ಐಪಿಎಲ್ 2025 ಹರಾಜು ದಿನಾಂಕ ಮತ್ತು ಸ್ಥಳ; ಪ್ಲೇಯರ್ ಆಕ್ಷನ್‌ ಯಾವಾಗ, ಬಿಸಿಸಿಐ ನಿಗದಿಪಡಿಸಿದ ನಗರ ಯಾವುದು?
ಕನ್ನಡ ಸುದ್ದಿ  /  ಕ್ರಿಕೆಟ್  /  ಐಪಿಎಲ್ 2025 ಹರಾಜು ದಿನಾಂಕ ಮತ್ತು ಸ್ಥಳ; ಪ್ಲೇಯರ್ ಆಕ್ಷನ್‌ ಯಾವಾಗ, ಬಿಸಿಸಿಐ ನಿಗದಿಪಡಿಸಿದ ನಗರ ಯಾವುದು?

ಐಪಿಎಲ್ 2025 ಹರಾಜು ದಿನಾಂಕ ಮತ್ತು ಸ್ಥಳ; ಪ್ಲೇಯರ್ ಆಕ್ಷನ್‌ ಯಾವಾಗ, ಬಿಸಿಸಿಐ ನಿಗದಿಪಡಿಸಿದ ನಗರ ಯಾವುದು?

ಐಪಿಎಲ್ 2025ರ ಮೆಗಾ ಹರಾಜು ಪ್ರಕ್ರಿಯೆ ಸಿದ್ಧತೆಗಳ ಪರಿಶೀಲನೆ ನಡೆಸಲು ಬಿಸಿಸಿಐ ಅಧಿಕಾರಿಗಳು ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದ್ದಾರೆ. ರಿಯಾದ್‌ನಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಚರ್ಚೆ ನಡೆಸಿದ ಬಳಿಕ ನಿರ್ದಿಷ್ಠ ಸ್ಥಳವನ್ನು ಹರಾಜಿಗೆ ಘೋಷಿಸಲಾಗುತ್ತದೆ.

ಐಪಿಎಲ್ 2025 ಹರಾಜು ದಿನಾಂಕ ಮತ್ತು ಸ್ಥಳ; ಬಿಸಿಸಿಐ ನಿಗದಿಪಡಿಸಿದ ನಗರ ಯಾವುದು?
ಐಪಿಎಲ್ 2025 ಹರಾಜು ದಿನಾಂಕ ಮತ್ತು ಸ್ಥಳ; ಬಿಸಿಸಿಐ ನಿಗದಿಪಡಿಸಿದ ನಗರ ಯಾವುದು?

ಐಪಿಎಲ್‌ 2025ರ ಆವೃತ್ತಿ ಭಾರಿ ಕುತೂಹಲ ಮೂಡಿಸಿದೆ. ಅದಕ್ಕೂ ಮುನ್ನ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದ್ದು, ಭಾಗವಹಿಸುವ ತಂಡಗಳು ರಿಟೆನ್ಷನ್‌ ಲಿಸ್ಟ್‌ ಸಿದ್ದಪಡಿಸುತ್ತಿವೆ. ಆ ಬಳಿಕ ಹರಾಜು ಪ್ರಕ್ರಿಯೆಗೆ ಹೋಗಲಿವೆ. ಈಗಾಗಲೇ ಬಿಸಿಸಿಐ ಹರಾಜು ನಡೆಸಲು ಸ್ಥಳವನ್ನು ಅಂತಿಮಗೊಳಿಸುವ ನಿರ್ಧಾರ ಮಾಡಿದೆ. ಸದ್ಯ ಸೌದಿ ಅರೇಬಿಯಾದಲ್ಲಿ ಬಹು ನಿರೀಕ್ಷಿತ ಐಪಿಎಲ್ 2025ರ ಮೆಗಾ ಹರಾಜು ನಡೆಸಲಾಗುತ್ತದೆ ಎಂಬ ಸುದ್ದಿ ಮುನ್ನೆಲೆಗೆ ಬಂದಿದೆ. ಬಿಸಿಸಿಐ ಪಟ್ಟಿಯಲ್ಲಿ ದುಬೈ, ಸಿಂಗಾಪುರ, ಲಂಡನ್ ಮತ್ತು ವಿಯೆನ್ನಾದಂತಹ ಹಲವು ನಗರಗಳು ಆಯ್ಕೆಯಲ್ಲಿದ್ದವು. ವ್ಯಾಪಕ ಹುಡುಕಾಟದ ನಂತರ ಎರಡು ದಿನಗಳ ಮೆಗಾ ಹರಾಜನ್ನು ಆಯೋಜಿಸಲು ಸೌದಿ ಅರೇಬಿಯಾ ರಾಜಧಾನಿ ರಿಯಾದ್ ನಗರ ಮುಂಚೂಣಿಯಲ್ಲಿದೆ ಎಂದು ತಿಳಿದುಬಂದಿದೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಆತಿಥ್ಯ ಸ್ಥಳವನ್ನು ಕೆಲವೇ ದಿನಗಳಲ್ಲಿ ಅಂತಿಮಗೊಳಿಸಿ ಅಧಿಕೃತ ಘೋಷಣೆ ಮಾಡಲಿದೆ. ಎಲ್ಲಾ ರೀತಿಯ ಲೆಕ್ಕಾಚಾರ ನಡೆಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಹೊಸ ಪ್ರದೇಶಗಳಲ್ಲಿ ಪಂದ್ಯಾವಳಿಯ ಜನಪ್ರಿಯತೆ ವಿಸ್ತರಿಸುವ ಕಾರ್ಯತಂತ್ರದ ಜೊತೆಗೆ, ಲಾಜಿಸ್ಟಿಕಲ್ ಅನುಕೂಲಗಳನ್ನು ಲೆಕ್ಕಹಾಕಿ ಈ ಆಯ್ಕೆ ಮಾಡಲಾಗುತ್ತಿದೆ. ದುಬೈನಲ್ಲಿರುವ ಕೋಕಾ-ಕೋಲಾ ಅರೆನಾದಲ್ಲಿ ಕೊನೆಯ ಬಾರಿಗೆ ಹರಾಜು ಪ್ರಕ್ರಿಯೆ ನಡೆದಿತ್ತು. ಇದೀಗ ಅದಕ್ಕಿಂತ ಭಿನ್ನ ಸ್ಥಳದ ಆಯ್ಕೆಗೆ ಆಸಕ್ತಿ ಹೆಚ್ಚಿದೆ.

ಸುದ್ದಿಸಂಸ್ಥೆ ಕ್ರಿಕ್‌ಬಜ್ ವರದಿ ಪ್ರಕಾರ, ಐಪಿಎಲ್ 2025ರ ಮೆಗಾ ಹರಾಜಿನ ಸಿದ್ಧತೆಗಳ ಪರಿಶೀಲನೆಯ ಭಾಗವಾಗಿ ಬಿಸಿಸಿಐ ಅಧಿಕಾರಿಗಳು ಈಗಾಗಲೇ ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿ ಸೈಟ್ ಪರಿಶೀಲನೆ ನಡೆಯಲಿದೆ. ಈ ಕುರಿತು ಹೆಚ್ಚಿನ ಚರ್ಚೆಗಳಿಗಾಗಿ ಮತ್ತೊಂದು ಗುಂಪಿನ ಅಧಿಕಾರಿಗಳು ಅಕ್ಟೋಬರ್ 21ರ ಸೋಮವಾರ ಗಲ್ಫ್ ರಾಜ್ಯಕ್ಕೆ ತೆರಳುವ ನಿರೀಕ್ಷೆಯಿದೆ.

ಮೆಗಾ ಹರಾಜು ದಿನಾಂಕ?

ಐಪಿಎಲ್ ಮೆಗಾ ಹರಾಜು ನವೆಂಬರ್ 24 ಮತ್ತು 25ರಂದು ನಡೆಯಲಿದೆ ಎಂಬ ನಿರೀಕ್ಷೆ ಇದೆ. ಇದೇ ಸಮಯದಲ್ಲಿ ಬಾರ್ಡರ್‌ ಗವಾಸ್ಕರ್‌ ಟ್ರೋಫಿ ಕೂಡಾ ನಡೆಯಲಿದೆ. ನವೆಂಬರ್ 22ರಿಂದ 26ರವರೆಗೆ ಪರ್ತ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ.

ಮಿಲಿಯನ್‌ ಡಾಲರ್‌ ಟೂರ್ನಿಯ ಮೆಗಾ ಹರಾಜು ಮತ್ತು ಪರ್ತ್ ಟೆಸ್ಟ್ ನಡುವೆ ಯಾವುದೇ ರೀತಿಯ ಸಂಭಾವ್ಯ ಘರ್ಷಣೆ ನಡೆಯದಂತೆ ಖಚಿತಪಡಿಸಿಕೊಳ್ಳಲು ಬಿಸಿಸಿಐ ನಿರ್ಧರಿಸಿದೆ. ಮತ್ತೊಂದೆಡೆ, ಇಂಡಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸಿಗಳು ಭಾರತದಲ್ಲಿಯೇ ಹರಾಜು ಪ್ರಕ್ರಿಯೆ ಆಯೋಜಿಸುವಂತೆ ಬಿಸಿಸಿಐಗೆ ಮನವಿ ಮಾಡಿದ್ದವು.‌ ಆದರೆ ಬಿಸಿಸಿಐ ಈ ಆಯ್ಕೆಯನ್ನು ತಳ್ಳಿಹಾಕಿತು. ಹೀಗಾಗಿ ಸೂಕ್ತ ಪ್ರಯಾಣದ ವ್ಯವಸ್ಥೆ ಮಾಡಲು ಮೆಗಾ ಹರಾಜಿನ ಸ್ಥಳ ಮತ್ತು ದಿನಾಂಕಗಳ ಕುರಿತು ಕ್ರಿಕೆಟ್‌ ಮಂಡಳಿಯ ಅಂತಿಮ ನಿರ್ಧಾರಕ್ಕಾಗಿ ಕಾಯುತ್ತಿವೆ.

ಎಲ್ಲಾ ಫ್ರಾಂಚೈಸಿಗಳು ತಮ್ಮ ಆಟಗಾರರ ರಿಟೆನ್ಷನ್ ಪಟ್ಟಿಯನ್ನು ಅಕ್ಟೋಬರ್ 31ರಂದು ಸಂಜೆ 5 ಗಂಟೆಯ ಒಳಗೆ ಸಲ್ಲಿಸಬೇಕಾಗುತ್ತದೆ. ಕಳೆದ ತಿಂಗಳು, ಐಪಿಎಲ್ ಆಡಳಿತ ಮಂಡಳಿಯು ಆಟಗಾರರನ್ನು ಉಳಿಸಿಕೊಳ್ಳುವ ನಿಯಮಗಳನ್ನು ಬಹಿರಂಗಪಡಿಸಿತು. ಫ್ರಾಂಚೈಸಿಗಳು ತಮ್ಮ ತಂಡದಿಂದ ಗರಿಷ್ಠ ಆರು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಆ ಬಳಿಕ ಹರಾಜು ಪರ್ಸ್ ಅನ್ನು ರೂ 120 ಕೋಟಿಗೆ ಹೆಚ್ಚಿಸಲಾಗಿದೆ.

Whats_app_banner