logo
ಕನ್ನಡ ಸುದ್ದಿ  /  ಕ್ರಿಕೆಟ್  /  ಕೀಪಿಂಗ್ ತೊರೆದು ಮಿಸ್ಬಾ-ಉಲ್-ಹಕ್​ಗೆ ಹೆಗಲು ಕೊಟ್ಟ ರಾಬಿನ್ ಉತ್ತಪ್ಪ; ಕನ್ನಡಿಗನ ನಡೆಗೆ ಭಾರಿ ಮೆಚ್ಚುಗೆ, Video

ಕೀಪಿಂಗ್ ತೊರೆದು ಮಿಸ್ಬಾ-ಉಲ್-ಹಕ್​ಗೆ ಹೆಗಲು ಕೊಟ್ಟ ರಾಬಿನ್ ಉತ್ತಪ್ಪ; ಕನ್ನಡಿಗನ ನಡೆಗೆ ಭಾರಿ ಮೆಚ್ಚುಗೆ, VIDEO

Prasanna Kumar P N HT Kannada

Jul 14, 2024 05:12 PM IST

google News

ಕೀಪಿಂಗ್ ತೊರೆದು ಮಿಸ್ಬಾ-ಉಲ್-ಹಕ್​ಗೆ ಹೆಗಲು ಕೊಟ್ಟ ರಾಬಿನ್ ಉತ್ತಪ್ಪ; ಕನ್ನಡಿಗನ ನಡೆಗೆ ಭಾರಿ ಮೆಚ್ಚುಗೆ

    • Robin Uthappa: ಬರ್ಮಿಂಗ್​ಹ್ಯಾಮ್​ನಲ್ಲಿ ನಡೆದ 2024ರ ವಿಶ್ವ ಚಾಂಪಿಯನ್​ಶಿಪ್ ಆಫ್ ಲೆಜೆಂಡ್ಸ್​​ ಫೈನಲ್​​ನ ಭಾರತ ಚಾಂಪಿಯನ್ಸ್ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದ ಮಿಸ್ಬಾ-ಉಲ್-ಹಕ್ ಅವರಿಗೆ ರಾಬಿನ್ ಉತ್ತಪ್ಪ ಅವರು ನೆರವಾದರು.
ಕೀಪಿಂಗ್ ತೊರೆದು ಮಿಸ್ಬಾ-ಉಲ್-ಹಕ್​ಗೆ ಹೆಗಲು ಕೊಟ್ಟ ರಾಬಿನ್ ಉತ್ತಪ್ಪ; ಕನ್ನಡಿಗನ ನಡೆಗೆ ಭಾರಿ ಮೆಚ್ಚುಗೆ
ಕೀಪಿಂಗ್ ತೊರೆದು ಮಿಸ್ಬಾ-ಉಲ್-ಹಕ್​ಗೆ ಹೆಗಲು ಕೊಟ್ಟ ರಾಬಿನ್ ಉತ್ತಪ್ಪ; ಕನ್ನಡಿಗನ ನಡೆಗೆ ಭಾರಿ ಮೆಚ್ಚುಗೆ

ಬರ್ಮಿಂಗ್​ಹ್ಯಾಮ್​ನಲ್ಲಿ ಜುಲೈ 13ರ ಶನಿವಾರ ನಡೆದ 2024ರ ವಿಶ್ವ ಚಾಂಪಿಯನ್​ಶಿಪ್ ಆಫ್ ಲೆಜೆಂಡ್ಸ್​​ ಫೈನಲ್​​ನಲ್ಲಿ (World Championship of Legends 2024) ಬ್ಯಾಟಿಂಗ್ ಮಾಡುತ್ತಿದ್ದ ಅವಧಿಯಲ್ಲಿ ಗಾಯಗೊಂಡ ಪಾಕಿಸ್ತಾನದ ಅನುಭವಿ ಬ್ಯಾಟರ್​​ ಮಿಸ್ಬಾ-ಉಲ್-ಹಕ್ ಅವರಿಗೆ (Misbah-ul-Haq injured) ಭಾರತದ ರಾಬಿನ್​ ಉತ್ತಪ್ಪ ಅವರು (Robin Uthappa) ತಮ್ಮ ವಿಕೆಟ್​ ಕೀಪಿಂಗ್ ಜವಾಬ್ದಾರಿಯನ್ನೇ ತೊರೆದು ಮೈದಾನದಿಂದ ಡಗೌಟ್​ಗೆ ನೆರವಾದರು. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ (Video Viral) ಆಗುತ್ತಿದೆ.

ಭಾರತದ ವಿರುದ್ಧ 15 ಎಸೆತಗಳಲ್ಲಿ 18 ರನ್ ಗಳಿಸಿದ ನಂತರ ಮಿಸ್ಬಾ ಗಾಯಗೊಂಡು ರಿಟೈರ್ಡ್ ಹರ್ಟ್ ಆದರು. ಈ ವೇಳೆ  ಭಾರತದ ಮಾಜಿ ಆಟಗಾರ ಉತ್ತಪ್ಪ ಕುಂಟುತ್ತಾ ಮೈದಾನ ತೊರೆಯುತ್ತಿದ್ದ ಮಿಸ್ಬಾಗೆ ನೆರವಾದರು. ಆ ಮೂಲಕ ಕ್ರೀಡಾಸ್ಫೂರ್ತಿ (Spirit of Cricket) ಮೆರೆದರು. ಅಭಿಮಾನಿಗಳು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನದ ಇನ್ನಿಂಗ್ಸ್​​​ನಲ್ಲಿ 17ನೇ ಓವರ್​​ನಲ್ಲಿ ಈ ಘಟನೆ ನಡೆದಿದ್ದು, ಮಿಸ್ಬಾ ಅವರ ಕಾಲಿಗೆ ಗಾಯವಾಗಿತ್ತು. 

ಕ್ರೀಡಾ ಮನೋಭಾವ ತೋರಿದ ಉತ್ತಪ್ಪ ಮಿಸ್ಬಾಗೆ ಸಹಾಯ ಮಾಡಲು ತಮ್ಮ ವಿಕೆಟ್ ಕೀಪಿಂಗ್ ಜವಾಬ್ದಾರಿ ತೊರೆದರು. ಮಿಸ್ಬಾಗೆ ಹೆಗಲು ಕೊಟ್ಟ ಉತ್ತಪ್ಪ ಪೆವಿಲಿಯನ್​​ವರೆಗೂ ಬಿಟ್ಟುಬಂದರು. ಬರ್ಮಿಂಗ್​ಹ್ಯಾಮ್​​ನಲ್ಲಿ ನಡೆದ ಹೈವೋಲ್ಟೇಜ್​ ಪಂದ್ಯದ ಮಧ್ಯೆ, ಈ ದೃಶ್ಯವು ತಕ್ಷಣವೇ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಉತ್ತಪ್ಪ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ

ಅಧಿಕೃತ ಪ್ರಸಾರಕರಾದ ಫ್ಯಾನ್​ಕೋಡ್ ನಂತರ ಬರ್ಮಿಂಗ್​ಹ್ಯಾಮ್​ನಲ್ಲಿ ಆ ಕ್ಷಣದ ತುಣುಕನ್ನು ಹಂಚಿಕೊಂಡಿತು. ಅದಕ್ಕೆ "ಸ್ಪಿರಿಟ್ ಆಫ್ ಕ್ರಿಕೆಟ್" ಎಂದು ಕ್ಯಾಪ್ಶನ್ ನೀಡಿದೆ. ಇಲ್ಲಿದೆ ನೋಡಿ ಅದರ ವಿಡಿಯೋ.

ಸಂಕ್ಷಿಪ್ತ ಸ್ಕೋರ್ ವಿವರ

ಲೆಜೆಂಡ್ಸ್ ಫೈನಲ್​ನಲ್ಲಿ ಪಾಕಿಸ್ತಾನ ತಂಡವು ಚೇಸಿಂಗ್ ತಂಡಕ್ಕೆ ಅನುಕೂಲಕರವಾದ ಸ್ಥಳದಲ್ಲಿ ಮೊದಲು ಬ್ಯಾಟಿಂಗ್ ಮಾಡಲು ಆಯ್ಕೆ ಮಾಡಿಕೊಂಡಿತು. ಪಾಕಿಸ್ತಾನ ಚಾಂಪಿಯನ್ಸ್ ಪರ ಶೋಯೆಬ್ ಮಲಿಕ್ 36 ಎಸೆತಗಳಲ್ಲಿ 41 ರನ್ ಗಳಿಸಿದರೆ, ಸೊಹೈಲ್ ತನ್ವೀರ್ 9 ಎಸೆತಗಳಲ್ಲಿ 19 ರನ್ ಗಳಿಸಿದರು. ಇದರೊಂದಿಗೆ 6 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿತು. ಭಾರತದ ಪರ ಅನುರೀತ್ ಸಿಂಗ್ 43 ರನ್ ನೀಡಿ 3 ವಿಕೆಟ್, ಇರ್ಫಾನ್ ಪಠಾಣ್, ಪವನ್ ನೇಗಿ ಮತ್ತು ವಿನಯ್ ಕುಮಾರ್ ತಲಾ 1 ವಿಕೆಟ್ ಪಡೆದರು.

ಈ ಗುರಿ ಬೆನ್ನಟ್ಟಿದ ಭಾರತ ತಂಡದ ಪರ ಅಂಬಾಟಿ ರಾಯುಡು ಅರ್ಧಶತಕ ಸಿಡಿಸಿ  ಪರಿಪೂರ್ಣ ಚೇಸಿಂಗ್​ಗೆ ಭರ್ಜರಿ ಅಡಿಪಾಯ ಹಾಕಿದರು. ಇನ್ನು ಕೊನೆಯಲ್ಲಿ ಯೂಸುಫ್ ಪಠಾಣ್ ಸ್ಫೋಟಕ ಇನ್ನಿಂಗ್ಸ್ ಆಡಿದರು. ಇದರೊಂದಿಗೆ ಭಾರತ ತಂಡವು ಐದು ಎಸೆತಗಳು ಬಾಕಿ ಇರುವಾಗ ಗುರಿಯನ್ನು ಬೆನ್ನಟ್ಟಿತು. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಗ್ರೂಪ್ ಹಂತದ ಮುಖಾಮುಖಿಯಲ್ಲಿ ಅನುಭವಿಸಿದ ಸೋಲಿಗೆ ಭಾರತ ತಂಡ ಸೇಡು ತೀರಿಸಿಕೊಂಡಿತು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ