿಗಳಿಗೆ ಅಕ್ಟೋಬರ್ 31ರವರೆಗೆ ಸಮಯ ನೀಡಲಾಗಿದೆ. ಬಹುತೇಕ ತಂಡಗಳಿಂದ ಯಾರನ್ನು ಬಿಡುಗಡೆ ಮಾಡಬಹುದು ಅಥವಾ ಉಳಿಸಿಕೊಳ್ಳಬಹುದು ಎಂಬ ಸುಳಿವು ಸಿಕ್ಕಿವೆ. ಆದಾಗ್ಯೂ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯಲ್ಲಿ ಇನ್ನೂ ಯಾವುದೂ ದೃಢಪಟ್ಟಿಲ್ಲ. ಇದರ ಮಧ್ಯೆ ಈ ಸೀಸನ್​ನಲ್ಲಿ ಕರ್ನಾಟಕದ ಸ್ಥಳೀಯ ಪ್ರತಿಭೆಗಳನ್ನು ತಂಡಕ್ಕೆ ಸೇರಿಸಿ ಹೆಚ್ಚಿನ ಅವಕಾಶ ನೀಡುವಂತೆ ಸರ್ಕಾರದಿಂದ ಒತ್ತಡ ಬಂದಿದೆ ಎಂದು ವರದಿಯಾಗಿದೆ.

ಆರ್‌ಸಿಬಿ ಮೇಲೆ ಸರ್ಕಾರದ ಒತ್ತಡ?

ಕಳೆದ ಹಲವು ವರ್ಷಗಳಿಂದ ಆರ್‌ಸಿಬಿ ತಂಡದಲ್ಲಿ ಕರ್ನಾಟಕದ ದೇಶೀಯ ಆಟಗಾರರಿಗೆ ಸಿಕ್ಕ ಅವಕಾಶಗಳು ತೀರಾ ಕಡಿಮೆ. ದೇವದತ್ ಪಡಿಕ್ಕಲ್ ಈ ತಂಡದಿಂದ ಸತತ ಅವಕಾಶ ಪಡೆದ ಕರ್ನಾಟಕದ ಕೊನೆಯ ಆಟಗಾರ. ವಿಜಯ್ ಕುಮಾರ್ ವೈಶಾಕ್ ಎರಡು ಸೀಸನ್‌ಗಳಲ್ಲಿ ತಂಡದ ಭಾಗವಾಗಿದ್ದಾರೆ, ಆದರೆ ಇಲ್ಲಿಯವರೆಗೆ ಅವರು ಕೇವಲ 11 ಪಂದ್ಯಗಳನ್ನು ಆಡಿದ್ದಾರಷ್ಟೆ.

ಸುದ್ದಿ ಸಂಸ್ಥೆ ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಈ ಬಾರಿ ಕರ್ನಾಟಕದ ದೇಶೀಯ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡುವಂತೆ ಸರ್ಕಾರ ತಂಡದ ಮೇಲೆ ಒತ್ತಡ ಹೇರುತ್ತಿದೆ. ಆರ್​ಸಿಬಿ ಉಳಿಸಿಕೊಳ್ಳುವ ಆಟಗಾರರಲ್ಲಿ ಕರ್ನಾಟಕದ ಆಟಗಾರರು ಇರುವುದಿಲ್ಲ. ಆದರೆ ಮೆಗಾ ಹರಾಜಿನಲ್ಲಿ ಅವರು ಕರ್ನಾಟಕದ ಆಟಗಾರರ ಮೇಲೆ ಹೆಚ್ಚು ಗಮನಹರಿಸಬಹುದು.

ಸ್ಥಳೀಯ ಪ್ರತಿಭೆಗಳಿಗೆ ಸಂಬಂಧಿಸಿದಂತೆ, ರಾಹುಲ್ ದ್ರಾವಿಡ್, ಕೆಎಲ್ ರಾಹುಲ್ ಅವರಂತಹ ಹಲವಾರು ಕರ್ನಾಟಕ ಮೂಲದ ಆಟಗಾರರು ಫ್ರಾಂಚೈಸಿಯನ್ನು ಪ್ರತಿನಿಧಿಸಿದ್ದಾರೆ. ಆದರೆ ಇವರು ಯಾರಿಗೂ ದೃಢವಾಗಿ ನಿಲ್ಲಲು ದೀರ್ಘ ಸಮಯ ನೀಡಲಾಗಿಲ್ಲ. ಪ್ರಸ್ತುತ ರಾಹುಲ್, ದೇವದತ್ ಪಡಿಕ್ಕಲ್, ಪ್ರಸಿದ್ಧ್ ಕೃಷ್ಣ, ಮನೀಶ್ ಪಾಂಡೆ ಮತ್ತು ವಿಜಯ್‌ಕುಮಾರ್ ರಾಜ್ಯದ ಕೆಲವು ಉನ್ನತ ಪ್ರತಿಭೆಗಳು ಅಥವಾ ಹಿರಿಯ ಆಟಗಾರರಾಗಿದ್ದಾರೆ. ಇವರಲ್ಲಿ ವೈಶಾಖ್‌ ಬಿಟ್ಟರೆ ಇತರರು ಬೇರೆ ತಂಡಗಳ ಪರ ಆಡುತ್ತಿದ್ದಾರೆ.

ಕೊಹ್ಲಿ ಬಿಟ್ಟರೆ ಆರ್‌ಸಿಬಿ ಯಾರನ್ನು ಉಳಿಸಿಕೊಳ್ಳಲಿದೆ?

ಕಳೆದ ಮೆಗಾ ಹರಾಜಿಗೂ ಮುನ್ನ ಆರ್‌ಸಿಬಿ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಮೊಹಮ್ಮದ್ ಸಿರಾಜ್ ಅವರನ್ನು ಉಳಿಸಿಕೊಂಡಿತ್ತು. ಈ ಋತುವಿನ ಹರಾಜಿಗೂ ಮುನ್ನವೇ ವಿರಾಟ್ ಕೊಹ್ಲಿಯನ್ನು ಉಳಿಸಿಕೊಳ್ಳುವುದು ಖಚಿತವಾಗಿದೆ. ಆದಾಗ್ಯೂ, ಮ್ಯಾಕ್ಸ್‌ವೆಲ್ ಮತ್ತು ಸಿರಾಜ್‌ಗಾಗಿ ಫ್ರಾಂಚೈಸಿ ಸ್ವಲ್ಪ ಯೋಚಿಸಬೇಕಾಗಿದೆ. ಕಳೆದ ಕೆಲವು ಋತುಗಳಲ್ಲಿ ಸಿರಾಜ್ ವೇಗದ ಬೌಲಿಂಗ್ ದಾಳಿಯ ನಾಯಕರಾಗಿದ್ದಾರೆ. ಆದರೆ ಅವರ ರನ್​ರೇಟ್ ಒಂಬತ್ತಕ್ಕಿಂತ ಹೆಚ್ಚಾಗಿರುತ್ತದೆ. ಮತ್ತೊಂದೆಡೆ, ಮ್ಯಾಕ್ಸ್‌ವೆಲ್‌ ಅವರ ಕಳೆದ ಕಳಪೆ ಋತುವನ್ನು ಮರೆಯಲು ಸಾಧ್ಯವಿಲ್ಲ.

ಕ್ಯಾಮರೂನ್ ಗ್ರೀನ್ ಅವರನ್ನು ಆರ್​ಸಿಬಿ ದೊಡ್ಡ ಬೆಲೆಗೆ ವ್ಯಾಪಾರ ಮಾಡಿ ಪಡೆಯಿತು. ಆದರೆ ಅವರ ಗಾಯವು ಫ್ರಾಂಚೈಸಿಗೆ ಕಳವಳವನ್ನು ಉಂಟುಮಾಡಿದೆ. ಶಸ್ತ್ರಚಿಕಿತ್ಸೆಯಿಂದಾಗಿ, ಗ್ರೀನ್ ಸುಮಾರು ಆರು ತಿಂಗಳ ಕಾಲ ಮೈದಾನದಿಂದ ದೂರ ಉಳಿಯುತ್ತಾರೆ ಮತ್ತು ಐಪಿಎಲ್ 2025ರಲ್ಲಿ ಭಾಗವಹಿಸುವುದು ಅನುಮಾನ ಎಂದು ಹೇಳಲಾಗಿದೆ. ಈ ನಡುವೆ ನಾಯಕನಾಗಿ ಫಾಫ್‌ ಡುಪ್ಲೆಸಿಸ್‌ ಖರೀದಿಸುವುದು ಖಚಿತ ಎಂದು ಕೆಲವು ವರದಿಗಳು ತಿಳಿಸಿವೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ