logo
ಕನ್ನಡ ಸುದ್ದಿ  /  ಕ್ರಿಕೆಟ್  /  ಪಂದ್ಯದಲ್ಲಿ ಅಭ್ಯಾಸ ಮಾಡ್ಬೇಡಿ, ದೇಶೀಯ ಕ್ರಿಕೆಟ್ ಆಡಿ; ವಿರಾಟ್ ಕೊಹ್ಲಿ, ರೋಹಿತ್​ ಶರ್ಮಾಗೆ ಪಾಕ್ ಮಾಜಿ ಆಟಗಾರ ವ್ಯಂಗ್ಯ

ಪಂದ್ಯದಲ್ಲಿ ಅಭ್ಯಾಸ ಮಾಡ್ಬೇಡಿ, ದೇಶೀಯ ಕ್ರಿಕೆಟ್ ಆಡಿ; ವಿರಾಟ್ ಕೊಹ್ಲಿ, ರೋಹಿತ್​ ಶರ್ಮಾಗೆ ಪಾಕ್ ಮಾಜಿ ಆಟಗಾರ ವ್ಯಂಗ್ಯ

Prasanna Kumar P N HT Kannada

Nov 04, 2024 02:38 PM IST

google News

ಪಂದ್ಯದಲ್ಲಿ ಅಭ್ಯಾಸ ಮಾಡ್ಬೇಡಿ, ದೇಶೀಯ ಕ್ರಿಕೆಟ್ ಆಡಿ; ವಿರಾಟ್ ಕೊಹ್ಲಿ, ರೋಹಿತ್​ ಶರ್ಮಾಗೆ ಪಾಕ್ ಮಾಜಿ ಆಟಗಾರ ಸಲಹೆ

    • Basit Ali: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಬಸಿತ್ ಅಲಿ ಅವರು ಭಾರತ ತಂಡದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಿಗೆ ಈ ದೇಶೀಯ ಕ್ರಿಕೆಟ್ ಆಡುವಂತೆ ಸೂಚಿಸಿದ್ದಾರೆ.
ಪಂದ್ಯದಲ್ಲಿ ಅಭ್ಯಾಸ ಮಾಡ್ಬೇಡಿ, ದೇಶೀಯ ಕ್ರಿಕೆಟ್ ಆಡಿ; ವಿರಾಟ್ ಕೊಹ್ಲಿ, ರೋಹಿತ್​ ಶರ್ಮಾಗೆ ಪಾಕ್ ಮಾಜಿ ಆಟಗಾರ ಸಲಹೆ
ಪಂದ್ಯದಲ್ಲಿ ಅಭ್ಯಾಸ ಮಾಡ್ಬೇಡಿ, ದೇಶೀಯ ಕ್ರಿಕೆಟ್ ಆಡಿ; ವಿರಾಟ್ ಕೊಹ್ಲಿ, ರೋಹಿತ್​ ಶರ್ಮಾಗೆ ಪಾಕ್ ಮಾಜಿ ಆಟಗಾರ ಸಲಹೆ (AFP)

ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ, ವೈಟ್​ವಾಶ್ ಮುಖಭಂಗಕ್ಕೆ ಒಳಗಾಗಿದೆ. 24 ವರ್ಷಗಳ ನಂತರ ಈ ಕೆಟ್ಟ ದಾಖಲೆ ಬರೆದಿದೆ. ತವರಿನಲ್ಲಿ ಭಾರತ ತಂಡ ಸರಣಿ ಸೋಲಿಗೆ ಪ್ರಮುಖ ಕಾರಣ ಬ್ಯಾಟಿಂಗ್​ನಲ್ಲಿ ಕಳಪೆ ಪ್ರದರ್ಶನ ನೀಡಿದ್ದು. ಅದರಲ್ಲೂ ವಿಶೇಷವಾಗಿ ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ ವೈಫಲ್ಯ. ಆದರೆ ಇದರ ಬೆನ್ನಲ್ಲೇ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಬಸಿತ್ ಅಲಿ ಅವರು ಈ ಇಬ್ಬರು ಸ್ಟಾರ್​ ಆಟಗಾರರನ್ನು ದೇಶೀಯ ಕ್ರಿಕೆಟ್ ಆಡುವಂತೆ ಸೂಚಿಸಿದ್ದಾರೆ.

ಮುಂಬೈನ ವಾಂಖೆಡೆ ಕ್ರಿಕೆಟ್ ಮೈದಾನದಲ್ಲಿ ನಡೆದ ಅಂತಿಮ ಹಾಗೂ 3ನೇ ಟೆಸ್ಟ್ ಪಂದ್ಯದಲ್ಲಿ 147 ರನ್​ಗಳ ಗುರಿ ಬೆನ್ನಟ್ಟಲು ವಿಫಲವಾದ ಭಾರತ, 25 ರನ್​ಗಳಿಂದ ಸೋಲೊಪ್ಪಿಕೊಂಡಿತು. ನಾಲ್ಕನೇ ಇನ್ನಿಂಗ್ಸ್​​​ನಲ್ಲಿ ಟೀಮ್ ಇಂಡಿಯಾ ಸುಲಭ ಗೆಲುವು ಸಾಧಿಸುತ್ತದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ನಿರೀಕ್ಷೆ ಹುಸಿಯಾಯಿತು. ಬೆಂಗಳೂರು, ಪುಣೆ ಬಳಿಕ ಮುಂಬೈ ಟೆಸ್ಟ್ ಕಳೆದುಕೊಂಡಿತು. ರಿಷಭ್ ಪಂತ್​ ಸ್ಫೋಟಕ 50 ಸಿಡಿಸಿದರೂ ಉಳಿದವರು ಪೆವಿಲಿಯನ್ ಪರೇಡ್ ನಡೆಸಿದರು.

ಸರಣಿ ಸೋಲಿನ ಬಳಿಕ ಮಾತನಾಡಿದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಬಸಿಲ್ ಅಲಿ, ಬಾಬರ್ ಅಜಮ್ ಅವರಂತೆಯೇ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಫಾರ್ಮ್ ಕಳೆದುಕೊಂಡಿದ್ದಾರೆ ಎಂದಿದ್ದಾರೆ. ಇದೇ ವೇಳೆ ಆಡುವಾಗ ರೋಹಿತ್ ಮಾಡಿದ ತಪ್ಪುಗಳೇನು ಎಂದು ವಿವರಿಸಿದ್ದಾರೆ. ರೋಹಿತ್​ ಫುಟ್ ವರ್ಕ್ ಸರಿಯಾಗಿಲ್ಲ. ಹೊಟ್ಟೆಯ ಕೆಳಭಾಗದಲ್ಲಿ ಬರುವ ಎಸೆತಗಳನ್ನು ಹಿಟ್ ಮಾಡಲು ಯತ್ನಿಸುತ್ತಾರೆ. ಆದರೆ ಅವರ ಪಾದಗಳು ಚಲಿಸುವುದಿಲ್ಲ. ಇದು ಅವರ ವೈಫಲ್ಯಕ್ಕೆ ಕಾರಣವಾಗುತ್ತಿದೆ ಎಂದು ಹೇಳಿದ್ದಾರೆ.

ಪಂದ್ಯದಲ್ಲಿ ಅಭ್ಯಾಸ ಮಾಡ್ಬೇಡಿ ಎಂದ ಬಸಿಲ್ ಅಲಿ

ಮುಂದುವರೆದು ಮಾತನಾಡಿದ ಬಸಿತ್ ಅಲಿ, ಭಾರತದ ಮಾಜಿ ಕ್ರಿಕೆಟಿಗರು ಹೇಳಿರುವಂತೆ ರೋಹಿತ್ ಮತ್ತು ಕೊಹ್ಲಿ ಅವರು ನಿರ್ಣಾಯಕ ಬಾರ್ಡರ್-ಗವಾಸ್ಕರ್ ಟ್ರೋಫಿಗೂ ಮುನ್ನ ದೇಶೀಯ ಕ್ರಿಕೆಟ್ ಆಡುವ ಅಗತ್ಯ ಇದೆ ಎಂದು ಹೇಳಿದ್ದಾರೆ. ವಿರಾಟ್ ಕೊಹ್ಲಿ, ಫಾರ್ಮ್‌ನಲ್ಲಿಲ್ಲ. ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳುವ ಮೊದಲು ಅವರು ದೇಶೀಯ ಕ್ರಿಕೆಟ್ ಆಡಿದರೆ ಉತ್ತಮ. ರೋಹಿತ್ ಕೂಡ ಆಡಬೇಕು. ಟೆಸ್ಟ್ ಪಂದ್ಯದಲ್ಲಿ ಅಭ್ಯಾಸ ಮಾಡುವಂತಿದೆ. ಅದನ್ನು ನೋಡಲಾಗುತ್ತಿಲ್ಲ. ಮೊದಲು ದೇಶೀಯ ಕ್ರಿಕೆಟ್ ಆಡಿ ಎಂದು ಅಲಿ ವ್ಯಂಗ್ಯವಾಡಿದ್ದಾರೆ.

ಸದ್ಯದ ವರದಿಗಳು ಹೇಳುವುತ್ತಿರುವುದೇನೆಂದರೆ ನ್ಯೂಜಿಲೆಂಡ್ ಸರಣಿಗೂ ಮುನ್ನ ನಾಲ್ವರು ಆಟಗಾರರಿಗೆ ದುಲೀಪ್ ಟ್ರೋಫಿ ಆಡುವಂತೆ ಸೂಚಿಸಿದ್ದರೂ ನಿರಾಕರಿಸಿದ್ದರಂತೆ. ನಾಯಕ ರೋಹಿತ್​ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್, ಆರ್ ಅಶ್ವಿನ್ ಅವರಿಗೆ ದುಲೀಪ್ ಟ್ರೋಫಿ ಆಡುವಂತೆ ಅವಕಾಶ ಮಾಡಿಕೊಟ್ಟರೂ ಆಡಲು ನಿರಾಕರಿಸಿದ್ದರು ಎಂದು ತಿಳಿದು ಬಂದಿದೆ.

ದುಲೀಪ್ ಟ್ರೋಫಿ ಆಡದೆ ನಿರಾಕರಿಸಿದ್ರು

ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ಸರಣಿಗೂ ಮುಂಚಿತವಾಗಿ ಸೆಪ್ಟೆಂಬರ್ 5ರಿಂದ 22ರವರೆಗೆ ಬೆಂಗಳೂರು ಮತ್ತು ಅನಂತಪುರದಲ್ಲಿ ನಡೆದ ದುಲೀಪ್ ಟ್ರೋಫಿ ಪಂದ್ಯಾವಳಿಯಲ್ಲಿ ಈ ನಾಲ್ವರು ಹಿರಿಯ ಆಟಗಾರರಿಗೂ ಭಾಗವಹಿಸಲು ಅವಕಾಶ ಕಲ್ಪಿಸಲಾಗಿತ್ತು. ಅವರು ಭಾಗವಹಿಸಲು ನಿರಾಕರಿಸಿದ್ದರು. ಕಿವೀಸ್ ಸರಣಿಗೂ ಮುನ್ನ ಹಿರಿಯ ಆಟಗಾರರು ದೇಶೀಯ ಕ್ರಿಕೆಟ್ ಆಡಬೇಕು ಎಂದು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕೂಡ ಸೂಚಿಸಿದ್ದರು.

ಬಾಬರ್​ ತೀವ್ರ ವೈಫಲ್ಯ

ಪಾಕಿಸ್ತಾನ ತಂಡದ ಮಾಜಿ ನಾಯಕ ಬಾಬರ್ ಅಜಮ್ ಕಳೆದೊಂದು ವರ್ಷದಿಂದ ತೀವ್ರ ವೈಫಲ್ಯ ಅನುಭವಿಸುತ್ತಿದ್ದಾರೆ. ಕಳೆದ ವರ್ಷ ಏಕದಿನ ವಿಶ್ವಕಪ್​ನಲ್ಲೂ ಲಯಕ್ಕೆ ಮರಳಿರಲಿಲ್ಲ. ಇದೇ ವರ್ಷ ನಡೆದ ಟಿ20 ವಿಶ್ವಕಪ್​​ನಲ್ಲೂ ಅವರ ಬ್ಯಾಟ್ ಸದ್ದು ಮಾಡಲಿಲ್ಲ. ಅಲ್ಲದೆ, ಟೆಸ್ಟ್ ಸರಣಿಗಳಲ್ಲೂ ರನ್ ಗಳಿಸಲು ಪರದಾಟ ನಡೆಸುತ್ತಿದ್ದಾರೆ. ಈ ಹಿನ್ನೆಲೆ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಬೆಂಚ್​ ಮಾಡಲಾಗಿತ್ತು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ