logo
ಕನ್ನಡ ಸುದ್ದಿ  /  ಕ್ರಿಕೆಟ್  /  ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಫೈನಲ್​ನಲ್ಲಿ ಆರ್​​ಸಿಬಿಯ ಈ 11 ಆಟಗಾರ್ತಿಯರು ಕಣಕ್ಕಿಳಿದ್ರೆ ಈ ಸಲ ಕಪ್​ ನಮ್ದೇ!

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಫೈನಲ್​ನಲ್ಲಿ ಆರ್​​ಸಿಬಿಯ ಈ 11 ಆಟಗಾರ್ತಿಯರು ಕಣಕ್ಕಿಳಿದ್ರೆ ಈ ಸಲ ಕಪ್​ ನಮ್ದೇ!

Prasanna Kumar P N HT Kannada

Mar 16, 2024 09:55 PM IST

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಫೈನಲ್​ನಲ್ಲಿ ಆರ್​​ಸಿಬಿಯ ಈ 11 ಆಟಗಾರ್ತಿಯರು ಕಣಕ್ಕಿಳಿದ್ರೆ ಈ ಸಲ ಕಪ್​ ನಮ್ದೇ!

    • RCB vs DC 2024 Playing XI : ವುಮೆನ್ಸ್ ಪ್ರೀಮಿಯರ್​​ ಲೀಗ್ ಫೈನಲ್​​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ ಇಲೆವೆನ್ ಹೀಗಿದೆ ನೋಡಿ.​​
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಫೈನಲ್​ನಲ್ಲಿ ಆರ್​​ಸಿಬಿಯ ಈ 11 ಆಟಗಾರ್ತಿಯರು ಕಣಕ್ಕಿಳಿದ್ರೆ ಈ ಸಲ ಕಪ್​ ನಮ್ದೇ!
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಫೈನಲ್​ನಲ್ಲಿ ಆರ್​​ಸಿಬಿಯ ಈ 11 ಆಟಗಾರ್ತಿಯರು ಕಣಕ್ಕಿಳಿದ್ರೆ ಈ ಸಲ ಕಪ್​ ನಮ್ದೇ! (PTI)

ಮಹಿಳೆಯರ ಪ್ರೀಮಿಯರ್ ಲೀಗ್ (Womens Premier League) 2024ರ ಬಹು ನಿರೀಕ್ಷಿತ ಫೈನಲ್ ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮಹಿಳೆಯರ (Royal Challengers Bangalore vs Delhi capitals) ನಡುವೆ ಮಾರ್ಚ್ 17ರ ಭಾನುವಾರದಂದು ದೆಹಲಿ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಟ್ರೆಂಡಿಂಗ್​ ಸುದ್ದಿ

RCB vs CSK: ಕೃಪೆ ತೋರು ವರುಣ, ಮ್ಯಾಚ್ ನಡೀಲಿ ಬಿಡು ಪ್ಲೀಸ್; ಮಳೆರಾಯನಿಗೆ ಫ್ಯಾನ್ಸ್ ಮೊರೆ, ಚಿನ್ನಸ್ವಾಮಿ ಕ್ರೀಡಾಂಗಣ ಸುತ್ತ ಜನಸಾಗರ

ನಿನ್ ದಮ್ಮಯ್ಯ ಅಂತೀನಿ, ಆಡಿಯೋ ಮ್ಯೂಟ್ ಮಾಡು ಪ್ಲೀಸ್; ಕ್ಯಾಮರಾಮೆನ್​ಗೆ ಕೈಮುಗಿದು ಬೇಡ್ಕೊಂಡ ರೋಹಿತ್​ ಶರ್ಮಾ

Rajat Patidar: ಸ್ಫೋಟಕ ಬ್ಯಾಟಿಂಗ್ ಹಿಂದಿನ ರಹಸ್ಯವನ್ನು ಬಿಚ್ಚಿಟ್ಟ ಆರ್‌ಬಿಸಿ ಬ್ಯಾಟರ್ ರಜತ್ ಪಾಟಿದಾರ್

ಆರ್​ಸಿಬಿ vs ಸಿಎಸ್​ಕೆ ಪಂದ್ಯ ಮಳೆಯಿಂದ ರದ್ದಾದರೆ ರಿಸರ್ವ್​ ಡೇ ಇದೆಯೇ; ಸೋಲು-ಗೆಲುವಿನ ಲೆಕ್ಕಾಚಾರವೇನು?

ಅತ್ಯಂತ ಯಶಸ್ವಿಯಾಗಿ 16 ಆವೃತ್ತಿಗಳನ್ನು ಪೂರ್ಣಗೊಳಿಸಿರುವ ಇಂಡಿಯನ್ ಪ್ರೀಮಿಯರ್​ ಲೀಗ್, 17ನೇ ಆವೃತ್ತಿಗೆ ಕಾಲಿಡುತ್ತಿದೆ. ಆದರೂ ಆರ್​ಸಿಬಿ ಪುರುಷರ ತಂಡವು ಒಂದೇ ಒಂದು ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡವು ಎರಡನೇ ಆವೃತ್ತಿಯಲ್ಲೇ ಚೊಚ್ಚಲ ಟ್ರೋಫಿಯ ಕನಸಿನಲ್ಲಿದೆ.

ಎಲಿಮಿನೇಟರ್​​ನಲ್ಲಿ ಮುಂಬೈ ವಿರುದ್ಧ ಗೆಲುವು

ಡಬ್ಲ್ಯುಪಿಎಲ್ 2024ರ ಎಲಿಮಿನೇಟರ್​​ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಆರ್​​ಸಿಬಿ 5 ರನ್​ಗಳ ಅಂತರದಿಂದ ಗೆಲುವು ದಾಖಲಿಸಿ ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆದುಕೊಂಡಿದೆ. ಸ್ಮೃತಿ ಮಂಧಾನ ಪಡೆ 20 ಓವರ್​​​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿತ್ತು. ಈ ಗುರಿ ಹಿಂಬಾಲಿಸಿದ ಮುಂಬೈ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 130 ರನ್ ಕಲೆ ಹಾಕಲು ಮಾತ್ರ ಶಕ್ತವಾಯಿತಷ್ಟೆ. ಹಾಗಾಗಿ 5 ರನ್​ಗಳಿಂದ ಸೋಲನುಭವಿಸಿತು.

ಡೆಲ್ಲಿ ಕ್ಯಾಪಿಟಲ್ಸ್ ಡೈರೆಕ್ಟ್​ ಫೈನಲ್​ಗೆ

ವುಮೆನ್ಸ್ ಪ್ರೀಮಿಯರ್ ಲೀಗ್​ನ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದ ಡೆಲ್ಲಿ ಕ್ಯಾಪಿಟಲ್ಸ್ ನೇರವಾಗಿ ಫೈನಲ್ ಪ್ರವೇಶಿಸಿದೆ. ಲೀಗ್ ಹಂತದಲ್ಲಿ ಆಡಿದ 8 ಪಂದ್ಯಗಳಲ್ಲಿ 6 ಗೆಲುವು ದಾಖಲಿಸಿ 12 ಅಂಕ ಸಂಪಾದಿಸಿದೆ. ಮುಂಬೈ ಇಂಡಿಯನ್ಸ್ 10 ಅಂಕ ಸಂಪಾದಿಸಿ ಎರಡನೇ ಸ್ಥಾನದಲ್ಲಿತ್ತು. ಆರ್​​ಸಿಬಿ 8 ಅಂಕ ಪಡೆದು 3ನೇ ಸ್ಥಾನದಲ್ಲಿತ್ತು.

ಕಳೆದ ಬಾರಿ ಮುಂಬೈ ಚಾಂಪಿಯನ್​

2023ರಲ್ಲಿ ನಡೆದ ಉದ್ಘಾಟನಾ ಆವೃತ್ತಿಯ ಡಬ್ಲ್ಯುಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್​ ಚಾಂಪಿಯನ್ ಆಗಿತ್ತು. ಫೈನಲ್​ನಲ್ಲಿ ಡೆಲ್ಲಿ ರನ್ನರ್​ಅಪ್​ಗೆ ತೃಪ್ತಿಪಟ್ಟುಕೊಂಡಿತ್ತು. ಆದರೆ ಈ ಬಾರಿ ಆರ್​ಸಿಬಿ ಅಥವಾ ಡೆಲ್ಲಿ ಯಾವ ತಂಡ ಗೆದ್ದರೂ ಹೊಸ ಚಾಂಪಿಯನ್​ ಆಗಲಿದೆ. ಎರಡು ತಂಡಗಳಲ್ಲಿ ಯಾರು ಗೆದ್ದರೂ ಹೊಸ ಇತಿಹಾಸ. ಏಕೆಂದರೆ ಐಪಿಎಲ್​​ನಲ್ಲೂ ಈ ಎರಡೂ ತಂಡಗಳು ಪ್ರಶಸ್ತಿ ಗೆದ್ದೇ ಇಲ್ಲ.

ಉಭಯ ತಂಡಗಳ ಪ್ಲೇಯಿಂಗ್​ XI ಹೇಗಿರಲಿದೆ?

ಡೆಲ್ಲಿ ತಂಡ: ಮೆಗ್‌ ಲ್ಯಾನಿಂಗ್‌ (ನಾಯಕಿ), ಶಫಾಲಿ ವರ್ಮಾ, ಅಲೀಸ್​ ಕ್ಯಾಪ್ಸಿ, ಜೆಮಿಮಾ ರೊಡ್ರಿಗಸ್‌, ಮಾರಿಜಾನ್ನೆ ಕಾಪ್‌, ಜೆಸ್ ಜೋನಾಸನ್‌, ಅರುಂಧತಿ ರೆಡ್ಡಿ, ರಾಧಾ ಯಾದವ್, ಮಿನ್ನು ಮಣಿ, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಶಿಖಾ ಪಾಂಡೆ.

ಆರ್​​ಸಿಬಿ ತಂಡ: ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್‌, ದಿಶಾ ಕಸತ್‌, ಎಲ್ಲಿಸ್ ಪೆರ್ರಿ, ರಿಚಾ ಘೋಷ್‌ (ವಿಕೆಟ್ ಕೀಪರ್​), ಸೋಫಿ ಮೊಲಿನೆಕ್ಸ್‌, ಜಾರ್ಜಿಯಾ ವೇರ್ಹ್ಯಾಮ್, ಶ್ರೇಯಾಂಕಾ ಪಾಟೀಲ್‌, ಆಶಾ ಸೋಭನಾ, ಶ್ರದ್ದಾ ಪೋಖರ್ಕರ್, ರೇಣುಕಾ ಸಿಂಗ್‌.

ಅರುಣ್ ಜೇಟ್ಲಿ ಸ್ಟೇಡಿಯಂ ಪಿಚ್ ವರದಿ

ಅರುಣ್ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಂ ಬ್ಯಾಟಿಂಗ್ ಸ್ನೇಹಿ ಪಿಚ್‌ಗೆ ಹೆಸರುವಾಸಿಯಾಗಿದೆ. ಕಿರಿದಾದ ಬೌಂಡರಿಗಳಿದ್ದು, ಹಿಟ್ಟರ್​​ಗಳಿಗೆ ಹೆಚ್ಚು ಅನುಕೂಲಕರವಾಗಿದೆ. ಆದರೆ 2ನೇ ಹಂತದ ಡಬ್ಲ್ಯುಪಿಎಲ್​ ಈ ಮೈದಾನದಲ್ಲೇ ನಡೆದಿದ್ದು, ಮೊದಲು ಬ್ಯಾಟಿಂಗ್ ನಡೆಸಿದ ತಂಡಗಳೇ ಹೆಚ್ಚು ಗೆದ್ದಿವೆ. ಹಾಗಾಗಿ ಟಾಸ್​ ಗೆದ್ದ ತಂಡವು ಮೊದಲು ಬ್ಯಾಟಿಂಗ್ ನಡೆಸಲಿವೆ.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ