IPL 2025: ಡೆಲ್ಲಿ ತೊರೆಯುತ್ತಾರಾ ರಿಷಬ್ ಪಂತ್; ಮೆಗಾ ಹರಾಜಿಗೆ ಎಂಟ್ರಿ, ಖರೀದಿಗೆ 3 ತಂಡಗಳ ನಡುವೆ ಪೈಪೋಟಿ
Oct 25, 2024 11:49 AM IST
ಡೆಲ್ಲಿ ತೊರೆಯುತ್ತಾರಾ ರಿಷಬ್ ಪಂತ್; ಮೆಗಾ ಹರಾಜಿಗೆ ಎಂಟ್ರಿ
- Rishabh Pant: ಐಪಿಎಲ್ ಮೆಗಾ ಹರಾಜು ಸಮೀಪಿಸುತ್ತಿರುವಂತೆಯೇ, ಚೆನ್ನೈ ಸೂಪರ್ ಕಿಂಗ್ಸ್ ತಂಡವು ರಿಷಬ್ ಪಂತ್ ಜೊತೆ ಮಾತುಕತೆ ನಡೆಸುತ್ತಿದೆ ಎಂದು ವರದಿಗಳು ಬಂದಿವೆ. ಮಹೇಂದ್ರ ಸಿಂಗ್ ಧೋನಿ ಅವರ ಉತ್ತರಾಧಿಕಾರಿಯಾಗಿ ಅವರನ್ನು ನೇಮಿಸಿಕೊಳ್ಳಲು ಸಿಎಸ್‌ಕೆ ಉತ್ಸುಕವಾಗಿದೆ.
IPL 2025 Rishabh Pant: ಐಪಿಎಲ್ ಆಟಗಾರರ ರಿಟೆನ್ಸನ್ ಪಟ್ಟಿ ಸಲ್ಲಿಕೆ ದಿನಾಂಕ ಸಮೀಪಿಸುತ್ತಿದೆ. ಈ ಕ್ರಮದಲ್ಲಿ, ಪ್ರಮುಖ ದೊಡ್ಡ ವಿಚಾರಗಳು ಹೊರಬೀಳುತ್ತಿದೆ. ಸದ್ಯ ಬಂದಿರುವ ಮಾಹಿತಿಯ ಪ್ರಕಾರ ರಿಷಬ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತೊರೆಯಲಿದ್ದಾರೆ. ಅಂದರೆ ಮುಂಬರುವ ಮೆಗಾ ಹರಾಜಿನಲ್ಲಿ ಪಂತ್ ಕಾಣಿಸಿಕೊಳ್ಳಲು ನಿರ್ಧರಿಸಿದ್ದಾರೆ. ಪಂತ್ ಆಕ್ಷನ್ನಲ್ಲಿ ಕಾಣಿಸಿಕೊಂಡರೆ, ಅನೇಕ ಫ್ರಾಂಚೈಸಿಗಳು ಅವರಿಗೆ ಬಿಡ್ ಮಾಡಲು ಸಿದ್ಧವಾಗಿವೆ. ಏಕೆಂದರೆ, ಪಂತ್ ವಿಕೆಟ್ ಕೀಪರ್ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್. ಅಲ್ಲದೆ, ಕ್ಯಾಪ್ಟನ್ ಸ್ಥಾನವನ್ನು ಕೂಡ ತುಂಬಬಲ್ಲ ಆಟಗಾರ. ಹೀಗಾಗಿಯೇ ಎಲ್ಲಾ ಫ್ರಾಂಚೈಸಿಗಳು ರಿಷಬ್ ಪಂತ್ ಮೇಲೆ ಕಣ್ಣಿಟ್ಟಿವೆ.
ರಿಷಬ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಹಿಂದೆ ಸರಿಯಲು ಕಾರಣವೇನು ಎಂಬ ಪ್ರಶ್ನೆ ಮೂಡಬಹುದು. ಈ ಪ್ರಶ್ನೆಗೆ ಸದ್ಯದ ಉತ್ತರ ಏನೆಂದರೆ ಪಂತ್ ಕೆಲವು ಫ್ರಾಂಚೈಸಿಗಳಿಂದ ಭಾರೀ ಆಫರ್‌ಗಳನ್ನು ಪಡೆಯುತ್ತಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಎಡಗೈ ಆಟಗಾರರ ಮೇಲೆ ಕೇಂದ್ರೀಕರಿಸಿದ ಅಗ್ರ ಫ್ರಾಂಚೈಸಿ ಆಗಿದೆಯಂತೆ.
ಐಪಿಎಲ್ ಮೆಗಾ ಹರಾಜು ಸುದ್ದಿಯ ನಂತರ, ಚೆನ್ನೈ ಸೂಪರ್ ಕಿಂಗ್ಸ್ ರಿಷಬ್ ಪಂತ್ ಜೊತೆ ಮಾತುಕತೆ ನಡೆಸುತ್ತಿದೆ ಎಂದು ವರದಿಗಳು ಬಂದಿವೆ. ಮಹೇಂದ್ರ ಸಿಂಗ್ ಧೋನಿ ಅವರ ಉತ್ತರಾಧಿಕಾರಿಯಾಗಿ ಅವರನ್ನು ನೇಮಿಸಿಕೊಳ್ಳಲು ಸಿಎಸ್‌ಕೆ ಉತ್ಸುಕವಾಗಿದೆ. ಹಾಗಾಗಿ ಮೆಗಾ ಹರಾಜಿನಲ್ಲಿ ಪಂತ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಮೂರು ಫ್ರಾಂಚೈಸಿಗಳ ನಡುವೆ ಪಪೈಪೋಟಿ
ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಪಂತ್ ಹೊರನಡೆದ ಸುದ್ದಿಯ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಟಾರ್ಗೆಟ್ ಲಿಸ್ಟ್‌ಗೆ ಕೂಡ ಇವರು ಸೇರಿಕೊಂಡಿದ್ದಾರೆ ಎಂಬ ವರದಿಗಳಿವೆ. ಅಂದರೆ ಸಿಎಸ್‌ಕೆ ಮತ್ತು ಆರ್ಸಿಬಿ ಕೂಡ ರಿಷಬ್ ಮೇಲೆ ಕಣ್ಣಿಟ್ಟಿದೆ. ಮತ್ತೊಂದೆಡೆ ಪಂಜಾಬ್ ಕಿಂಗ್ಸ್ ಕೂಡ ಹೊಸ ನಾಯಕನ ಹುಡುಕಾಟದಲ್ಲಿದೆ. ಪಂಜಾಬ್ ತಂಡದ ನೂತನ ಕೋಚ್ ಆಗಿ ರಿಕಿ ಪಾಂಟಿಂಗ್ ನೇಮಕಗೊಂಡಿದ್ದಾರೆ. ಇದಕ್ಕೂ ಮುನ್ನ ಪಾಂಟಿಂಗ್ ಅವರ ಕೋಚಿಂಗ್‌ನಲ್ಲಿ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿದ್ದರು. ಪಂತ್-ಪಾಂಟಿಂಗ್ ನಡುವಣ ಬಾಂಡಿಂಗ್ ಉತ್ತಮವಾಗಿರುವ ಕಾರಣ ಮೆಗಾ ಹರಾಜಿನಲ್ಲಿ ಇವರ ಖರೀದಿಗೆ ಪಂಜಾಬ್ ಕಿಂಗ್ಸ್ ಹಣ ಮಳೆ ಸುರಿಸಲಿದೆ ಎನ್ನಲಾಗಿದೆ.
ಹೀಗಾಗಿ ಐಪಿಎಲ್ ಮೆಗಾ ಹರಾಜಿನಲ್ಲಿ ರಿಷಬ್ ಪಂತ್ ಕಾಣಿಸಿಕೊಂಡರೆ ಮೂರು ಫ್ರಾಂಚೈಸಿಗಳ ನಡುವೆ ಭರ್ಜರಿ ಪೈಪೋಟಿ ಏರ್ಪಡುವ ಸಾಧ್ಯತೆ ಇದೆ ಎಂದು ನಂಬಲಾಗಿದೆ. ಆದರೆ, ಪಂಟರ್ ಪಂತ್ ಯಾವ ತಂಡಕ್ಕೆ ಸೇರುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.